ಆಭರಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
[[ಚಿತ್ರ:Amber.pendants.800pix.050203.jpg|thumb|ಅಂಬರಿನ ಸರಪದಕಗಳು]]
 
'''ಆಭರಣಗಳು''' ಮನುಷ್ಯನ ಅಲಂಕರಣ ಸಾಧನಗಳಲ್ಲಿ ಒಂದು (ತೊಡುಗೆ); ಅಂಗರಾಗಗಳು (ನೋಡಿ- ಅಂಗರಾಗಗಳು,-ಅಂಗರಾಗಶಾಸ್ತ್ರ) ಮತ್ತು ಉಡುಗೆ ಉಳಿದ ಎರಡು ಸಾಧನಗಳು. ಇವು ವೈಯಕ್ತಿಕ ಶೃಂಗಾರಕ್ಕೆ ಧರಿಸಲಾಗುವ ಬ್ರೋಚುಗಳು, [[ಉಂಗುರ]]ಗಳು, [[ಕಂಠಹಾರ]]ಗಳು, [[ಕಿವಿಯೋಲೆ]]ಗಳು, ಲೋಲಕಗಳು ಮತ್ತು ಕಂಕಣಗಳಂತಹ[[ಕಂಕಣ]]ಗಳಂತಹ ಸಣ್ಣ [[ಅಲಂಕಾರ|ಅಲಂಕಾರಿಕ]] ವಸ್ತುಗಳನ್ನು ಒಳಗೊಂಡಿರುತ್ತವೆ. ರತ್ನಾಭರಣಗಳನ್ನು ಮೈ ಮೇಲೆ ಧರಿಸಬಹುದು ಅಥವಾ ಬಟ್ಟೆಗಳಿಗೆ ಲಗತ್ತಿಸಬಹುದು, ಮತ್ತು ಈ ಪದವು ಬಾಳಿಕೆ ಬರುವ ವಸ್ತುಗಳಿಗೆ ಸೀಮಿತವಾಗಿದೆ. ಅಮೂಲ್ಯ ಪದಾರ್ಥ, ಲೋಹ, ಮುತ್ತು, ರತ್ನಗಳಿಂದ ಕೂಡಿದ ಅಲಂಕರಣ ಸಾಧನ ಆಭರಣ, ಕವಡೆ, ಚಿಪ್ಪು ಅಮೂಲ್ಯ ಪದಾರ್ಥಗಳೆಂದೆನಿಸಿದ್ದ ಅತಿ ಪ್ರಾಚೀನ ಕಾಲದಲ್ಲಿ ಅವೇ ಆಭರಣದ ಮೂಲ ವಸ್ತುಗಳಾಗಿದ್ದುವು. ಆದರೆ ಚಿರಕಾಲ ಉಳಿದಿರುವುದು ಅಮೂಲ್ಯ ಲೋಹ, ಮುತ್ತು, ರತ್ನ ಮಾತ್ರ. ಆಭರಣ ಪುರಾತತ್ವ ಕಲಾಕೃತಿಯ ಅತ್ಯಂತ ಹಳೆಯ ಬಗೆಗಳಲ್ಲಿ ಒಂದಾಗಿದೆ – ನ್ಯಾಸೇರಿಯಸ್ ಚಿಪ್ಪುಗಳಿಂದ ತಯಾರಿಸಲ್ಪಟ್ಟ ೧೦೦,೦೦೦ ವರ್ಷ ಹಳೆಯ ಮಣಿಗಳು ಪರಿಚಿತವಿರುವ ಅತ್ಯಂತ ಹಳೆಯ ರತ್ನಾಭರಣಗಳು ಎಂದು ನಂಬಲಾಗಿದೆ.<ref name="bbcnewsdiscovery">[http://news.bbc.co.uk/2/hi/science/nature/5099104.stm Study reveals 'oldest jewellery'], ''[[BBC News]]'', June 22, 2006.</ref> ಆಭರಣ ರಚನೆ ಮತ್ತು ಧಾರಣೆಯಲ್ಲಿನ ಉದ್ದೇಶಗಳು ಸ್ಥೂಲವಾಗಿ ಮೂರು-ಸೌಂದರ್ಯ ವರ್ಧನೆ, ಸ್ವಪ್ರತಿಷ್ಠೆಯ ಪ್ರದರ್ಶನ, ಸಂಪತ್ತಿನ ಸಂಚಯನ. ಇಲ್ಲೆಲ್ಲ ಸಮಕಾಲೀನ ಸಾಮಾಜಿಕ ಮೌಲ್ಯಗಳ ಮತ್ತು ವ್ಯಕ್ತಿಯ ಮಾನಸಿಕ ಸ್ಥಿತಿಯ ಪಾತ್ರ ಹಿರಿದು. ಆಭರಣಗಳು ಒಂದು ಜನಾಂಗದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವ ಪ್ರತೀಕಗಳು. ಆದ್ದರಿಂದ ಆಭರಣಗಳ ರೂಪರೇಖೆ, ಆ ದೇಶದಲ್ಲಿ ಸಿಗಬಹುದಾದ ಖನಿಜ ಮತ್ತು ಲೋಹ ಸಂಪತ್ತು, ದೇಶದ ಹವಾಗುಣ ಮತ್ತು ಅಲ್ಲಿನ ಜನ ಧರಿಸುವ ಉಡುಪನ್ನು ಅವಲಂಬಿಸಿದೆ. ಧಾರ್ಮಿಕ ನಂಬಿಕೆಗಳು, ರಾಷ್ಟ್ರೀಯ ಪದ್ಧತಿಗಳು ಮತ್ತು ಸಂಸ್ಕಾರ ಶಾಸ್ತ್ರದ ಪ್ರಭಾವ ಕೆಲವು ಆಭರಣಗಳಿಗೆ ವಿಶೇಷ ಮಹತ್ವವನ್ನು ತಂದಿವೆ.
 
ಪ್ರಪಂಚದ ಇತಿಹಾಸದಲ್ಲಿ ಆಭರಣಗಳ ಮೂಲವನ್ನು ಕಂಡುಹಿಡಿಯುವುದು ಕಷ್ಟ. ಇವುಗಳ ಬಳಕೆ ಶಿಲಾಯುಗದಲ್ಲೂ ಇತ್ತು. ಕಂಚಿನ ಯುಗಕ್ಕೂ ಮೊದಲು ಚಿನ್ನದ ಒಡವೆಗಳು ಪ್ರಚಲಿತವಾಗಿದ್ದುವು ಎಂದು ತಿಳಿದಿದೆ. ಪ್ರಾಚೀನ ಭಾರತೀಯ ಮಹಾಕಾವ್ಯಗಳಲ್ಲಿ ವರ್ಣಿತವಾಗಿರುವ ಆಭರಣಗಳು ಇಂದಿಗೂ ವಿಶೇಷ ಬದಲಾವಣೆ ಹೊಂದದೆ ಪ್ರಚಲಿತವಾಗಿರುವುದನ್ನು ಗಮನಿಸಬಹುದು. ಇದರಿಂದ ಆಭರಣಗಳ ಪ್ರಾಚೀನತೆ ತಿಳಿಯುತ್ತದೆ. ಸುಗ್ರೀವನಿಂದ ಶ್ರೀರಾಮಚಂದ್ರನಿಗೆ ದೊರೆತ ಸೀತಾದೇವಿ ತೊಟ್ಟಿದ್ದ ಕಾಲುಗೆಜ್ಜೆ ಕಡಗ, ರಾಮ ಸೀತೆಗೆ ಕಳಿಸಿದ ಪ್ರತೀಕ ಚೂಡಾಮಣಿ, ಸೀತೆ ಹನುಮಂತನಿಗೆ ಬಹುಮಾನ ನೀಡಿದ ಕಂಠಾಭರಣ ಮುಂತಾದ ಆಭರಣಗಳು ಇನ್ನೂ ಭಾರತದಲ್ಲಿ ಅವೇ ಹೆಸರಿನಿಂದ ಪ್ರಚಲಿತವಿದೆ. ಸೌಂದರ್ಯಕ್ಕಾಗಿ ಹರಳುಗಳನ್ನು ಚಿನ್ನದಲ್ಲಿ ಕೂರಿಸಿ ಮಾಡುವ ಕಲೆಯನ್ನು ಭಾರತ ಅರಿತಿತ್ತೆಂದು ಶಮಂತಕಮಣಿಯ ಕಥೆಯಿಂದ ತಿಳಿದುಕೊಳ್ಳಬಹುದು. 2000 ವರ್ಷಕ್ಕೂ ಹಿಂದೆ ರೂಪುಗೊಂಡ ಮನುಧರ್ಮಶಾಸ್ತ್ರದಲ್ಲಿಯೂ ಆಭರಣಕಲೆ ವಿವರಿಸಲ್ಪಟ್ಟಿದೆಯಲ್ಲದೆ ಕೆಟ್ಟ ಕೈಕೆಲಸ ಅಥವಾ ಬಂಗಾರವನ್ನು ಮಿಶ್ರಗೊಳಿಸುವ ನೀತಿ ಬಾಹಿರ ಕೆಲಸಗಳಿಗೆ ವಿಧಿಸಲ್ಪಡುತ್ತಿದ್ದ ದಂಡವನ್ನೂ ನಮೂದಿಸಲಾಗಿದೆ. ಮೃಚ್ಛಕಟಿಕ ಎಂಬ ಸಂಸ್ಕøತ ನಾಟಕದಲ್ಲಿ ಆಭರಣ ಕಲೆಯ ಕೌಶಲವನ್ನು ಕಾಣಬಹುದು. ಅಮೂಲ್ಯ ಹರಳು, ಮುತ್ತುಗಳನ್ನು ಅಳವಡಿಸಿಕೊಂಡು ಚಿನ್ನದ ಮಣಿಗಳನ್ನು ಬಣ್ಣಬಣ್ಣದ ದಾರಗಳಲ್ಲಿ ಹೆಣೆದು ತಯಾರಿಸುವ ರೀತಿಗಳಲ್ಲದೆ ಹವಳ ಚಿಪ್ಪುಗಳನ್ನು ಚಿನ್ನದೊಂದಿಗೆ ಅಳವಡಿಸಿ ಸುಂದರ ಆಭರಣಗಳನ್ನಾಗಿ ಪರಿವರ್ತಿಸುವ ವಿಧಾನ ಹೇಳಲಾಗಿದೆ. ಇಂದು ನಾವು ಧರಿಸುವ ವಿವಿಧ ನಮೂನೆಯ ಕಂಠಹಾರಗಳು, ತೋಳಬಂದಿಗಳು, ಕೈಬಳೆಗಳು, ಕಾಲ್‍ಗೊಲಸುಗಳು ಶಿರಾಭರಣಗಳು, ಮಕುಟಗಳು, ಉಂಗುರಗಳು, ಮೂಗುತಿಗಳು, ಕಡಗಗಳು, ಒಂಟಿಗಳು ಮುಂತಾದುವುಗಳಿಗೂ, ಅಜಂತಾ ಎಲ್ಲೋರಾಗಳ ಚಿತ್ರಕಲೆಗಳಲ್ಲಿ ಸಾಂಚಿ, ಬರಹೂತ್, ಅಮರಾವತಿ, ಒರಿಸ್ಸಾ, ಹಳೆಬೀಡು, ಬೇಲೂರು ಮುಂತಾದಲ್ಲಿನ ಶಿಲ್ಪಗಳಲ್ಲಿ ತೋರುವ ಇವೇ ಆಭರಣಗಳಿಗೂ ಹೊಂದಾಣಿಕೆ ಕಂಡುಬರುತ್ತದೆ. ಭಾಷೆ ಮತ್ತು ಭೌಗೋಳಿಕ ರಾಜಕೀಯ ಕಾರಣಗಳಿಗಾಗಿ ಭಾರತ ಭಿನ್ನ ರಾಜ್ಯಗಳಾಗಿ ವಿಭಾಗಿಸಲ್ಪಟ್ಟಿದ್ದರೂ ಅಖಿಲ ಭಾರತೀಯ ಮಹಿಳೆಯರು ತೊಡುವ ಒಡವೆಗಳಲ್ಲಿ ಮಾತ್ರ ವಿಶೇಷ ಸಾಮ್ಯ ಕಂಡುಬರುವುದು.
"https://kn.wikipedia.org/wiki/ಆಭರಣಗಳು" ಇಂದ ಪಡೆಯಲ್ಪಟ್ಟಿದೆ