ಮುಖ್ಯ ಮೆನು ತೆರೆ

ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳು, ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜನ ಆಳ್ವಿಕೆ, ಸೂಜಿಯೆಲೆಗಳಿಂದ ತೊಟ್ಟಿಕ್ಕುವ ಇಬ್ಬನಿ ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು.
 
ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ [[ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ|ಪುಟಾಣಿ ನ್ಯಾರೋಗೇಜ್ ರೈಲು]] ಕಾಲ್ಕಾ ರೈಲುನಿಲ್ದಾಣದಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟು ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಆರು ಗಂಟೆ ವೇಳೆಗೆ ಒಂದು ಬಾರೋಗ್ ಎಂಬ ಆ ನಿಲ್ದಾಣದಲ್ಲಿ ಬಂದು ನಿಂತಾಗ ಅಲ್ಲಿನ ಒಂದು ಫಲಕವು ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿರುವುದನ್ನು ಸಾರುತ್ತದೆ.
 
ಅಡ್ಡಡ್ಡ ಮಲಗಿದರೆ ಕೈಕಾಲುಗಳಿಂದ ಎರಡೂ ಪಾರ್ಶ್ವಗಳನ್ನು ಸ್ಪರ್ಶಿಸಬಹುದಾದ ಕೇವಲ ಇಪ್ಪತ್ತು ಜನರಷ್ಟೇ ಕೂಡಬಹುದಾಗಿದ್ದ ಪುಟ್ಟ ಬೋಗಿಯೊಳಗೆ ಕುಳಿತು ೧೦೨ ಸುರಂಗಗಳು, ೮೪೫ ಸೇತುವೆಗಳು ಹಾಗೂ ೯೧೯ ತಿರುವುಗಳನ್ನು ಹಾದು ಬರುವ ಈ ರೈಲಿನಲ್ಲಿನ ಪ್ರಯಾಣ ಶಿಮ್ಲಾ ಪ್ರವಾಸದ ಅತಿ ಮುಖ್ಯಭಾಗ.
೧,೨೯೩

edits

"https://kn.wikipedia.org/wiki/ವಿಶೇಷ:MobileDiff/92578" ಇಂದ ಪಡೆಯಲ್ಪಟ್ಟಿದೆ