ರಾಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು:
== '''ರಾಗಿತಳಿಯಲ್ಲಿ ಸುಧಾರಣೆ''' ==
 
ರಾಗಿ ತಳಿ ಅಭಿವೃದ್ಧಿ ೧೯೧೩ ನೆ ಇಸವಿಯಷ್ಟು ಹಿಂದೆಯೇ ಪ್ರಾರಂಭವಾಗಿತ್ತು. ಖ್ಯಾತ ತಜ್ಞ ಲೆಸ್ಲಿ ಕೋಲ್ ಮನ್ ರಾಗಿಯ ರೋಗ ನಿರೋಧಕತ್ವ ಮತ್ತು ಬರಸಹಿಷ್ಣುತೆಗಳನ್ನು ಗಮನಿಸಿ, ವಿವಿಧೆಡೆಯ ತಳಿಗಳನ್ನು ಕಲೆಹಾಕಿ, ಅವನ್ನು ತಿದ್ದಲು ಮಾಡಿದ ಪ್ರಯತ್ನಗಳು ಹೆಚ್ಚು ಫಲಕಾರಿಯಾಗಲಿಲ್ಲ. ರಾಗಿ ಸ್ವಭಾವತಃ ಸ್ವಕೀಯ ಪರಾಗಸ್ಪರ್ಶದ ಬೆಳೆ. ಅಸಂಖ್ಯ ಸೂಕ್ಷ್ಮ ಹೂಗಳಿಂದ ಅದರ ತೆನೆಗಳು ಗಾಳಿಯಲ್ಲಿ ತೊನೆದಾಡುತ್ತವೆ. ಅಯ್ಯಂಗಾರ್ ಎಂಬ ಸಂಶೋಧನಕರ್ತರು ೧೯೩೪ ರ ವಿಧಾನ,ಸಂಪರ್ಕ ಸಂಕರಣಾವಿಧಾನ(ಕಾಂಟಾಕ್ಟ್ ಮೆಥಡ್) ಸ್ವಲ್ಪಮಟ್ಟಿಗೆ ಸರಿಯಾಗಿದೆ. ಈ ವಿಧಾನದಲ್ಲಿ ವಿಭಿನ್ನ ಗುಣಗಳುಳ್ಳ ಎರಡು ಭಿನ್ನ ತಳಿಗಳನ್ನು ಒಟ್ಟೊಟ್ಟಿಗೆ ಬೆಳೆದು ಅವುಗಳ ತೆನೆಗಳನ್ನು ಹೂ ಬಿಡುವ ಸಮಯದಲ್ಲಿ ಒಟ್ಟಾಗಿ ಸೇರಿಸಿ ಕಟ್ಟಿ, ಅವನ್ನು ಪಾಲಿಥೀನ್ ಚೀಲದಿಂದ ಮುಚ್ಚುತ್ತಾರೆ. ಈ ಸಂಪರ್ಕ ಸಾಮೀಪ್ಯದಲ್ಲಿ ಕನಿಷ್ಠ ಕೆಲವು ಹೂಗಳಲ್ಲಾದರೂ ಪರಕೀಯ ಪರಾಗಸ್ಪರ್ಶವೇರ್ಪಟ್ಟು ಅವು ಸಂಕರ ಬೀಜ[ಹೈಬ್ರಿಡ್] ನೀಡುತ್ತವೆ.೧೯೫೧ ರಿಂದ ೧೯೬೪ ರ ಹೊತ್ತಿಗೆ, ಆಜ್ಯದರಾಜ್ಯದ ವಿವಿಧ ಹವಾಗುಣಗಳಿಗೆ ಒಗ್ಗುವಂತಹ ’ಅರುಣ’, 'ಉದಯ', 'ಪೂರ್ಣ', 'ಅನ್ನಪೂರ್ಣ', 'ಕಾವೇರಿ',ಮತ್ತು 'ಶಕ್ತಿ' ತಳಿಗಳು ತಯಾರಾದವು. ಭಾರತ ಮತ್ತು ಆಫ್ರಿಕಾದೇಶದ ತಳಿಗಳ ಸಮ್ಮಿಳನದಿಂದ ತಯಾರಾದ ತಳಿಗಳನ್ನು ’ಇಂಡಾಫ್’ ಎನ್ನುತ್ತಾರೆ. ಒಣಬೇಸಾಯದ ವ್ಯವಸ್ಥೆಗೆ ಇಂಡಾಫ್-೧, ೩, ೮ ನ್ನು ಶಿಫಾರಸ್ ಮಾಡಲಾಯಿತು. ಮುಂಗಾರು ತಡವಾದಾಗ [[ಇಂಡಾಫ್-೫]] ಬೇಸಿಗೆಗೆ ಉತ್ತಮವೆನ್ನಿಸಿತು. ರಾಗಿ ಬೆಳೆಯ ತಜ್ಞ 'ರಾಗಿ ಬ್ರಹ್ಮ' ಲಕ್ಷ್ಮಯ್ಯರವರ ಪರಿಶ್ರಮದಿಂದ ಮೇಲೆ ಹೇಳಿದ ಸಾಧನೆಗಳಾಗಿವೆ.
 
== '''ರಾಗಿಯ ಉಪಯೋಗಗಳು''' ==
"https://kn.wikipedia.org/wiki/ರಾಗಿ" ಇಂದ ಪಡೆಯಲ್ಪಟ್ಟಿದೆ