ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೦ ನೇ ಸಾಲು:
ಈಗಾಗಲೇ ಬೇರೆ ಭಾಷೆಯ ವಿಕಿಗಳಲ್ಲಿ ಈ ಪ್ರಯತ್ನ ನಡೆದಿದೆ ಎಂದು ಕೇಳ್ಪಟ್ಟಿದ್ದೇನೆ. ನನಗೆ ತಿಳಿದ ಮಟ್ಟಿಗೆ ವಿಕಿ ಕೆಲಸಗಳನ್ನು ವೈಯಕ್ತಿಕ ಮತ್ತು ಸಮುದಾಯ ಮಟ್ಟದ ಆಸಕ್ತಿಯಿಂದ ಮಾಡಬಹುದಾಗಿದ್ದು ಸಾಮುದಾಯಿಕ ಕೆಲಸಗಳಿಗೆ ಫಂಡಿಂಗ್ ಬೇಡಿಕೆ ಇಡಬಹುದು. ಆದರೆ ವೃತ್ತಿಪರ ಅಥವಾ ಪಾವತಿ ಆಧಾರದಲ್ಲಿ ಮಾಡಲು ಹಣಕಾಸಿನ ನೆರವಿನ ಕೋರಿಕೆಯು ಸಾಧುವಲ್ಲ. ತಂತ್ರಜ್ನರೂ ಸಹ ವಿಕಿಪೀಡಿಯನ್ನರಾಗಿದ್ದು ಸ್ವಯಂ ಆಸಕ್ತಿಯಿಂದ ವಿಕಿಗೆ ಸಹಾಯವಾಗುವಂತಹ ಏನಾದರೂ ಮಾಡಬಹುದಾದ ಯೋಜನೆ ಹಾಕಿದರೆ ಅದಕ್ಕೆ ಬೇಕಾದ ಸಲಕರಣೆ ಸಾಮಗ್ರಿ ಆಕರಗಳ ಅಗತ್ಯವಿದ್ದಲ್ಲಿ ಅದರ ಆಧಾರದಲ್ಲಿ ನೆರವು ಪಡೆಯಬಹುದೇ ಹೊರತು ಹೀಗೆ ಮಾಡುವ ಕೆಲಸಕ್ಕೆ ಗಂಟೆ ಲೆಕ್ಕದ ಅಥವಾ ಮತ್ಯಾವುದೇ ರೀತಿಯ ಪಾವತಿ ಮಾಡುವಂತಿಲ್ಲ. ಇದು paid work ರೀತಿ ಆಗುತ್ತದೆ ಮತ್ತು ವಿಕಿಪೀಡಿಯಾದ ಸಮುದಾಯ ಭಾಗವಹಿಸುವಿಕೆ ಉದ್ದೇಶಕ್ಕೆ ವಿರುದ್ಧವಾಗುತ್ತದೆ. ಹಾಗಾಗಿ ಈ ಯೋಜನೆ ಬಗ್ಗೆ ಪುನರಾಲೋಚಿಸುವುದು ಒಳ್ಳೆಯದು ಎಂದು ಸಲಹೆ ಮಾಡುತ್ತೇನೆ.
[[ಸದಸ್ಯ:ಶಿವಕುಮಾರ್ ನಾಯಕ್|Shivakumar Nayak]] ([[ಸದಸ್ಯರ ಚರ್ಚೆಪುಟ:ಶಿವಕುಮಾರ್ ನಾಯಕ್|ಚರ್ಚೆ]]) ೧೩:೫೪, ೧೭ ಜುಲೈ ೨೦೧೯ (UTC)
:: ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಒಂದೊಂದೇ ಲೇಖನಗಳನ್ನು ಸೇರಿಸುವ ಜೊತೆಗೆ ಇಂತಹ ಪ್ರಯತ್ನವನ್ನೂ ಮಾಡಿದರೆ ಒಂದು ಮಾದರಿಗೆ ಸೇರುವ ಹೆಚ್ಚು ಲೇಖನಗಳನ್ನು ಒಂದೇ ಬಾರಿಗೆ ಸೇರಿಸಬಹುದು ಎನ್ನುವುದಷ್ಟೇ ನಮ್ಮ ಉದ್ದೇಶ. ಒಮ್ಮೆ ಇಂಥದ್ದೊಂದು ವ್ಯವಸ್ಥೆ ರೂಪಿಸಿಕೊಂಡರೆ ಅದನ್ನೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ಬೇರೆಯ ಲೇಖನಗಳನ್ನು ಸೇರಿಸಲೂ ಬಳಸಬಹುದು. ಇದನ್ನು ಬಾಹ್ಯ ಬೆಂಬಲವಿಲ್ಲದೆ ಮಾಡುವ ಅನುಕೂಲ ನಮ್ಮಲ್ಲಿಲ್ಲ. ಕಾಲಮಿತಿಯ ಯೋಜನೆಯಲ್ಲಿ ಕೆಲಸಮಾಡಲು ಕೈಜೋಡಿಸುವ ಸ್ವಯಂಸೇವಕರು ಮುಂದೆಬಂದರೆ ಅವರ ಸಹಾಯ ಪಡೆದುಕೊಳ್ಳುವ ಬಗ್ಗೆ ಖಂಡಿತಾ ಯೋಚಿಸಬಹುದು. - [[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೧೬:೧೯, ೧೮ ಜುಲೈ ೨೦೧೯ (UTC)
 
== ಸಾರ್ಕ್ ಸಮ್ಮೇಳನದ ಸಮಯದಲ್ಲಿ ಕನ್ನಡ ಸಮುದಾಯ ಭೇಟಿ ==