ಅಲ್ಲು ಅರ್ಜುನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೦ ನೇ ಸಾಲು:
</ref> ಆದರೆ ಚಿತ್ರವು ಅಮೇರಿಕದ ಭಾರತೀಯ ಚಿತ್ರ ಪ್ರದರ್ಶನದ ಮಂದಿರಗಳಲ್ಲಿ ತಕ್ಕಮಟ್ಟಿನ ಲಾಭವನ್ನು ನೀಡುವಲ್ಲಿ ಯಶಸ್ವಿಯಾಯಿತು.<ref name="First half">http://www.idlebrain.com/trade/index.html</ref>
===ಯಶಸ್ಸು, 2007–ಇಲ್ಲಿಯವರೆಗೆ===
[[File:Leaderpremiere.jpg|thumb|left|(l-r) ಅಲ್ಲು ಅರ್ಜುನ್ ದಗ್ಗುಬಾಟಿ, ರಾಮ್ ಚರಣ್ ತೇಜಾ ಮತ್ತು ನಾಗ ಚೈತನ್ಯ ಅವರುಗಳು ಲೀಡರ್ ಚಿತ್ರದ ಪ್ರೀಮಿಯರ್ ಪ್ರದರ್ಶನದಲ್ಲಿ.|link=Special:FilePath/Leaderpremiere.jpg]]
2007 ರಲ್ಲಿ, ಪುರಿ ಜಗನ್ನಾಥ್ ನಿರ್ದೇಶಿಸಿದ ಇವರ ಐದನೇ ಚಲನಚಿತ್ರವಾದ ''ದೇಸಮುದುರು'' ಬಾಕ್ಸ್ ಆಫೀಸ್‌ ಹಿಟ್ ಆಗುವುದರ <ref name="Desamuduru hit"> http://www.indiaglitz.com/channels/telugu/article/28450.html</ref> ಜೊತೆಗೆ ಟಾಲಿವುಡ್ನಲ್ಲಿ ವರ್ಷದ ಮೊಲದ<ref name="Single Hit"> http://www.greatandhra.com/movies/news/feb2007/single_hit.php </ref> ಹಿಟ್ ಚಲನಚಿತ್ರವಾಯಿತು. ಚಲನಚಿತ್ರವು ಬಿಡುಗಡೆಗೊಂಡ ಮೊದಲ ವಾರದೊಳಗೆ 12.58 ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿತು ಮತ್ತು ಅಲ್ಲು ಅರ್ಜುನ್ ಅವರು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ ಮೊದಲ ಟಾಲಿವುಡ್ ನಟರಾದರು. ಇದೇ ವರ್ಷದಲ್ಲಿ, ಅಲ್ಲು ಅರ್ಜುನ್ ಅವರು ತಮ್ಮ ಚಿಕ್ಕಪ್ಪ ಚಿರಂಜೀವಿಯವರ ಚಿತ್ರ ''ಶಂಕರ್ ದಾದಾ ಜಿಂದಾಬಾದ್'' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.
2008 ರ ಮೇ ತಿಂಗಳಿನಲ್ಲಿ, ಭಾಸ್ಕರ್ ನಿರ್ದೇಶಿಸಿದ ಇವರ ಆರನೆಯ ಚಿತ್ರವಾದ ''ಪರುಗು'' ಬಿಡುಗಡೆಯಾಯಿತು ಅಲ್ಲು ಅರ್ಜುನ್ ಅವರ ಎಲ್ಲಾ ಚಿತ್ರಗಳು ಮಲಯಾಳಂ ಭಾಷೆಗೆ ಭಾಷಾಂತರಗೊಂಡಿವೆ ಮತ್ತು ಡಬ್ ಮಾಡಲ್ಪಟ್ಟಿವೆ. ದೇಸಮುದ್ರುಡು ಚಿತ್ರವು ''ಹೀರೋ'' ಎಂದು ಮತ್ತು ಪರುಗು ಚಿತ್ರವು ''ಕೃಷ್ಣ'' ಎಂದು ಮತ್ತು ಗಂಗೋತ್ರಿಯು ''ಸಿಂಹಕುಟ್ಟಿ'' ಎಂದು ಮರುಹೆಸರಿಸಲ್ಪಟ್ಟಿದೆ. ಇದು ಕೇರಳ ರಾಜ್ಯದಲ್ಲೂ ಅಲ್ಲು ಅರ್ಜುನ್ ಅವರು ಜನಪ್ರಿಯವಾಗುವಂತೆ ಮಾಡಿತು ಮತ್ತು ಅಲ್ಲಿನ ಪ್ರೇಕ್ಷಕರೂ ಅವರನ್ನು ಉತ್ತಮವಾಗಿಯೇ ಸ್ವೀಕರಿಸಿದರು.
2009 ರಲ್ಲಿ ಅರ್ಜುನ್ ಅವರ ಒಂದೇ ಚಿತ್ರವಾದ ''ಆರ್ಯ 2'' ಬಿಡುಗಡೆಯಾಯಿತು ಮತ್ತು ಇದು 2004 ರ ಹಿಟ್ ಚಿತ್ರವಾದ ಅರ್ಜುನ್ ಅವರೇ ನಾಯಕರಾಗಿದ್ದ ''ಆರ್ಯ'' ಚಿತ್ರದ ಕಥಾ ಹಂದರವನ್ನೇ ಹೊಂದಿತ್ತು. ಪ್ರಥಮ ಚಿತ್ರವನ್ನು ನಿರ್ದೇಶಿಸಿದ್ದ ಸುಕುಮಾರ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದರು. ''ಆರ್ಯ 2'' ರಲ್ಲಿ ಅರ್ಜುನ್ ಅವರೊಂದಿಗೆ ಕಾಜಲ್ ಅಗರವಾಲ್, ನವದೀಪ್, ಮತ್ತು ಶ್ರದ್ಧಾ ದಾಸ್ ಅವರುಗಳು ಸಹ-ನಟಿಯರಾಗಿದ್ದರು.ರಾಜಕೀಯ ಸಮಸ್ಯೆಗಳ ನಡುವೆ ಚಿತ್ರವು ಬಿಡುಗಡೆಯಾದರೂ, ಇದು ಬಾಕ್ಸ್ ಆಫೀಸ್‌ನಲ್ಲಿ 33 ಕೋಟಿ ರೂಪಾಯಿಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಯಿತು.ಪ್ರಾರಂಭದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಆರ್ಯ 2 ನ್ನು ವಿಮರ್ಶಾತ್ಮಕವಾಗಿ ಯಶಸ್ವಿ ಚಿತ್ರವೆಂದು ಒಪ್ಪಿಕೊಳ್ಳಲಾಯಿತು ಮತ್ತು ಈ ಚಿತ್ರವು ತೆಲುಗು ಚಿತ್ರೋದ್ಯಮದ ಪ್ರತಿ ಪ್ರಮುಖ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ನಾಮಾಂಕಿತವಾಯಿತು.ಅಲ್ಲು ಅರ್ಜುನ್ ಅವರು ನಂತರ ಗುಣಶೇಖರ್ ನಿರ್ದೇಶನದ ದೊಡ್ಡ ಬಜೆಟ್ ಚಿತ್ರವಾದ ವರುದು ನಲ್ಲಿ ನಟಿಸಿದರು ಮತ್ತು ಈ ಚಿತ್ರವು 2010 ರಲ್ಲಿ ಬಿಡುಗಡೆಯಾಯಿತು ಹಾಗೂ ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಸಾಧಾರಣ ಚಿತ್ರವಾಗಿತ್ತು. ವರುದು ನಂತರ, ಅಲ್ಲು ಅರ್ಜುನ್ ಅವರು ನಾಯಕ ನಟರುಗಳ ಚಿತ್ರ ''ವೇದಂ'' ನಲ್ಲಿ ಮಂಚು ಮನೋಜ್ ಮತ್ತು ನಟಿ ಅನುಷ್ಕಾ ಶೆಟ್ಟಿಯವರೊಂದಿಗೆ ನಟಿಸಿದರು ಹಾಗೂ ಈ ಚಿತ್ರವನ್ನು ರಾಧಾ ಕೃಷ್ಣ ಜಾಗರ್ಲಮುಡು (ತಮ್ಮ ಹೆಸರಾಂತ ಚಿತ್ರ ಗಮ್ಯಂಗೆ 😊 ಹೆಸರುವಾಸಿಯಾದವರು) ನಿರ್ದೇಶಿಸಿದ್ದರು. ಅಲ್ಲು ಅವರು ವೇದಂ ಚಿತ್ರದಲ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಅಭಿನಯವನ್ನು ಪ್ರದರ್ಶಿಸಿದರು. ವೇದಂ ಚಿತ್ರವು ವಿಮರ್ಶಾತ್ಮಕವಾಗಿ ಉತ್ತಮ ಚಿತ್ರವೆಂದು ಪ್ರಶಂಶಿಸಲಾಯಿತಲ್ಲದೇ ಪ್ರೇಕ್ಷಕರೂ ಸಹ ಇದನ್ನು ಉತ್ತಮವಾಗಿ ಸ್ವೀಕರಿಸಿದರು. ಅಲ್ಲು ಅರ್ಜುನ್ ಅವರು ಫೆಬ್ರವರಿ 2011 ರಲ್ಲಿ ತಮ್ಮ ಪ್ರಿಯತಮೆಯೊಂದಿಗೆ ಮದುವೆಯಾಗುವುದಾಗಿಯೂ ಹೇಳಲಾಯಿತು. ಟಿವಿ9 ನೊಂದಿಗಿನ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಅವರು ಇದನ್ನು ದೃಢಪಡಿಸಿದರು. ಅಲ್ಲು ಅರ್ಜುನ್ ಅವರು ತಮ್ಮ ಪ್ರಿಯತಮೆಯಾದ ಹೈದರಾಬಾದ್‌ನ ಸ್ನೇಹಾ ರೆಡ್ಡಿಯವರನ್ನು ವಿವಾಹವಾಗಲಿದ್ದಾರೆ. ಇವರುಗಳು ಡಿಸೆಂಬರ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡರು ಮತ್ತು ಮದುವೆ ಸಮಾರಂಭವು 2011 ರ ಮಾರ್ಚ್ 26 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಇವರ ಮುಂದಿನ ಚಿತ್ರವಾದ "ಬದ್ರಿನಾಧ್" ಸಹ ಇವರ ಮದುವೆಯ ಮಾರನೇ ದಿನವಾದ 2011 ರ ಮಾರ್ಚ್ 27 ರಂದು ಬಿಡುಗಡೆಯಾಗಲಿದೆ ಎಂದು ಕೇಳಿಬಂದಿದೆ.
ಅರ್ಜುನ್ ಅವರ ತಂದೆಯವರಾದ ಅಲ್ಲು ಅರವಿಂದ್ ಅವರ ಮಾಲೀಕತ್ವದ ಗೀತಾ ಆರ್ಟ್ಸ್ ನಿರ್ಮಾಣ ಕಂಪನಿಯು ಭಾರಿ ಬಜೆಟ್ ಚಿತ್ರವಾದ ''ಬದ್ರಿನಾಧ್'' ಅನ್ನು ನಿರ್ಮಾಣ ಮಾಡುತ್ತಿದೆ. ಇದನ್ನು ವಿ.ವಿ ವಿನಾಯಕ್ ಅವರು ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ಅವರೊಂದಿಗೆ ತಮನ್ನಾ ಅವರು ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಲನಚಿತ್ರದ ನಿರ್ಮಾಣ ವೆಚ್ಚವು 35 ಕೋಟಿಯೆಂದು ಅಂದಾಜಿಸಲಾಗಿದೆ. ಈ ಚಿತ್ರದ ಚಿತ್ರೀಕರಣವು ಜುಲೈ 2010 ರಲ್ಲಿ ಪ್ರಾರಂಭವಾಗಿದೆ.<ref>[http://telugu.16reels.com/news/Movie/224_Yet-Another-Mega-Budget-Movie-form-Geetha-Arts.aspx ಅಲ್ಲು ಅರ್ಜುನ್ ವಿವರಗಳು] (10 ಅಕ್ಟೋಬರ್ 2009). [http://telugu.16reels.com/celebrities/Allu+Arjun-Celebrity.aspx 16reels.com].</ref>
==ಚಲನಚಿತ್ರಗಳ ಪಟ್ಟಿ==
"https://kn.wikipedia.org/wiki/ಅಲ್ಲು_ಅರ್ಜುನ್" ಇಂದ ಪಡೆಯಲ್ಪಟ್ಟಿದೆ