ಎಸ್.ಜೈಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:Subrahmanyam Jaishankar 2014.jpg|thumb|ಸುಬ್ರಹ್ಮಣ್ಯಂ ಜಯಶಂಕರ್]]
ಸುಬ್ರಹ್ಮಣ್ಯಂ ಜಯಶಂಕರ್ ರವರು ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ೧೯೭೭ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದರು. ಜನವರಿ ೨೦೧೫ ರಿಂದ ಜನವರಿ ೨೦೧೮ರವರೆಗೂ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅದಲ್ಲದೆ ಅಮೇರಿಕ (೨೦೧೪-೨೦೧೫), ಚೀನಾ (೨೦೦೯-೨೦೧೩) ಮತ್ತು ಝೆಕ್ ರಿಪಬ್ಲಿಕ್ (೨೦೦೧-೨೦೦೪) ದೇಶದಲ್ಲಿ ಭಾರತೀಯ ರಾಯಭಾರಿಯಾಗಿ ಹಾಗೂ ಸಿಂಗಪೂರ್ ಗೆ ಹೈಕಮಿಷನರ್ ಆಗಿ (೨೦೦೭-೨೦೦೯)ಸೇವೆ ಸಲ್ಲಿಸಿದ್ದಾರೆ. ಭಾರತ-ಅಮೇರಿಕ ನಾಗರಿಕ ಪರಮಾಣು ಒಪ್ಪಂದದ ಸಂಧಾನದಲ್ಲಿ ಜೈಶಂಕರ್ ರವರು ಪ್ರಮುಖ ಪಾತ್ರ ವಹಿಸಿದ್ದರು.
ನಿವೃತ್ತಿಯ ಬಳಿಕ ಅವರು ಟಾಟಾ ಸನ್ಸ್ ಜಾಗತಿಕ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷರಾಗಿ ಸೇರಿದರು. ೨೦೧೯ರಲ್ಲಿ ಜೈಶಂಕರ್ ರವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ನೀಡಿ ಗೌರವಿಸಲಾಯಿತು. ಮೇ ೩೧, ೨೦೧೯ರಿಂದ ಮೋದಿಯವರ ಕ್ಯಾಬಿನೆಟ್ ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಯಾಬಿನೆಟ್ ಮಟ್ಟದಲ್ಲಿ ಇವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೇತೃತ್ವವನ್ನು ವಹಿಸಿರುವ ಮೊದಲ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.<ref>https://r.search.yahoo.com/_ylt=AwrxhWo35QNdkF8AVxCsniM5;_ylu=X3oDMTBycWJpM21vBGNvbG8Dc2czBHBvcwMxBHZ0aWQDBHNlYwNzcg--/RV=2/RE=1560565176/RO=10/RU=https%3a%2f%2findianexpress.com%2farticle%2findia%2fs-jaishankar-becomes-first-career-diplomat-to-be-appointed-external-affairs-minister-5758326%2f/RK=2/RS=dX9HWIzvuc9orisKqialO0uMypY-</ref>
"https://kn.wikipedia.org/wiki/ಎಸ್.ಜೈಶಂಕರ್" ಇಂದ ಪಡೆಯಲ್ಪಟ್ಟಿದೆ