ಮರಾಠಾ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup, cat, iw
೧ ನೇ ಸಾಲು:
[[File:South Asia 1758 AD.jpg |thumb|200px|ಸುಮಾರು ೧೭೫೮ರಲ್ಲಿ ಸಾಮ್ರಾಜ್ಯದ ಉತ್ತುಂಗದಲ್ಲಿ ವ್ಯಾಪ್ತಿ]]
ಮರಾಠಾ'''ಮರಾಠ ಸಾಮ್ರಾಜ್ಯ''' ಅಥವಾ ಮರಾಠಾ'''ಮರಾಠ ಒಕ್ಕೂಟವುಒಕ್ಕೂಟ'''ವು ಇಂದಿನ ಭಾರತದಲ್ಲಿ[[ಭಾರತ]]ದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ. ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ( ೧ ದಶಲಕ್ಷ ಚದರ ಕಿ.ಮೀ) ಗಳಷ್ಟು ಅಂದರೆ [[ದಕ್ಷಿಣ ಏಶಿಯದಏಷ್ಯಾ]]ದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ಹೊಂದಿತ್ತು.
 
==ಸಂಕ್ಷಿಪ್ತ ಇತಿಹಾಸ==
[[ImageFile:RaigadFlag Shivajiof Sidethe Maratha Empire.JPGsvg |thumb|left|Chatrapati Shivaji Maharaj100px|ಧ್ವಜ]]
ಬಾಳಿನುದ್ದಕ್ಕೂ [[ಬಿಜಾಪುರ]]ದ ಆದಿಲಶಾಹ ಮತ್ತು [[ಮುಘಲ್]] ಚಕ್ರವರ್ತಿ [[ಔರಂಗಜೇಬ]]ರೊಂದಿಗೆ [[ಗೆರಿಲ್ಲಾ ಹೋರಾಟ]] ಮತ್ತು ಅನೆಕ ಸಾಹಸಗಳ ಮೂಲಕ [[ರಾಯಗಢ]]ವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ [[ಶಿವಾಜಿ]]ಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. [[ಶಿವಾಜಿ]]ಯ ಮೊಮ್ಮಗ [[ಶಾಹು]]ವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು [[ಪೇಶ್ವೆ]] ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ ನಂತರ ಬಂದವರು [[ಸತಾರಾ]]ದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. [[ಭಾರತೀಯ ಉಪಖಂಡ]]ದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ [[ಬ್ರಿಟಿಷ್ ಸಾಮ್ರಾಜ್ಯ]]ದ ಬೆಳವೆಣಿಗೆಗೆ , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ಕಡಿವಾಣ ಹಾಕಿತು.
 
ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್ ]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.
 
 
[[ವರ್ಗ:ಮರಾಠ ಸಾಮ್ರಾಜ್ಯ|*]]
[[ವರ್ಗ:ಭಾರತದ ಇತಿಹಾಸ]]
 
[[em:Maratha Empire]]
"https://kn.wikipedia.org/wiki/ಮರಾಠಾ_ಸಾಮ್ರಾಜ್ಯ" ಇಂದ ಪಡೆಯಲ್ಪಟ್ಟಿದೆ