ಗುಲ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 197.38.19.115 (talk) to last revision by Bschandrasgr
೨೦ ನೇ ಸಾಲು:
 
== ಗುಲ್ಮ ರೋಗಗಳು ==
ಗುಲ್ಮ ರೋಗಗಳು ಸೋಂಕಿನಿಂದ ಅಥವಾ ಬೇರೆ ಕಾರಣಗಳಿಂದ ಉದ್ಭವಿಸಿ ತಾತ್ಕಾಲಿಕವಾಗಿ ಅಥವಾ ಬಹುಕಾಲಿಕವಾಗಿ ಇರುತ್ತವೆ. ರೋಗ ತಗಲಿದಾಗ ಗುಲ್ಮ ದೊಡ್ಡದಾಗುವುದು ಸರ್ವೇಸಾಮಾನ್ಯ. ಗುಲ್ಮದ ಆಜನ್ಮ ಅವ್ಯವಸ್ಥೆಗಳಾಗಿ ಗುಲ್ಮ ಪೂರ್ಣವಾಗಿ ಲೋಪವಾಗಿರುವುದೂ ಬೆನ್ನು ಭಿತ್ತಿಗೆ ಅಂಟಿಕೊಂಡಿರುವುದೂ ಇಲ್ಲವೇ ಉದ್ದವಾದ ದಂಟಿನಿಂದ ನೇತುಹಾಕಿದಂತಿದ್ದು ಚಿಕ್ಕ ಕರುಳಿನಂತೆ ಸ್ಥಳಾಂತರಗೊಳ್ಳುವ ಹಾಗೆ ಇರುವುದೂ ಕಂಡುಬರುತ್ತದೆ. ಸಾಧಾರಣವಾಗಿ ಇವುಗಳಿಂದ ಏನು ತೊಂದರೆಯೂ ಇರುವುದಿಲ್ಲ. ಸ್ಥಳಪಲ್ಲಟವಾದ ಗುಲ್ಮ ಕೆಲವು ವೇಳೆ ಮತ್ತು ಸಾಮಾನ್ಯವಾಗಿ ದೊಡ್ಡದಾದಾಗ ದೇಹಕ್ರಿಯಾ ವ್ಯೆಪರೀತ್ಯವನ್ನು ಉಂಟುಮಾಡಬಹುದು. ವಿಷಾಣು ಸೋಂಕಿನಿಂದ, ಮುಖ್ಯವಾಗಿ ವಿಷಮಶೀತಜ್ವರಾಣು ಸೋಂಕಿನಿಂದ ಮತ್ತು ವೈರಸುಗಳ ಸೋಂಕಿನಿಂದ, ಗುಲ್ಮ ತಾತ್ಕಾಲಿಕವಾಗಿ ಊದಿಕೊಂಡು ಗೆಡ್ಡೆಯಂತೆ ಸಿಕ್ಕುತ್ತದೆ. ಬಹುಕಾಲಿಕವಾದ ಗೆಡ್ಡೆ ಬಹುಕಾಲಿಕ ವಿಷಾಣು ಸೋಂಕುಗಳಾದ ಕ್ಷಯ, ಫರಂಗಿರೋಗ ಇವುಗಳಲ್ಲಿಯೂ ಅಣುಜೀವಿಕೃತ (ಪ್ರೋಟೋಸೋವ ರೋಗಗಳಾದ ಮಲೇರಿಯ) ಕಾಳಜ್ವರಗಳಲ್ಲಿಯೂ ಶಿಸ್ಟೋಸೋಮ ಕೃತರೋಗದಲ್ಲಿಯೂ ಕಾಣಬರುತ್ತದೆ. ಗುಲ್ಮದಲ್ಲಿ ಅಗಾಧವಾಗಿ ರಕ್ತ ಶೇಖರಣೆ ಆದಾಗಲೂ ಸಹಜವಾಗಿಯೇ ಅದು ದಪ್ಪವಾಗುತ್ತದೆ. ಪೋರ್ಟಲ್ ಅಭಿಧಮನಿಯಲ್ಲಿ ರಕ್ತಕರಣೆ ಕಟ್ಟಿಕೊಂಡು ಇಲ್ಲವೇ ಬೇರೆ ರೀತಿಯಲ್ಲಿ ರಕ್ತಪ್ರವಾಹಕ್ಕೆ ಅಡಚಣೆಯುಂಟಾದಾಗ ಅಥವಾ ಯಕೃತ್ತಿನ ಸಿರ್ಹೋಸಿಸ್ ಎಂಬ ವ್ಯಾಧಿಯಿಂದ ರಕ್ತಚಲನೆಗೆ ಅಡ್ಡಿಯುಂಟಾದಾಗ ರಕ್ತ ಗುಲ್ಮದಲ್ಲಿ ಶೇಖರಣೆಯಾಗುತ್ತದೆ. ಏಡಿಗಂತಿಗಳಂಥ ಸ್ವಭಾವವುಳ್ಳ ಲ್ಯುಕೀಮಿಯ, ಲಿಂಫೋಮ ಮುಂತಾದ ರೋಗಗಳಲ್ಲಿಯೂ ಗುಲ್ಮದ ಗೆಡ್ಡೆ ಕಂಡುಬರುತ್ತದೆ. ಸ್ನಿಗ್ಧ ಪದಾರ್ಥಗಳು ಗುಲ್ಮದಲ್ಲಿ ಶೇಖರಣೆಯಾಗುವ ಗಾಶರನ ವ್ಯಾಧಿ, ನೀಮನ್ಪಿಕ್ಕನ ವ್ಯಾಧಿ ಮುಂತಾದವುಗಳಲ್ಲಿಯೂ ಗುಲ್ಮ ಊದಿಕೊಂಡಿರುತ್ತದೆ. ಗುಲ್ಮದ ಗೆಡ್ಡೆಯಿಂದ ಕೆಲವು ವೇಳೆ ರಕ್ತಕಣಹೀನತೆಯೂ ಕೆಲವು ವೇಳೆ ರಕ್ತಕಣತೆಯೂ (ವಾಲಿಸೈಟೀಮಿಯಾ) ಉಂಟಾಗಬಹುದು. ದೇಹಪರೀಕ್ಷೆ ಮತ್ತು ರಕ್ತಪರೀಕ್ಷೆಯಿಂದ ಈ ಅನೇಕ ಸ್ಥಿತಿಗಳನ್ನು ಅರಿತುಕೊಳ್ಳಬಹುದು. ಕೆಲವು [[ಸಮಯ]] ವಿಶೇಷ ಪರೀಕ್ಷೆಗಳು ಅಗತ್ಯವಾಗುತ್ತವೆ. ರಕ್ತದ ವಿಷಾಣುಗಳನ್ನು ಪ್ರಯೋಗಶಾಲೆಯಲ್ಲಿ ನೆಟ್ಟು ಬೆಳೆಸುವುದು, ಎದೆಮೂಳೆಯೊಳಗೆ ಸೂಜಿ ಚುಚ್ಚಿ ಅದರೊಳಗಿನ ಮಜ್ಜೆಯನ್ನು ಪರೀಕ್ಷಿಸುವುದು, ಎದೆಯನ್ನು ಕ್ಷಕಿರಣ ಪರೀಕ್ಷೆಗೆ ಒಳಪಡಿಸುವುದು, ಗುಲ್ಮದ ಚೂರೊಂದನ್ನು ವಿಶೇಷ ಶಸ್ತ್ರಕ್ರಿಯೆಯಿಂದ (ಬಯಪ್ಸಿ) ತೆಗೆದುಕೊಂಡು ಪರೀಕ್ಷಿಸುವುದು, ಕ್ಷಯಾಣುಸೋಂಕಿಗೆ, ಫರಂಗಿ ರೋಗಾಣು ಸೋಂಕಿಗೆ ವಿಶಿಷ್ಟವಾದ ಪರೀಕ್ಷೆ ನಡೆಸುವುದು ಇತ್ಯಾದಿ ಕ್ರಮಗಳು ಬೇಕಾಗುತ್ತವೆ. ಇವುಗಳಿಂದ ರೋಗ ಮೂಲತಃ ಗುಲ್ಮದ್ದೋ ಅಥವಾ ಬೇರೆಡೆ ರೋಗದಿಂದ ಗುಲ್ಮ ಗೆಡ್ಡೆ ಕಟ್ಟಿಕೊಂಡಿದೆಯೋ ಎನ್ನುವುದನ್ನು ತಿಳಿಯಬಹುದು. ಗುಲ್ಮವೇ ರೋಗಕಾರಕವಾಗಿದ್ದರೆ ಅಥವಾ ಇತರ ರೋಗಗಳಿಂದ ಗುಲ್ಮ ಅತಿ ದೊಡ್ಡದಾಗಿ ತನ್ನ ಗಾತ್ರದಿಂದಲೇ ದೇಹ ಕಾರ್ಯಗಳಿಗೆ ಅನಾನುಕೂಲವಾಗುವಂತಿದ್ದರೆ ಗುಲ್ಮವನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ.
<ref>[https://kn.wikisource.org/s/l80 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲ್ಮ]</ref>
==ಉಲ್ಲೇಖ==

{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲ್ಮರೋಗಗಳು}}{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಲ್ಮ}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಶರೀರ ಶಾಸ್ತ್ರ]]
"https://kn.wikipedia.org/wiki/ಗುಲ್ಮ" ಇಂದ ಪಡೆಯಲ್ಪಟ್ಟಿದೆ