ಗೌತಮ ಬುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೬೭ ನೇ ಸಾಲು:
*ಅದುವರೆವಿಗೂ ಅಂತಹವನನ್ನು ಕಾಣದಿದ್ದ ಸಿದ್ದಾರ್ಥ ಆ ಸನ್ಯಾಸಿಯನ್ನು ನೀನಾರೆಂದು ಪ್ರಶ್ನಿಸಿದಾಗ ಅವನು- "ಜನನ-ಮರಣಗಳುಳ್ಳ ಪ್ರಪಂಚದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು, ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಖೇದಗೊಂಡು ಕಾಡುಮೇಡು ಅಲೆಯುತ್ತಾ ನೆಮ್ಮದಿಯಾಗಿದ್ದೇನೆ. ನಾನು ಬಂಧು-ಬಾಂಧವರು, ಸುಖ-ಸಂಪತ್ತುಗಳೆಂಬ ಕೋಟಲೆಯಿಂದ ದೂರವಾದವನು. ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆಯಿಲ್ಲ. ಉರಿಬರಲಿ, ಸಿರಿಬರಲಿ, ಬೇಕು - ಬೇಡ ಎಂಬ ಗೊಂದಲಕ್ಕೆ ಒಳಗಾಗದವನು. ಆತ್ಮ ಸ್ವತಂತ್ರನು ನಾನು. ಭೂಮಿಯೇ ನನ್ನ ಮನೆ, ಆಕಾಶವೇ ನನಗೆ ಹೊದಿಕೆ. ಅನ್ಯರ ಹಂಗಿಲ್ಲದ ಈ ಅರಣ್ಯ ನನ್ನ ವಿಹಾರ ತಾಣ" ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ದಾರ್ಥನ ಮನವನ್ನು ಸೂರೆಗೊಂಡವು. ಅವನ ಮನಸ್ಸು ಒಮ್ಮೆಲೆ ಶಾಂತವಾಗಿ ಒಂದು ಡೃಢ ನಿರ್ಧಾರಕ್ಕೆ ಬಂದಿತು.
 
Njdjsjj==ಸಂಸಾರ ಪರಿತ್ಯಾಗ==
*ವೃದ್ಧ, ರೋಗಿ, ಮೃತದೇಹ ಮತ್ತು ಸನ್ಯಾಸಿಯ ದರ್ಶನದಿಂದ ಸಿದ್ದಾರ್ಥನ ಜೀವನದಲ್ಲಿ ಅಗಾಧ ಮಾರ್ಪಾಡು ಆಗುತ್ತದೆ. ಜರಾಮರಣಗಳಿಗೆ, ದುಃಖಗಳಿಗೆ ಕಾರಣವನ್ನು ಹುಡುಕಬೇಕೆಂಬ ಹಂಬಲ ತೀವ್ರವಾಗುತ್ತದೆ. ತನ್ನ ಸಂಕಲ್ಪಸಿದ್ಧಿಗೆ ಇದುವರೆವಿಗೂ ನಡೆಸಿದ ಜೀವನ ಸಲ್ಲದೆಂದು ತೀರ್ಮಾನಿಸುವನು. ಈ ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಹೋಗುವುದೇ ಸರಿಯಾದ ಮಾರ್ಗವೆಂದು ನಿರ್ಧರಿಸಿದನು.
*ಒಂದು ಕ್ಷಣ ಸಿದ್ದಾರ್ಥನು ಗೊಂದಲಕ್ಕೆ ಈಡಾಗುತ್ತಾನೆ. ತನ್ನನ್ನು ನಂಬಿದವರಿಗೆ ತನ್ನ ಅಗಲುವಿಕೆಯಿಂದ ಎಷ್ಟೊಂದು ನೋವಾಗಬಹುದೆಂದು ಯೋಚಿಸಿ, ಒಡನೆಯೇ ಮನೋನಿಶ್ಚಯಕ್ಕೆ ಒಳಗಾಗುತ್ತಾನೆ. ಸಿದ್ದಾರ್ಥ ತಂದೆ ಶುದ್ಧೋಧನನ ಬಳಿಗೆ ಹೋಗಿ ತಾನು ಸನ್ಯಾಸಿಯಾಗಲಿರುವ ವಿಷಯವನ್ನು ತಿಳಿಸಿ ಅನುಮತಿ ಬೇಡುತ್ತಾನೆ. ಶುದ್ಧೋಧನ ಸಿದ್ದಾರ್ಥ ಸನ್ಯಾಸಿಯಾಗಲು ಅನುಮತಿ ನೀಡುವುದಿಲ್ಲ.
"https://kn.wikipedia.org/wiki/ಗೌತಮ_ಬುದ್ಧ" ಇಂದ ಪಡೆಯಲ್ಪಟ್ಟಿದೆ