ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೮ ನೇ ಸಾಲು:
ವಿಶ್ವಸಂಸ್ಥೆ ನೂರಕ್ಕೂ ಹೆಚ್ಚು ವಿಶೇಷ ವಾರ್ಷಿಕ ದಿನಗಳನ್ನು ಗುರುತಿಸಿದೆ (un.org/en/sections/observances/international-days). ಈ ದಿನಗಳ ಪಟ್ಟಿಯಲ್ಲಿ ಪರಿಸರ ದಿನ, ಜನಸಂಖ್ಯಾ ದಿನ ಮುಂತಾದ ಪರಿಚಿತ ಆಚರಣೆಗಳಷ್ಟೇ ಅಲ್ಲದೆ ಬೆಳಕಿನ ದಿನ, ಶೌಚಾಲಯ ದಿನ, ಸೈಕಲ್ ದಿನಗಳಂತಹ ವಿಶಿಷ್ಟ ಆಚರಣೆಗಳೂ ಇವೆ. ಇಂತಹ ದಿನಾಚರಣೆಗಳ ಬಗೆಗಿನ ಮಾಹಿತಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕನ್ನಡ ವಿಕಿಪೀಡಿಯದಲ್ಲಿ ಬಹಳ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇದೆ (https://kn.wikipedia.org/wiki/ವರ್ಗ:ಪ್ರಮುಖ_ದಿನಗಳು). ಇಂತಹ ದಿನಾಚರಣೆಗಳನ್ನು ಕುರಿತ ಬರಹಗಳನ್ನು ಒಂದು ಸಿದ್ಧ ಮಾದರಿಗೆ (ಟೆಂಪ್ಲೇಟ್) ಹೊಂದಿಸಬಹುದಾಗಿದ್ದು, ಅಗತ್ಯ ಮಾಹಿತಿಯನ್ನೆಲ್ಲ ಒಂದುಕಡೆ (ಉದಾ: ಡೇಟಾಬೇಸ್) ಸಂಗ್ರಹಿಸಿಟ್ಟರೆ ಅಷ್ಟೂ ಲೇಖನಗಳನ್ನು ತಂತ್ರಾಂಶದ ಸಹಾಯದಿಂದ ಸಿದ್ಧಪಡಿಸಬಹುದು. ಈ ಲೇಖನಗಳು ವಿಕಿಪೀಡಿಯದಲ್ಲಿ ಪ್ರಕಟಣೆಗೆ ಬೇಕಾದ ರೂಪದಲ್ಲೇ (ವಿಕಿಟೆಕ್ಸ್ಟ್) ಇರುವಂತೆಯೂ ನೋಡಿಕೊಳ್ಳಬಹುದು. ಈ ಚಟುವಟಿಕೆ ಕೈಗೊಳ್ಳಲು ಇಜ್ಞಾನ ಟ್ರಸ್ಟ್ ಉದ್ದೇಶಿಸಿದ್ದು ಅದಕ್ಕೆ ಬೇಕಾಗುವ ನೆರವನ್ನು ಅಪೇಕ್ಷಿಸುತ್ತಿದೆ.

===ಈ ಪ್ರಯೋಗದ ವಿವಿಧ ಹಂತಗಳು ಹೀಗಿರಲಿವೆ===
ವಿಶ್ವಸಂಸ್ಥೆ ಪ್ರಕಟಿಸಿರುವ ಪಟ್ಟಿಯಿಂದ ೧೦೦ ಪ್ರಾತಿನಿಧಿಕ ದಿನಗಳ ಆಯ್ಕೆ

ಈ ದಿನಗಳ ಕುರಿತು ಲೇಖನ ಸಿದ್ಧಪಡಿಸಲು ಬೇಕಾದ ಮಾಹಿತಿಯ ಸಂಗ್ರಹಣೆ

ಲೇಖನದ ಸಿದ್ಧ ಮಾದರಿ (ಟೆಂಪ್ಲೇಟ್) ತಯಾರಿ

ಮಾಹಿತಿ ಹಾಗೂ ಮಾದರಿ ಬಳಸಿಕೊಂಡು ಲೇಖನ ತಯಾರಿಸುವ ತಂತ್ರಾಂಶದ ತಯಾರಿ ಮತ್ತು ಪರೀಕ್ಷೆ

ಲೇಖನಗಳ ಪರಿಶೀಲನೆ ಹಾಗೂ ಪ್ರಕಟಣೆಗಾಗಿ ಎಡಿಟಥಾನ್ ಮಾದರಿಯ ಕಾರ್ಯಕ್ರಮ ಆಯೋಜನೆ

ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಪ್ರಕಟಣೆ.

=== ಈ ಪ್ರಯೋಗಕ್ಕೆ ತಗುಲಬಹುದಾದ ಖರ್ಚಿನ ಅಂದಾಜು ವಿವರ ಹೀಗಿದೆ ===
ಸಿದ್ಧ ಮಾದರಿ ಹಾಗೂ ತಂತ್ರಾಂಶದ ತಯಾರಿ ಮತ್ತು ಪರೀಕ್ಷೆ ಮಾಡುವ ತಂತ್ರಜ್ಞರ ಗೌರವಧನ, ಸು. ೮೦ ಗಂಟೆಗಳ ಕೆಲಸಕ್ಕೆ ತಲಾ ರೂ. ೫೦೦ರಂತೆ: ರೂ. ೪೦,೦೦೦