ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Archived to Special:Diff/918431
೪೬ ನೇ ಸಾಲು:
===ಅನಗತ್ಯ ರದ್ದಿಗೆ ಹಾಕಿರುವುದು - ಮತ್ತೊಂದು ಕೀಟಲೆ- ಕಿರುಕುಳ===
*'''ಉದಾಹರಣೆಗಳ ಪಟ್ಟಿಗೆ ಅವಕಾಶವಿದೆ -ತತ್ಸಮ ತದ್ಭವಕ್ಕೆ ಪ್ರತಿ ಪದಕ್ಕೆ ವಿವರಣೆ ಅನಗತ್ಯ; - ಅನಗತ್ಯವಾಗಿ ರದ್ದಿಗೆ ಹಾಕಿರುವುದನ್ನು ವಜಾಮಾಡಿದೆ- ಅನೇಕ ವಿವರಣೆಗಳಿಲ್ಲದ ಪಟ್ಟಿಗಳಿವೆ-(ನಿಜವಾಗಿ ವಿವರಣೆ ಬೇಕಾದ ಬೇರೆ ಪಟ್ಟಿಗಲಿವೆ-ಉದಾ:[[ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]]) ಈ [[ತತ್ಸಮ ತದ್ಬವ]] ಪುಟಕ್ಕೆ ವಿವರಣೆ ಅನಗತ್ಯ. "(ಶ್ರೇಷ್ಠ ವಿದ್ವಾಂಸರಾದ ತೀ. ನಂ. ಶ್ರೀಯವರೇ ವಿವರಣೆ ಹಾಕಿಲ್ಲ)" ವಿಕಾಸ ಹೆಗಡೆಯವರು ಪೂರ್ವಾಗ್ರಹವನ್ನು ಬಿಡಬೇಕು- ಸಂಪಾದನೆಗೆ ಸಹಕರಿಸಲಿ. ಇದರಲ್ಲಿ ತಮ್ಮ ಮಾತೇ ನೆಡಯಬೇಕೆಂಬ ದುರುದ್ದೇಸ ಕಾಣತ್ತದೆ. ಈ ಬಗೆಯ ಕಿರುಕುಳವನ್ನು ನಿಲ್ಲಿಸ ಬೇಕು. ಇವರ ಕಿರುಕುಳದಿಂದ ಜಗತ್ತಿನಲ್ಲೇ ಪ್ರಸಿದ್ಧವಾದ [[೨೦೧೯ರ ಬಾರತದ ಸಾರ್ವರ್ತ್ರಿಕ ಚುನಾವಣೆ]]ಯ ಪುಟವನ್ನು ಯಾರೂ ಹಾಕಿಲ್ಲ. ಬೇರೆಯವರು ಹಾಕುವ ಪ್ರಸ್ತುತ ಪುಟಕ್ಕೆ ತಕರಾರು ಮಾಡುವ- ಕಿರುಕುಳಕೊಡುವ ನೀವು ತಯಾರಿಸಿ ಹಾಕಿ ಎಂದರೆ, ಹಾಕಿಲ್ಲ. ಆ ಪುಟ ತಯಾರಿಸುವ ಯೋಗ್ಯತೆಯೇ ಇಲ್ಲವೇ ಎಂಬ ಅನುಮಾನ ಬರುತ್ತದೆ. ಈಗ ಪ್ರಸ್ತುತತೆ ಕಳೆದರೂ ಆ ಪುಟವನ್ನು ತಯಾರಿಸಿಲ್ಲ. ಭಾರತದ ಇತರೆ ಭಾಷೆಗಳಲ್ಲಿ (ಹೆಗಡೆಯವರ ನೀತಿಗೆ ವಿರುದ್ಧವಾಗಿ ವರ್ತಮಾನಕಾಲದಲ್ಲಿಯೇ) ಮೊದಲೇ ತಯಾರಿಸಿದ್ದಾರೆ. ಪ್ರಶಸ್ತಿ ಪಡೆದವರ ಪಟ್ಟಿ, ಶಾಸನ ಸಭೆ ಸದಸ್ಯರ ಪಟ್ಟಿ, ಹೀಗೆ ಅನೇಕ ಪಟ್ಟಿಗಳಿಗೆ ವಿವರಣೆ ಇಲ್ಲ. ತತ್ಸಮ ತದ್ಭವ ಪಟ್ಟಿಗೆ ಅದರಲ್ಲಿ ಮೇಲೆ ಕೊಟ್ಟ ವಿವರಣೆಗಿಂತ ಹೆಚ್ಚಿನ ವಿವರಣೆ ಅನಗತ್ಯ- ದಯವಿಟ್ಟು ವಿಕಾಸ ಹೆಗಡೆಯವರು ತಮ್ಮ ತಿಳುವಳಿಕೆಗೆ ಮೀರಿದ ವಿಷಯದಲ್ಲಿ ತಲೆ ಹಾಕಿ ತಕರಾರು ಕಿರುಕುಳ ನೀಡಬಾರದೆಂದು ಕೋರುತ್ತೇನೆ. ತಕರಾರು ಮಾಡತ್ತಿರುವ ಅವರು, ಮೊದಲು [[೨೦೧೯ರ ಬಾರತದ ಸಾರ್ವರ್ತ್ರಿಕ ಚುನಾವಣೆ]]ಯ ಪುಟವನ್ನು ತಯಾರಿಸಲಿ. ಕನ್ನಡ ವಿಕಿಪೀಡಿಯ ಅಭಿವೃದ್ಧಿಯ ದೃಷ್ಟಿಯಿಮದ ಹೇಳುತ್ತಿದ್ದೇನೆ ನನಗೆ ಯಾವ ಲಾಭವೂ ಇಲ್ಲ'''. [[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೭:೨೮, ೪ ಜೂನ್ ೨೦೧೯ (UTC)

== ವಿಕಿಪೀಡಿಯದಲ್ಲಿ ಸಿದ್ಧ ಮಾದರಿಯ ಲೇಖನಗಳನ್ನು ತಯಾರಿಸುವ ಯೋಜನೆಯ ಬಗ್ಗೆ ==

ಮಾನ್ಯರೇ,

ಕನ್ನಡ ವಿಕಿಪೀಡಿಯದಲ್ಲಿ ಹೆಚ್ಚಿನ ಲೇಖನಗಳನ್ನು ನೋಡುವುದು ನಮ್ಮೆಲ್ಲರ ಆಶಯವೂ ಹೌದು. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರಯೋಗವೊಂದನ್ನು ಕೈಗೊಳ್ಳಲು ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಉದ್ದೇಶಿಸಿದ್ದು, ಇದಕ್ಕಾಗಿ ನಿಮ್ಮ ನೆರವನ್ನು ಅಪೇಕ್ಷಿಸುತ್ತಿದೆ. ದಯಮಾಡಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ ತಮ್ಮ ಬೆಂಬಲ ನೀಡಬೇಕಾಗಿ ಕೋರುತ್ತೇನೆ.

=== ಪ್ರಯೋಗದ ಸಾರಾಂಶ ===
ಸ್ಥೂಲವಾದ ಒಂದು ವಿಷಯಕ್ಕೆ ಸಂಬಂಧಪಟ್ಟ, ಸಿದ್ಧ ಮಾದರಿಯ ಸುಮಾರು ೧೦೦ ಬರಹಗಳನ್ನು ತಂತ್ರಾಂಶದ ಸಹಾಯದಿಂದ ರೂಪಿಸಿ, ಸಂಪಾದಕರ ಪರಿಶೀಲನೆಯ ನಂತರ ಕನ್ನಡ ವಿಕಿಪೀಡಿಯದಲ್ಲಿ ಪ್ರಕಟಿಸುವುದು.

=== ವಿವರ ===
ವಿಶ್ವಸಂಸ್ಥೆ ನೂರಕ್ಕೂ ಹೆಚ್ಚು ವಿಶೇಷ ವಾರ್ಷಿಕ ದಿನಗಳನ್ನು ಗುರುತಿಸಿದೆ (un.org/en/sections/observances/international-days). ಈ ದಿನಗಳ ಪಟ್ಟಿಯಲ್ಲಿ ಪರಿಸರ ದಿನ, ಜನಸಂಖ್ಯಾ ದಿನ ಮುಂತಾದ ಪರಿಚಿತ ಆಚರಣೆಗಳಷ್ಟೇ ಅಲ್ಲದೆ ಬೆಳಕಿನ ದಿನ, ಶೌಚಾಲಯ ದಿನ, ಸೈಕಲ್ ದಿನಗಳಂತಹ ವಿಶಿಷ್ಟ ಆಚರಣೆಗಳೂ ಇವೆ. ಇಂತಹ ದಿನಾಚರಣೆಗಳ ಬಗೆಗಿನ ಮಾಹಿತಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕನ್ನಡ ವಿಕಿಪೀಡಿಯದಲ್ಲಿ ಬಹಳ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇದೆ (https://kn.wikipedia.org/wiki/ವರ್ಗ:ಪ್ರಮುಖ_ದಿನಗಳು). ಇಂತಹ ದಿನಾಚರಣೆಗಳನ್ನು ಕುರಿತ ಬರಹಗಳನ್ನು ಒಂದು ಸಿದ್ಧ ಮಾದರಿಗೆ (ಟೆಂಪ್ಲೇಟ್) ಹೊಂದಿಸಬಹುದಾಗಿದ್ದು, ಅಗತ್ಯ ಮಾಹಿತಿಯನ್ನೆಲ್ಲ ಒಂದುಕಡೆ (ಉದಾ: ಡೇಟಾಬೇಸ್) ಸಂಗ್ರಹಿಸಿಟ್ಟರೆ ಅಷ್ಟೂ ಲೇಖನಗಳನ್ನು ತಂತ್ರಾಂಶದ ಸಹಾಯದಿಂದ ಸಿದ್ಧಪಡಿಸಬಹುದು. ಈ ಲೇಖನಗಳು ವಿಕಿಪೀಡಿಯದಲ್ಲಿ ಪ್ರಕಟಣೆಗೆ ಬೇಕಾದ ರೂಪದಲ್ಲೇ (ವಿಕಿಟೆಕ್ಸ್ಟ್) ಇರುವಂತೆಯೂ ನೋಡಿಕೊಳ್ಳಬಹುದು. ಈ ಚಟುವಟಿಕೆ ಕೈಗೊಳ್ಳಲು ಇಜ್ಞಾನ ಟ್ರಸ್ಟ್ ಉದ್ದೇಶಿಸಿದ್ದು ಅದಕ್ಕೆ ಬೇಕಾಗುವ ನೆರವನ್ನು ಅಪೇಕ್ಷಿಸುತ್ತಿದೆ.

===ಈ ಪ್ರಯೋಗದ ವಿವಿಧ ಹಂತಗಳು ಹೀಗಿರಲಿವೆ===
ವಿಶ್ವಸಂಸ್ಥೆ ಪ್ರಕಟಿಸಿರುವ ಪಟ್ಟಿಯಿಂದ ೧೦೦ ಪ್ರಾತಿನಿಧಿಕ ದಿನಗಳ ಆಯ್ಕೆ ಈ ದಿನಗಳ ಕುರಿತು ಲೇಖನ ಸಿದ್ಧಪಡಿಸಲು ಬೇಕಾದ ಮಾಹಿತಿಯ ಸಂಗ್ರಹಣೆ ಲೇಖನದ ಸಿದ್ಧ ಮಾದರಿ (ಟೆಂಪ್ಲೇಟ್) ತಯಾರಿ ಮಾಹಿತಿ ಹಾಗೂ ಮಾದರಿ ಬಳಸಿಕೊಂಡು ಲೇಖನ ತಯಾರಿಸುವ ತಂತ್ರಾಂಶದ ತಯಾರಿ ಮತ್ತು ಪರೀಕ್ಷೆ ಲೇಖನಗಳ ಪರಿಶೀಲನೆ ಹಾಗೂ ಪ್ರಕಟಣೆಗಾಗಿ ಎಡಿಟಥಾನ್ ಮಾದರಿಯ ಕಾರ್ಯಕ್ರಮ ಆಯೋಜನೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಪ್ರಕಟಣೆ.

=== ಈ ಪ್ರಯೋಗಕ್ಕೆ ತಗುಲಬಹುದಾದ ಖರ್ಚಿನ ಅಂದಾಜು ವಿವರ ಹೀಗಿದೆ ===
ಸಿದ್ಧ ಮಾದರಿ ಹಾಗೂ ತಂತ್ರಾಂಶದ ತಯಾರಿ ಮತ್ತು ಪರೀಕ್ಷೆ ಮಾಡುವ ತಂತ್ರಜ್ಞರ ಗೌರವಧನ, ಸು. ೮೦ ಗಂಟೆಗಳ ಕೆಲಸಕ್ಕೆ ತಲಾ ರೂ. ೫೦೦ರಂತೆ: ರೂ. ೪೦,೦೦೦

ಎಡಿಟಥಾನ್ ಆಯೋಜನೆಗೆ ತಗುಲಬಹುದಾದ ವೆಚ್ಚ, ಸುಮಾರು ೧೦ ಪ್ರತಿನಿಧಿಗಳ ಊಟ-ತಿಂಡಿ, ಸ್ಥಳೀಯ ಪ್ರಯಾಣ ಇತ್ಯಾದಿಗಳಿಗೆ: ರೂ. ೭,೫೦೦

ಇತರೆ ಸಂಭಾವ್ಯ ವೆಚ್ಚಗಳು: ರೂ. ೨,೫೦೦

ಎಡಿಟಥಾನ್‌ನಲ್ಲಿ ಭಾಗವಹಿಸುವವರಿಗೆ ವಿಕಿಪೀಡಿಯ ಲೋಗೋ ಇರುವ ಟೀಶರ್ಟ್, ಪೆನ್ ಮುಂತಾದ ಕೊಡುಗೆ (ಒಟ್ಟು ವೆಚ್ಚದಲ್ಲಿ ಸೇರಿಲ್ಲ)

ಒಟ್ಟು ಅಂದಾಜು ವೆಚ್ಚ: ರೂ. ೫೦,೦೦೦.

ಎಡಿಟಥಾನ್ ಕಾರ್ಯಕ್ರಮವನ್ನು ನೀವೇ ಆಯೋಜಿಸುವುದಾದರೆ ಆ ವೆಚ್ಚವನ್ನು ಇದರಿಂದ ಹೊರಗಿಡಬಹುದು.

ಈ ಪ್ರಯೋಗಕ್ಕೆ ಒಟ್ಟಾರೆಯಾಗಿ ಸುಮಾರು ಒಂದು ತಿಂಗಳ ಅವಧಿ ಬೇಕಾಗಬಹುದು ಎನ್ನುವುದು ನಮ್ಮ ನಿರೀಕ್ಷೆ.

===ಪ್ರಯೋಗದಿಂದ ದೊರಕುವ ಫಲಿತಾಂಶ===
ಕನ್ನಡ ವಿಕಿಪೀಡಿಯಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ೧೦೦ ಮಹತ್ವದ ದಿನಗಳನ್ನು ಕುರಿತ ಲೇಖನಗಳ ಸೇರ್ಪಡೆ

ಇನ್ನೂ ಹೆಚ್ಚಿನ ದಿನಗಳ ಬಗ್ಗೆ ಮಾಹಿತಿ ಸೇರಿಸಲು ಆಸಕ್ತಿಯಿರುವವರು ಬಳಸಬಹುದಾದ ಸರಳ ತಂತ್ರಾಂಶ

ಇಂಥದ್ದೇ ಇನ್ನೂ ಕೆಲ ಪ್ರಯೋಗಗಳನ್ನು (ಉದಾ: ಮಹತ್ವದ ವ್ಯಕ್ತಿಗಳು, ಪುಸ್ತಕಗಳು ಇತ್ಯಾದಿ) ಆಯೋಜಿಸಬಹುದಾದ ಸಾಧ್ಯತೆ.

ಈ ಪ್ರಸ್ತಾವನೆಯನ್ನು ನಾವು [[:meta:CIS-A2K|CIS-A2K]]ಗೆ ನಾವು ಸಲ್ಲಿಸಲು ಇಚ್ಚಿಸುತ್ತೇವೆ. ಈ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ, ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ದಯಮಾಡಿ ತಿಳಿಸಿ.

ಧನ್ಯವಾದಗಳು.

ವಿಶ್ವಾಸದಿಂದ,

ಟಿ. ಜಿ. ಶ್ರೀನಿಧಿ

ಕಾರ್ಯದರ್ಶಿ

ಇಜ್ಞಾನ ಟ್ರಸ್ಟ್, ಬೆಂಗಳೂರು
--[[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೧೪:೦೯, ೧೧ ಜೂನ್ ೨೦೧೯ (UTC)