ಪಂಡಿತ ತಾರಾನಾಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
→‎ಹುಟ್ಟು: ಜನ್ಮದಿನ ತಿದ್ದುಪಡಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೩ ನೇ ಸಾಲು:
==ಹುಟ್ಟು==
 
ಪಂಡಿತ ತಾರಾನಾಥರು ಹುಟ್ಟಿದ್ದು ೧೮೮೧ರ ಜನವರಿಜೂನ್ ೫ರಂದು , [[ಮಂಗಳೂರು |ಮಂಗಳೂರಿನಲ್ಲಿ]]. ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯನ್ನು ತಂದೆಯಿಂದಲೂ, ಧಾರ್ಮಿಕ ನೈತಿಕ ವಿಷಯಗಳಲ್ಲಿ ಆಸಕ್ತಿಯನ್ನು ತಾಯಿಯಿಂದಲೂ ಪಡೆದರು. ಚುರುಕುಬುದ್ಧಿಯ ಹುಡುಗನಾಗಿದ್ದ ತಾರಾನಾಥ ಶಾಲೆಯಲ್ಲಿ ಶಿಕ್ಷಕರ ಮಾತುಗಳನ್ನು ತನಗೆ ಸರಿಯಲ್ಲ ಎಂದು ಕಂಡರೆ ಪ್ರಶ್ನಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ದಂಡನೆಗೊಳಗಾಗುತ್ತಿದ್ದದ್ದೂ ಉಂಟು. ಈ ಬಂಡೇಳುವ ಸ್ವಭಾವ ಅವರ ಜೀವನದುದ್ದಕ್ಕೂ ಕಂಡುಬರುತ್ತದೆ. ಹೈಸ್ಕೂಲು ಮತ್ತು ಕಾಲೇಜು ವಿದ್ಯಾಭ್ಯಾಸಕ್ಕೆ [[ಹೈದರಾಬಾದ್ |ಹೈದರಾಬಾದಿಗೆ]] ತೆರಳಿ, ನಂತರ ಮೆಡಿಕಲ್ ಕಾಲೇಜು ಸೇರಿದರು. ಅಲ್ಲಿಯೂ ಅವರ ಅಸಾಧಾರಣ ಪ್ರತಿಭೆಯಿಂದ ಬೆರಗಾದ ಅವರ ಅಧ್ಯಾಪಕರು ಅವರನ್ನು ಗೌರವ ಅಧ್ಯಾಪಕರಾಗಿ ತರಗತಿ ತೆಗೆದುಕೊಳ್ಳಲು ಹೇಳಿದರು!
 
ಆದರೂ , ಅಲ್ಲಿಯೂ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯದಿಂದಾಗಿ, ಶಿಕ್ಷಣ ಪೂರೈಸಲಿಲ್ಲ. ಆದರೂ ಅವರ ಅಧ್ಯಾಪಕರು ಅವರನ್ನು ದೇಹಶಾಸ್ತ್ರದ ಸಹಾಯಕ ಅಧ್ಯಾಪಕರನ್ನಾಗಿ ನೇಮಿಸಿದರು. ಅದೇ ಕೆಲಸದಲ್ಲಿ ಅವರು ಏಳು ವರ್ಷ ಇದ್ದರು. ಮುಂದೆ ಅವರನ್ನು [[ಬೀದರ್ |ಬೀದರಿ]]ಗೆ ವರ್ಗಾವಣೆ ಮಾಡಲಾಯಿತು.
"https://kn.wikipedia.org/wiki/ಪಂಡಿತ_ತಾರಾನಾಥ" ಇಂದ ಪಡೆಯಲ್ಪಟ್ಟಿದೆ