"ನೊಳಂಬ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಉಲ್ಲೇಖ
ಚು (ಉಲ್ಲೇಖ)
'''ನೊಳಂಬ''' - [[ಕರ್ನಾಟಕ|ಕರ್ನಾಟಕದ]] ಈಗಿನ [[ಚಿತ್ರದುರ್ಗ]] ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, [[ತುಮಕೂರು]], [[ಕೋಲಾರ]], [[ಬೆಂಗಳೂರು]], ಜಿಲ್ಲೆಗಳನ್ನೂ ನೆರೆಯ [[ಅನಂತಪುರ್‌ ಜಿಲ್ಲೆ|ಅನಂತಪುರ]], [[ಚಿತ್ತೂರು]], [[ಧರ್ಮಪುರಿ‍‍‍‍‍‍‍‍ ಜಿಲ್ಲೆ|ಧರ್ಮಪುರಿ]] ಜಿಲ್ಲೆಗಳನ್ನೂ ಒಳಗೊಂಡಿದ್ದ '''''ನೊಳಂಬವಾಡಿ 32000 ಪ್ರಾಂತ್ಯ'''''ದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ.<ref>{{Cite book|url=https://books.google.co.in/books?id=yhXRDSgBuL0C&dq=velvikudi+kannada&q=nolamba#v=snippet&q=nolamba&f=false|title=History of Kannada Language|last=R|first=Narasimhacharya|publisher=Asian Educational Services|year=1942|isbn=9788120605596|location=|pages=49|via=}}</ref>
 
ತಲಕಾಡಿನ [[ಗಂಗ (ರಾಜಮನೆತನ)|ಗಂಗ]]ರೂ [[ರಾಷ್ಟ್ರಕೂಟ]]ರೂ ಕಲ್ಯಾಣ [[ಚಾಲುಕ್ಯ|ಚಾಳುಕ್ಯ]]ರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, [[ಚೋಳ ವಂಶ|ಚೋಳ]]ರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ.
==ಇತಿಹಾಸ==
 
ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂದ ಸ್ತುತ್ಯನಾದವನೀತ. ಇವನ ಅನಂತರ ಪಟ್ಟಕ್ಕೆ ಬಂದವನು ಇವನ ಮಗ ಸಿಂಹಪೋತ (ಸು. 775-ಸು. 805). ಕಲಿ ನೊಳಂಬಾಧಿ ರಾಜನೆನಿಸಿಕೊಂಡಿದ್ದ ಈತ ಶ್ರೀಪುರುಷನ ಮಗನೂ ಶಿವಮಾರನ ಸಹೋದರನೂ ಆದ ದುಗ್ಗಮಾರನ ಮೇಲೆ ದಂಡೆತ್ತಿಹೋದ. ಶ್ರೀಪುರಷನ ಅನಂತರ ಗಂಗ ಸಿಂಹಾಸನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಇವನು ಶಿವಮಾರನ ಪರವಾಗಿ ದುಗ್ಗಮಾರನ ಮೇಲೆ ದಂಡೆತ್ತಿಹೋಗಿರಬಹುದೆಂದು ಊಹಿಸಬಹುದು. ಎರಡನೆಯ ಶಿವಮಾರನನ್ನು ರಾಷ್ಟ್ರಕೂಟ ಧ್ರುವ ಸೋಲಿಸಿದಾಗ ನೊಳಂಬರು ಗಂಗರ ಆಶ್ರಯವನ್ನು ಬಿಟ್ಟು ರಾಷ್ಟ್ರಕೂಟರ ಸಾಮಂತರಾದರು. ಸಿಂಹಪೋತನ ಮಗ ಚಾರುಪೊನ್ನೇರ ಪರಮೇಶ್ವರ ಪಲ್ಲವಾಧಿರಾಜ (ಸು. 805-ಸು. 830). ಇವನು ರಾಷ್ಟ್ರಕೂಟ 3ನೆಯ ಗೋವಿಂದನ ಸಾಮಂತನಾಗಿದ್ದ. ನೊಳಂಬಳಿಗೆ ಸಾಸಿರ ಮುಂತಾದ ಪ್ರಾಂತ್ಯಗಳು ಇವನ ಅಧೀನದಲ್ಲಿದ್ದುವು.<ref>{{Cite book|url=https://books.google.co.in/books?id=C9W1AAAAIAAJ&q=Nolamba&dq=Nolamba&hl=en&sa=X&ved=0ahUKEwiV-7C_l5TPAhVN4WMKHSyWBiQQ6AEINjAE|title=The Chālukyas of Kalyāṇ̄a: seminar papers|last=M. S.|first=Nagaraja Rao|publisher=Mythic Society|year=1983|isbn=|location=|pages=39–41|via=}}</ref>
 
ಸುಮಾರು 820ರಲ್ಲಿ ನೊಳಂಬರು ಪಶ್ಚಿಮದ ಗಂಗರ ಸಾಮಂತರಾದರೆಂದು ಕಾಣುತ್ತದೆ. ಚಾರುಪೊನ್ನೇರನ ಮಗ ಪೊಳಲ್ಚೋರನಿಗೆ ಗಂಗರಾಜ 1ನೆಯ ರಾಚಮಲ್ಲನ ಮಗಳು, ನೀತಿಮಾರ್ಗನ ತಂಗಿ, ಚಾಯಬ್ಬೆಯನ್ನು ಕೊಟ್ಟು ವಿವಾಹವಾಯಿತು. 1ನೆಯ ಪೊಳಲ್ಚೋರ ಕೋಲಾರ, ಬೆಂಗಳೂರು ಮತ್ತು ಚಿತ್ತೂರು ಜಿಲ್ಲೆಯ ಭಾಗಗಳನ್ನೊಳಗೊಂಡ ಗಂಗರು ಸಾಸಿರ ಪ್ರಾಂತ್ಯವನ್ನು ಸು. 830-ಸು. 875ರಲ್ಲಿ ಗಂಗನೀತಿಮಾರ್ಗನ ಅಧೀನದಲ್ಲಿ ಆಳುತ್ತಿದ್ದನೆಂಬುದಾಗಿ ಶಾಸನವೊಂದರಿಂದ ತಿಳಿಯುತ್ತದೆ. 810ರಲ್ಲಿ ಮಹಾಬಲಿ ಬಾಣರ ವಶದಲ್ಲಿದ್ದ ಈ ಪ್ರಾಂತ್ಯ 1ನೆಯ ರಾಚಮಲ್ಲನ ಕಾಲದಲ್ಲಿನೊಳಂಬರಿಗೆ ಸೇರಿತು. ಪೊಳೆಲ್ಚೋರನ ಕಾಲದಲ್ಲಿ ನೊಳಂಬರ ರಾಜ್ಯ ನೊಳಂಬಳಿಗೆ ಸಾಸಿರ, ಗಂಗರು ಸಾಸಿರ ಇವುಗಳೇ ಅಲ್ಲದೆ ಇನ್ನೂ ಹಲವು ಪ್ರದೇಶಗಳಿಗೆ ವಿಸ್ತರಿಸಿತು. 1ನೆಯ ನೀತಿಮಾರ್ಗನ ಹಿಂದೂಪುರ ಶಾಸನದಲ್ಲಿ (853) ಉಲ್ಲೇಖಿತನಾಗಿರುವ ನೊಳಂಬ ರಾಜ ಪೊಳೆಲ್ಚೋರನೇ ಇರಬಹುದೆಂದು ಊಹಿಸಲಾಗಿದೆ. ಈ ನೊಳಂಬ ರಾಜನ ರಾಜ್ಯ ಕಂಚಿಯವರೆಗೂ ವಿಸ್ತರಿಸಿತ್ತೆಂದು ಆ ಶಾಸನದಲ್ಲಿ ಹೇಳಿದೆ. ನಂದಿಯ ಭೋಗನಂದೀಶ್ವರ ದೇವಾಲಯದ ಗೋಪುರದ ಜೀರ್ಣೋದ್ಧಾರವಾದ್ದೂ ಅನಂತಪುರ ಜಿಲ್ಲೆಯ ಕಂಬದೂರಿನ ಬೆಳ್ದುಗೊಂಡೆಯ ಕೆರೆಯ ನಿರ್ಮಾಣವಾದ್ದೂ ಈತನ ಕಾಲದಲ್ಲಿ.
 
ನೊಳಂಬರ ಶಾಸನಗಳಲ್ಲೆಲ್ಲ ಅತ್ಯಂತ ಮುಖ್ಯವಾದ್ದೆಂದರೆ ಹೇಮಾವತಿಯ ಸ್ತಂಭಶಾಸನ. ಇದು ನೊಳಂಬರ ಹುಟ್ಟು ಮತ್ತು ಅವರ ವಂಶವೃಕ್ಷದ ಮೊದಲರ್ಧ ಭಾಗವನ್ನು ನಿರೂಪಿಸುತ್ತದೆ. ಇವರ ವಂಶವೃಕ್ಷವನ್ನು ತಿಳಿಯಲು ಅನುಕೂಲವಾದ ಇತರ ಮುಖ್ಯ ಶಾಸನಗಳೆಂದರೆ ಕಂಬದೂರು, ಕರ್ಷನಪಲ್ಲಿ, ನೆಲಪಲ್ಲಿ, ಆವನಿ, ಬರಗೂರು ಮತ್ತು ಧರ್ಮಪುರಿಗಳಲ್ಲಿರುವ ಶಾಸನಗಳು. ನೊಳಂಬರ ಶಾಸನಗಳು ಅವರ ಕಾಲದ ರಾಜಕೀಯ, ಚಾರಿತ್ರಿಕ ಸಾಮಾಜಿಕ ಅರಿವು ಮೂಡಿಸುವುದಕ್ಕೆ ಸಹಕಾರಿಯಾಗಿರುವುವಲ್ಲದೆ ಇವರ ವೀರಗಲ್ಲುಗಳು ನೊಳಂಬರ ಶಿಲ್ಪಕಲಾಚಾತುರ್ಯಕ್ಕೆ ಉತ್ತಮ ನಿದರ್ಶನಗಳಾಗಿಯೂ ಇವೆ. ಇದಕ್ಕೆ ಉದಾಹರಣೆಗಳು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರುವ ಬೇಗೂರಿನ ವೀರಗಲ್ಲು ಮತ್ತು ಹೇಮಾವತಿಯ ವೀರಗಲ್ಲು. ಮೊದಲನೆಯ ತುಂಬೇಪಾಡಿಯಲ್ಲಿ ಅಯ್ಯಪ ದೇವನಿಗೂ ಪೂರ್ವಚಾಳುಕ್ಯವೀರ ಮಹೇಂದ್ರನಿಗೂ ನಡೆದ ಘೋರ ಕದನದ ಇಡೀ ದೃಶ್ಯವನ್ನೇ ಚಿತ್ರಿಸುತ್ತದೆ. ಗಜ, ಅಶ್ವ, ಪದಾತಿ ದಳಗಳ ಹಣಾಹಣಿ ಯುದ್ದದ ದೃಶ್ಯ, ಪೆಟ್ಟುತಿಂದು ಬಿದ್ದಿರುವ ಸೈನಿಕರು, ವಿವಿಧ ಆಯುಧಗಳು, ಇತ್ಯಾದಿ ಸಕಲ ಸಮರ ವಿವರಗಳನ್ನು ಕೊಡುವ ಈ ವೀರಗಲ್ಲು ಇಡೀ ಯುದ್ಧವೇ ಮತ್ತೊಮ್ಮೆ ಕಣ್ಣುಂದೆ ನಡೆಯುತ್ತಿದೆಯೆಂಬ ಭಾವನೆಯನ್ನು ತರುತ್ತದೆ. ಈಗ ಮದ್ರಾಸ್ ವಸ್ತು ಸಂಗ್ರಹಾಲಯದಲ್ಲಿರುವ ಹೇಮಾವತಿಯ ವೀರಗಲ್ಲು ಗಜಯುದ್ಧಕ್ಕೆ ಸಾಕ್ಷಿ. ಎದುರು ಬದುರಾಗಿ ನುಗ್ಗುತ್ತಿರುವ ಆನೆಗಳು. ಅವುಗಳ ಮೇಲೆ ಅಂಬಾರಿಗಳಲ್ಲಿ ಕುಳಿತಿರುವ ವೀರರು, ಆನೆಗಳ ಬಗೆಬಗೆಯ ವಸ್ತ್ರಾಲಂಕರಣಗಳು ಎಲ್ಲವನ್ನೂ ಬಹಳ ನವಿರಾಗಿ ಬಿಡಿಸಲಾಗಿದೆ. ಕೆಳಭಾಗದಲ್ಲಿ ಬಾಣಗಳು ನಾಟಿಕೊಂಡು ಕೆಳಗೆ ಬಿದ್ದಿರುವ ವೀರರ ದೇಹಗಳು ಚಿತ್ರಿತವಾಗಿವೆ. ಕೇವಲ ಒಂದು ಸಣ್ಣ ಚೌಕಟ್ಟಿನಲ್ಲಿ ಇಡೀ ಘೋರ ಯುದ್ಧದ ಚಿತ್ರವನ್ನು ಶಿಲ್ಪ ಬಿಜ್ಜಯ್ಯ ನೀಡಿದ್ದಾನೆ.
 
== ಉಲ್ಲೇಖ ==
{{Reflist}}
 
 
೧೦,೩೪೯

edits

"https://kn.wikipedia.org/wiki/ವಿಶೇಷ:MobileDiff/915129" ಇಂದ ಪಡೆಯಲ್ಪಟ್ಟಿದೆ