"ಬಂಗಾರಪೇಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ವಿಕೀಕರಣ)
ಟ್ಯಾಗ್: 2017 source edit
 
ಬೇತಮಂಗಲ, ಬೂದಿಕೋಟೆ, ಹುನಕುಂದ ಇವು ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ಸ್ಥಳಗಳು.
 
ಬೇತಮಂಗಲ ಕೋಲಾರಕ್ಕೆ 29 ಕಿಮೀ. ದಕ್ಷಿಣದಲ್ಲಿ ಪಾಲಾರ್ ನದಿಯ ಬಲದಂಡೆಯ ಮೇಲಿದೆ. ಇದೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ದೊಡ್ಡ ಕೆರೆಯ ಮೇಲೆ ದೋಣಿ ವಿಹಾರ ಸೌಕರ್ಯವಿದೆ. 1864ರವರೆಗೆ ಈ ಊರೇ ತಾಲ್ಲೂಕಿನ ಮುಖ್ಯಸ್ಥಳವಾಗಿತ್ತು. ಬಂಗಾರಪೇಟೆ-ಮುಳಬಾಗಿಲು ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಬಾಣ ದೊರೆ ಬಹುಶಃ ಸ್ಥಾಪಿಸಿದ ವಿಜಯಾದಿತ್ಯಮಂಗಲವೇ ಬೇತಮಂಗಲವಾಗಿದೆಯೆನ್ನಲಾಗಿದೆ. [[ನೊಳಂಬ|ನೊಳಂಬರ]] ಕಾಲದ ಎರಡು ಶಿಲಾಶಾಸನಗಳು ಇಲ್ಲಿಯ ಗಂಗಮ್ಮ ದೇವಾಲಯದಲ್ಲಿವೆ. ಇಲ್ಲಿರುವ ಕೆರೆ ಯಾವಾಗ ನಿರ್ಮಾಣವಾಯಿತೆಂಬುದು ಗೊತ್ತಿಲ್ಲ. ಇರಿವ ನೊಳಂಬ 950ರಲ್ಲಿ ಇದನ್ನು ದುರಸ್ತು ಮಾಡಿಸಿದ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ವಿಜಯೇಂದ್ರ ದೇವಾಲಯ ಇಲ್ಲಿಯ ಪ್ರಮುಖ ದೇವಸ್ಥಾನ.
 
ಬೂದಿಕೋಟೆ ಬಂಗಾರಪೇಟೆಗೆ 13 ಕಿಮೀ. ದಕ್ಷಿಣದಲ್ಲಿದೆ. ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ. ಇದೊಂದು ಹೋಬಳಿ ಕೇಂದ್ರ. ಸಂಸ್ಕøತದ ವಿಭೂತಿಪುರ ಎಂಬುದು ಬೂದಿಕೋಟೆ ಎಂದಾಗಿದೆಯೆನ್ನಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣನ ಶಾಸನವಿದೆ. ಇದು ಹೈದರ್ ಅಲಿಯ ಜನ್ಮಸ್ಥಳ. ಹೈದರನ ತಂದೆ ಫತೆ ಮಹಮ್ಮದನಿಗೆ ಇದು ಜಹಗೀರಾಗಿತ್ತು. ಶಿರಾದ ಸುಬೇದಾರನಿಂದ ಘೌಜುದಾರನಾಗಿ ನೇಮಕಗೊಂಡಾಗ ಅವನಿಗೆ ಈ ಜಹಗೀರನ್ನು ನೀಡಲಾಗಿತ್ತು. ಕೋಟೆಯೊಳಗೆ ಒಂದು ತಿಳಿನೀರಿನ ತೊರೆಯಿದೆ. ಇಲ್ಲಿ ವೆಂಕಟರಮಣ ಮತ್ತು ಸೋಮೇಶ್ವರ ದೇವಾಲಯಗಳಿವೆ. ಬಂಗಾರಪೇಟೆಗೆ 13 ಕಿಮೀ ಈಶಾನ್ಯದಲ್ಲಿರುವ ಹುನಕುಂದದಲ್ಲಿ ಅನೇಕ ಶಾಸನಗಳಿವೆ. ಊರಿನ ಬಳಿಯ ಗುಡ್ಡದ ಮೇಲೆ ಶಿವನ ದೇಗುಲವಿದೆ. ಬಂಗಾರಪೇಟೆಯ ಉತ್ತರದಲ್ಲಿರುವ ಯಲಬುರ್ಗಿಯಲ್ಲಿ ವೆಂಕಟರಮಣ ದೇವಾಲಯವಿದೆ.
೬,೨೬೧

edits

"https://kn.wikipedia.org/wiki/ವಿಶೇಷ:MobileDiff/915019" ಇಂದ ಪಡೆಯಲ್ಪಟ್ಟಿದೆ