"ಆರ್.ನರಸಿಂಹಾಚಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(have linked Articles, commenting the unref tag & placing the Dispute Resolve tag, ..... any objections, kindly put in Arali Katte)
 
[[ಬಿ.ಎಲ್.ರೈಸ್]]ರ ಬಳಿಕ ೧೯೨೨ರವರೆಗೆ ಪ್ರಾಚ್ಯ ಸಂಶೋಧನ ಇಲಾಖೆಯ ನಿರ್ದೇಶಕರಾಗಿದ್ದ ನರಸಿಂಹಾಚಾರ್ಯರು ಅನೇಕ ಮಹತ್ವದ ಕೃತಿಗಳನ್ನು ಹೊರತಂದರು. <ref>https://www.deccanherald.com/content/120404/my-love-mysore-unending.html</ref>೧೬ ವರ್ಷಗಳ ಕಾಲ ಈಗಿನ ಮೈಸೂರು ಸಂಸ್ಥಾನದ ನಾನ ಭಾಗಗಳನ್ನು ಸಂಚರಿಸಿ ಸುಮಾರು ೫000 ಶಾಸನಗಳನ್ನು ಸಂಗ್ರಹಿಸಿದರು. ಮುಖ್ಯವಾದವುಗಳನ್ನು ಅಲ್ಲಲ್ಲಿ ತಮ್ಮ ವರದಿಗಳಲ್ಲಿ ಚರ್ಚಿಸಿದರು. ಇವು ಅನಂತರ ಬೇರೆ ಬೇರೆ ವಿದ್ವಾಂಸರಿಂದ ಪರಿಷ್ಕಾರಗೊಂಡು ಉಪಸಂಪುಟಗಳಲ್ಲಿ ಪ್ರಕಟಗೊಂಡವು.<ref>http://worldcat.org/identities/lccn-n81097845/</ref>
ಆಚಾರ್ಯರು ಮೈಸೂರು ಪುರಾತತ್ವ ಇಲಾಖೆಯ ವರದಿಗಳಲ್ಲಿ ಹಿಂದೂ, ಜೈನ ಮತ್ತು ಮಹಮದೀಯರಿಗೆ ಸಂಬಂಧಿಸಿದ ಸುಮಾರು ೧೦೦೦ ಕಟ್ಟಡಗಳನ್ನು ಪರಿಶೀಲಿಸಿ ಅವುಗಳ ವಾಸ್ತು ವಿಷಯವನ್ನು ಕುರಿತು ಟಿಪ್ಪಣಿಗಳನ್ನು ಬರೆದಿರುವರು.
 
ಶ್ರವಣಬೆಳಗೊಳದ ಶಾಸನಗಳನ್ನು ಈ ಹಿಂದೆ ಬಿ.ಎಲ್. ರೈಸ್ ಅವರು ಪ್ರಕಟಿಸಿದ್ದರು (೧೮೮೯). <ref>https://www.revolvy.com/page/B.-Lewis-Rice</ref> ಅಲ್ಲಿ ಕೇವಲ ೧೪೪ ಶಾಸನಗಳಿದ್ದವು. ನರಸಿಂಹಾಚಾರ್ಯರು ಅದನ್ನು ಪರಿಷ್ಕರಿಸಲು ತೊಡಗಿ, ಹೊಸದಾಗಿ ೩೫೬ ಶಾಸನಗಳನ್ನು ಸೇರಿಸಿ, ಒಟ್ಟು ೫೦೦ ಶಾಸನಗಳುಳ್ಳ ಸಂಪುಟವನ್ನು ಹೊರತಂದರು. ಅದರ ಪ್ರಾರಂಭದ ೯೦ ಪುಟದ ಪ್ರಸ್ತಾವನೆ ಆಚಾರ್ಯರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಶ್ರವಣಬೆಳಗೊಳದ ವಾಸ್ತುಶಿಲ್ಪವನ್ನು ಕುರಿತು ಮೊದಲಬಾರಿಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.
 
೧೯೨೩ರಲ್ಲಿ ಪ್ರಕಟವಾದ ‘ಶಾಸನ ಪದ್ಯ ಮಂಜರಿ’ಯಲ್ಲಿ ಸಾಹಿತ್ಯಾಂಶಗಳನ್ನೊಳಗೊಂಡ ಶಾಸನಗಳಿಂದಾಯ್ದ ೧೪೪೬ ಪದ್ಯಗಳಿವೆ. ಈ ಪುಸ್ತಕ್ಕಾಗಿ ಆರಿಸಿದ ಶಾಸನಗಳ ಸಂಖ್ಯೆ ೨೮೩. ಇವುಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿರುವ ೨೪ ಶಾಸನ ಬಿಟ್ಟರೆ ಉಳಿದವೆಲ್ಲ ಮೈಸೂರು ಸಂಸ್ಥಾನದವು. ಅವು ಸುಮಾರು ಕ್ರಿ.ಶ. ೭೦೦ರಿಂದ ಕ್ರಿ.ಶ. ೧೪೬೫ರ ವರೆಗಿನ ಕಾಲಾವದಿಯವು. ಅವನ್ನು ಆ ಅನುಪೂರ್ವಿಯಲ್ಲಿಯೇ ಕೊಟ್ಟಿರುವುದರಿಂದ ಕನ್ನಡ ಭಾಷೆಯು ಬೆಳೆದುಬಂದ ರೀತಿ ಗೊತ್ತಾಗುವುದು. ಈ ಶಾಸನಗಳು [[ಗಂಗ (ರಾಜಮನೆತನ)|ಗಂಗ]], ನೊಳಂಬ, [[ಚಾಲುಕ್ಯ]], [[ರಾಷ್ಟ್ರಕೂಟ]], [[ಚೋಳ ವಂಶ|ಚೋಳ]], [[ಕಲಚೂರಿ ರಾಜವಂಶ|ಕಲಚೂರ್ಯ]], [[ಸೇವುಣ]], [[ಕೊಂಗಾಳ್ವರು|ಕೊಂಗಾಳ್ವ]], [[ಹೊಯ್ಸಳ]], ಸಾಂತರ, [[ಪಾಂಡ್ಯ ರಾಜವಂಶ|ಪಾಂಡ್ಯ]], ಸಿಂಧ, [[ಕದಂಬ]], ನಿಡುಗಲ್ಲು, ವಿಜಯನಗರ ಹೀಗೆ ೧೫ ರಾಜವಂಶಗಳಿಗೆ ಸಂಬಂಧಿಸಿವೆ. ಇವು ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತವೆ.
ಆಚಾರ್ಯರು ಇತರ ಹಲವಾರು ಸಂಶೋಧನೆಗಳನ್ನು ಸಹಾ ನಡೆಸಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಹೀಗೆ ಹೆಸರಿಸಬಹುದು. ೨ನೆಯ ಹರಿಹರನ ೧೨೮೬ರ ತಾಮ್ರಪತ್ರ ಶಾಸನ, ಚಂದ್ರವಳ್ಳಿಯ ಉತ್ಖನನದಲ್ಲಿ ಪ್ರಾಚೀನ ಕಾಲದ ಮಣ್ಣಿನ ಪಾತ್ರೆ, ನಾಣ್ಯಗಳ ಶೋಧನೆ, ಅರಿಷ್ಟನೇಮಿಯ ಸಮಾಧಿ, ಸಿಂಹಸೂರಿ ರಚಿಸಿದ ‘ಲೋಕವಿಭಾಗ’ ಗ್ರಂಥದ ಮೂಲಕ ನರಸಿಂಹವರ್ಮನ ಮತ್ತು ಪಲ್ಲವರ ಕಾಲ ನಿರ್ಣಯ, ತಾಳಗುಂದದ ಪುರಾತನ ಶಾಸನದ ಮೂಲಕ ಕದಂಬರ ಕಾಲ ನಿರ್ಣಯ, ಬೆಂಗಳೂರು ಎಂಬ ಊರು ಹತ್ತನೆಯ ಶತಮಾನದಲ್ಲೇ ಇತ್ತು ಎಂಬ ನಿರ್ಣಯ, ಬುಕ್ಕನ ಮರಣದ ಕಾಲ, ವಿಜಯನಗರದ ಆಡಳಿತದ ಕಾಲ, ಟಿಪ್ಪು ಶೃಂಗೇರಿ ಗುರುಗಳಿಗೆ ದತ್ತಿ ಕೊಟ್ಟದ್ದು, ಮುಳುಬಾಗಿಲು ಮಠದ ತಾಮ್ರಶಾಸನವು ಭಾಗವತ ಸಂಪ್ರದಾಯದ ವಿಷಯ ಹೇಳುತ್ತದೆಂಬ ನಿರ್ಣಯ ಮುಂತಾದವು ಪ್ರಮುಖವಾಗಿವೆ. ನರಸಿಂಹಾಚಾರ್ಯರು ೧೯೨೦ರಲ್ಲಿ ಕಾರ್ಲಾ, ಕನ್ಹೇರಿ, ಬಾದಾಮಿ, ಎಲ್ಲೋರ ಮತ್ತು ಅಜಂತಾಗಳಿಗೆ ಭೇಟಿಕೊಟ್ಟು ಆ ಸ್ಥಳಗಳಲ್ಲಿಯ ಗುಹೆಗಳ ವಿಷಯವಾಗಿ ಮಹತ್ವದ ಸಂಗತಿಗಳನ್ನು ಬರೆದಿದ್ದಾರೆ. ಅವರು ೧೯೦೯ರಲ್ಲಿ ಭಾಸಕವಿಯ ಸ್ವಪ್ನವಾಸವದತ್ತ ಎಂಬ ನಾಟಕವನ್ನು ಶೋಧಿಸಿದರು.
 
ಆಚಾರ್ಯರು ಇತರ ಹಲವಾರು ಸಂಶೋಧನೆಗಳನ್ನು ಸಹಾ ನಡೆಸಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಹೀಗೆ ಹೆಸರಿಸಬಹುದು. ೨ನೆಯ ಹರಿಹರನ ೧೨೮೬ರ ತಾಮ್ರಪತ್ರ ಶಾಸನ, ಚಂದ್ರವಳ್ಳಿಯ ಉತ್ಖನನದಲ್ಲಿ ಪ್ರಾಚೀನ ಕಾಲದ ಮಣ್ಣಿನ ಪಾತ್ರೆ, ನಾಣ್ಯಗಳ ಶೋಧನೆ, ಅರಿಷ್ಟನೇಮಿಯ ಸಮಾಧಿ, ಸಿಂಹಸೂರಿ ರಚಿಸಿದ ‘ಲೋಕವಿಭಾಗ’ ಗ್ರಂಥದ ಮೂಲಕ ನರಸಿಂಹವರ್ಮನ ಮತ್ತು ಪಲ್ಲವರ ಕಾಲ ನಿರ್ಣಯ, ತಾಳಗುಂದದ ಪುರಾತನ ಶಾಸನದ ಮೂಲಕ ಕದಂಬರ ಕಾಲ ನಿರ್ಣಯ, ಬೆಂಗಳೂರು ಎಂಬ ಊರು ಹತ್ತನೆಯ ಶತಮಾನದಲ್ಲೇ ಇತ್ತು ಎಂಬ ನಿರ್ಣಯ, ಬುಕ್ಕನ ಮರಣದ ಕಾಲ, ವಿಜಯನಗರದ ಆಡಳಿತದ ಕಾಲ, ಟಿಪ್ಪು ಶೃಂಗೇರಿ ಗುರುಗಳಿಗೆ ದತ್ತಿ ಕೊಟ್ಟದ್ದು, ಮುಳುಬಾಗಿಲು ಮಠದ ತಾಮ್ರಶಾಸನವು ಭಾಗವತ ಸಂಪ್ರದಾಯದ ವಿಷಯ ಹೇಳುತ್ತದೆಂಬ ನಿರ್ಣಯ ಮುಂತಾದವು ಪ್ರಮುಖವಾಗಿವೆ. ನರಸಿಂಹಾಚಾರ್ಯರು ೧೯೨೦ರಲ್ಲಿ [[ಕಾರ್ಲಾ]], [[ಕನ್ಹೇರಿ]], [[ಬಾದಾಮಿ]], [[ಎಲ್ಲೋರಾ ಗುಹೆಗಳು|ಎಲ್ಲೋರ]] ಮತ್ತು ಅಜಂತಾಗಳಿಗೆ[[ಅಜಂತಾ]]ಗಳಿಗೆ ಭೇಟಿಕೊಟ್ಟು ಆ ಸ್ಥಳಗಳಲ್ಲಿಯ ಗುಹೆಗಳ ವಿಷಯವಾಗಿ ಮಹತ್ವದ ಸಂಗತಿಗಳನ್ನು ಬರೆದಿದ್ದಾರೆ. ಅವರು ೧೯೦೯ರಲ್ಲಿ ಭಾಸಕವಿಯ ಸ್ವಪ್ನವಾಸವದತ್ತ ಎಂಬ ನಾಟಕವನ್ನು ಶೋಧಿಸಿದರು.
 
ಇವಲ್ಲದೆ ಗಂಗರ ಚರಿತ್ರೆ, ಸಾಯಣ-ಮಾಧವ, ಬೇಲೂರು, ಸೋಮನಾಥಪುರ ಮತ್ತು ದೊಡ್ಡಗದ್ದನ ಹಳ್ಳಿಯ ಹೊಯ್ಸಳ ದೇವಸ್ಥಾನಗಳು ಇವನ್ನು ಕುರಿತೂ ಇವರು ಕೃತಿ ರಚಿಸಿದ್ದಾರೆ.
 
ಸಂಗ್ರಹವಾಗಿ ಹೇಳುವುದಾದರೆ ನರಸಿಂಹಾಚಾರರು ೫೦೦೦ ಶಾಸನಗಳನ್ನು, ಹಿಂದೂ, ಜೈನ ಹಾಗು ಮುಸ್ಲಿಮರ ೧೦೦೦ ಕಟ್ಟಡಗಳನ್ನು, ೪೧೦೦ ನಾಣ್ಯಗಳನ್ನು, ೧೨೫೦ ಭಾವಚಿತ್ರಗಳನ್ನು, ೧೨೦ ನಕ್ಷೆಗಳನ್ನು, ೧೨೫ [[ಕನ್ನಡ]], [[ಸಂಸ್ಕೃತ]] ಗ್ರಂಥಗಳನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೆ [[ನಾಗವರ್ಮ]]ನ ಕೃತಿಗಳಾದ ಕಾವ್ಯಾವಲೋಕನ ಹಾಗು ಭಾಷಾಭೂಷಣಗಳನ್ನು ಸಂಪಾದಿಸಿದ್ದಾರೆ. [[ಕರ್ನಾಟಕ]]ದ ವ್ಯಾಪಾರ [[ರೋಮ್]], [[ಪರ್ಶಿಯಾ]] ಹಾಗು [[ಚೀನ|ಚೀನಾ]]ಗಳೊಡನೆ ಇದ್ದದ್ದನ್ನು ಗುರುತಿಸಿದವರು ಇವರೆ.
== ವಾಸ್ತು ಶಿಲ್ಪಗಳ ವಿವರ - ಗ್ರಂಥ ಸಂಪಾದನೆ ==
೬,೨೬೧

edits

"https://kn.wikipedia.org/wiki/ವಿಶೇಷ:MobileDiff/915018" ಇಂದ ಪಡೆಯಲ್ಪಟ್ಟಿದೆ