"ಹಿರಿಯೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (→‎ಇತಿಹಾಸ: {{commons category|Hiriyur}})
 
== ಇತಿಹಾಸ ==
ಹಿರಿಯೂರಿಗೆ ಈಶಾನ್ಯದಲ್ಲಿ 26 ಕಿಮೀ ದೂರದಲ್ಲಿರುವ ಅಬ್ಬಿನ ಹೊಳೆ ಒಂದು ಪುರಾತನ ಸ್ಥಳ. [[ನೊಳಂಬ]] ದೊರೆ ಅಯ್ಯಪ್ಪನ 923ರ ಶಿಲಾಶಾಸನ ಮತ್ತು ಈ ಊರಿನ ಶಾನುಭೋಗದ ಹಕ್ಕಿಗಾಗಿ ಕಾದ ತುಪ್ಪದಲ್ಲಿ ಕೈ ಇಟ್ಟು ನೆರೆದಿದ್ದ ಸಭೆಗೆ ತೋರಿ ತನ್ನ ಹಕ್ಕನ್ನು ಸ್ಥಾಪಿಸಿದವನ ಪ್ರಸಂಗ ಹೇಳಿರುವ 1664ರ ಶಾಸನ ಇಲ್ಲಿದೆ. ಇಲ್ಲೊಂದು ರಂಗನಾಥ ದೇವಾಲಯವಿದೆ. ಹಿರಿಯೂರು-ಚಿತ್ರದುರ್ಗ ಮಾರ್ಗದಲ್ಲಿರುವ ಐಮಂಗಲ ಹಿರಿಯೂರಿನ ವಾಯವ್ಯಕ್ಕೆ 18 ಕಿಮೀ ದೂರದಲ್ಲಿದೆ. ಈ ಊರಿನ ವೀರಭದ್ರ ದೇವಾಲಯ ಹೆಸರಾದದ್ದು. ಇಲ್ಲಿ ಹಿಂದಿನ ಕೋಟೆಯ ಅವಶೇಷವಿದೆ. ಇದು ಖಾದಿ ಗ್ರಾಮೋದ್ಯೋಗ ಕೇಂದ್ರ. ಹಿರಿಯೂರಿನ ಪಶ್ಚಿಮಕ್ಕೆ 14 ಕಿಮೀ ದೂರದಲ್ಲಿರುವ ಭರಮಗೆರೆಯಲ್ಲಿ ಕಣಿವೆ ಮಾರಮ್ಮನ ಉತ್ಸವಮೂರ್ತಿಯಿದ್ದು ವರ್ಷಕ್ಕೊಮ್ಮೆ ಜಾತ್ರೆಯಾಗುವುದು. ಇದು 17ನೆಯ ಶತಮಾನದ ಪಾಳೆಯಗಾರ ಭರಮಣ್ಣನಾಯಕನ ಹೆಸರಿನಿಂದ ಸ್ಥಾಪಿತವಾದ ಗ್ರಾಮ. ಹಿರಿಯೂರಿನ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಹರ್ತಿಕೋಟೆ ತುಮಕೂರು ಜಿಲ್ಲೆಯ ನಿಡುಗಲ್ಲನ್ನು ಆಳಿದ ವಂಶಸ್ಥರಿಗೆ ಸ್ವಲ್ಪ ಕಾಲ ಮುಖ್ಯ ಕೇಂದ್ರವಾಗಿತ್ತು. ಹಿರಿಯೂರಿಗೆ ನೈಋತ್ಯದಲ್ಲಿ 19ಕಿಮೀ ದೂರದಲ್ಲಿರುವ ವಾಣೀವಿಲಾಸಪುರವೇ ಪ್ರಸಿದ್ಧ ಮಾರಿಕಣಿವೆ ಎಂದು ಕರೆಯುತ್ತಿದ್ದ ಗ್ರಾಮ. ವಾಣೀವಿಲಾಸಸಾಗರಕ್ಕೆ ಈ ಗ್ರಾಮದ ಮುಖಾಂತರ ಹಾದುಹೋಗಬೇಕು.
 
ಸು. 16ನೆಯ ಶತಮಾನದಲ್ಲಿ ಮಾಯಾಸಮುದ್ರದ ಕೇಶವನಾಯಕ ನಿಂದ ಸ್ಥಾಪಿತವಾದ ಈ ಊರನ್ನು ಆ ವಂಶದ ಮೂರು ತಲೆಮಾರಿನವರು ಆಳಿದರು. ಆ ಕಾಲದಲ್ಲಿ ನಗರ ತುಂಬ ಅಭಿವೃದ್ಧಿಹೊಂದಿತು. ಅನಂತರ ಇದು ಬಿಜಾಪುರದ ವಶವಾಯಿತು. ಮುಂದೆ ಕೆಲಕಾಲ ಚಿತ್ರದುರ್ಗದ ಪಾಳೆಯಗಾರರ ವಶದಲ್ಲಿದ್ದು 1762ರಲ್ಲಿ ಹೈದರ್ ಅಲಿಯ ಕೈಸೇರಿತು. ಹೈದರ್ ಅಲಿ ಮತ್ತು ಮರಾಠರ ನಡುವಣ ಕದನಗಳ ದೀರ್ಘಾವಧಿ üಯಲ್ಲಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿತು. ದ್ರಾವಿಡ ಶೈಲಿಯ ತೇರುಮಲ್ಲೇಶ್ವರ ಇಲ್ಲಿನ ಮುಖ್ಯ ದೇವಾಲಯ. ಈ ದೇವಾಲಯಕ್ಕೆ ಮೂರು ಪ್ರವೇಶದ್ವಾರಗಳಿದ್ದು ಮಹಾದ್ವಾರದ ಎದುರು ಉಯ್ಯಾಲೆ ಕಂಬವಿದೆ. ಸು. 45† ಎತ್ತರದ ದೀಪಸ್ತಂಭದ ತುದಿಯಲ್ಲಿ ಬಸವನ ವಿಗ್ರಹ ಮತ್ತು ನಾಲ್ಕೂ ದಿಕ್ಕಿನಲ್ಲಿ ಒಂದೊಂದರಲ್ಲೂ ಸುಮಾರು 10 ಸೇರು ಎಣ್ಣೆಯನ್ನು ತುಂಬಬಹುದಾದ ಎರಡೆರಡು ಕಬ್ಬಿಣದ ದೊಡ್ಡ ಸೊಡರುಗಳಿವೆ. ಇವುಗಳನ್ನು ವರ್ಷಕ್ಕೊಮ್ಮೆ ಹಚ್ಚಲಾಗುತ್ತದೆ. ನವರಂಗದಲ್ಲಿ ಶಿವಪಾರ್ವತಿಯರ ವಿಗ್ರಹಗಳೂ ನಂದಿಯ ಮೇಲೆ ಕುಳಿತ ಉಮಾಮಹೇಶ್ವರರ ವಿಗ್ರಹಗಳೂ ಇವೆ. ಪ್ರತಿವರ್ಷ ಮಾಘಮಾಸದಲ್ಲಿ ರಥೋತ್ಸವ ನಡೆಯುವುದು.
೬,೨೬೧

edits

"https://kn.wikipedia.org/wiki/ವಿಶೇಷ:MobileDiff/915016" ಇಂದ ಪಡೆಯಲ್ಪಟ್ಟಿದೆ