ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೮ ನೇ ಸಾಲು:
 
ಕೊಪ್ಪಳದ ಬಳಿಯ ಮಲಿಮಲ್ಲಪ್ಪ ಬೆಟ್ಟದ ತುದಿಯ ಮೇಲೆ ಅನೇಕ ಹಾಸುಗಲ್ಲಿನ ಕಟ್ಟಡಗಳು ಕಂಡುಬಂದಿವೆ. ಅವನ್ನು ಸ್ಥಳೀಯವಾಗಿ 'ಮೊರಿಯರ ಅಂಗಡಿ' ಎಂದು ಕರೆಯುತ್ತಾರೆ. ಇದು ಮೌರ್ಯರ ಕಾಲದ ವಸತಿಯ ಬಗ್ಗೆ ಮತ್ತು ಆಗ ಉತ್ತರ ಭಾರತದ ಜನ ಇಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದ ಬಗ್ಗೆ ಸುಳಿವು ನೀಡುತ್ತದೆ. ಪೌರಾಣಿಕ ಐತಿಹ್ಯಗಳು ಈ ಪ್ರದೇಶದಲ್ಲೂ ಇತರೆಡೆಗಳಂತೆಯೆ ಅಸ್ತಿತ್ವದಲ್ಲಿವೆ. ಪಾಲ್ಕಿಗುಂಡು ಬೆಟ್ಟ ಮತ್ತು ಮಲಿ ಮಲ್ಲಪ್ಪನ ಬೆಟ್ಟದ ನಡುವಿನ ಬಯಲನ್ನು ಪಾಂಡವರ ವಠಾರ ಎಂದು ಕರೆಯಲಾಗಿದೆ. ಇಲ್ಲೂ ಹಾಸುಗಲ್ಲು ಕಟ್ಟಡಗಳಿವೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ (ನೋಡಿ- ಆನೆಗೊಂದಿ) ರಾಮಾಯಣ ಕಾಲದ ಕಿಷ್ಕಿಂದೆಯ ಭಾಗವಾಗಿತ್ತೆಂದು ನಂಬಿಕೆಯಿದೆ. ಗವಿಮಠ ಬೆಟ್ಟ ಮತ್ತು ಪಾಲ್ಕಿಗುಂಡು ಬೆಟ್ಟದಲ್ಲಿ ಒಂದೊಂದು ಅಶೋಕನ ಶಾಸನಗಳು ದೊರೆತಿವೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ನಡೆಯುತ್ತಿದ್ದ ವಾಣಿಜ್ಯ ಹಾಗೂ ಆಗಿನ ವ್ಯಾಪಾರ ಸರಕುಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಮೌರ್ಯ ಸಾಮ್ರಾಜ್ಯದ ಹೊರಗಿನ ದಕ್ಷಿಣ ರಾಜ್ಯಗಳನ್ನು ಚೋಳ, ಪಾಂಡ್ಯ, ಸಾತಿಯಪುತ, ಕೇರಲಪುತ ಮತ್ತು ತಂಬಪನ್ನಿ (ಶ್ರೀಲಂಕಾ) ಎಂದು ಅಶೋಕನ ಶಾಸನಗಳಲ್ಲಿ ಹೆಸರಿಸಲಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಪೂರ್ವೋಕ್ತ ದೇಶಗಳು ದಖನ್ನಿನ ಹೊರಗಿದ್ದು ಆಂದಿನ ದಖನ್ನಿನ ಪ್ರದೇಶ ಮೌರ್ಯ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿದ್ದದ್ದು ತಿಳಿದುಬರುತ್ತದೆ. ಮೌರ್ಯರ ಶಾಸನಗಳಲ್ಲಿ ಬರುವ ಸುವರ್ಣಗಿರಿಯನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ಕೆಲವು ವಿದ್ವಾಂಸರು ಗುರುತಿಸಿದ್ದರೆ, ಇನ್ನು ಕೆಲವರು ಇದನ್ನು ಮಸ್ಕಿ ಇರಬಹುದೆಂದು ಅಬಿsಪ್ರಾಯಪಟ್ಚಿದ್ದಾರೆ. ಅದೇನೇ ಇದ್ದರೂ ಈ ಪ್ರದೇಶ ಬಹು ಪುರಾತನ ನಾಗರಿಕತೆ ಮತ್ತು ಸಂಸ್ಕøತಿಗಳ ನೆಲೆಬೀಡೆಂಬುದು ಸ್ಪಷ್ಟವಾಗಿದೆ.
 
ಮೌರ್ಯ ಸಾಮ್ರಾಜ್ಯದ ಪತನಾನಂತರ ದಖನ್‍ನಲ್ಲಿ ಸ್ಥಾಪಿತವಾದ ಪ್ರಥಮ ಸ್ವತಂತ್ರ ಸಾಮ್ರಾಜ್ಯವೆಂದರೆ ಸಾತವಾಹನರದು. ಇಂದಿನ ಮಹಾರಾಷ್ಟ್ರ ರಾಜ್ಯದ ಪ್ರತಿಷಾವಿನ ಅಥವಾ ಪೈಠಣ್ ಅನ್ನು ರಾಜಧಾನಿಯಾಗಿ ಹೊಂದಿದ್ದ ಈ ಸಾಮ್ರಾಜ್ಯದ ಭಾಗವಾಗಿ ಕೊಪ್ಪಳ ಉನ್ನತ ಸ್ಥಿತಿಗೆ ಬಂದಿತು. ಕ್ರಿ.ಪೂ.3ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗೂ ಆಳಿದ ಈ ವಂಶದ ಸಾಮ್ರಾಟರು ಉತ್ತರ ಭಾರತದವರೆಗೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದರು. ಕೊನೆಗೆ ದಕ್ಷಿಣ ಪಥಕ್ಕೆ ಸೀಮಿತವಾದ ಇವರು ತುಂಗಭದ್ರಾ ದಕ್ಷಿಣಕ್ಕೂ ತಮ್ಮ ಆಳಿಕೆಯನ್ನು ಚಾಚಿದ್ದರು. ಸಾತವಾಹನರ ಕಾಲದಿಂದ ಕೊಪ್ಪಳ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಸುತ್ತಮುತ್ತಲ ಬೆಟ್ಟಗುಡ್ಡಗಳಿಗೆ ಕೊಪಣ್ರಾದಿ ಮತ್ತು ಕುಪಣಾಚಲ ಎಂಬ ಹೆಸರುಗಳಿವೆ. ಕೊಪ್ಪಳಕ್ಕೆ ಕೊಪಣ ಅಥವಾ ಕೋಪಣ ನಗರವೆಂಬ ಹೆಸರಿದ್ದಿತು. ಈ ಜಿಲ್ಲೆಯ ಕವಲೂರು, ಆಳವಂಡಿ, ಮಾದಿನೂರು, ಕುಕ್ಕನೂರು, ಪುರ, ಆನೆಗೊಂದಿ, ಇಟಗಿ ಮತ್ತು ಮುಧುವೊಳಲು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ.
 
ಸಾತವಾಹನರ ಅನಂತರ ಕರ್ನಾಟಕದ ಉತ್ತರ ಭಾಗದಲ್ಲಿ ಮತ್ತು ಕರಾವಳಿಯಲ್ಲಿ ಕದಂಬರು ಪ್ರಬಲ ರಾಜ್ಯಸ್ಥಾಪಿಸಿ ಆಳಿದರು. ಆದರೆ ದಕ್ಷಿಣದಲ್ಲಿ ತಲಕಾಡಿನ ಗಂಗರು, ಪೂರ್ವದಲ್ಲಿ ವಾಕಾಟಕರು ಕದಂಬರ ಸಮಕಾಲೀನರಾಗಿ ಆಳಿದರು. ಕದಂಬರು ಈ ಜಿಲ್ಲೆಯ ಮೇಲೆ ಎಷ್ಟು ನಿಯಂತ್ರಣ ಹೊಂದಿದ್ದರು ಎಂದು ಹೇಳಲು ಸ್ಪಷ್ಟ ಆಧಾರಗಳು ಲಭ್ಯವಿಲ್ಲ. ಆದರೆ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಕದಂಬರ ಶಾಸನ ದೊರೆತಿರುವುದರಿಂದ ಈ ಜಿಲ್ಲೆಯ ಮೇಲೆ ಒಂದಲ್ಲ ಒಂದು ಕಾಲದಲ್ಲಿ ಭಾಗಶಃವಾಗಿ ಅಥವಾ ಪೂರ್ಣವಾಗಿ ಅವರು ನಿಯಂತ್ರಣ ಹೊಂದಿದ್ದರು ಎಂದು ಹೇಳಬಹುದು. ಇದೇ ವೇಳೆಗೆ ಮಧ್ಯ ಭಾರತದಲ್ಲಿ ಪ್ರಬಲ ರಾಜ್ಯ ಸ್ಥಾಪಿಸಿದ ವಾಕಾಟಕರು [[ಕುಂತಲ ದೇಶ|ಕುಂತಳ ದೇಶ]]ದವರೆಗೂ ತಮ್ಮ ರಾಜ್ಯ ವಿಸ್ತರಿಸಿದ್ದರೆಂದು ತಿಳಿದುಬರುತ್ತದೆ. ಅವರು ಈ ಪ್ರದೇಶವನ್ನು ಸಾಕಷ್ಟು ಕಾಲ ಆಳಿರಬೇಕು.
Line ೧೩೮ ⟶ ೧೩೯:
ಗಂಗ ಮನೆತನಕ್ಕೆ ಕೊಪ್ಪಳ ಪುಣ್ಯಕ್ಷೇತ್ರವಾಗಿದ್ದುದಲ್ಲದೆ ಅಲ್ಲಿ ರಾಜಮನೆತನದ ಅನೇಕ ಸದಸ್ಯರು ಸ್ವಯಂಪ್ರೇರಣೆಯಿಂದ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ ವಿವರಗಳು ತಿಳಿದುಬರುತ್ತವೆ. ಇವರಲ್ಲಿ ಇಮ್ಮಡಿ ಬೂತುಗನ ಪತ್ನಿ ಪದ್ಮಬ್ಬರಸಿ, ಮಾರಸಿಂಹನ ಅಕ್ಕ ಹಾಗೂ ಚಾಳುಕ್ಯ ಹರಿಗನ ಪತ್ನಿ ಬಿಜ್ಜಬ್ಬರಸಿ ಮೊದಲಾದವರು ಸೇರಿದ್ದಾರೆ. ಕೊಪ್ಪಳದಲ್ಲಿ ಹಲವಾರು ಜೈನ ಮುನಿಗಳು ಮೋಕ್ಷ ಪಡೆದ ವಿವರಗಳು ಅಲ್ಲಿನ ಶಾಸನಗಳಲ್ಲಿ ದೊರೆಯುತ್ತವೆ.
 
ರಾಷ್ಟ್ರಕೂಟರ ಆಳಿಕೆಯನ್ನು ಕೊನೆಗಾಣಿಸಿ ಚಾಳುಕ್ಯರ ಅದಿsಕಾರವನ್ನು ಮತ್ತೆ ಸ್ಥಾಪಿಸಿದ ಚಾಳುಕ್ಯ ತೈಲಪನ ಮೊದಲ ವರ್ಷದ ಆಳಿಕೆಯ (973) ಶಾಸನ ಮಾದಿನೂರಿನಲ್ಲಿದೆ. ಅದರಲ್ಲಿ ರಾಜನು ಬ್ರಹ್ಮಾಂಡಕ್ರತು ಎಂಬ ಯಾಗವನ್ನು ಮಾಡಿದನೆಂದು ಹೇಳಿದೆ. ಕಲ್ಯಾಣದ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶದವರ ಆಳಿಕೆಯು 12ನೆಯ ಶತಮಾನದ ಉತ್ತರಾರ್ಧದವರೆಗೂ ಮುಂದುವರಿಯಿತು. ಈ ಯುಗದಲ್ಲಿ ಹೇಮಾವತಿ, ಹೆಂಜೇರು ಮತ್ತು ಕಂಪಿಲಿಯಿಂದ ಆಳಿದ [[ನೊಳಂಬ|ನೊಳಂಬರು]] ಈ ಜಿಲ್ಲೆಯ ಕೆಲವು ಭಾಗಗಳನ್ನು ಆಳಿರುವ ಸಂಭವ ಹೆಚ್ಚಿದೆ. ಕಳಚುರಿಗಳು ಅಲ್ಪಾವದಿsಯ ಕಾಲ ಆಳಿದರೂ ಅವರ ಕೆಲ ಶಾಸನಗಳು ಜಿಲ್ಲೆಯಲ್ಲಿ ದೊರೆತಿವೆ. ಆ ಕಾಲದಲ್ಲಿ ಕುಕನೂರು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿತ್ತು. ಅಲ್ಲಿನ ಜೇಷಾವಿದೇವಿಗೆ ರಾಜರು ಮತ್ತು ದಂಡನಾಯಕರು ನಡೆದುಕೊಳ್ಳುತ್ತಿದ್ದರು.
ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಈ ಪ್ರಾಂತ್ಯ ಅವರಿಬ್ಬರ ನಡುವಿನ ವಿವಾದಾತ್ಮಕ ಪ್ರದೇಶವಾಗಿತ್ತು. ಈ ಎರಡು ರಾಜ್ಯಗಳ ನಡುವೆ ಮಧ್ಯಗಾಮಿ ರಾಜ್ಯದಂತಿದ್ದ ಕಂಪಿಲಿ ರಾಜ್ಯದ ಪ್ರಬಲ ನೆಲೆಗಳಲ್ಲೊಂದಾದ ಕುಮ್ಮಟದುರ್ಗ ಕೊಪ್ಪಳ ತಾಲ್ಲೂಕಿನಲ್ಲಿದೆ. ಮೊದಲು ಕಂಪಿಲಿಯಿಂದ ಬಳ್ಳಾರಿ ಜಿಲ್ಲೆ ಆಳುತ್ತಿದ್ದ ಇಲ್ಲಿನ ಅರಸರು 1315ರಲ್ಲಿ ಕುಮ್ಮಟದುರ್ಗದಿಂದ ಆಳುತ್ತಿದ್ದುದು ಶಾಸನಗಳಿಂದ ಕಂಡುಬರುತ್ತದೆ. ದೇವಗಿರಿಯಲ್ಲಿ ನೆಲೆಸಿದ್ದ ದೆಹಲಿ ಸುಲ್ತಾನರ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಹುತಾತ್ಮರಾದ ಕಂಪಿಲಿರಾಯ ಮತ್ತು ಕುಮಾರರಾಮ ಈ ಮನೆತನದವರು.
 
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ