"ಆವನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
ಸ್ಥಳೀಯ ನಂಬಿಕೆಗಳ ಪ್ರಕಾರ ಈ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶ ಪುರಾಣಪ್ರಸಿದ್ಧವಾದ ಅವಂತಿಕಾ ಕ್ಷೇತ್ರ : [[ವಾಲ್ಮೀಕಿ]] ಋಷಿಯ ಆಶ್ರಮವಿದ್ದುದು ಇಲ್ಲಿಯ ಬೆಟ್ಟದಲ್ಲಿಯೇ ; ರಾಮ ಲಂಕೆಯನ್ನು ಗೆದ್ದು ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಇಲ್ಲಿಗೆ ಬಂದಿದ್ದನಂತೆ ; ಸೀತಾದೇವಿ ಗಂಡನಿಂದ ಕಾಡಿಗೆ ಕಳುಹಿಸಲ್ಪಟ್ಟಾಗ ಇಲ್ಲಿ ಬಂದು ತಂಗಿ ಲವಕುಶರಿಗೆ ಜನ್ಮವಿತ್ತಳೆಂದೂ ಲವಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ರಾಮನೊಡನೆ ಇಲ್ಲಿಯೇ ಯುದ್ಧಮಾಡಿದರೆಂದೂ ಐತಿಹ್ಯ. ಈ ಘಟನೆಗಳಿಗೆ ಸಂಬಂಧಪಟ್ಟಂತೆ, ಈ ಸುತ್ತಿನ ಅನೇಕ ತಾಣಗಳು ವಾಲ್ಮೀಕಿಯ ಕುಟೀರ, ಲವಕುಶರ ತೊಟ್ಟಿಲು, ಸೀತೆಯ ಅಡುಗೆಪಾತ್ರೆ, ಅವಳು ಬಟ್ಟೆಯೊಗೆಯುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ-ಇತ್ಯಾದಿಯಾಗಿ ಪ್ರಸಿದ್ಧವಾಗಿವೆ.
==ದೇವಾಲಯದ ಬಗ್ಗೆ==
ವಾಲ್ಮೀಕಿ ಬೆಟ್ಟದ ಬುಡದಲ್ಲಿ 9ನೇಶತಮಾನಕ್ಕೆ ಸೇರಿದ ದೇವಾಲಯ ಸಮುಚ್ಚಯವೊಂದಿದೆ. ರಾಮಲಿಂಗೇಶ್ವರ ದೇವಾಲಯವೆಂದು ಪ್ರಸಿದ್ಧವಾಗಿರುವ ಈ ಸಂಕೀರ್ಣವೇ ಈ ಊರಿಗೆ ಐತಿಹಾಸಿಕ ಹಿನ್ನೆಲೆ ಒದಗಿಸಿದೆ. 10-12 ದೇವಾಲಯಗಳಿರುವ ಈ ಸಮುಚ್ಚಯದ ನಿರ್ಮಾಣ ಕಾಲದ ಬಗ್ಗೆ ನಿಖರತೆ ಇಲ್ಲದಿದ್ದರೂ ನೊಳಂಬರು[[ನೊಳಂಬ]]ರು , ಚೋಳರು[[ಚೋಳ ವಂಶ|ಚೋಳ]]ರು, [[ಚಾಲುಕ್ಯ|ಚಾಳುಕ್ಯರು]], [[ಗಂಗ (ರಾಜಮನೆತನ)|ಗಂಗರು]], [[ವಿಜಯನಗರ ಸಾಮ್ರಾಜ್ಯ|ವಿಜಯನಗರದ ಅರಸರಿಂದ]] ಹಿಡಿದು ಇತ್ತಿಚಿನ ಮೈಸೂರರಸರವರೆಗೆ ಎಲ್ಲ ರಾಜಮನೆತನಗಳ ಕೆತ್ತನೆ ಶೈಲಿಗಳು ಇಲ್ಲಿವೆ. ದಕ್ಷಿಣಕ್ಕೆ ಹಾಗು ಪೂರ್ವಕ್ಕೆ ಬಾಗಿಲಿದ್ದು ಎತ್ತರದ ಪ್ರಾಕಾರದಿಂದ ಈ ಸಮುಚ್ಚಯ ಸುರಕ್ಷಿತವಾಗಿದೆ. ಮಧ್ಯದಲ್ಲಿ ಪಾರ್ವತಿ ಅಮ್ಮನವರ ದೇವಾಲಯವಿದ್ದು ಅದರ ಪಶ್ಚಿಮಕ್ಕೆ ರಾಮೇಶ್ವರ,ಲಕ್ಷ್ಮಣೇಶ್ವರ ಹಾಗು ಭರತೇಶ್ವರ ದೇವಾಲಯಗಳಿವೆ. ಹಾಗೇ ಪೂರ್ವಕ್ಕೆ ಶತೃಘ್ನೇಶ್ವರ,ಅಂಜನೇಶ್ವರ ಹಾಗು ಚಿಕ್ಕದಾದ ಸುಗ್ರೀವೇಶ್ವರ ಮತ್ತು ಅಂಗದೇಶ್ವರ ದೇವಾಲಯಗಳಿವೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಎತ್ತರದ ಗರುಡಗಂಬವಿದೆ.
 
ಶತೃಘ್ನೇಶ್ವರ ಹಾಗು ಲಕ್ಷ್ಮಣೇಶ್ವರ ದೇವಾಲಯಗಳ ಗೋಡೆ ಮೇಲೆ ಹಳೆಗನ್ನಡದ ಲಿಪಿ ಇದ್ದು ವೀರ ನೊಳಂಬ ಕಾಲಕ್ಕೆ ಸೇರಿದ್ದಾಗಿದೆ. ಈ ಶಾಸನದ ಪ್ರಕಾರ ದೇವಬ್ಬರಸಿ ಎಂಬ ಅರಸಿಯೊಬ್ಬಳು "ದೇವಬ್ಬೆ ಸಮುದ್ರ"ವನ್ನು ಹಾಗು ಹೊರವಂಗಲ(ಬೇತಮಂಗಲ?)ದಲ್ಲಿ ವಿಷ್ಣು ದೇವಾಲಯವನ್ನು ಕಟ್ಟಿಸಿರುವ ಮಾಹಿತಿ ಇದೆ. ಅಲ್ಲದೆ ಈಕೆ ತನ್ನ ಮೊದಲನೇ ಮಗ ವೀರ ಮಹೇಂದ್ರ ನೊಳಂಬಾಧಿರಾಜನ ಸಾವಿನಿಂದ ಕೆಂಗೆಟ್ಟು ತನ್ನ ಎರಡನೇ ಮಗ ಇರವ ನೊಳಂಬನಿಗೆ ಪಟ್ಟ ಕಟ್ಟಿ ಆತನ ಕ್ಷೇಮಾಭಿವೃದ್ಧಿಗೆ "ನೊಳಂಬ ನಾರಾಯಣೇಶ್ವರ" ದೇವಾಲಯವನ್ನು ಕಟ್ಟಿಸಿದಳೆಂದು ತಿಳಿದುಬರುತ್ತದೆ.
೬,೨೬೧

edits

"https://kn.wikipedia.org/wiki/ವಿಶೇಷ:MobileDiff/915004" ಇಂದ ಪಡೆಯಲ್ಪಟ್ಟಿದೆ