ನ್ಯೂ ಇಂಗ್ಲೆಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ - ಕನ್ನಡ ವಿಕಿಸೋರ್ಸ್ ನ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಿಂದ ಮಾಹಿತಿ ಸೇರ್ಪದೆ
ಟ್ಯಾಗ್: 2017 source edit
( ಯಾವುದೇ ವ್ಯತ್ಯಾಸವಿಲ್ಲ )

೧೫:೫೭, ೮ ಮೇ ೨೦೧೯ ನಂತೆ ಪರಿಷ್ಕರಣೆ

ನ್ಯೂ ಇಂಗ್ಲೆಂಡ್ - ಅಮೆರಿಕ ಸಂಯುಕ್ತ ಸಂಸ್ಧಾನಗಳ ಈಶಾನ್ಯ ಪ್ರದೇಶ ಮೇನ್, ನ್ಯೂಹ್ಯಾಂಪ್‍ಷೈರ್, ವರ್‍ಮಾಂಟ್, ಮ್ಯಾಸಚೂಸೆಟ್ಸ್, ರೋಡ್ ಐಲೆಂಡ್ ಮತ್ತು ಕನೆಟಿಕಟ್ ರಾಜ್ಯಗಳನ್ನೊಳಗೊಂಡಿದೆ.

ಇತಿಹಾಸ

1614ರಲ್ಲಿ ಹಲವು ಲಂಡನ್ ವ್ಯಾಪಾರಸ್ಧರ ಪರವಾಗಿ ಇದರ ತೀರಪ್ರದೇಶದಲ್ಲಿ ಪರಿಶೋಧನೆ ನಡೆಸಿದ ಕ್ಯಾಪ್ಟನ್ ಜಾನ್ ಸ್ಮಿತ್ ಇದಕ್ಕೆ ನ್ಯೂ ಇಂಗ್ಲೆಂಡ್ ಎಂಬ ಹೆಸರನ್ನು ನೀಡಿದ. ಇಂಗ್ಲೆಂಡಿನ ಪ್ಯೂರಿಟನರು ಇಲ್ಲಿ ನೆಲಸಿ ವಸಾಹತುಗಳನ್ನು ಸ್ಧಾಪಿಸಿದರು. ವಸಾಹತುಗಳು ಪ್ರತಿನಿಧಿ ಸರ್ಕಾರವನ್ನು ರೂಪಿಸಿಕೊಂಡಿದ್ದುವು. ಉನ್ನತ ಶಿಕ್ಷಣ ಸಂಸ್ಧೆಗಳು ಸ್ಧಾಪಿತವಾದುವು. ಅವುಗಳಿಂದ ಇಂದಿನ ಹಾರ್ವರ್ಡ್ (1636) ಮತ್ತು ಯೇಲ್ (1701) ವಿಶ್ವವಿದ್ಯಾಲಯಗಳಂಥ ಸಂಸ್ಥೆಗಳು ಬೆಳೆದಿವೆ. ಸುತ್ತುಮುತ್ತ ಅರಣ್ಯಗಳಿದ್ದುದರಿಂದ ಹಡಗು ಕೈಗಾರಿಕೆ ಬೆಳೆಯಿತು. 18ನೆಯ ಶತಮಾನದಲ್ಲಿ ಇದು ಅಮೆರಿಕನ್ ಕ್ರಾಂತಿಕಾರಿ ಸಮರದ ಕಣವಾಗಿತ್ತು. ಹೊಸ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಇದರ ರಾಷ್ಟ್ರವೀರರು ಪ್ರಮುಖ ಪಾತ್ರ ವಹಿಸಿದರು. 19ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ಸುಧಾರಣಾ ಚಳವಳಿಯಲ್ಲೂ ಇದು ಮುಂದಾಗಿತ್ತು; ಮಿತಪಾನ, ಗುಲಾಮಗಿರಿಯ ನಿರ್ಮೂಲನ, ಕಾರಾಗೃಹಗಳ ಸ್ಧಿತಿ ಸುಧಾರಣೆ ಮುಂತಾದವುಗಳಲ್ಲಿ ಆಸಕ್ತಿ ವಹಿಸಿತ್ತು. ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ (1861-65) ಇದು ಒಕ್ಕೂಟದ ಪರವಾಗಿತ್ತು.

ಪಶ್ಚಿಮಾಭಿಮುಖವಾಗಿ ಅಮೆರಿಕದ ಗಡಿ ವಿಸ್ತರಿಸಿದಂತೆ ನ್ಯೂ ಇಂಗ್ಲೆಂಡಿನ ಗ್ರಾಮೀಣ ಸ್ವರೂಪ ಮರೆಯಾಯಿತು. ಕೈಗಾರಿಕಾ ಕ್ರಾಂತಿ ಹಬ್ಬಿತು. ಪಶ್ಚಿಮದ ಕಡೆಯ ವಸಾಹತುಗಳಲ್ಲಿ ಇದರ ವಿಶಿಷ್ಟ ಸಂಸ್ಕøತಿಯೂ ಆಡಳಿತ ಪದ್ಧತಿಯೂ ಪ್ರಸಾರ ಹೊಂದಿ ಬೇರುಬಿಟ್ಟುವು. ಅಮೆರಿಕನ್ ಅಂತರ್ಯುದ್ಧದ ಅನಂತರ ಪೂರ್ವ ಯೂರೋಪಿನ ಕಾರ್ಮಿಕರ ಗುಂಪುಗಳು ಇಲ್ಲಿಗೆ ಹರಿದುಬಂದುವು. ಜನಾಂಗಗಳು ಮಿಶ್ರಗೊಂಡವು. ಸಂಪ್ರದಾಯಗಳು ಬೆರೆತುವು. ರೋಮನ್ ಕ್ಯಾತೊಲಿಕ್ ಧರ್ಮೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಇಲ್ಲಿ ಬೆಳೆದಿದ್ದ ಜವಳಿ ಮತ್ತು ಧರ್ಮ ಕೈಗಾರಿಕೆಗಳು ಇಪ್ಪತ್ತನೆಯ ಶತಮಾನದಲ್ಲಿ ತಮ್ಮ ಪ್ರಾಮುಖ್ಯ ಕಳೆದುಕೊಂಡುವು. ಇವು ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರೀಕೃತವಾಗತೊಡಗಿದುವು. ಆದರೆ ಹೆಚ್ಚು ಮೌಲ್ಯದ ಹಗುರ ಕೈಗಾರಿಕೆಗಳಲ್ಲಿ ಈ ಪ್ರದೇಶ ಪ್ರಾಮುಖ್ಯ ಗಳಿಸಿದೆ. ಉನ್ನತ ಶಿಕ್ಷಣದ ಹಲವಾರು ಮುಖ್ಯ ಕೇಂದ್ರಗಳು ಇಲ್ಲಿವೆ. ಈ ಪ್ರದೇಶ ಮೇಲೆ ಹೇಳಿದ ವಿವಿಧ ರಾಜ್ಯಗಳಲ್ಲಿ ಹಂಚಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: