"ಇಲೈ ವಿಟ್ನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
'''ಇಲೈ ವಿಟ್ನಿ''', (Eli Whitney Junior) (ಡಿಸೆಂಬರ್,೮, ೧೭೬೫-ಜನವರಿ ೮, ೧೮೨೫) ಒಬ್ಬ [[ಅಮೇರಿಕ]]ದ [[ಸಂಶೋಧಕ]], ಕಾಳು ಹತ್ತಿಬೆಳೆಯ ಬೀಜಗಳನ್ನು ಬೇರ್ಪಡಿಸಲು ೨ ವರ್ಷ ಸತತವಾಗಿ ಶ್ರಮಿಸಿ ಯಂತ್ರವೊಂದನ್ನು ರಚಿಸಿ, ಸಿದ್ಧಿಪಡೆದ ಹರಿಕಾರರೆಂದು ಅಮೆರಿಕದಲ್ಲಿ ಹೆಸರಾದರು. ವಿಶ್ವದ ಹತ್ತಿ ಉತ್ಪಾದಕರಿಗೆ ನೆರವು ನೀಡಿದ ಈ ಕಾಟನ್ ಜಿನ್ ಯಂತ್ರ ಎಲ್ಲೆಲ್ಲೂ ಜನಪ್ರಿಯತೆಯನ್ನುಗಳಿಸಿತು. ಅದನ್ನು 'ಜಿನ್ನಿಂಗ್ ಯಂತ್ರ|ಇಂಜಿನ್' ಎಂದು ಕರೆದರು. 'ಇಂಜಿನ್' ಪದವನ್ನು ಗ್ರಾಹಕರು ಹೆಚ್ಚಾಗಿ ಬಳಸದೆ, 'ಜಿನ್' ಎನ್ನುವ ಪದ ಹಾಗೆಯೇ ಉಳಿದು ಅತ್ಯಂತ ಪ್ರಸಿದ್ಧಿಯನ್ನು ಗಳಿಸಿತು. 'ಕೈಗಾರಿಕಾ ಕ್ರಾಂತಿ'ಯ ಸಮಯದಲ್ಲಿ ಹಲವಾರು ಹೊಸ ಹೊಸ ಆವಿಷ್ಕಾರಗಳು, ,ಮತ್ತು ಹೊಸ ಹೊಸ ಸಂಶೋಧನೆಗಳು, ಯಂತ್ರನಿರ್ಮಾಣಗಳು, ಪ್ರಮುಖವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಜರುಗಿದವು. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣದ ರಾಜ್ಯಗಳಲ್ಲಿ ನಡೆದ ಆಂತರಿಕ ಕಲಹದ ಮೊದಲೇ 'ಹತ್ತಿ ಜಿನ್ ಯಂತ್ರ'ದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಾಯಿತು. ಅದೊಂದು ಅತ್ಯಂತ ಮಹತ್ವದ ಬೆಳವಣಿಗೆಯೆಂದು ಇತಿಹಾಸದಲ್ಲಿ ದಾಖಲಾಗಿದೆ. ಅಮೆರಿಕದಲ್ಲಿ ಮೊದಲಿನಿಂದಲೂ ಬೆಳೆಯುತ್ತಿದ್ದ 'ಅಪ್ಲಾಂಡ್ ಹತ್ತಿ'ಯ ಕಾಳುಗಳನ್ನು ಬಿಡಿಸುವುದು ಕಷ್ಟಕರವಾಗಿತ್ತು. ಜಿನ್ನಿಂಗ್ ಯಂತ್ರದಿಂದಾಗಿ ಒಬ್ಬ ಕೆಲಸಗಾರನು ಮಾಡುವ ಕೆಲಸದ ೫೦ ಪಟ್ಟು ಉತ್ಪಾದನೆ ವರ್ಧಿಸಿ ಲಾಭದಾಯಕವಾಯಿತು. ಇದರ ಜೊತೆಗೆ ಹೆಚ್ಛು ಹೆಚ್ಚು 'ಪ್ಲಾಂಟೇಶನ್' ಗಳಲ್ಲಿ ಹತ್ತಿಯನ್ನು ಬೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೂಲಿಯಾಳುಗಳ ಸಂಖ್ಯೆಯೂ ಹೆಚ್ಚಾಯಿತು. ಈ ಬೆಳವಣಿಗೆಗಳು ಪೇಟೆಂಟ್ ಮೇಲೆ ಪರಿಣಾಮ ಬೀರಿದ್ದಲ್ಲದೆ ಹಲವಾರು ಕಾನೂನು ಕಾರವಾಯಿಗಳಲ್ಲಿ ಮಾರ್ಪಾಡುಗಳನ್ನು ಮಾಡಬೇಕಾದ ಸನ್ನಿವೇಶ ಒದಗಿಬಂತು. ಅದೇ ಸಮಯದಲ್ಲಿ ಯೂರೋಪಿನ ಫ್ರಾನ್ಸ್ ದೇಶ, ಹಾಗೂ ಇಂಗ್ಲೆಂಡ್ ದೇಶಗಳ ನಡುವೆ ಯುದ್ಧವೇರ್ಪಟ್ಟ ಸನ್ನಿವೇಶದಲ್ಲಿ ಅಮೆರಿಕವೂ ಭಾಗವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಅಮೆರಿಕದ ಹೊಸ ಸೈನ್ಯಕ್ಕೆ 'ಮಸ್ಕೆಟ್'(ಕೋವಿ,ಬಂದೂಕಗಳು) ಗಳ ನಿರ್ಮಾಣಮಾಡುವ ಕಾರ್ಯ ಭರದಿಂದ ಸಾಗಿತು. <ref> [http://www.eliwhitney.org/7/museum/about-eli-whitney/factory Whitney Factory] </ref>
===ಜನನ, ವಿದ್ಯಾಭ್ಯಾಸ ವೃತ್ತಿ===
[[ಚಿತ್ರ:Eli_Whitney_1940_Issue-1c.jpg|thumb|ಅಮೇರಿಕದ ಅಂಚೆಚೀಟಿಯಲ್ಲಿ ]]
<nowiki>[[File:Eli Whitney 1940 Issue-1c.jpg|thumb|upright|Eli Whitney on US Postage]]</nowiki>
 
'ಇಲೈ ವಿಟ್ನಿ,' ಮೆಸ್ಯಾಚು ಸೆಟ್ಸ್ ನ 'ವೆಸ್ಟ್ ಬಾರೋ' ಎಂಬ ಊರಿನಲ್ಲಿ 'ಇಲೈ ವಿಟ್ನಿ ಸೀನಿಯರ್', ಮತ್ತು ಎಲಿಜಬೆತ್ ಫೆ, ದಂಪತಿಗಳ ಚೊಚ್ಚಲ ಮಗನಾಗಿ ಡಿಸೆಂಬರ್ ೮, ೧೭೬೫ ರಂದು ಜನಿಸಿದರು. ತಂದೆಯವರು ಒಬ್ಬ ಪ್ರಗತಿಶೀಲ ಕೃಷಿಕರಾಗಿದ್ದರು. ಬೇಸಾಯಮಾಡುವಾಗ ತಮಗೆ ಬೇಕಾದ ಪರಿಕರಗಳನ್ನು ತಮ್ಮ 'ವರ್ಕ್ ಶಾಪ್' ನಲ್ಲಿ ತಯಾರು ಮಾಡಿಕೊಳ್ಳುತ್ತಿದ್ದರು. ತಾಯಿ ಎಲಿಜಬೆತ್ ಫೆ ೧೭೭೭ ರಲ್ಲಿ ನಿಧನರಾದರು. ಆಗ ವಿಟ್ನಿಯವರ ವಯಸ್ಸು, ೧೧ ವರ್ಷ. ೧೪ ನೆಯ ವಯಸ್ಸಿನಲ್ಲಿ ಲಾಭದಾಯಕವಾದ ಕಬ್ಬಿಣದ ಮೊಳೆಯನ್ನು ತಯಾರಿಸುವ ಕಸುಬನ್ನು ತಂದೆಯವರ 'ವರ್ಕ್ ಶಾಪ್' ನಲ್ಲಿ ಕಲಿತರು. ಅವರ ಮಲತಾಯಿ ವಿಟ್ನಿಯವರನ್ನು ಕಾಲೇಜ್ ಗೆ ಕಲಿಸಲು ನಿರಾಕರಿಸಿದರು. ಆದ್ದರಿಂದ ವಿಟ್ನಿ, ತಮ್ಮ ಜಮೀನಿನಲ್ಲಿ ಕೆಲಸಗಾರನಾಗಿ,'ಶಾಲಾ ಟೀಚರ್' ಆಗಿ 'ಲೆಸ್ಟರ್ ಅಕಾಡೆಮಿ'ಯಲ್ಲಿ ಸ್ವಲ್ಪ ತರಬೇತಿ ಹೊಂದಿ, 'ಯೇಲ್ ವಿಶ್ವವಿದ್ಯಾಲಯ'ಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗಲು ಸಿಧ್ಹರಾದರು. (now Becker College) 'ಡಂ ಹಮ್' ನ, ಕನೆಕ್ಟಿಕಟ್ ನ 'ರೆವರೆಂಡ್ ಎಲಿಜರ್ ಗುಡ್ ರಿಚ್' ಬಳಿ ಶಿಷ್ಯ ವೃತ್ತಿ ಮಾಡಿದರು. ೧೭೮೯ ರಲ್ಲಿ ಕ್ಲಾಸ್ ಸೇರಿ ಫಿ ಬೇಟ ಕಪ್ಪ ದಲ್ಲಿ ಪದವಿಗಳಿಸಿದರು. ೧೭೯೨ ರಲ್ಲಿ. ಲಾ ಓದುವ ಕಟು ಆಶೆ ಅವರ ಮನಸ್ಸಿನಲ್ಲಿ ಬೇರೊಡೆಯಿತು. ಹಣವಿಲ್ಲದೆ ಖಾಸಗಿ ಉಪಾಧ್ಯಾಯನಾಗಿ ದಕ್ಷಿಣ ಕೆರೋಲಿನಕ್ಕೆ ಹೋಗಲು ಸಿದ್ಧರಾದರು. ೧೮ ನೆಯ ಶತಮಾನದ ಕೊನೆಯಲ್ಲಿ ಜಾರ್ಜಿಯ ಹೊಸ ವಲಸೆಗಾರರನ್ನು ಅಯಸ್ಕಾಂತದಂತೆ ಸೆಳೆದಿತ್ತು. 'ಲಿಮನ್ ಹಾಲ್' ಎನ್ನುವ ಕನೆಕ್ಟಿಕಟ್ ಗವರ್ನರ್ ಕ್ರಾಂತಿಯ ಸಮಯದಲ್ಲಿದ್ದರು. ದ. ಕೆರೊಲಿನಕ್ಕೆ ತಮ್ಮ ಗೆಳೆಯರ ಸಹಿತ ಹೋದಾಗ ಅಲ್ಲಿ 'ಮಿಸೆಸ್ ಗ್ರೀನ್' ಎಂಬ ಮಹಿಳೆ ಸಿಕ್ಕರು. ಆಕೆ ಕ್ರಾಂತಿಕಾರಿ ಜನರಲ್, 'ನಾಥನೆಲ್ ರ ಪತ್ನಿ'. ರೋಡ್ ಐಲೆಂಡ್ ನಲ್ಲಿದ್ದರು. ಜಾರ್ಜಿಯದಲ್ಲಿದ್ದ ತಮ್ಮ 'ಮಲ್ಬರಿ ಗ್ರುವ್' ಎನ್ನುವ ಪ್ಲಾಂಟೇಶನ್ ಗೆ ಆಹ್ವಾನಿಸಿದರು. ಈಗಿನ ಪ್ಲಾಂಟೇಶನ್ ಮ್ಯಾನೇಜರ್ ೧೭೮೫ ರ ಬ್ಯಾಚಿನ ಎಲ್ ಪದವಿಧರ ಕನೆಕ್ತಿಕತ್ ವಾಸಿ, 'ಫಿನಿಸ್ ಮಿಲ್ಲರ್' ಎನ್ನುವರ ಜೊತೆ ಲಗ್ನವಾಗುವ ಮಾತುಕತೆಇತ್ತು. ವಿಟ್ನಿ ಅವರಜೊತೆ ಸೇರಿ ಹೊಸ ಯಂತ್ರವನ್ನು ಕಂಡುಹಿಡಿಯಲು ಶ್ರಮಿಸಿದರು. ಮಿಸೆಸ್ ಗ್ರೀನ್ ರ ಬಂಗಲೆಯ ಬೇಸ್ಮೆಂಟ್ ನ ಕೊಠಡಿಯೊಂದರಲ್ಲಿ ಸತತವಾಗಿ ೨ ವರ್ಷ ಪರೀಕ್ಷೆಗಳನ್ನು ನಡೆಸಿ ಜಿನ್ನಿಂಗ್ ಯಂತ್ರದ ನೀಲ ನಕ್ಷೆಯನ್ನು ಸ್ಥಾಪಿಸಿದರು. ವಿಟ್ನಿ ಹಲವಾರು ಹೊಸ ಹೊಸ ಯಂತ್ರಗಳನ್ನು ನಿರ್ಮಿಸುವುದರಲ್ಲಿ ಆಸಕ್ತರಾಗಿದ್ದರು. ಅವರ ಎರಡು ಪ್ರಮುಖ ಸಂಶೋಧನೆಗಳಿಗೆ ಪ್ರಚಂಡ ಜನಪ್ರಿಯತೆಯನ್ನು ಗಳಿಸಿದರು.
 
೬,೩೨೨

edits

"https://kn.wikipedia.org/wiki/ವಿಶೇಷ:MobileDiff/914691" ಇಂದ ಪಡೆಯಲ್ಪಟ್ಟಿದೆ