ಜಿಪ್ಸೀ ಪತಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
೩೨ ನೇ ಸಾಲು:
==ಹಾನಿ==
[[File:Gypsy Moth Defoliation Snow Shoe PA.jpg|thumb|Aerial photo showing gypsy moth defoliation of hardwood trees along the [[Allegheny Front]] near [[Snow Shoe, Pennsylvania]], in July 2007. The light green patches on hilltops are trees that had begun refoliating by the time this picture was taken.]]
ನ್ಯೂ ಇಂಗ್ಲೆಂಡಿನಲ್ಲಿ ಲಕ್ಷಾಂತರ ಡಾಲರ್ ಬೆಲೆಬಾಳುವ ಓಕ್ ಮರಗಳು, ಸೇಬಿನ ಗಿಡಗಳು ಈ ಪತಂಗದ ಹಾವಳಿಗೆ ಸಿಕ್ಕಿ ನಾಶವಾಗಿವೆ. ಈ ಶತಮಾನದ ಆದಿಯಲ್ಲಿ ದಶಕಗಳಲ್ಲಿ ಇವುಗಳ ಹಾವಳಿ ಅಮೆರಿಕದ ಕೇಂದ್ರ ಸರ್ಕಾರದ ಗಮನಕ್ಕೆ ಬಂದು ಇವುಗಳ ನಿರ್ಮೂಲನಕ್ಕಾಗಿ ರಾಜ್ಯ ಸರ್ಕಾರದೊಡನೆ ಸಹಕರಿಸಿ ಕ್ರಿಯಾತ್ಮಕವಾಗಿ ನಿರೋಧಕ ಕಾರ್ಯಕ್ರಮಗಳನ್ನು ಆರಂಭಿಸಿದೆ. ಸಂಪರ್ಕ ನಿರೋಧ ಕಾರ್ಯಕ್ರಮದ ವ್ಯವಸ್ಥೆ (ಕ್ವಾರೆಂಟೈನ್), ಪದಾರ್ಥಗಳನ್ನು ಹೊರಗೆ ರವಾನಿಸುವಾಗ ಅವುಗಳಲ್ಲಿ ಪತಂಗ ಸಾಗದಂತೆ ನೋಡಿಕೊಳ್ಳುವುದು-ಮುಂತಾದ ವಿಧಾನಗಳಿಂದ ಅದರ ಹರಡುವಿಕೆಯನ್ನು ತಡೆಯಬಹುದಾಗಿದೆ. ಸ್ವಾಭಾವಿಕ ವಿಧಾನಗಳಿಂದ [[ನ್ಯೂ ಇಂಗ್ಲೆಂಡ್]] ರಾಜ್ಯಗಳ ಇತರ ಭಾಗಕ್ಕೆ ಹರಡದಂತೆ ತಕ್ಕ ನಿರ್ಬಂಧಗಳನ್ನು ಅನುಷ್ಠಾನಕ್ಕೆ ತರಲಾಗಿದೆ. 1923ರಿಂದ ನ್ಯೂಯಾರ್ಕಿನ ಪೂರ್ವ ಪ್ರದೇಶಗಳಲ್ಲೂ ಪೂರ್ವದ ಇತರ ರಾಜ್ಯಗಳಲ್ಲೂ ಇದ್ದ ಈ ಪತಂಗವನ್ನು ನಿರ್ಮೂಲ ಮಾಡುವುದರ ಮೂಲಕ ಪಶ್ಚಿಮ ಪ್ರದೇಶಗಳಿಗೆ ಹರಡದಂತೆ ಮಾಡುತ್ತಿದೆ. 1950ರ ಸುಮಾರಿಗೆ ಈ ಪತಂಗ ಪೂರ್ವ ನ್ಯೂಯಾರ್ಕಿನ ಅನೇಕ ಪ್ರದೇಶಗಳಲ್ಲೂ ಪೆನ್ಸಿಲ್‍ವೇನಿಯದ ಕೆಲವೆಡೆಗಳಲ್ಲೂ ಹರಡಿತ್ತು. ಅವುಗಳ ಹಾವಳಿ ಒಂದೊಂದು ವರ್ಷವೂ ಒಂದೊಂದು ಪ್ರಮಾಣದ ತೀವ್ರತೆಯನ್ನು ಮುಟ್ಟುತ್ತಿತ್ತು. ವಿಮಾನಗಳಲ್ಲಿ ಅವುಗಳ ನೆಲೆಗಳ ಮೇಲೆ ಡಿ.ಡಿ.ಟಿ.ಯನ್ನು ಸಿಂಪಡಿಸಿ ಅವುಗಳ ಹರಡಿಕೆಯನ್ನು ತಡೆಯಲಾಗುತ್ತಿತ್ತು. ದೀರ್ಘಕಾಲ ಸಂಶೋಧನೆ ನಡೆಸಿದ ಮೇಲೆ ಈಚೆಗೆ ಅನೇಕ ಹೊಸ ನಿಯಂತ್ರಣ ವಿಧಾನಗಳೂ ಬಳಕೆಗೆ ಬಂದಿವೆ. ಸೀಸದ ಆರ್ಸನೇಟ್ ಪುಡಿಯನ್ನು ಕಲಸಿದ ದ್ರಾವಣವನ್ನು ಕಂಬಳಿಹುಳುಗಳ ಮೇಲೆ ಸಿಂಪಡಿಸುವುದು ಅತ್ಯಂತ ಪರಿಣಾಮಕಾರಿಯಾದ ನಿಯಂತ್ರಣ ವಿಧಾನ. ಮೊಟ್ಟೆಗಳ ಮೇಲೆ ಕ್ರಿಯೊಸೋಟ್ ದ್ರಾವಣವನ್ನೆರಚಿ ನಾಶಪಡಿಸುವುದೂ ಉಂಟು. ರಾಸಾಯನಿಕ ನಿಯಂತ್ರಣಕ್ಕಿಂತ ಜೈವಿಕ ಹತೋಟಿ ವಿಧಾನಗಳನ್ನು ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಇಂದು ಬಳಸಲಾಗುತ್ತಿದೆ. ಯೂರೋಪಿನಿಂದ ಅನೇಕ ಪರಾವಲಂಬಿ ಜೀವಿಪ್ರಭೇದಗಳನ್ನು ಜಿಪ್ಸೀ ಪತಂಗಗಳ ವಿನಾಶಕ್ಕಾಗಿ ಆಮದು ಮಾಡಿಕೊಳ್ಳಲಾಗಿದೆ. ಇಂಥ ಪರಾವಲಂಬಿಗಳಲ್ಲಿ ಬ್ರಾಕೊನಿಡ್‍ಗಳು (ಕಣಜ), ಪ್ರೆಕೈನಾ ಚಿಟ್ಟೆಗಳು ಪ್ರಧಾನವಾಗಿದೆ. ಕೆಲಸೋಮ ಸೈಕೋಪ್ಯಾಂಟ ಎಂಬ ಮಾಂಸಾಹಾರಿ ಕೀಟವೂ (ಬೀಟಲ್) ಈ ಕಾರ್ಯದಲ್ಲಿ ಸಹಾಯಕವೆನಿಸಿದೆ.
 
[[ವರ್ಗ:ಕೀಟಗಳು]]
"https://kn.wikipedia.org/wiki/ಜಿಪ್ಸೀ_ಪತಂಗ" ಇಂದ ಪಡೆಯಲ್ಪಟ್ಟಿದೆ