ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Mussd.jpgರ ಬದಲು ಚಿತ್ರ March_on_Rome_1922_-_Mussolini.jpg ಹಾಕಲಾಗಿದೆ.
೧೦೪ ನೇ ಸಾಲು:
{{main|Fascism|Italian Fascism}}
ಮುಸೊಲಿನಿಯು [[ಪ್ರಥಮ ವಿಶ್ವಯುದ್ಧ]]ದಲ್ಲಿ [[ಮಿತ್ರಪಕ್ಷ]]ಗಳ ಸೇವೆಯಿಂದ ವಾಪಾಸು ಬರುವಷ್ಟರಲ್ಲಿ ಆತನು ಸಮಾಜವಾದವು ಸಿದ್ಧಾಂತವಾಗಿ ದೊಡ್ಡಪ್ರಮಾಣದ ಸೋಲನ್ನನುಭವಿಸಿರುವುದೆಂಬ ತೀರ್ಮಾನಕ್ಕೆ ಬಂದಿದ್ದನು. 1917ರಲ್ಲಿ ಮುಸೊಲಿನಿ ಬ್ರಿಟಿಶ್ ಭದ್ರತಾ ಸೇವೆಯಾದ [[MI5]]ನಿಂದ ವಾರಕ್ಕೆ £100 ಸಂಬಳಕ್ಕೆ ಕೆಲಸಮಾಡಲು ನೇಮಕಗೊಳ್ಳುವುದರ ಮೂಲಕ ರಾಜಕೀಯಕ್ಕೆ ವಿಧ್ಯುಕ್ತ ಪಾದಾರ್ಪಣೆಯನ್ನು ಮಾಡಿದನು; ಈ ಸಹಾಯವನ್ನು ಪಡೆಯಲು ಸರ್ [[ಸ್ಯಾಮ್ಯುಯೆಲ್ ಹೋರ್]] ಅನುಮತಿ ನೀಡಿದ್ದನು.<ref name="Guardian2009-10-13">{{cite news|url=http://www.guardian.co.uk/world/2009/oct/13/benito-mussolini-recruited-mi5-italy|publisher=Guardian |title="Recruited by MI5: the name's Mussolini. Benito MussoliniDocuments reveal Italian dictator got start in politics in 1917 with help of £100 weekly wage from MI5"|date=2009-10-13 |accessdate=2009-10-14}}</ref> 1918ರಲ್ಲಿ ಮುಸೊಲಿನಿ ಇಟಲಿ ರಾಷ್ಟ್ರವನ್ನು ಪುನರುಜ್ಜೀವಿತಗೊಳಿಸಲು "ಸಂಪೂರ್ಣ ಬದಲಾವಣೆಯನ್ನು ತರುವ ಅರ್ಹತೆಯುಳ್ಳ ಕಠಿಣ ಮತ್ತು ಉತ್ಸಾಹೀ" ವ್ಯಕ್ತಿಯೊಬ್ಬನ ಅವಶ್ಯಕತೆಯಿದೆಯೆಂದು ಕರೆನೀಡಿದನು.<ref name="ww2timeline">{{cite web| url=http://history.sandiego.edu/gen/ww2timeline/Prelude05.html| title=The Rise of Benito Mussolini|date=8 January 2008}}</ref> ಕೆಲವು ಕಾಲದ ನಂತರ ಮುಸೊಲಿನಿಯ ಪ್ರಕಾರ 1919ರ ಹೊತ್ತಿಗೆ ಆತನಿಗೆ "ಸಮಾಜವಾದವು ಒಂದು ಸಿದ್ಧಾಂತವಾಗಿ ಆಗಲೇ ಸತ್ತುಹೋಗಿಯಾಗಿದೆ; ಅದು ಕೇವಲ ಒಂದು ಅತೃಪ್ತಿಯಾಗಿ ಉಳಿದುಕೊಂಡಿದೆ" ಎಂದು ಅನ್ನಿಸಿತ್ತು.<ref>{{cite news|url=http://www.salon.com/news/feature/2008/01/11/goldberg/print.html|publisher=Salon.com|title="We're all fascists now"|date=8 January 2008}}</ref> 23 ಮಾರ್ಚ್ 1919ರಂದು ಮುಸೊಲಿನಿ ಮಿಲಾನ್ ''[[ಫ್ಯಾಸಿಯೋo]]'' ವನ್ನು ಪುನರ್ರಚನೆ ಮಾಡಿ 200 ಸದಸ್ಯರನ್ನೊಳಗೊಂಡ ''Fasci Italiani di Combattimento'' (ಇಟಾಲಿಯನ್ ಹೋರಾಟ ಪಡೆ)ಯನ್ನು ರೂಪಿಸಿದನು.<ref name="ww2timeline">{{cite web| url=http://history.sandiego.edu/gen/ww2timeline/Prelude05.html| title=The Rise of Benito Mussolini}}</ref>
::'''ಫ್ಯಾಸಿಸಂ'''-:''ಆಕ್ರಮಣಕಾರೀ ರಾಷ್ಟ್ರೀಯತೆ, ಸರ್ವಾಧಿಕಾರಿ ನಾಯಕಪಂಥ, ಯುದ್ಧಪ್ರಿಯತೆ, ರಾಷ್ಟ್ರಸಂಸ್ಕøತಿಯ ಅಂಧಪೂಜೆ ಇವು ಫ್ಯಾಸಿಸಮ್ಮಿನ ಮುಖ್ಯ ಲಕ್ಷಣಗಳು. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ವಿರೋಧಿ, ಪ್ರಜಾಸತ್ತೆಯ ಪರಮಶತ್ರು. ಇಲ್ಲಿ ಪ್ರಜೆಗಳು ಸರ್ಕಾರದ ಕೈಗೊಂಬೆಗಳಂತೆ. ಒಂದು ರಾಜ್ಯ ಆಂತರಿಕ ಬಿಕ್ಕಟ್ಟಿಗೆ ಸಿಕ್ಕಾಗ ಫ್ಯಾಸಿಸಮ್ ತಲೆ ಎತ್ತಬಹುದಾಗಿದೆ. ಎರಡನೆಯ ಮಹಾಯುದ್ಧದ ಅನಂತರವೂ ಫ್ಯಾಸಿಸ್ಟ್ ಪ್ರವೃತ್ತಿಗಳು ಅಲ್ಲಲ್ಲಿ ತಲೆ ಎತ್ತಿರುವುದುಂಟು. ಫ್ಯಾಸಿಸಮ್ ಪ್ರಾಬಲ್ಯದ ವಿರುದ್ಧ ಒಂದು ಭರವಸೆಯೆಂದರೆ ಇದು; ಪ್ರಜೆಗಳು ಶಾಶ್ವತವಾಗಿ ತಮ್ಮ ಸ್ವಾತಂತ್ರ್ಯದ ಅಪಹರಣವನ್ನು ಸಹಿಸುವುದಿಲ್ಲ. ಇದು ಇತಿಹಾಸ ಕಲಿಸಿರುವ ಪಾಠ''. <ref>(ಜಿ.ಕೆ.ಎ. ಮೈ. ವಿ ಕೋ.)</ref>
 
ಫ್ಯಾಸಿಸಮ್ ತನ್ನ ಮೊದಲ ಹಂತಗಳಲ್ಲಿ ಬೆಂಬಲವನ್ನು ಪಡೆಯುವುದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದು [[ಸಾಮಾಜಿಕ ವರ್ಗ]]ಕ್ಕೆ ಸಂಬಂಧಿಸಿದ ಎಲ್ಲ ಭೇದಭಾವಗಳನ್ನು ವಿರೋಧಿಸುವುದಾಗಿ ಮತ್ತು ಎಲ್ಲ ರೀತಿಯ [[ವರ್ಗ ಸಂಘರ್ಷ]]ಗಳನ್ನು ಕಡುವಾಗಿ ವಿರೋಧಿಸುವುದಾಗಿ ಮಾಡಿದ ಘೋಷಣೆ.<ref name="maifestoofstruggle">{{cite news|url=http://www.wnd.com/news/article.asp?ARTICLE_ID=39164|publisher=WND.com|title=Flunking Fascism 101|date=8 January 2008}}</ref> ಇದರ ಬದಲಾಗಿ ಫ್ಯಾಸಿಸಮ್ ಇಟಲಿಯನ್ನು ಅದರ ಅಮೋಘವಾದ [[ರ‍ೋಮನ್]] ಘನತೆಗೆ ಮರಳಿ ಕೊಂಡೊಯ್ಯುವ ಬಯಕೆಯಿಂದ [[ರಾಷ್ಟ್ರೀಯತಾವಾದಿ]] ಭಾವನೆಗಳಾದ ಬಲವಾದ, ವರ್ಗರಹಿತ ಐಕ್ಯತೆಗಳನ್ನು ಬೆಂಬಲಿಸತೊಡಗಿತು. ಫ್ಯಾಸಿಸಮ್‌ನ ಸೈದ್ಧಾಂತಿಕ ತಳಹದಿಯು ಹಲವಾರು ಮೂಲಗಳನ್ನು ಆಧರಿಸಿದ್ದಾಗಿತ್ತು. ಮುಸೊಲಿನಿ ಫ್ಯಾಸಿಸಮ್ ಅನ್ನು ರೂಪಿಸಲು ಪ್ಲೇಟೋ, [[ಜಾರ್ಜ್ ಸೊರೆಲ್]], [[ನೀಶೆ]]ಯ ಬರಹಗಳು ಹಾಗೂ [[Vilfredo Pareto]]ನ ಸಮಾಜವಾದಿ ಮತ್ತು ಆರ್ಥಿಕ ವಿಚಾರಗಳನ್ನು ಬಳಸಿಕೊಂಡನು. ಮುಸೊಲಿನಿ [[ಪ್ಲೇಟೋ]]ನ ಬರಹಗಳನ್ನು ಮೆಚ್ಚುತ್ತಿದ್ದುದಲ್ಲದೆ ಆತನ ''[[ದ ರಿಪಬ್ಲಿಕ್]]'' ಅನ್ನು ಸ್ಫೂರ್ತಿಗಾಗಿ ಆಗಾಗ ಓದುತ್ತಿದ್ದನು.<ref>ಮೋಸ್‌ಲೀ, ರೇ. ''Mussolini: The Last 600 Days of Il Duce'' . Taylor Trade Publications, 2004. P. 39</ref> ''ದ ರಿಪಬ್ಲಿಕ್'' ನಲ್ಲಿದ್ದ ಹಲವಾರು ಅಭಿಪ್ರಾಯಗಳನ್ನು ಫ್ಯಾಸಿಸಮ್ ಪ್ರವರ್ಧಮಾನಕ್ಕೆ ತರತೊಡಗಿತು, ಉದಾಹರಣೆಗೆ ರಾಷ್ಟ್ರಕ್ಕಿಂತ ಮಿಗಿಲಾದುದು ಯಾವುದೂ ಇಲ್ಲವೆಂದು ಪ್ರತಿಪಾದಿಸುವ ಬುದ್ಧಿಜೀವಿಯೊಬ್ಬನು ರಾಷ್ಟ್ರವನ್ನು ಆಳಬೇಕೆಂಬುದು, ಪ್ರಜಾತಂತ್ರಕ್ಕೆ ವಿರೋಧ, ವರ್ಗವ್ಯವಸ್ಥೆಯನ್ನು ಕಾಪಾಡುವುದು ಮತ್ತು ವರ್ಗಗಳ ನಡುವಣ ಸಹಕಾರ, ಯೋಧರ ವರ್ಗವೊಂದನ್ನು ರೂಪಿಸುವುದರ ಮೂಲಕ ರಾಷ್ಟ್ರದ ಮಿಲಿಟರೀಕರಣವನ್ನು ಪ್ರೋತ್ಸಾಹಿಸುವುದು, ರಾಷ್ಟ್ರದ ಒಳಿತಿಗಾಗಿ ಪ್ರಜೆಗಳು ಪೌರ ಸೇವೆ ಸಲ್ಲಿಸಬೇಕೆಂದು ಆದೇಶ ನೀಡುವುದು ಮತ್ತು ಭವಿಷ್ಯದ ಯೋಧರನ್ನು ಮತ್ತು ರಾಷ್ಟ್ರವನ್ನಾಳಬಹುದಾದ ನಾಯಕರನ್ನು ರೂಪಿಸುವ ಸಲುವಾಗಿ ಶಿಕ್ಷಣವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇತ್ಯಾದಿ.<ref>ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66</ref> ಫ್ಯಾಸಿಸಮ್ ಮತ್ತು ''ದ ರಿಪಬ್ಲಿಕ್'' ನ ನಡುವೆ ಇದ್ದ ವ್ಯತ್ಯಾಸವೆಂದರೆ ಅದು ಆಕ್ರಮಣಕಾರೀ ಯುದ್ಧಪ್ರವೃತ್ತಿಗೆ ಉತ್ತೇಜನ ನೀಡುತ್ತಿರಲಿಲ್ಲ ಮತ್ತು ಭದ್ರತಾ ಕಾರಣಗಳಿಗೋಸ್ಕರ ಮಾತ್ರ ಯುದ್ಧ ಮಾಡಬೇಕೆಂದು ಅಭಿಪ್ರಾಯ ಹೊಂದಿತ್ತು; ಫ್ಯಾಸಿಸಮ್‌ನಂತಲ್ಲದೆ ಅದು ಸ್ವತ್ತಿನ ವಿಚಾರದಲ್ಲಿ ಬಹಳ ಕಮ್ಯುನಿಸ್ಟ್‌-ರೀತಿಯ ವಿಚಾರಗಳನ್ನು ಪ್ರವರ್ತಿಸುತ್ತಿತ್ತು, ಪ್ಲೇಟೋ ನ್ಯಾಯ ಮತ್ತು ನೈತಿಕತೆಯನ್ನು ಸಾಧಿಸಬೇಕೆನ್ನುವ ಆದರ್ಶವಾದಿಯಾಗಿದ್ದರೆ ಮುಸೊಲಿನಿ ಮತ್ತು ಫ್ಯಾಸಿಸಮ್ ರಾಜಕೀಯ ಗುರಿಗಳನ್ನುಳ್ಳ ವಾಸ್ತವವಾದಿಗಳಾಗಿದ್ದರು.<ref>ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66-67.</ref>
 
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ