ಜಮಖಂಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ಮಾಹಿತಿ ಸೇರಿಸಲಾಗಿದೆ.
೫೨ ನೇ ಸಾಲು:
 
[[ಟೀಪು ಸುಲ್ತಾನ್]] ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ [[ಕಿತ್ತೂರು ಚೆನ್ನಮ್ಮ|ಕಿತ್ತೂರು ಚೆನ್ನಮ್ಮಳನ್ನು]] ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.
 
ಸ್ವಾತಂತ್ರ್ಯ ಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್, ಇಂದೋರ್, ಬರೋಡಾ, ಕೊಲ್ಹಾಪೂರ, ಸಂಡೂರು ಸಂಸ್ಥಾನಗಳು ಸೇರಿದಂತೆ ಒಟ್ಟು ೪೬೫ ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವು. ಹರಿಭಟ್ ಬಾಬಾ ಪಟವರ್ಧನ ಮಹಾರಾಜರು ಸಂಸ್ಸ್ಥಾನದ ಪೂರ್ವಜರಾಗಿದ್ದರು.೧೬೫೫ ರಿಂದ ಸ್ವಾತಂತ್ರ್ಯ ಬಂದು ಭಾರತದ ಒಕ್ಕೂಟದಲ್ಲಿ ಒಂದಾಗುವವರೆಗೆ ಈ ಸಂಸ್ಥಾನ ಆಡಳಿತ ನಡೆಸಿತು. ೧೯೨೩ ರಲ್ಲಿ ತನ್ನದೇ ಆದ ಜಮಖಂಡಿ ಸ್ಟೇಟ್ ಲೆಜಿಸ್ಲೇಟಿವ್ ಅಸೆಂಬ್ಲಿ ಎಂಬ ಶಾಸನಸಭೆ ಹೊಂದಿ ಪ್ರಜೆಗಳಿಗೆ ಮೂಲಸೌಕರ್ಯ ಒದಗಿಸಿ ಮಾದರಿಯಾಗಿತ್ತು. ೧೯೧೨ ರಷ್ಟು ಹಿಂದೆಯೇ ಅವರು ತಮ್ಮ ರಾಮತೀರ್ಥ ಅರಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ೧೯೩೯ರಲ್ಲಿ ರಷ್ಯನ್ ಎಂಜಿನ್ ನಿಂದ ಚಲಿಸುವ ಬೀಸುವ ಗಿರಣಿ ಹಾಗು ನೀರೆತ್ತುವ ಪಂಪ್ ಸೆಟ್ ಅಳವಡಿಸಿಕೊಂಡಿದ್ದರು. ನಗರದ ರೆಸ್ತೆಗಳು + ಆಕಾರದ ರಚನೆಯಾಗಿರುವುದರಿಂದ ಇದಕ್ಕೆ "ಪಗಡಿ ಪಟ್ಟಿ ಬಜಾರ್" ಎಂದು ಕರೆಯುತ್ತಿದ್ದರು. ಪಟವರ್ಧನ ಮಹಾರಾಜರು ಮೇಲ್ಜಾತಿ(ಬ್ರಾಹ್ಮಣ)ಗೆ ಸೇರಿದ್ದರೂ ಎಲ್ಲ ಜಾತಿಯವರಿಗೆ ಅರಮನೆಯಲ್ಲಿ ಔತಣಕೂಟವನ್ನು ಏರ್ಪಡಿಸುತ್ತಿದ್ದರು. ಆ ಕಾಲದಲ್ಲೇ ಸಿವಿಲ್ ಹಾಸ್ಪಿಟಲ್, ಮುನ್ಸಿಪಾಲಿಟಿ, ಹೈಸ್ಕೂಲ್, ಕಾಲೇಜುಗಳನ್ನು ಸ್ಥಾಪಿಸಿದ್ದರು. ಕೃಷಿಗಾಗಿ ಕೆರೆ-ಕಟ್ಟೆ ಕಟ್ಟಿಸಿದ್ದಾರೆ. ಕ್ರೀಡೆಯನ್ನು ಉತ್ತೇಜಿಸಲು ಪೋಲೋ ಮೈದಾನ, ಈಜುಕೊಳ,ಕುಸ್ತಿ ಕಣ ನಿರ್ಮಿಸಿದ್ದರು. ಸ್ವತ: ಮಹಾರಾಜರು ಟೆನಿಸ್ ಪ್ರಿಯರಾಗಿದ್ದ ಕಾರಣ ಪುರುಷ ಹಾಗು ಮಹಿಳೆಯರಿಗಾಗಿ ಪ್ರತ್ಯೇಕ ಟೆನಿಸ್ ಕೋರ್ಟ ನಿರ್ಮಾಣ ಮಾಡಿದರು. ಸ್ವಾತಂತ್ರ್ಯಾನಂತರ ಏಕೀಕರಣವು ಹಲವು ಸಂಸ್ಥಾನಿಕರ ಅಸಹಕಾರದಿಂದ ನೆನೆಗುದಿಗೆ ಬಿದ್ದಿತ್ತು. ಸಂಸ್ಥಾನಿಕರ ಆಂತರಿಕ ಕಚ್ಚಾಟ ಮತ್ತೊಮ್ಮೆ ಭಾರತವನ್ನು ಪರಕೀಯರ ಆಡಳಿತಕ್ಕೆ ದೂಡಬಹುದೆಂಬುದನ್ನು ದೇಶದ ಸಂಸ್ಥಾನಿಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ಪಟವರ್ಧನರು ತಾವು ಭಾರತದೊಂದಿಗೆ ಮೊಟ್ಟ ಮೊದಲಿಗೆ ವಿಲೀನವಾಗುವುದರೊಂದಿಗೆ ಮುನ್ನುಡಿಯನ್ನು ಬರೆದರು. ಆ ಸಂದರ್ಭದಲ್ಲಿ ತಮ್ಮ ಜೊತೆಗಿನ ಇತರ ಸಂಸ್ಥಾನಿಕರನ್ನು ಎದುರು ಹಾಕಿಕೊಂಡೂ ಕೂಡ ಭವ್ಯ ಭಾರತದ ಕನಸನ್ನು ಕಂಡವರಲ್ಲಿ ಮೊದಲಿಗರಾಗಿದ್ದರು.
 
=='''ಧಾರ್ಮಿಕ'''==
"https://kn.wikipedia.org/wiki/ಜಮಖಂಡಿ" ಇಂದ ಪಡೆಯಲ್ಪಟ್ಟಿದೆ