ನಿತೀಶ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
[[Image:NitishKumar.jpg|thumb|ನಿತೀಶ್ ಕುಮಾರ್]]
'''ನಿತೀಶ್ ಕುಮಾರ್''' ಉತ್ತರ [[ಭಾರತ|ಭಾರತದಲ್ಲಿರುವ]] [[ಬಿಹಾರ]] ರಾಜ್ಯದ ಹಾಲಿ ಮುಖ್ಯಮಂತ್ರಿ. ನಿತೀಶ್ ಕುಮಾರ್ [[ಸಂಯುಕ್ತ ಜನತಾದಳ]](ಜೆಡಿ(ಯು)) ಪಕ್ಷದ ನಾಯಕರೊಲೊಬ್ಬರು ಹಾಗು ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳ ಒಕ್ಕೂಟವಾದ [[ರಾಷ್ಟ್ರೀಯ ಜನತಂತ್ರ ಒಕ್ಕೂಟ]] ಅಥವಾ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್([[ಎನ್‌ಡಿಎ]] ಮೈತ್ರಿಕೂಟದ)ನಾಯಕರಲ್ಲೊಬ್ಬರು. ನಿತೀಶ್ ಕುಮಾರ್ ಸತತ ೬ ಬಾರಿ [[ಬಿಹಾರ|ಬಿಹಾರದ]] ನಳಂದಾ ಕ್ಷೇತ್ರದಿಂದ [[ಲೋಕಸಭೆ|ಲೋಕಸಭೆಗೆ]](೯-೧೪ನೆ ಲೋಕಸಭೆಗಳು) ಆಯ್ಕೆಯಾಗಿದ್ದಾರೆ.
 
==ಜೀವನ==
ನಿತೀಶ್ ಕುಮಾರರ ಜನನ [[ಬಿಹಾರ|ಬಿಹಾರದ]] ರಾಜಧಾನಿ [[ಪಟ್ನಾ]] ಸಮೀಪದ ಭಕ್ತಿಪುರದಲ್ಲಿ [[ಮಾರ್ಚ್ ೧]] [[೧೯೫೧]]ರಲ್ಲಾಯಿತು. ಇವರ ತಂದೆ ಕವಿರಾಜ ಲಖನ್ ಸಿಂಗ್ ಮತ್ತು ತಾಯಿ ಪರಮೇಶ್ವರಿ ದೇವಿ. [[ಪಟ್ನಾ|ಪಟ್ನಾದ]] ಬಿಹಾರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದ ನಿತೀಶ್, [[ಜಯಪ್ರಕಾಶ್ ನಾರಾಯಣ್|ಜಯಪ್ರಕಾಶ್ ನಾರಾಯಣರ]] ಅನುಯಾಯಿಯಾಗಿ ೧೯೭೪-೭೬ರ ಅವಧಿಯಲ್ಲಿ ನೆಡೆದ ಬಿಹಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. [[೧೯೭೫]]ರ [[ತುರ್ತು ಪರಿಸ್ಥಿತಿ|ತುರ್ತು ಪರಿಸ್ಥಿತಿಯ]] ಸಂಧರ್ಭದಲ್ಲಿ, ಅಂದಿನ ಕೇಂದ್ರ ಸರ್ಕಾರದಿಂದ [[ಮೀಸಾ| ಮೀಸಾ ಕಾಯ್ದೆ]] ಕಾಯ್ದೆಯಡಿ ಬಂಧಿತರಾಗಿದ್ದರು. [[೧೯೮೫]]ರಲ್ಲಿ ಪ್ರಥಮ ಬಾರಿ [[ಬಿಹಾರ]] [[ವಿಧಾನಸಭೆ|ವಿಧಾನಸಭೆಗೆ]] ಆಯ್ಕೆಯಾದ ನಿತೀಶ್, ೧೯೮೭ರಲ್ಲಿ ಯುವ ಲೋಕದಳದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೮೯ರಲ್ಲಿ ಬಿಹಾರ ಜನತಾದಳದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್, ಅದೇ ವರ್ಷ ಮೊದಲ ಬಾರಿ [[ಲೋಕಸಭೆ|ಲೋಕಸಭೆಗೆ]] (೯ನೇ ಲೋಕಸಭೆ) ಚುನಾಯಿತರಾದರು. ೧೯೯೦ರಲ್ಲಿ ಮೊದಲ ಬಾರಿ ಕೇಂದ್ರ ಮಂತ್ರಿಯಾಗಿ ಆಯ್ಕೆಯಾಗಿ ಶ್ರೀಯುತರು ಕೃಷಿ ಮತ್ತು ಸಹಕಾರ (ರಾಜ್ಯ ಮಟ್ಟ) ಖಾತೆಯನ್ನು ವಹಿಸಿದ್ದರು. ೧೯೯೧ರಲ್ಲಿ ೧೦ನೆ [[ಲೋಕಸಭೆ|ಲೋಕಸಭೆಗೆ]] ಮರುಚುನಾಯಿತರಾದ ನಿತೀಶ್, ಜನತಾದಳದ ರಾಷ್ಟ್ರಮಟ್ಟದ ಕಾರ್ಯದರ್ಶಿ ಮತ್ತು [[ಲೋಕಸಭೆ|ಲೋಕಸಭೆಯಲ್ಲಿ]] ಜನತಾದಳದ ಉಪನಾಯಕರಾದರು. ೧೯೯೮-೨೦೦೦ ಅವಧಿಯಲ್ಲಿ ಕೆಂದ್ರ ಮಂತ್ರಿಮಂಡಲದಲ್ಲಿ ರೈಲು, ರಸ್ತೆ ಸಾರಿಗೆ ಮತ್ತು ಕೃಷಿ ಖಾತೆಗಳನ್ನು ವಹಿಸಿದ ನಿತೀಶ್, ೨೦೦೧ರಲ್ಲಿ ಕೇವಲ ೭ ದಿನಗಳ ಕಾಲ ಬಿಹಾರದ ಮುಖ್ಯಮಂತ್ರಿಯಾದರು. ಅದೆ ವರ್ಷ ಮತ್ತೆ ಕೇಂದ್ರ ಸಂಪುಟ ಸೇರಿದ ನಿತೀಶ್, [[ಅಟಲ್ ಬಿಹಾರಿ ವಾಜಪೇಯಿ]] ನೇತೃತ್ವದ [[ಎನ್‌ಡಿಎ]] ಸರ್ಕಾರದ ಮಂತ್ರಿಮಂಡಲದಲ್ಲಿ ೨೦೦೧ರಿಂದ ೨೦೦೪ರ ವರೆಗೆ ಕೇಂದ್ರ ರೈಲು ಮಂತ್ರಿಯಾಗಿದ್ದರು. [[೨೦೦೪]]ರ [[ಲೋಕಸಭೆ|ಲೋಕಸಭಾ]] ಚುನಾವಣೆಯಲ್ಲಿ [[ಎನ್‌ಡಿಎ]] ಮೈತ್ರಿಕೂಟ ಸೋಲು ಕಂಡರೂ, ನಿತೀಶ್ ೬ನೆ ಭಾರಿ ಲೋಕಸಭೆಗೆ ಆಯ್ಕೆಯಾಗಿ ಸಂಸತ್ತಿನಲ್ಲಿ ಸಂಯುಕ್ತ ಜನತಾದಳ ಶಾಸನ ಸಭೆಯ ನಾಯಕರಾದರು . ನವೆಂಬರ್ ೨೦೦೫ರಲ್ಲಿ ನೆಡೆದ [[ಬಿಹಾರ]] [[ವಿಧಾನಸಭೆ]] ಚುನಾವಣೆಯಲ್ಲಿ [[ಎನ್‌ಡಿಎ]] ಮೈತ್ರಿಕೂಟವನ್ನು ಗೆಲುವುನೆಡೆ ಕೊಂಡೊಯ್ದು [[ಲಾಲೂ ಪ್ರಸಾದ ಯಾದವ್]] ನೇತೃತ್ವದ ರಾಷ್ಟ್ರೀಯ ಜನತಾದಳದ ೧೫ ವರ್ಷದ ಆಡಳಿತವನ್ನು ಕೊನೆಗೊಳಿಸಲು ಕಾರಣಕರ್ತರಾದರು.
 
[[ನವೆಂಬರ್ ೨೪]], [[೨೦೦೫]]ರಂದು ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
 
"https://kn.wikipedia.org/wiki/ನಿತೀಶ್_ಕುಮಾರ್" ಇಂದ ಪಡೆಯಲ್ಪಟ್ಟಿದೆ