ದೂರದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ದೂರದರ್ಶನ ತಂತ್ರಜ್ಞಾನಗಳ ಬಗ್ಗೆ
೩೭ ನೇ ಸಾಲು:
1983ರ ರಾಜ್ಯೋತ್ಸವ ದಿನದಂದು ಕನ್ನಡ ವಾರ್ತಾಪ್ರಸಾರ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಾರಂಭವಾಯಿತು. ಕ್ರಮೇಣ ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮಗಳಲ್ಲಿ ವಸ್ತು ವೈವಿಧ್ಯತೆ ಕಂಡು ಬರಲಾರಂಭಿಸಿತು. [[ದಸರಾ]] ಉತ್ಸವ, [[ಕ್ರಿಕೆಟ್]] ಪಂದ್ಯಗಳ ನೇರಪ್ರಸಾರ, ಧಾರವಾಹಿಗಳು, ಮಹಿಳೆಯರ ಕಾರ್ಯಕ್ರಮಗಳು, [[ರೈತ]]ರಿಗಾಗಿ ವಿಶೇಷ ಕಾರ್ಯಕ್ರಮಗಳು, ಶ್ರೇಷ್ಠ ಕನ್ನಡ ಸಣ್ಣಕತೆಗಳ ಟಿವಿ [[ಚಲನಚಿತ್ರ]]ಗಳು ಮೊದಲಾದ ಕಾರ್ಯಕ್ರಮಗಳಿಂದ ವಸ್ತು ವೈವಿಧ್ಯತೆ ಹೆಚ್ಚಿತು. ಜೊತೆಗೆ 1995ರ ಮಾರ್ಚ್ 8ರಂದು ‘ಹಲೋ ಸೋದರಿ’ ಕಾರ್ಯಕ್ರಮಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ ಆರಂಭಿಸಿತು. ಇದು ದ್ವಿಮುಖ ಸಂವಹನೆಯ ಮೊದಲ ಯತ್ನವಾಗಿ ಬೆಂಗಳೂರು ಕೇಂದ್ರದ ಯಶಸ್ಸಿಗೆ ಇನ್ನೊಂದು ಪುಟ ದಾಖಲಾಯಿತು.
ಕನ್ನಡ ಕಾರ್ಯಕ್ರಮಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುವ ಘನೋದ್ದೇಶದಿಂದ 1984ರಲ್ಲಿ [[ಮಂಗಳೂರು]], [[ದಾವಣಗೆರೆ]], [[ಬಿಜಾಪುರ]], [[ಬಳ್ಳಾರಿ]], ಗದಗ, ರಾಯಚೂರು, [[ಮೈಸೂರು]], [[ಹೊಸಪೇಟೆ]], ಬೆಳಗಾವಿಗಳಲ್ಲಿ ಮರುಪ್ರಸಾರ ಕೇಂದ್ರಗಳನ್ನು ಆರಂಭಿಸಲಾಯಿತು. ಮುಂದಿನ ವರ್ಷಗಳಲ್ಲಿ [[ಹಾಸನ]], ತಿಪಟೂರು, [[ಕೊಡಗು]], ಶಿವಮೊಗ್ಗ ನಗರಗಳಿಗೂ ಮರುಪ್ರಸಾರ ಕೇಂದ್ರಗಳ ಭಾಗ್ಯ ಲಭಿಸಿತು. 1994ರ ಸ್ವಾತಂತ್ರ್ಯ ದಿನದಿಂದ ಕರ್ನಾಟಕ ಪ್ರಾದೇಶಿಕ ಪ್ರಸಾರ ಸೇವೆ ಪ್ರಾರಂಭವಾಯಿತು. ಇದರಿಂದಾಗಿ ಸಂಪೂರ್ಣ ಕನ್ನಡ ಕಾರ್ಯಗಳು ಬಿತ್ತರಗೊಳ್ಳುವಂತಾಯಿತು.
 
== ದೂರದರ್ಶನ ತಂತ್ರಜ್ಞಾನ - ಪ್ರಸಾರ ವ್ಯವಸ್ಥೆಗಳು ==
 
==== ಟೆರೆಸ್ಟ್ರಿಯಲ್ ದೂರದರ್ಶನ ====
ಈ ರೀತಿಯ ಪ್ರಸಾರದಲ್ಲಿ, ದೂರದರ್ಶನ ಕೇಂದ್ರಗಳು ಸರ್ಕಾರಗಳು ನಿಯೋಜಿಸಿದ ಆವರ್ತನ ಬ್ಯಾಂಡುಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸರಿಸುತ್ತವೆ. ದೂರದರ್ಶನದ ವೀಕ್ಷಕರು ಆಂಟೆನ್ನಾವನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಪ್ರಸಾರ ಕೇಂದ್ರದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.<ref>https://en.wikipedia.org/wiki/Television</ref>
 
==== ಕೇಬಲ್ ದೂರದರ್ಶನ ====
ಈ ರೀತಿಯ ಪ್ರಸಾರದಲ್ಲಿ, ಕಾರ್ಯಕ್ರಮಗಳನ್ನು ಕೋಆಕ್ಸಿಅಲ್ ಕೇಬಲ್ ಅಥವಾ ಫೈಬರ್ ಆಪ್ಟಿಕ್ ಕೇಬಲ್ ಮುಖಾಂತರ ಪ್ರಸರಿಸೂಲಾಗುತ್ತದೆ. ಮೊದಲು ಅನಲಾಗ್ ಮಾದರಿಯಲ್ಲಿ ಸಂದೇಶಗಳನ್ನು ಕೇಬಲ್ ಮುಖಾಂತರ ರವಾನಿಸಲಾಗುತ್ತಿತ್ತು. 2000 ನೇ ಇಸವಿಯ ನಂತರ ಕ್ರಮೇಣ ಡಿಜಿಟಲ್ ಮಾದರಿಯ ಸಂದೇಶಗಳು ಕೇಬಲ್ಲ್ಲಿನ ಮುಖಾಂತರ ದೂರದರ್ಶನ ಪೆಟ್ಟಿಗೆಗೆ ರವಾನಿಸಲು ಶುರುವಾಯಿತು.
 
==== ಸ್ಯಾಟಲೈಟ್ ದೂರದರ್ಶನ ====
ಅಂತರಿಕ್ಷದಲ್ಲಿ ದೂರದರ್ಶನ, ರೇಡಿಯೋ, ಅಂತರ್ಜಾಲ ಪ್ರಸಾರಣಕ್ಕೆಂದೇ ಹಲವು ಕಮ್ಯುನಿಕೇಷನ್ ಸ್ಯಾಟಲೈಟ್ ಗಳು ಇವೆ. ಈ ಸ್ಯಾಟಲೈಟ್ ಗಳನ್ನು ಉಪಯೋಗಿಸಿ ದೂರದರ್ಶನ ಪ್ರಸರಣ ಮಾಡುವುದನ್ನು ಸ್ಯಾಟಲೈಟ್ ದೂರದರ್ಶನ ಎಂದು ಕರೆಯುತ್ತಾರೆ. ಉದಾಹರಣೆಗೆ - DTH ( ಡೈರೆಕ್ಟ್ ಟು ಹೋಂ ). ಇಂತಹ ವ್ಯವಸ್ಥೆಯಲ್ಲಿ, ಒಂದು ಚಿಕ್ಕದಾದ ಆಂಟೆನಾ ( ಡಿಶ್ ಆಂಟೆನಾ ) ದೂರದರ್ಶನದ ಪ್ರಸರಣ ಸಂದೇಶಗಳನ್ನು ಸ್ವೀಕರಿಸಿ, ದೂರದರ್ಶನದ ಕಾರ್ಯಕ್ರಮಗಳನ್ನು ಪ್ರಸರಿಸುತ್ತದೆ.
 
==== ಅಂತರ್ಜಾಲ ದೂರದರ್ಶನ ====
ಹಿಂದಿನಿಂದ ಉಪಯೋಗಿಸುತ್ತಿರುವ ಪದ್ಧತಿಗಳಾದ ಟೆರ್ರೆಸ್ಟ್ರಿಯಲ್, ಕೇಬಲ್, ಸ್ಯಾಟಲೈಟ್ ದೂರದರ್ಶನಗಳಿಗೆ ವಿಭಿನ್ನವಾಗಿ, ಅಂತರ್ಜಾಲ ದೂರದರ್ಶನ ಇತ್ತೀಚಿನ ದಿನಗಳಲ್ಲಿ ಬಂದಿದೆ. ದೂರದರ್ಶನದ ಕಾರ್ಯಕ್ರಮಗಳನ್ನು ಲೈವ್ ಆಗಿ ಅಂತರ್ಜಾಲದ ಮೂಲಕ ವೀಕ್ಷಕರಿಗೆ ತಲುಪಿಸಲಾಗುತ್ತದೆ.
 
== ದೂರದರ್ಶನ ತಂತ್ರಜ್ಞಾನ - ದೂರದರ್ಶನ ಉಪಕರಣಗಳು ==
 
==== CRT ( ಕ್ಯಾಥೋಡೆ ರೇ ಟ್ಯೂಬ್ ) ದೂರದರ್ಶನ ====
ಇದು ಅತಿ ಮೊದಲ ದೂರದರ್ಶನ ಉಪಕರಣ. ಈ ರೀತಿಯ ದೂರದರ್ಶನ ಉಪಕರಣದಲ್ಲಿ, ಒಂದು ವ್ಯಾಕ್ಯುಮ್ ಟ್ಯೂಬ್ ನಲ್ಲಿ, ಒಂದು ಅಥವಾ ಅದಕ್ಕಿಂತ ಅಧಿಕ ಎಲೆಕ್ಟ್ರಾನ್ ಗನ್ ಗಳು ( ಎಲೆಕ್ಟ್ರಾನನ್ನು ಉತ್ಪತ್ತಿ ಮಾಡಲು ) ಇರುತ್ತವೆ. ಹಾಗು ಒಂದು ಪ್ರತಿದೀಪಕ ಪರದೆ ಚಿತ್ರವನ್ನು ನೋಡಲು ಇರುತ್ತದೆ. ಸುರಕ್ಷತೆಯ ದೃಷ್ಟಿಯಿಂದ ದೂರದರ್ಶನ ಉಪಕರಣದ ಮುಂದಿನ ಭಾಗವನ್ನು ದಪ್ಪದಾದ ಸೀಸದ ಗಾಜಿನಿಂದ ಮಾಡಲಾಗುತ್ತದೆ. ಇದು ಗಟ್ಟಿಯಾಗಿರುವುದಲ್ಲದೆ, ಕ್ಪ-ಕಿರಣಗಳಿಂದ ಭದ್ರತೆಯನ್ನು ಒದಗಿಸುತ್ತದೆ.
 
==== ಪ್ಲಾಸ್ಮಾ ದೂರದರ್ಶನ ====
ಈ ದೂರದರ್ಶನ ಉಪಕರಣವು ಸಪಾಟಾಗಿರುತ್ತದೆ. ಇದರಲ್ಲಿ ಸಣ್ಣ ಸಣ್ಣ ಕೋಶಗಳಲ್ಲಿ ಪ್ಲಾಸ್ಮಾ - ವಿದ್ಯುತ್ ಅಯಾನೀಕರಿಸಿದ ಅನಿಲವನ್ನು - ಉಪಯೋಗಿಸುತ್ತಾರೆ. ಇದು ಸ್ವಲ್ಪ ವರ್ಷಗಳ ಮಟ್ಟಿಗೆ ಚಾಲ್ತಿಯಲ್ಲಿತ್ತಾದರೂ, ಈಗ ಈ ಉಪಕರಣವನ್ನು ಯಾರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ.
 
==== LCD ದೂರದರ್ಶನ ====
LCD ದೂರದರ್ಶನವು ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ತಂತ್ರಜ್ಞಾನವನ್ನು ಉಪಯೋಗಿಸುತ್ತದೆ. ಈ ಉಪಕರಣವು CRT ಉಪಕರಣಕ್ಕಿಂತ ತೆಳ್ಳಗಿದ್ದು, CRT ಗಿಂತ ಹೆಚ್ಚಿನ ಪ್ರದರ್ಶಕ ಗಾತ್ರದಲ್ಲಿ ಲಭ್ಯವಿರುತ್ತದೆ. ಈ ಉಪಕರಣದಲ್ಲಿ, ಹಿಂಬದಿಯಿಂದ ಬೆಳಕಿನ ಮೂಲವಿರುತ್ತದೆ. LCD ದೂರದರ್ಶನದಲ್ಲಿ, ಈ ಬೆಳಕಿನ ಮೂಲ ಪ್ರತಿದೀಪಕ ದೀಪಗಳಾಗಿರುತ್ತವೆ. ಈ ರೀತಿಯ ಉಪಕರಣಗಳು ಜನಪ್ರಿಯತೆ ಪಡೆದಿದ್ದವು. ಆದರೆ ಈ ನಡುವೆ LED ದೂರದರ್ಶನ ಉಪಕರಣಗಳು ಹೆಚ್ಚಿನ ಬಳಕೆಯಲ್ಲಿವೆ. LCD ಉಪಕರಣಗಳ ತಯಾರಿಕೆಯನ್ನು ಬಹಳಷ್ಟು ದೂರದರ್ಶನ ಉತ್ಪಾದಕರು ನಿಲ್ಲಿಸಿದ್ದಾರೆ.
 
==== LED ದೂರದರ್ಶನ ====
LED ದೂರದರ್ಶನದಲ್ಲಿಯೂ ಸಹ LCD ( ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ) ತಂತ್ರಜ್ಞಾನವನ್ನು ಉಪಯೋಗಿಸುತ್ತಾರೆ. ಆದರೆ ವ್ಯತ್ಯಾಸವೇನೆಂದರೆ, ಹಿಂಬದಿಯ ಬೆಳಕನ್ನು LED ದೀಪಗಳು ಪೂರೈಸುತ್ತವೆ. ಇದು ಸದ್ಯದ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದ್ದು, ಬಹುತೇಕ ದೂರದರ್ಶನ ಉಪಕರಣಗಳ ಹಿಂದಿನ ತಂತ್ರಜ್ಞಾನ ಇದೇ ಆಗಿದೆ.<ref>http://guide/blogs/television/how-does-led-tv-work.html</ref>
 
==== OLED ದೂರದರ್ಶನ ====
OLED  - ಆರ್ಗಾನಿಕ್ ಲೈಟ್ ಎಮಿಟಿಂಗ್ ಡಯೋಡ್. ಈ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಬಂದಿದ್ದು, ಇದರಲ್ಲಿ ಆರ್ಗಾನಿಕ್ ಕಾಂಪೌಂಡ್ ನಿಂದ ಮಾಡಿದ ಎಲೆಕ್ಟ್ರೋಲುಮಿನಿಸ್ಸೆಂಟ್ ಪದರವಿರುತ್ತದೆ. ಇದು ವಿದ್ಯುತ್ತಿಗೆ ಅನುಸಾರವಾಗಿ ಬೆಳಕನ್ನು ಹೊರಸೂಸುತ್ತದೆ. ಈ ತಂತ್ರಜ್ಞಾನದಲ್ಲಿ ಹಿನ್ನೆಲೆಯ ಬೆಳಕಿನ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಈ ಉಪಕರಣಗಳಲ್ಲಿ, ಹೆಚ್ಚಿನ ಕಪ್ಪಿನ ಮಟ್ಟ ದೊರೆಯುತ್ತದೆ. ಇದರಿಂದ ಈ ಉಪರಕಣಗಳು ಹೆಚ್ಚಿನ ವ್ಯತಿರಿಕ್ತ ಅನುಪಾತವನ್ನು ( ಕಾಂಟ್ರಾಸ್ಟ್ ರೇಶಿಯೋ ) ಹೊಂದಬಹುದು. ಈ ಕಾರಣ, ಇದರ ಚಿತ್ರದ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ.
 
==== ದೂರದರ್ಶನ ಉಪಕರಣಗಳ ಪ್ರಮುಖ ತಯಾರಕರು ====
ಜಗತ್ತಿನಲ್ಲಿ ದೂರದರ್ಶನ ಉಪಕರಣದ ಹಲವಾರು ತಯಾರಾಕರಿದ್ದು, ಇದರಲ್ಲಿ ಈ ಕೆಳಕಂಡ ತಯಾರಕರು ಪ್ರಮುಖರಾಗಿರುತ್ತಾರೆ. <ref>https://en.wikipedia.org/wiki/Television</ref>
 
೧. ಸ್ಯಾಂಸಂಗ್
 
೨. LG ಎಲೆಕ್ಟ್ರಾನಿಕ್ಸ್
 
೩. TCL
 
೪. ಹೈಸೆನ್ಸ್
 
೫. ಸೋನಿ
 
೬. ಶಾರ್ಪ್
 
೭. ಸ್ಕೈ ವರ್ತ್
 
೮. ಹೈರ್
 
೯. ಪ್ಯಾನಸೋನಿಕ್
 
==ಉಲ್ಲೇಖ==
 
"https://kn.wikipedia.org/wiki/ದೂರದರ್ಶನ" ಇಂದ ಪಡೆಯಲ್ಪಟ್ಟಿದೆ