ಮಹಾವೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೭ ನೇ ಸಾಲು:
 
==ಮಹಾವೀರರು==
ಕಡೆಯ ತೀರ್ಥಂಕರರಾದ ಭಗವನ್ ಮಹಾವೀರರನ್ನು ಕೆಲವು ಪಂಡಿತರು ಭಗವಾನ್ ಬುದ್ಧನ ಸಮಕಾಲೀನನೆಂದರೆ, ಮತ್ತೆ ಕೆಲವರು ಸ್ವಲ್ಪ ಹಿಂದಿನವರು ಎನ್ನುತ್ತಾರೆ. ಭಗವಾನ್ ಬುದ್ಧ ಮತ್ತು ಭಗವಾನ್ ಮಹಾವೀರರ ವಂಶಾವಳಿ ಮುಂತಾದ ವೈಯಕ್ತಿಕ ವಿವರಗಳಲ್ಲಿ ಬರುವ ಹೆಸರುಗಳಲ್ಲಿ ಸ್ವಲ್ಪ ಸಾದೃಶ್ಯವಿದೆ. ಬುದ್ಧರೊಡನೆ ಮಹಾವೀರರ ಭೇಟಿಯಾಗಿತ್ತು ಎಂಬ ಒಂದು ಐತಿಹ್ಯ ಪಚಲಿತವಿದೆ. ಅದೇನೇ ಇರಲಿ, ಮಹಾವೀರರು ತ್ಯಾಗಮೂಲವಾದ ಪರಂಪರಾಗತ ಸಂಪ್ರದಾಯವೊಂದಕ್ಕೆ ಒಂದು ಸುಸ್ಪಷ್ಟ, ಸುಂದರ ರೂಪ ನೀಡಿದರು ಎನ್ನುವುದು ನಿರ್ವಿವಾದ. ಇದರ ಪರಿಣಾಮವೇ ‘ಜೈನಧರ್ಮ’. ಮಹಾವೀರರು ‘ಅರ್ಧಮಾಗಧೀ’ ಭಾಷೆಯಲ್ಲಿ ಉಪದೇಶಿಸಿದರು. ತಮ್ಮ ಜೀವನದ ಪ್ರಥಮಭಾಗವನ್ನು ಅತ್ಯಂತ ಕಠೋರ ತಪಸ್ಸಿನಲ್ಲಿ ಕಳೆದು, ಕಡೆಯ ಮೂವತ್ತು ವರ್ಷಗಳನ್ನು ಜೀವಿಗಳ ಉದ್ಧಾರಕ್ಕಾಗಿ ಮುಡಿಪಿಟ್ಟರು. ಶ್ರದ್ಧಾಸಂಪನ್ನರೂ ಸಾಧನಾಪ್ರಿಯರೂ ಆದ ಅನೇಕ ಶಿಷ್ಯರ ಜೀವನಗಳನ್ನು ಕಮಲದ ಹೂವಿನಂತೆ ಅರಳಿಸಿದರು. ಈ ಶಿಷ್ಯರುಗಳಿಗೆ ‘ಗಣಧರ’ರೆಂದು ಹೆಸರು. ಮಹಾವೀರರ ಉಪದೇಶಗಳು ಮತ್ತೆಲ್ಲಾ ಪ್ರವಾದಿಗಳ ಉಪದೇಶಗಳಂತೆಯೇ ಸಹಜಗಮ್ಯ, ಸರಳ ಮತ್ತು ಪರಿಪೂರ್ಣ.ಮಹಾವೀರರ ಜನನ ಕ್ರಿ. ಪೂ ೮ನೇ ಶತಮಾನ. ೨೩ನೇ ತೀರ್ಥಂಕರರು ನಿರ್ವಾಣ ಹೊಂದಿ ೨೫೦ ವರ್ಷಗಳಾಗಿದ್ದವು. ಮಹಾವೀರರು ಈಗಿನ ಬಿಹಾರದ ಬಸಾಢ ಎಂಬ ನಗರದಲ್ಲಿ (ಅದಕ್ಕೆ ವೈಶಾಲಿ ಎಂತಲೂ ಹೆಸರಿತ್ತು) ಆ ನಗರದ ದೊರೆ ಸಿದ್ಧಾರ್ಥ ಹಾಗು ತ್ರಿಶಲಾ ದೇವಿಯವರಿಗೆ ಮಗುವಾಗಿ ಜನಿಸಿದರು. ವರ್ಧಮಾನ ಎಂದು ನಾಮಕರಣ ಮಾಡಲಾಯ್ತು. ಓದಿನಲ್ಲಿ ಮುಂದಿದ್ದ ಇವನಿಗೆ ಗುರುಗಳು 'ಸನ್ಮತಿ' ಎಂದು ಕರೆಯುತ್ತಿದ್ದರು. ರಾಜನ ಮಗನಾಗಿದ್ದರೂ ವೈಭೋಗದಲ್ಲಿ ಆಸಕ್ತಿ ವಹಿಸದೇ ಆಗಲೇ ಜೈನ ಧರ್ಮದ ಬಗ್ಗೆ ತಿಳಿದುಕೊಳ್ಳಲು ತೊಡಗಿದರು. ಸಾಂಸಾರಿಕ ಬಂಧನಗಳಲ್ಲಿ ಆಸಕ್ತಿ ವಹಿಸದೇ ೩೦ ನೇ ವಹಸ್ಸಿನವರೆಗೆವಯಸ್ಸಿನವರೆಗೆ ದೇಶ ಸಂಚಾರ ಮಾಡಿದರು. ೧೨ ವರ್ಷ ತಪಸ್ಸಿನ ನಂತರ ಜ್ಞಾನೋದಯ ಪಡೆದರು. ನಂತರ ೨೪ನೇ ತೀರ್ಥಂಕರರಾದರು. ಅವರು ಅಂದಿನ ಆಡು ಭಾಷೆ ಪ್ರಾಕೃತದಲ್ಲಿ ಬೋಧಿಸಿದರು. ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗು ಅಪರಿಗ್ರಹ ಎಂಬ ಪಂಚಶಿಲ ತತ್ತ್ವಗಳನ್ನು ಬೋಧಿಸಿದರು. ಇವರ ಮೊದಲೇ ಜೈನ ಧರ್ಮ ಇದ್ದಿತ್ತಾದರೂ ಇವರ ಬೋಧನೆಗಳ ನಂತರ ಹೆಚ್ಚು ಹೆಚ್ಚು ಜನರಿಗೆ ಹತ್ತಿರವಾಯ್ತು.ತಮ್ಮ ೭೨ನೇ ವಯಸ್ಸಿನಲ್ಲಿ ಬಿಹಾರದ ಪಾವಾಪುರಿ ಎಂಬಲ್ಲಿ ನಿರ್ವಾಣ ಹೊಂದಿದರು.
 
==ಸುಷಮಾ-ಸುಷಮಾ==
"https://kn.wikipedia.org/wiki/ಮಹಾವೀರ" ಇಂದ ಪಡೆಯಲ್ಪಟ್ಟಿದೆ