ಜಯಚಾಮರಾಜ ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೩ ನೇ ಸಾಲು:
 
== ಸಾಹಿತ್ಯ ಸಾಧನೆ ==
ಅರಮನೆಯ ನುರಿತ ಪಂಡಿತರಲ್ಲಿ ಇವರು ಸಂಸ್ಕøತಸಂಸ್ಕೃತ ಭಾಷೆಯನ್ನೂ ತತ್ತ್ವ ಗ್ರಂಥಗಳನ್ನೂ ಆಳವಾಗಿ ಅಭ್ಯಾಸ ಮಾಡಿದರು. ಹಠಯೋಗವನ್ನೂ ಸ್ವಲ್ಪ ಅಭ್ಯಾಸ ಮಾಡಿದ್ದುಂಟು. ಅನೇಕ ಸಂಸ್ಕøತಸಂಸ್ಕೃತ ಗ್ರಂಥಗಳನ್ನು ಭಾಷಾಂತರಿಸಿದ್ದಾರೆ. ಅಲ್ಲದೇ ಇವರು ರಚಿಸಿದ ಕೃತಿಗಳಲ್ಲಿ ಮುಖ್ಯವಾದವು ; ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್ (1956), ದಿ ಗೀತಾ ಅಂಡ್ ಇಂಡಿಯಾನ್ ಕಲ್ಚರ್, ಭಾರತೀಯ ಸೌಂದರ್ಯಶಾಸ್ತ್ರದ ಹ¯ವುಹಲವು ಮುಖಗಳು, ದಿ ರಿಲಿಜನ್ ಅಂಡ್ ದಿ ಮ್ಯಾನ್, ಆತ್ಮ ಮತ್ತು ಬ್ರಹ್ಮ.
 
=== ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್ ===
ಇವರ ಆಳವಾದ ತತ್ತ್ವಶಾಸ್ತ್ರಧ್ಯಯನದ ಫಲವೇ ಆಂಗ್ಲ ಭಾಷೆಯಲ್ಲಿ ರಚಿತವಾಗಿರುವ ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್, ಇದಕ್ಕೆ ಭಾರತದ ರಾಷ್ಟ್ರಪತಿಗಳಾಗಿದ್ದ ಎಸ್. ರಾಧಾಕೃಷ್ಣನ್ ಅವರು ಮುನ್ನುಡಿ ಬರೆದಿದ್ದಾರೆ. ಇದು ಇವರು ರಚಿಸಿರುವ ಮೇಲ್ಮಟದಮೇಲ್ಮಟ್ಟದ ಗ್ರಂಥವೆನಿಸಿದೆ.
 
ದತ್ತಾತ್ರೇಯ ತತ್ತ್ವದ ಸ್ವರೂಪವನ್ನು ಕುರಿತು ಗ್ರಂಥಕರ್ತರ ಕಲ್ಪನೆ ಹೀಗಿದೆ:
೬೨ ನೇ ಸಾಲು:
ದತ್ತಾತ್ರೇಯ ಮಾನವರ ಆತ್ಮಗಳ ಬೇಟೆಗಾರ. ಆತನ ಬಳಿಯಿರುವ ನಾಲ್ಕು ನಾಯಿಗಳೆಂದರೆ ನಾಲ್ಕು ವೇದಗಳು. ಇವು ಸತ್ಯವನ್ನು ರಕ್ಷಿಸುತ್ತವೆ. ದತ್ತಾತ್ರೇಯನ ಕವಿ ಬಣ್ಣದ ಉಡುಪು ಸಂನ್ಯಾಸದ ಸಂಕೇತ ; ತ್ಯಾಗ ಮತ್ತು ನಿರ್ಲಿಪ್ತತೆಗಳಿಲ್ಲದೆ. ಪರಮ ಸತ್ಯದ ಸಾಕ್ಷಾತ್ಕಾರ ಅಸಂಭವ ಎಂಬುದನ್ನು ಇದು ಸೂಚಿಸುತ್ತದೆ.
 
ಏಕ ಏವ ತ್ರಿಧಾ ಸ್ಮøತ: ಎಂಬತೆಎಂಬಂತೆ ದತ್ತಾತ್ರೇಯನ ಶರೀರ ಒಂದು, ಮುಖಗಳು ಮೂರು, ಇವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತವೆ. ಕೈಗಳು ಆರು, ಬಲಗಡೆಯ ಮೂರು ಕೈಗಳಲ್ಲಿ ತ್ರಿಶೂಲ, ಜಪಮಾಲೆ ಮತ್ತು ಕಮಲಗಳೂ ಎಡಗಡೆಯ ಮೂರು ಕೈಗಳಲ್ಲಿ ಚಕ್ರ, ಶಂಖ, ಭಿಕ್ಷಾಪಾತ್ರೆಗಳೂ ಇವೆ. ದತ್ತಾತ್ರೇಯ ಒಂದೇ ಸತ್ಯ ಸ್ವರೂಪದ ಮೂರು ಕ್ರಿಯೆಗಳ (ಸೃಷ್ಟಿ, ಸ್ಥಿತಿ;, ಲಯ) ಸಂಕೇತ, ಕೈಗಳಲ್ಲಿನ ಶಂಖಚಕ್ರಗಳು ವಿಷ್ಣುವನ್ನೂ ತ್ರಿಶೂಲ ಭಿಕ್ಷಾಪಾತ್ರೆಗಳು ಶಿವನನ್ನೂ ಕಮಲ ಜಪಮಾಲೆಗಳು ಬ್ರಹ್ಮನನ್ನೂ ಸಂಕೇತಿಸುತ್ತವೆ. ಈ ತ್ರಿಮೂರ್ತಿಗಳ ಸಂಯೋಜಿತ ರೂಪವೇ ಭಾರತೀಯ ತತ್ತ್ವಶಾಸ್ತ್ರದ ಮೂರ್ತ ಸ್ವರೂಪ. ಇದೇ ದತ್ತಾತ್ರೇಯ ತತ್ತ್ವದ ಗುರಿ.
 
ಈ ಗ್ರಂಥದ ಐದು ಪ್ರಕರಣಗಳಲ್ಲಿ ಕ್ರಮವಾಗಿ ಮಾನವನಿಗೆ ಈಶ್ವರಾನುಗ್ರಹದ ಅಗತ್ಯತೆ, ದತ್ತಾತ್ರೇಯನ ಪರತತ್ತ್ವ ಸ್ವರೂಪ, ದತ್ತಾತ್ತೇಯ ಉಪೇಯ ಮತ್ತು ಉಪಾಯ ಎರಡೂ ಆಗಿದ್ದಾನೆ. ಎಂಬುದು, ದತ್ತಾ ದ್ವೈತಸ್ವರೂಪ ಮತ್ತು ಜೀವನ್ಮುಕ್ತ ಗೀತೆ ಇವು ಬರುತ್ತವೆ. ಅನಂತರ ಅವಧೂತ ಗೀತೆಗಳ ಭಾಷಾಂತರ, ಕಡೆಯಲ್ಲಿ ಇದಕ್ಕೆ ಹಿನ್ನೆಲೆಯಾಗಿ ದತ್ತಾದ್ವ್ಯೆತದ ತುಲನಾತ್ಮಕ ವಿಮರ್ಶೆ ಬಂದಿವೆ.
೬೯ ನೇ ಸಾಲು:
ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್ ಎಂಬುದು ಈ ದಿಶೆಯಲ್ಲಿ ಮತ್ತೊಂದು ಅವಲೋಕನೀಯ ಗ್ರಂಥ. ಇದು ಧರ್ಮ ಮತ್ತು ಗೀತೆ ಹಾಗೂ ಭಗವದ್ಗೀತೆಯಲ್ಲಿನ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎಂಬ ಕಲ್ಪನೆಗಳ ಸ್ವರೂಪ ಎಂಬ ಎರಡು ಪ್ರಬಂಧಗಳ ಸಂಕಲನ.
 
ಒಡೆಯರ ಅಭಿಪ್ರಾಯದಂತೆ ಇಂದಿನ ಜಗತ್ತು ಐಹಿಕಕ್ಕೆ ಹೆಚ್ಚು ಬೆಲೆ ಕೊಡುತ್ತದೆ. ಇದರಿಂದ ಶಾಂತಿ ಸಮಾಧಾನಗಳು ಮರೆಯಾಗಿವೆ. ಗೊಂದಲ, ಅಶಾಂತಿ ತಾಂಡವವಾಡುತ್ತಿವೆ. ಇಂಥ ಸ್ಥಿತಿಯಲ್ಲಿ ಜಗತ್ತಿಗೆ ಶಾಂತಿಯ ಬೆಳಕನ್ನು ನೀಡಬಲ್ಲುದು ಭಾರತೀಯ ಸಂಸ್ಕøತಿಸಂಸ್ಕೃತಿ ಮಾತ್ರ. ಎಲ್ಲ ಪ್ರಾಪಂಚಿಕ ಘಟನೆಗಳ ಹಿಂದೆ ಭಗವಂತನ ಅಭಯಹಸ್ತವೊಂದಿದೆ. ಅದು ನಿರ್ದೇಶನ ಮತ್ತು ಸಮಾಧಾನ ರೂಪದ್ದು. ಜಗತ್ತಿಗೆ ನಂಬಿಕೆ ನೀಡಿ ಧ್ಯಾನ ಮತ್ತು ಧರ್ಮದ ಅಖಂಡ ನಂಬಿಕೆಯ ತತ್ತ್ವಗಳ ಮಹತ್ವಪೂರ್ಣ ವಿಚಾರಧಾರೆಯನ್ನು ಹರಿಸಿದ್ದು ಭಾರತ. ಜಗತ್ತನ್ನು ವಿಜ್ಞಾನ ವಿಂಗಡಿಸಿ, ವಿಶ್ಲೇಷಿಸಿ, ಅಣು-ಪರಮಾಣು ಎಂದು ವಿಭಾಗಿಸಿ ನೋಡುತ್ತದೆ ; ಮಾನವನನ್ನು ಬೃಹತ್ ವಿಶ್ವದ ಹೊರಗೆ ನಿಲ್ಲಿಸಿ ನೋಡಲು ಯತ್ನಿಸುತ್ತದೆ; ಮಾನವನನ್ನು ಬೃಹತ್ ವಿಶ್ವದ ಹೊರಗೆ ನಿಲ್ಲಿಸಿ ನೋಡಲು ಯತ್ನಿಸುತ್ತದೆ. ಆದರೆ ಭಾರತ, ಇಡಿಯ ಸೃಷ್ಟಿಯನ್ನು ಪೂರ್ಣವೊಂದರ ಘಟಕವಾಗಿ ಕಂಡಿದೆ. ಅದೇ ಉಪನಿಷತ್ತಿನ ಪೂರ್ಣಮುದ: ಪೂರ್ಣಮಿದಂ ಎಂಬುದು. ವಿಶ್ವದ ಒಂದೊಂದು ಅಣುವೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪವೆಂದು ತಿಳಿದರೆ ಮಾನವರಲ್ಲಿ ಪರಸ್ಪರ ಘರ್ಷಣೆಗೆ ಅವಕಾಶವಿರದು.
 
ರಾಜಕೀಯ ಆರ್ಥಿಕ, ವೈಜ್ಞಾನಿಕ ಹಾಗೂ ತಾತ್ತ್ವಿಕ ಸಮಸ್ಯೆಗಳಿಂದ ಪರಸ್ಪರ ಸೌಹರ್ದಸೌಹಾರ್ದ ಕಳಚುತ್ತಿರುವ ಈ ಸಮಯದಲ್ಲಿ ಭಾರತೀಯ ವಿಚಾರಧಾರೆ ಎಷ್ಟು ಅಗತ್ಯ ಎಂದು ತೋರಿಸುವುದೇ ಈ ಸಂಕಲನದ ಮುಖ್ಯ ಉದ್ದೇಶ.
 
== ಸಂಗೀತಾಸಕ್ತಿ ==
ಒಡೆಯವರಿಗೆ ಸಂಗೀತವೆಂದರೆ ಪಂಚಪ್ರಾಣ. ಪ್ರತಿನಿತ್ಯ ಅವರು ಶಿವಪೂಜೆಗೆ ಕುಳಿತಾಗ ಸುಮಾರು 4-5 ಗಂಟೆಗಳ ವರೆಗೆ ಅರಮನೆಯ ಸಂಗೀತ ವಿದ್ವಾಂಸರು ಸರದಿಯ ಮೇಲೆ ಹಾಡುತ್ತಿದ್ದರು. ಈ ಕಾರ್ಯಕ್ರಮ ಒಂದೊಂದು ದಿನ ಬೆಳಗಿನ ಜಾವ 3-4 ಗಂಟೆಯಿಂದಲೇ ಪ್ರಾರಂಭವಾಗುತ್ತಿದ್ದುದು ಅಪರೂಪವಲ್ಲ. ಅನೇಕ ವಿದ್ವಾಂಸರನ್ನಿವರು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿ ಗೌರವಿಸಿದುದೂ ಉಂಟು. ಸಂಸ್ಕøತದಲ್ಲಿಸಂಸ್ಕೃತದಲ್ಲಿ ಇವರು ರಚಿಸಿರುವ ಸಂಗೀತ ಕೃತಿಗಳು ಸುಮಾರು 94 ಎನ್ನಲಾಗಿದೆ. ಇವುಗಳಲ್ಲಿ ಅನೇಕವು ಇನ್ನೂ ಅಚ್ಚಾಗಿಲ್ಲ. ಆದರೆ ಅನೇಕವನ್ನು ವಿದ್ವಾಂಸರು ಬಳಸಿಕೊಂಡು ಹಾಡುತ್ತಿದ್ದಾರೆ. ಪ್ರಾಯಃ ದೀಕ್ಷಿತ ಸಂಪ್ರದಾಯದವೆಂದು ಹೇಳಲಾಗಿರುವ ಇವರ ಕೀರ್ತನೆಗಳಲ್ಲಿ ಅಕ್ಷರಕ್ಕೆ ಹೆಚ್ಚು ಪ್ರಾಧಾನ್ಯ. ವಿದ್ಯಾರಾಜಯೋಗೀಂದ್ರ ಮುಂತಾದ ಸಂಕೇತಗಳು ಇವರ ಕೀರ್ತನೆಗಳ ಅಂಕಿತಗಳು. ಅವುಗಳಲ್ಲಿ ಕೆಲವು ಹೀಗಿವೆ :
# ಶ್ರೀಮಹಾಗಣಪತಿಂ ಭಜೇ ಹಂ(ಅಠಾಣ, ಆದಿತಾಳ)
# ಲಂಬೋದರ ಪಾಹಿ ಮಾಂ (ನಾರಾಯಣ ಗೌಳ, ಮಿಶ್ರಜಾತಿ, ತ್ರಿಪುಟ ತಾಳ)
"https://kn.wikipedia.org/wiki/ಜಯಚಾಮರಾಜ_ಒಡೆಯರ್" ಇಂದ ಪಡೆಯಲ್ಪಟ್ಟಿದೆ