ಜಯಚಾಮರಾಜ ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೦ ನೇ ಸಾಲು:
ಹುಟ್ಟಿದ್ದು 1919ರ ಜುಲೈ 18ರಂದು. ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ತಾಯಿ ಕೆಂಪು ಚಲುವಾಜಮ್ಮಣ್ಣಿ :
 
ಆಧ್ಯಾತ್ಮಿಕ ಆಸಕ್ತಿಯನ್ನೂ ಸಂಗೀತದಲ್ಲಿ ಅಭಿರುಚಿಯನ್ನೂ ಉಂಟು ಮಾಡಿದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ದೊಡ್ಡಪ್ಪ. ಪ್ರಾರಂಭಿಕ ಶಿಕ್ಷಣ ನಡೆದದ್ದು ರಾಜಮನೆತನದ ವಿಶೇಷ ಶಾಲೆಯಲ್ಲಿ. ತಮಗೆ ಸಂತಾನವಿಲ್ಲದಿದ್ದುದರಿಂದ ತಮ್ಮ ಕಿರಿಯ ಸಹೋದರರಾದ ನರಸಿಂಹರಾಜ ಒಡೆಯರವರ ಪುತ್ರರಾದ ಇವರನ್ನು ಪಟ್ಟಕ್ಕೇರಿಸುವ ಸಲುವಾಗಿ ಕೃಷ್ಣøರಾಜಕೃಷ್ಣರಾಜ ಒಡೆಯರವರು ಇವರಿಗೆ ಇನ್ನೂ 15-16 ವರ್ಷ ವಯಸ್ಸಿದ್ದಾಗಲೇ ಮೈಸೂರಿನ ಲೋಕರಂಜನ ಮಹಲ್ ನಲ್ಲಿ ಒಂದು ವಿಶೇಷ ಶಾಲೆ ಏರ್ಪಡಿಸಿ ಶಿಕ್ಷಣ ಕೊಡಿಸಿದರು. ಮುಂದೆ ಇವರು ತಮ್ಮ 19ನೆಯ ವಯಸ್ಸಿನಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿ ಪಡೆದರು (1938). ಕನ್ನಡ-ಇಂಗ್ಲಿಷ್ ಭಾಷೆಗಳ ಜೊತೆಗೆ ರಾಜನೀತಿ ಮತ್ತು ಅರ್ಥಶಾಸ್ತ್ರಗಳನ್ನು ಅಭ್ಯಸಿಸಿದರು. ಉತ್ತಮ ಪಾಂಡಿತ್ಯಕ್ಕೆ ಮೀಸಲಾದ ಐದು ಬಹುಮಾನಗಳು ಸುವರ್ಣಪದಕಗಳೊಂದಿಗೆ ಇವರಿಗೆ ಲಬಿಸಿದುವು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಿಸ್ಟಾರಿಕಲ್ ಅಸೋಸಿಯೇಷನ್ನಿನ ಗೌರವಾಧ್ಯಕ್ಷರೂ ಆಗಿದ್ದರು.
 
ಬನಾರಸ್ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರ್ ಆಫ್ ಲಾಸ್ ಪದವಿಯನ್ನೂ (1942) ಅಣ್ಣಾಮಲೈ ವಿಶ್ವವಿದ್ಯಾಲಯ ಡಿ.ಲಿಟ್. ಪದವಿಯನ್ನೂ (1955) ನೀಡಿ ಗೌರವಿಸಿದುವು. ಇದಕ್ಕೂ ಮುನ್ನ (1937) ಲಂಡನಿನ ಗಿಲ್ಡ್ ಹಾಲ್ ಸಂಗೀತಶಾಲೆಯ ಲೈಸೆನಿಯೇಟ್ ಪದವೀಧರರಾಗಿದ್ದ ಇವರು ಲಂಡನಿನ ಟ್ರಿನಿಟಿ ಸಂಗೀತ ಕಾಲೇಜಿನ ಗೌರವ ಫೆಲೊ ಆದದ್ದು 1945ರಲ್ಲಿ. ಇವರ ಪಾಂಡಿತ್ಯ ಮತ್ತು ಪ್ರತಿಭೆಗಳನ್ನು ಮನಗಂಡು ಆಸ್ಟ್ರೇಲಿಯದ ಕ್ವೀನ್ಸ್ ಲೆಂಡ್ ವಿಶ್ವವಿದ್ಯಾಲಯ ಇವರಿಗೆ ಡಿ.ಲಿಟ್. ಪದವಿ ನೀಡಿ (1936) ಸನ್ಮಾನಿಸಿತು. ಬ್ರಿಟಿಷ್ ಸರ್ಕಾರ ಇವರಿಗೆ 1945ರಲ್ಲಿ ಜಿ.ಸಿ.ಎಸ್.ಐ.ಬಿರುದನ್ನೂ 1946ರಲ್ಲಿ ಜಿ.ಸಿ.ಬಿ.ಬಿರುದನ್ನೂ ನೀಡಿತು.
೪೪ ನೇ ಸಾಲು:
ಇವರು ರಾಜ್ಯಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರ ಮತ್ತು ಆಫ್ರಿಕನ್ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆದರು. ಒಳ್ಳೆಯ ಕುದುರೆ ಸವಾರರು ಟೆನಿಸ್ ಮತ್ತು ರ್ಯಾಕೆಟ್ಸ್ ಆಟವಾಡುವುದರಲ್ಲಿ ನಿಪುಣರೂ ನುರಿತ ಶಿಕಾರಿಯೂ ಆಗಿದ್ದರು. ಓದಿನಂತೆ ಸಂಗೀತದಲ್ಲೂ ಇವರಿಗೆ ಅಮಿತ ಆಸಕ್ತಿ. ಪಿಯಾನೋ ಬಾರಿಸುವುದರಲ್ಲಿ ಒಳ್ಳೆಯ ಪರಿಣತಿ ಪಡೆದಿದ್ದರು. ಪಾಶ್ಚಾತ್ಯ ಸಂಗೀತದಲ್ಲಿ ಇವರಿಗೆ ವಿಶೇಷ ಆಸಕ್ತಿ ಇತ್ತು. ಅದನ್ನು ಕುರಿತಂತೆ ಭಾರತದಲ್ಲೇ ಅತಿ ದೊಡ್ಡದೆನಿಸುವ ಗ್ರಂಥ ಭಂಡಾರವನ್ನಿವರು ತಮ್ಮ ಅರಮನೆಯಲ್ಲಿ ಕೂಡಿಸಿದರು. ವಿಶ್ವದ ಹೆಸರಾಂತ ಸಂಗೀತಗಾರರೊಂದಿಗೆ ಇವರಿಗೆ ಸಂಪರ್ಕವಿತ್ತು. ಖ್ಯಾತ ಆಪೆರಗಳ ಕರ್ತೃವಾದ ಜರ್ಮನಿಯ ರಿಚರ್ಡ್ ವ್ಯಾಗ್ನರ್ (1813-1883), ಪ್ರಸಿದ್ದ ಜರ್ಮನ್ ಸಂಗೀತಗಾರ ಲಡ್ವಿಗ್ ಫಾನ್ ಬೇತೋವನ್ (1770-1827), ಬಾಕ್ ಮನೆತನದ ಸಂಗೀತ ವಿದ್ವಾಂಸರು ಮುಂತಾದವರು ಇವರ ಮೆಚ್ಚಿನ ಸಂಗೀತಗಾರರಾಗಿದ್ದರು.
 
ಭಾರತೀಯ ಸಂಸ್ಕøತಿಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಅನಧಿಕೃತ ರಾಯಭಾರಿಯಾಗಿ ಇವರು ಅನೇಕ ಸಲ ದೇಶ ವಿದೇಶಗಳ ಪ್ರವಾಸ ಕೈಗೊಂಡಿದ್ದರು. ಆಗ ಇವರು ಅಲ್ಲಲ್ಲಿ ಮಾಡಿದ ಭಾಷಣಗಳು ವಿಚಾರಪೂರಿತವಾಗಿವೆ.
 
ವನ್ಯಮೃಗಗಳ ಬಗ್ಗೆ ಇವರಿಗೆ ಆಸಕ್ತಿ ಇತ್ತು. ಭಾರತೀಯ ವನ್ಯಮೃಗಗಳ ಮಂಡಳಿಯ ಅಧ್ಯಕ್ಷರಾಗಿದ್ದುದಲ್ಲದೆ ಮೈಸೂರು ನಗರದಲ್ಲಿನ ತಮ್ಮ ಸ್ವಂತ ಮೃಗಾಲಯವನ್ನು ಸರ್ಕಾರದ ಅಧೀನಕ್ಕೆ ವಹಿಸಿಕೊಟ್ಟು ಅದರ ಅಭಿವೃದ್ದಿಗೆ ಕಾರಣರಾದರು.
೫೦ ನೇ ಸಾಲು:
ಮೈಸೂರು ನಗರದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಚಿತ್ರಶಾಲೆಗಾಗಿ ಇವರು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಕೊಟ್ಟರು. ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂತಾದವುಗಳಿಗಾಗಿ ನಿವೇಶನ ಮತ್ತು ಕಟ್ಟಡಗಳನ್ನು ಉದಾರವಾಗಿ ದಾನ ನೀಡಿದರು. ಇದಲ್ಲದೇ ತಮ್ಮ ಇನ್ನಿತರ ಕಟ್ಟಡ, ನಿವೇಶನಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ದಾನ ಮಾಡಿರುವುದೂ ಉಂಟು.
 
ಮೈಸೂರು ನಗರದಲ್ಲಿ ಇವರು ಆಚರಿಸಿಕೊಂಡು ಬರುತ್ತಿದ್ದ ವೈಭವೋಪೇತ ದಸರಾ ಉತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ತ್ವ ಬಂದಿತ್ತು. ಆಗ ಪ್ರತಿನಿತ್ಯ ಸಂಜೆ ಅರಮನೆಯಲ್ಲಿ ನಡೆಯುತ್ತಿದ್ದ ರಾಜಸಭೆಗಳು, ಮಹರ್ ನವಮಿಯಮಹಾನವಮಿಯ ದಿನದ ಆಯುಧಪೂಜೆಗಳು, ವಿಜಯದಶಮಿಯ ದಿನದ ಜಂಬೂಸವಾರಿ-ಇವೆಲ್ಲವೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಿತ್ತು.
 
== ಸಾಹಿತ್ಯ ಸಾಧನೆ ==
"https://kn.wikipedia.org/wiki/ಜಯಚಾಮರಾಜ_ಒಡೆಯರ್" ಇಂದ ಪಡೆಯಲ್ಪಟ್ಟಿದೆ