ತಪಸ್ಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Jain meditation.jpg|thumb|ತಪಸ್ಸು - ಪ್ರಗತಿಯಲ್ಲಿರುವ ಜೈನ ಧ್ಯಾನ]]
'''ತಪಸ್ಸು''' ಅಂದರೆ ಆಳವಾದ ಧ್ಯಾನ, ಆತ್ಮ ಸಾಕ್ಷಾತ್ಕಾರ ಸಾಧಿಸುವ ಪ್ರಯತ್ನ, ಕೆಲವೊಮ್ಮೆ ಏಕಾಂತತೆ, [[ವಿರಕ್ತ]]ತೆ ಅಥವಾ [[ವೈರಾಗ್ಯ]]ವನ್ನು ಒಳಗೊಂಡಿರುತ್ತದೆ; ಅದನ್ನು ಶಬ್ದ ಮೂಲ ''ತಪ್'' ದಿಂದ ಪಡೆಯಲಾಗಿದೆ. ಸಂದರ್ಭವನ್ನು ಅವಲಂಬಿಸಿ ಇದರರ್ಥ ಬೆಂಕಿ ಅಥವಾ ಹವಾಮಾನದಿಂದ ಶಾಖ, ಅಥವಾ ಉರಿ, ಸುಡಿತ, ಹೊಳಪು, ಪ್ರಾಯಶ್ಚಿತ್ತ, ನೋವು, ನರಳಾಟ, ಪೀಡನೆ. ಯೋಗಿಕ ಸಂಪ್ರದಾಯದಲ್ಲಿ ಅದು ಜ್ಞಾನೋದಯದ ಬಹಳ ಕಠಿಣ ಗುರಿಯನ್ನು ಸಾಧಿಸಲು, ಆತ್ಮ ನಿಯಂತ್ರಣ, ಏಕಚಿತ್ತತೆ ಹಾಗು ಕೇಂದ್ರೀಕರಣ, ಸರಳತೆ, ವಿವೇಕ, ಸಮಗ್ರತೆಯನ್ನು ಪೋಷಿಸಲು, ಸಂನ್ಯಾಸಿಗೆ ಅಗತ್ಯವಿರುವ ಒಳಗೆ ಸುಡುವ ಬೆಂಕಿ. ಅದನ್ನು ಶರೀರ, ಮನಸ್ಸು ಹಾಗು ನಡತೆಯನ್ನು ಬೆಳೆಸಲು ಹಾಗು ಹಿಡಿತದಲ್ಲಿಡಲು ಬಳಸಲಾಗುತ್ತದೆ.
 
ತಪಸ್ಸಿನಲ್ಲಿ ಮೂರು ವಿಧ.ಶಾರೀರಿಕ, ವಾಚಿಕ,ಮಾನಸಿಕ.
 
ದೇವದ್ವಿಜಗುರುಪ್ರಾಜ್ಞ ಪೂಜನಂ ಶೌಚಮಾರ್ಜವಂ.ಬ್ರಹ್ಮಚರ್ಯಮಹಿಂಸಾಚ ಶಾರೀರಂ ತಪ ಉಚ್ಯತೇ.
ಪರಮ ಪ್ರಭುವಿನ, ಬ್ರಾಹ್ಮಣರ, ಗುರುವಿನ, ಪಂಡಿತರ-ವಿದ್ವಾಂಸರ ಸೇವೆ,ಪೂಜೆ.ಶುಚಿತ್ವ ಸರಳತೆ ಬ್ರಹ್ಮಚರ್ಯ ಮತ್ತು ಅಹಿಂಸೆ-ಇವೆಲ್ಲವೂ ದೇಹದ ತಪಸ್ಸು ಎಂದು ಹೇಳಲಾಗುತ್ತದೆ.
 
ಅನುದ್ವೇಗಕರಂ ವಾಕ್ಯಂ ಸತ್ಯಂಪ್ರಿಯಹಿತಂ ಚ ಯತ್.
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ.
ಉದ್ವೇಗಗೊಳಿಸದ,ಸತ್ಯವಾದ,ಪ್ರಿಯವಾದ,ಹಿತಕರವಾದ ಮಾತುಗಳು,ವೇದಗಳ ಅಭ್ಯಾಸ ಮತ್ತು ಅಧ್ಯಯನ-ಯಾವುದಾದರೊಂದು ಲೋಕೋಪಯೋಗವಾದ ವಿಷಯದ ಅಧ್ಯಯನ ಇಲ್ಲವೂ ಮಾತಿನ ತಪಸ್ಸು ಎಂದು ಕರೆಯಲಾಗುತ್ತದೆ.
 
ಮನಃಪ್ರಸಾದ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ.ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ.
ಮನಃಶಾಂತಿ,ತಾಳ್ಮೆ,ಮೌನ,ಆತ್ಮಸಂಯಮ‌ ಮತ್ತು ಅಂತಃಕರಣ ಶುದ್ಧಿ-ಇವೆಲ್ಲವೂ ಮನಸ್ಸಿನ ತಪಸ್ಸೆಂದು ಹೇಳಲಾಗಿದೆ.
 
 
 
 
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
"https://kn.wikipedia.org/wiki/ತಪಸ್ಸು" ಇಂದ ಪಡೆಯಲ್ಪಟ್ಟಿದೆ