ರಸಾನುಭವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ ಸೇರ್ಪಡೆ
ಚು ಉಲ್ಲೇಖ ಸೇರಿಸಿರುವುದು
೧ ನೇ ಸಾಲು:
'''ರಸಾನುಭವ''': [[ಕಾವ್ಯ]], [[ನಾಟಕ]] ಮೊದಲಾದ [[ಸಾಹಿತ್ಯ]] ಕೃತಿಗಳ ಆಸ್ವಾದನೆಯಿಂದ ಸಹೃದಯರಲ್ಲಿ[[ಸಹೃದಯ]]ರಲ್ಲಿ ಉಂಟಾಗುವ ಅನುಭವವೇ ರಸಾನುಭವ.<ref>[[ಭರತಮುನಿ]], [[ನಾಟ್ಯಶಾಸ್ತ್ರ]]</ref> ರಸ, ರಸಾನುಭವವನ್ನು ಕುರಿತಂತೆ ಭಾರತೀಯ ಲಾಕ್ಷಣಿಕರು ವಿಪುಲವಾಗಿ ಚರ್ಚಿಸಿದ್ದಾರೆ.<ref>[[ತೀ.ನಂ.ಶ್ರೀಕಂಠಯ್ಯ]], ೧೯೫೨. [[ಭಾರತೀಯ ಕಾವ್ಯ ಮೀಮಾಂಸೆ |ಭಾರತೀಯ ಕಾವ್ಯ ಮೀಮಾಂಸೆ]], ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.</ref> ನಾಟಕಗಳಲ್ಲಿ ರಸವುಂಟಾಗುವ ಪರಿಯೆಂತು ಎಂಬ ಪ್ರಶ್ನೆಗೆ ಉತ್ತರ ಹೇಳುವುದಕ್ಕಾಗಿ ಭರತನ ನಾಟ್ಯಶಾಸ್ತ್ರದಲ್ಲಿ ಅನೇಕ ಅಧ್ಯಾಯಗಳೇ ಮೀಸಲಾಗಿವೆ. ನಟರು ರಂಗದ ಮೇಲೆ ಬಂದು ಅಭಿನಯಿಸುವುದು ಏನನ್ನು, ಯಾವ ಬಗೆಯಿಂದ, ಏಕೆ ಇತ್ಯಾದಿ ವಿವೇಚನೆಗೆ__ಹೊರಟರೆ ಚಿತ್ತವೃತ್ತಿಗಳನ್ನು, ಅಂಗಾದಿ ಅಭಿನಯದಿಂದ, ಪ್ರೇಕ್ಷಕರ ಆನಂದಕ್ಕಾಗಿ ಎಂಬ ಉತ್ತರಗಳನ್ನು ಸುಲಭವಾಗಿ ಹೇಳಬಹುದು. ಚಿತ್ತವೃತ್ತಿಗಳಲ್ಲಿ ಮತ್ತೆ ವಿಭಾಗ ಮಾಡಹೊರಟರೆ ಸ್ಥಾಯಿಭಾವ, ಸಂಚಾರಿಭಾವಗಳೆಂಬ ಎರಡು ಸ್ಪಷ್ಟ ಗುಂಪುಗಳು ಕಾಣುತ್ತವೆ. `ಪ್ರೇಮ ಸ್ಥಾಯಿಭಾವ ಅಭಿವ್ಯಕ್ತವಾಗಲು ಬೇಕಾದ ಕಾರಣಗಳು-ಅನುರೂಪ ಪ್ರೇಯಸಿ ಮತ್ತು ಅನುಕೂಲ ಪ್ರಕೃತಿ ಅದರ ವಿಭಾಗಗಳೆನಿಸುತ್ತವೆ. ಪ್ರೇಮದ ಕಾರ್ಯಗಳಾದ ಅಂಗಾಂಗ ವಿನ್ಯಾಸಗಳು ಕಟಾಕ್ಷ ಇತ್ಯಾದಿ ಅನುಭಾವಗಳು. ನಾಟಕದಲ್ಲಿ ನಟರು ಮುಖ್ಯವಾಗಿ ಅಭಿನಯಿಸುವುದು ವಿಭಾವ-ಅನುಭಾವ-ಸಂಚಾರಿ ಭಾವಗಳನ್ನು ಮಾತ್ರ. ನೋಡುತ್ತಿರುವ ಸಹೃದಯರಿಗೆ ತಮ್ಮ ಸ್ಥಾಯಿಭಾವಗಳ ಅನುಭವವಾಗುತ್ತದೆ, ರಸವೆನಿಸುತ್ತದೆ. ಇದನ್ನು ಸೂತ್ರಪ್ರಾಯವಾಗಿ ಭರತನು ಹೇಳಿದ್ದಾನೆ. ನಾಟಕದಲ್ಲಿ ಬರುವ ಗೀತ, ಪದ್ಯ, ಕಥಾಭಾಗ, ಪಾತ್ರಸ್ವರೂಪ, ಕುಣಿತ ಇತ್ಯಾದಿಗಳೆಲ್ಲ ರಸವೇ ಗುರಿ ಎಂದೂ ಭರತ ಹೇಳಿದ್ದಾನೆ. ವಿಶಿಷ್ಟರಸಗಳಲ್ಲಿ ಪುರುಷಾರ್ಥಕ್ಕೆ ನೇರವಾಗಿ ಪ್ರಯೋಜಕವಾದ ಶೃಂಗಾರ, ವೀರ, ಅದ್ಭುತ, ರೌದ್ರಗಳಿಗೆ ಪ್ರಾಧಾನ್ಯವನ್ನೂ ಹಾಸ್ಯ, ಕರುಣ, ಭಯಾನಕ, ಬೀಭತ್ಸಗಳಿಗೆ ಜನ್ಯತ್ವವನ್ನೂ ಅವುಗಳ ಪರಸ್ಪರ ಮೈತ್ರಿ ವಿರೋಧಗಳನ್ನೂ ವರ್ಣ - ದೈವತ್ವಗಳನ್ನೂ ಹೇಳಲಾಗಿದೆ.
 
== ರಸ ವಿವೇಚನೆ ಹಿನ್ನೆಲೆ ==
"https://kn.wikipedia.org/wiki/ರಸಾನುಭವ" ಇಂದ ಪಡೆಯಲ್ಪಟ್ಟಿದೆ