ರಸಾನುಭವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ರಸಾನುಭವ''': ಕಾವ್ಯ, ನಾಟಕ ಮೊದಲಾದ ಸಾಹಿತ್ಯ ಕೃತಿಗಳ ಆಸ್ವಾದನೆಯಿಂದ ಸಹೃದಯರಲ್ಲಿ ಉಂಟಾಗುವ ಅನುಭವವೇ ರಸಾನುಭವ. ರಸ, ರಸಾನುಭವವನ್ನು ಕುರಿತಂತೆ ಭಾರತೀಯ ಲಾಕ್ಷಣಿಕರು ವಿಪುಲವಾಗಿ ಚರ್ಚಿಸಿದ್ದಾರೆ. ನಾಟಕಗಳಲ್ಲಿ ರಸವುಂಟಾಗುವ ಪರಿಯೆಂತು ಎಂಬ ಪ್ರಶ್ನೆಗೆ ಉತ್ತರ ಹೇಳುವುದಕ್ಕಾಗಿ ಭರತನ ನಾಟ್ಯಶಾಸ್ತ್ರದಲ್ಲಿ ಅನೇಕ ಅಧ್ಯಾಯಗಳೇ ಮೀಸಲಾಗಿವೆ. ನಟರು ರಂಗದ ಮೇಲೆ ಬಂದು ಅಭಿನಯಿಸುವುದು ಏನನ್ನು, ಯಾವ ಬಗೆಯಿಂದ, ಏಕೆ ಇತ್ಯಾದಿ ವಿವೇಚನೆಗೆ__ಹೊರಟರೆ ಚಿತ್ತವೃತ್ತಿಗಳನ್ನು, ಅಂಗಾದಿ ಅಭಿನಯದಿಂದ, ಪ್ರೇಕ್ಷಕರ ಆನಂದಕ್ಕಾಗಿ ಎಂಬ ಉತ್ತರಗಳನ್ನು ಸುಲಭವಾಗಿ ಹೇಳಬಹುದು. ಚಿತ್ತವೃತ್ತಿಗಳಲ್ಲಿ ಮತ್ತೆ ವಿಭಾಗ ಮಾಡಹೊರಟರೆ ಸ್ಥಾಯಿಭಾವ, ಸಂಚಾರಿಭಾವಗಳೆಂಬ ಎರಡು ಸ್ಪಷ್ಟ ಗುಂಪುಗಳು ಕಾಣುತ್ತವೆ. `ಪ್ರೇಮ ಸ್ಥಾಯಿಭಾವ ಅಭಿವ್ಯಕ್ತವಾಗಲು ಬೇಕಾದ ಕಾರಣಗಳು-ಅನುರೂಪ ಪ್ರೇಯಸಿ ಮತ್ತು ಅನುಕೂಲ ಪ್ರಕೃತಿ ಅದರ ವಿಭಾಗಗಳೆನಿಸುತ್ತವೆ. ಪ್ರೇಮದ ಕಾರ್ಯಗಳಾದ ಅಂಗಾಂಗ ವಿನ್ಯಾಸಗಳು ಕಟಾಕ್ಷ ಇತ್ಯಾದಿ ಅನುಭಾವಗಳು. ನಾಟಕದಲ್ಲಿ ನಟರು ಮುಖ್ಯವಾಗಿ ಅಭಿನಯಿಸುವುದು ವಿಭಾವ-ಅನುಭಾವ-ಸಂಚಾರಿ ಭಾವಗಳನ್ನು ಮಾತ್ರ. ನೋಡುತ್ತಿರುವ ಸಹೃದಯರಿಗೆ ತಮ್ಮ ಸ್ಥಾಯಿಭಾವಗಳ ಅನುಭವವಾಗುತ್ತದೆ, ರಸವೆನಿಸುತ್ತದೆ. ಇದನ್ನು ಸೂತ್ರಪ್ರಾಯವಾಗಿ ಭರತನು ಹೇಳಿದ್ದಾನೆ. ನಾಟಕದಲ್ಲಿ ಬರುವ ಗೀತ, ಪದ್ಯ, ಕಥಾಭಾಗ, ಪಾತ್ರಸ್ವರೂಪ, ಕುಣಿತ ಇತ್ಯಾದಿಗಳೆಲ್ಲ ರಸವೇ ಗುರಿ ಎಂದೂ ಭರತ ಹೇಳಿದ್ದಾನೆ. ವಿಶಿಷ್ಟರಸಗಳಲ್ಲಿ ಪುರುಷಾರ್ಥಕ್ಕೆ ನೇರವಾಗಿ ಪ್ರಯೋಜಕವಾದ ಶೃಂಗಾರ, ವೀರ, ಅದ್ಭುತ, ರೌದ್ರಗಳಿಗೆ ಪ್ರಾಧಾನ್ಯವನ್ನೂ ಹಾಸ್ಯ, ಕರುಣ, ಭಯಾನಕ, ಬೀಭತ್ಸಗಳಿಗೆ ಜನ್ಯತ್ವವನ್ನೂ ಅವುಗಳ ಪರಸ್ಪರ ಮೈತ್ರಿ ವಿರೋಧಗಳನ್ನೂ ವರ್ಣ - ದೈವತ್ವಗಳನ್ನೂ ಹೇಳಲಾಗಿದೆ.
 
== ರಸ ವಿವೇಚನೆ ಹಿನ್ನೆಲೆ ==
ಕಾವ್ಯಲಕ್ಷಣಗಳನ್ನು ಮಾತ್ರ ಬರೆಯಹೊರಟ ದಂಡಿಭಾಮಹಾದಿಗಳು ವ್ಯಾಪಕಾರ್ಥದ ರಸದ ಅಗತ್ಯ ಕಾವ್ಯದಲ್ಲಿಯೂ ನಾಟಕದಷ್ಟೇ ಮಟ್ಟಿಗೆ ಇರುವುದನ್ನು ಮನಗಂಡುದರಿಂದಲೇ ಅದನ್ನು ಕಾವ್ಯಗುಣವೆಂದು ವಿವರಿಸಿದರು; ಅದರ ನಿಷ್ಪತ್ತಿಗಾಗಿ ಪಂಚ ಸಂಧಿಗಳು (ವಸ್ತು ಸಂವಿಧಾನದ ಘಟಕಗಳು) ಮಹಾಕಾವ್ಯದಲ್ಲೂ ಇರಬೇಕೆಂದರು; ಉದಾತ್ತ ನಾಯಕರೇ ಇಲ್ಲಿಯೂ ಬೇಕೆಂದರು. ಆದರೆ ವರ್ಣನಾಪ್ರಧಾನದ ಕಾವ್ಯಪ್ರಕಾರಗಳಲ್ಲಿ ನಾಟಕದಂತೆ ಚಿತ್ತವೃತ್ತಿಯ ಅಭಿವ್ಯಕ್ತಿಯೇ ಮುಖ್ಯವಾಗಲಾರದೆಂಬ ಭಾವನೆಯಿಂದ ಅವರು ವಿಭಾವಾದಿಗಳ ನಿರೂಪಣೆಗೆ ಕೈಹಾಕಲಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ, ಪ್ರಸಂಗವಶದಿಂದ ವಿಶಿಷ್ಟ ಭಾವಗಳು ಸ್ಥಾಯಿ ಅಥವಾ ಸಂಚಾರಿ ಪರಿಪುಷ್ಟಿಗೊಂಡು ಪರಾಕಾಷ್ಠೆಯನ್ನೈದಿದರೆ, ಅವಕ್ಕೆ ವಿಶಾಲಾರ್ಥದಲ್ಲಿ ರಸವತ್, ಪ್ರೇಯೆಸ್ ಮುಂತಾದ ಅಲಂಕಾರಗಳೆಂದು ಸ್ಥಾನವಿತ್ತರು. ವಾಮನನಂತೂ ಕಾವ್ಯಗಳಲ್ಲೆಲ್ಲ ದಶರೂಪಕವೇ ಸರ್ವಶ್ರೇಷ್ಠವೆಂದು ಮುಕ್ತಕಂಠದಿಂದ ಹೇಳಿದ್ದಾನೆ. ಹಾಗೆ ಹೇಳುವಾಗ ನಾಟಕದಲ್ಲಿರುವ ದೃಶ್ಯಾಂತ ಕಾವ್ಯದಲ್ಲಿಲ್ಲವೆಂಬ ಅರಿವೂ ಅವನಿಗಿದೆ. ಪಾತ್ರಗಳ ಸ್ಥಾಯಿಭಾವಗಳ ಪರಿಪುಷ್ಟಿಯೇ ರಸವೆಂಬ ಈ ಅಭಿಪ್ರಾಯ ಕಾಳಿದಾಸ, ಮಾಘ, ಬಾಣ, ಭವಭೂತಿಗಳಿಗೂ ಸಮ್ಮತವಾಗಿದ್ದಂತೆ ತೋರುತ್ತದೆ. ಈ ಅಭಿಪ್ರಾಯದಂತೆ ಕರುಣರಸವಿರುವುದೂ ರಾಮನಲ್ಲಿ (ರಾಮಸ್ಯ ಕರುಣೋರಸಃ) ಎಂಬ ಮಾತು ತಪ್ಪಲ್ಲ; ಅದು ಕೇವಲ ಆನಂದಮಯವಲ್ಲ, ಶೋಕಸಾಂದ್ರವಾಗಿಯೂ ಇರಬಹುದು. ಶೃಂಗಾರಾದಿ ರಸಗಳು ಸುಖಾತ್ಮಕ ; ಕರುಣಾದಿಗಳು ದುಃಖಾತ್ಮಕ (ಈ ಮಾತನ್ನು ವಾಮನನೂ ಸ್ಪಷ್ಟವಾಗಿ ಹೇಳಿದ್ದಾನೆ). ಆದರೂ ರಸ ಲೌಕಿಕವಲ್ಲ; ಕಾವ್ಯ ಮಾತ್ರ ನಿಷ್ಠವಾದುದರಿಂದ ಪ್ರೇಕ್ಷಣಕಾಲದಲ್ಲಿ ಪಾತ್ರಗತವಾದ ರಸವೇ ನಟನಲ್ಲಿ ಆರೋಪಿತವಾಗುತ್ತದೆ. ಈ ಪರಂಪರಾಗತ ರಸತತ್ತ್ವದ ವಿವರಣೆ ಸ್ಪಷ್ಟವಾಗಿ ಮೊದಲು ಬರುವುದು ಲೊಲ್ಲಟನ ಬರೆಹದಲ್ಲಿ.
"https://kn.wikipedia.org/wiki/ರಸಾನುಭವ" ಇಂದ ಪಡೆಯಲ್ಪಟ್ಟಿದೆ