ರಸಾನುಭವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚುNo edit summary
೧೨ ನೇ ಸಾಲು:
 
ರಸಮೀಮಾಂಸೆಯ ಕಡೆಯ ಮಾತನ್ನು ಹೇಳಿದ ಕೀರ್ತಿ ಅಭಿನವಗುಪ್ತನದು. ಇವನು ಭಟ್ಟನಾಯಕನ ಮತದ ಮುಖ್ಯಾಂಶಗಳನ್ನೆಲ್ಲ ಧ್ವನಿತತ್ತ್ವದಲ್ಲಿಯೇ ಅಳವಡಿಸಿಕೊಂಡು ಆತ ಹೇಳುವ ನಾಮಾಂತರಗಳನ್ನು ನಿರಾಕರಿಸುತ್ತಾನೆ. ವ್ಯಂಜನಾವ್ಯಾಪಾರಕ್ಕೆ ಚರ್ವಣಾ ವಿಶ್ರಾಂತವಾದ ಸಾಮಥ್ರ್ಯವಿರುವುದನ್ನು ಸಾಧಿಸುತ್ತಾನೆ. ರಂಗದ ಮೇಲೆ ಪ್ರದರ್ಶಿತವಾಗುವುದು ಪಾತ್ರಗತ ಭಾವವೆಂದೇ ನಿಯಮವಿಲ್ಲ; ದುಷ್ಯಂತ ವರ್ಣಿಸುವ ಜಿಂಕೆಯ ಭಯವು ಪ್ರೇಕ್ಷಕರಿಗೆ ಆಸ್ವಾದ್ಯವಾಗಿ ಭಯಾನಕ ರಸವೆನ್ನಿಸಬಹುದು. ಆದ್ದರಿಂದ ಸಾಧಾರಣೀಕೃತವಾದ ಚಿತ್ತವೃತ್ತಿ ಅಲೌಕಿಕ ವಿಭಾವಾದಿಗಳಿಂದ ವ್ಯಂಗ್ಯವಾಗಿ ವರ್ಣನೀಯ ವಿಷಯದಲ್ಲಿ ತನ್ಮಯೀಭವದ ಯೋಗ್ಯತೆಯುಳ್ಳ ಸಹೃದಯರ ಮನಸ್ಸಿನಲ್ಲಿ ಹೃದಯಸಂವಾದ ಹೊಂದಿ ರಸವೆನಿಸುತ್ತದೆ. ಸ್ಥಾಯಿಭಾವಗಳು ಸಂಸ್ಕಾರ ರೂಪವಾಗಿ ಎಲ್ಲರಲ್ಲೂ ಇದ್ದೇ ಇರುತ್ತವೆ. ಇವುಗಳ ಉದ್ಬೋಧಕ್ಕೆ ಕಾವ್ಯಾದಿಗಳು ಸಹಾಯಕವಾಗುತ್ತವೆ, ಅಷ್ಟೆ; ಅಖಂಡಾನಂದರೂಪವಾದ ರಸ ಒಮ್ಮೊಮ್ಮೆ ಬಾರದಿರುವುದಕ್ಕೆ ವಿಘ್ನಗಳ ಅಸ್ತಿತ್ವವೇ ಕಾರಣ. ರಸಿಕತೆಯ ಸಂಸ್ಕಾರ ಸಾಲದೆ ಇರುವುದು, ವೈಯಕ್ತಿಕ ವಿಚಾರಗಳ ಉದಯ, ಕವಿಯ ದೋಷ ಮುಂತಾದುದೇ ವಿಘ್ನಗಳು. ಈ ವಿಘ್ನಗಳಿಲ್ಲದಿದ್ದರೆ ತಟ್ಟನೆ ರಸಾನುಭವವುಂಟಾಗುತ್ತದೆ. ಹೃದಯಕ್ಕೆ ವಿಶ್ರಾಂತಿಯುಂಟಾಗುತ್ತದೆ. ಆದ್ದರಿಂದಲೇ ಕರುಣ ರಸದಲ್ಲಿಯೂ ಸುಖಾನುಭವವುಂಟು. ಚಿತ್ತಚಾಂಚಲ್ಯವೇ ದುಃಖ, ಚಿತ್ತವಿಶ್ರಾಂತಿಯೇ ಸುಖ. ಅಭಿನವಗುಪ್ತನ ವಿವರಣೆಯಲ್ಲಿ ರಸದ ವ್ಯಾಖ್ಯೆ ತಾತ್ತ್ವಿಕ ತಳಪಾಯವನ್ನು ಪಡೆಯಿತು. ಹೀಗೆ ಅಬೋಧಪೂರ್ವವಾದ ಅಲೌಕಿಕ ಚಮತ್ಕಾರವೇ ರಸ. ಇದು ಅಖಂಡ ಆತ್ಮವಿಶ್ರಾಂತ ಸಹೃದಯನಿಗೆ ಮಾತ್ರ ವೇದ್ಯವಾಗುವಂಥದ್ದು.
 
{{wikisource|ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ರಸಾನುಭವ|ರಸಾನುಭವ}}
 
 
"https://kn.wikipedia.org/wiki/ರಸಾನುಭವ" ಇಂದ ಪಡೆಯಲ್ಪಟ್ಟಿದೆ