ಚನ್ನರಾಯಪಟ್ಟಣ ತಾಲ್ಲೂಕಿನ ಶಾಸನೋಕ್ತ ಕೆರೆಗಳ ನಿರ್ಮಾಪಕರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, added orphan, underlinked tags using AWB
ಚನ್ನರಾಯಪಟ್ಟಣ to ಚೆನ್ನರಾಯಪಟ್ಟಣ

೯ ನೇ ಸಾಲು:
:ನೆರೆದಳ್ ಪಾಲೆರೆವಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನ||
ಇದು ತಾಯಿ ಸಿಂಗಾಂಬಿಕೆ, ಕೇವಲ ಲಕ್ಷ್ಮೀಧರನಿಗೆ ಹೇಳಿದ ಮಾತುಗಳಲ್ಲ. ಅಥವಾ ಸಿಂಗಾಂಬಿಕೆಯೊಬ್ಬಳೇ ಈ ರೀತಿ ಹೇಳುತ್ತಿದ್ದಳು ಎನ್ನುವಂತಿಲ್ಲ. ಕರ್ನಾಟಕದಲ್ಲಿ ಕದಂಬ ದೊರೆಗಳ ಕಾಲದಿಂದಲೂ ಕೆರೆ ಕಟ್ಟಿಸುವಂತಹ ಕೆಲಸ ಮಹತ್ಕಾರ್‍ಯದಂತೆ ಪರಿಗಣಿತವಾಗಿ ನಡೆದುಕೊಂಡು ಬಂದಿರುವುದನ್ನು ಗಮನಿಸಿದರೆ, ನಾಡಿನ ಎಲ್ಲಾ ತಾಯಂದಿರ ಪ್ರತಿನಿಧಿಯಾಗಿ ಸಿಂಗಾಂಬಿಕೆ ಈ ಮಾತುಗಳನ್ನು ಆಡಿದ್ದಾಳೆ ಎನ್ನಬಹುದು. ವಿಜಯನಗರದ ಕಾಲಕ್ಕಂತೂ ನೀರಾವರಿಗೆ ಕೊಟ್ಟ ಪ್ರಾಮುಖ್ಯತೆಯನ್ನು ಗಮನಿಸಿದರೆ ಅಂದಿನ ಎಲ್ಲಾ ತಾಯಂದಿರಿಗೂ ತಮ್ಮ ಮಕ್ಕಳು ಕೆರೆಯನ್ನು ಕಟ್ಟಿಸುವಂತಹ ಮಹತ್ಕಾರ್ಯವನ್ನು ಮಾಡಬೇಕೆಂಬ ಹಂಬಲವಿದ್ದಿರಬೇಕು ಅನ್ನಿಸುತ್ತದೆ. ಈ ದೃಷ್ಟಿಯಿಂದ ಅಂತಹ ಕೆಲವರಾದರೂ ಮಹನೀಯರ ಬಗ್ಗೆ ಸಾಧ್ಯವಾದಷ್ಟು ವಿಷಯಗಳನ್ನು ತಿಳಿಯಬೇಕೆಂಬುದು ಈ ಲೇಖನದ ಉದ್ದೇಶವಾಗಿದೆ.

ನನ್ನ ಅಧ್ಯಯನದ ವ್ಯಾಪ್ತಿಯಲ್ಲಿ ಎಪಿಗ್ರಾಫಿಯಾ ಕರ್ನಾಟಿಕ ಸಂಪುಟ ಎರಡು ಮತ್ತು ಬಾ.ರಾ.ಗೋಪಾಲ ಅವರ ಸಂಪಾದಕತ್ವದಲ್ಲಿ ಬಂದಿರುವ ಸಂಪುಟ ಹತ್ತರಲ್ಲಿನ ಚನ್ನರಾಯಪಟ್ಟಣಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳು ಮಾತ್ರ ಬರುತ್ತವೆ. ಶಾಸನಗಳಲ್ಲಿ ಬರುವ ಕೆರೆಗಳನ್ನು ಕಟ್ಟಿಸಿದ ಮಹನೀಯರ ವ್ಯಕ್ತಿಚಿತ್ರ ಮತ್ತು ಅವರ ವಂಶಾವಳಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಗ್ರಹಿಸಲು ಪ್ರಯತ್ನಿಸಿದ್ದೇನೆ. ಇಲ್ಲಿ ಕೆರೆಗಳ ಗಾತ್ರ, ವಿಸ್ತೀರ್ಣ, ತಾಂತ್ರಿಕತೆ ಮುಂತಾದವುಗಳ ಕಡೆಗೆ ಗಮನಹರಿಸದೆ, ಅವುಗಳನ್ನು ಕಟ್ಟಿದವರ ಮೇಲೆಯೇ ಹೆಚ್ಚು ಕೇಂದ್ರೀಕರಿಸಲಾಗಿದೆ. ಇಲ್ಲಿ ಸಿಗುವ ಕೆರೆ ನಿರ್ಮಾಪಕರುಗಳಲ್ಲಿ ಅರಸ-ಅರಸಿಯರು, ದಂಡನಾಯಕರುಗಳು, ಅವರುಗಳ ತಾಯಿ ಅಥವಾ ಹೆಂಡತಿ ಅಥವಾ ಸಹೋದರಿಯರು ಅಲ್ಲದೆ ಜನಸಾಮಾನ್ಯರೂ ಇದ್ದಾರೆ. ಅವರ ಸ್ವಂತ ವಿಚಾರಗಳು, ಅವರ ಒಡಹುಟ್ಟಿದವರ ವಿಚಾರಗಳು ಮತ್ತು ಅವರುಗಳ ಇನ್ನಿತರ ಸತ್ಕಾರ್ಯಗಳನ್ನು ಗುರುತಿಸಲು ಪ್ರಯತ್ನಿಸಿರುತ್ತೇನೆ.

ಈ ಎರಡೂ ಸಂಪುಟಗಳಲ್ಲಿರುವ ಒಟ್ಟು ಶಾಸನಗಳು ೭೧೬.೧ ಇಷ್ಟೂ ಶಾಸನಗಳ ಅವಲೋಕನದಿಂದ ಸಿಕ್ಕ ಕೆರೆಗಳು ಸುಮಾರು ೯೫.೨ ಇಲ್ಲಿನ ಬಹುತೇಕ ಕೆರೆಗಳನ್ನು ವಿವಿಧ ಕಾರ್ಯನಿಮಿತ್ತವಾಗಿ ಬಿಟ್ಟ ದಾನ ದತ್ತಿಗಳಿಗೆ ಸಂಬಂಧಪಟ್ಟ ಜಮೀನುಗಳಿಗೆ ಗಡಿಯ ಗುರುತಾಗಿ ಬಳಸಿಕೊಳ್ಳಲಾಗಿದೆ. ಅವುಗಳನ್ನು ಕಟ್ಟಿಸಿದವರು ಯಾರು? ಎಂಬ ವಿಚಾರಗಳಿಗೆ ಅಲ್ಲಿ ಉತ್ತರವಿಲ್ಲ. ಆದರೆ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಕೆರೆಗಳು ಆಯಾಯ ಶಾಸನಗಳಿಗಿಂತ ಹಿಂದಿನವು ಎಂಬುದು ನಿರ್ವಿವಾದವಾದ ಸಂಗತಿ. ಎರಡೂ ಸಂಪುಟಗಳ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಎಲ್ಲಾ ಕೆರೆಗಳನ್ನು ಅಧ್ಯಯನದ ದೃಷ್ಟಿಯಿಂದ ನಾಲ್ಕು ವಿಭಾಗಗಳನ್ನು ಮಾಡಿಕೊಳ್ಳಬಹುದು.

೧ ಕೆರೆ ಕಟ್ಟಿಸಿದವರ ವಿಚಾರಗಳನ್ನು ತಿಳಿಸುವಂತವುಗಳು

೨೦ ನೇ ಸಾಲು:

'''ಉತ್ತಮಗಾವುಣ್ಣ (೮-೯ನೆಯ ಶತಮಾನ)'''

ಬಸವನಪುರ ಗ್ರಾಮದ, ಸುಮಾರು ೮-೯ನೆಯ ಶತಮಾನಕ್ಕೆ ಸೇರಿದ ಒಂದು ಶಾಸನ೩ ಗಂಗದೊರೆ ಎರೆಯಪ್ಪರಸನನ್ನು, ಮತ್ತು ಅವನ ಮಗ ಗೋವಿಂದರಸನನ್ನು ಉಲ್ಲೇಖಿಸುತ್ತದೆ. ಚನ್ನರಾಯಪಟ್ಟಣಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಕೆರೆಯ ನಿರ್ಮಾತೃವನ್ನು ಉಲ್ಲೇಖಿಸುವ ಅತ್ಯಂತ ಪ್ರಾಚೀನ ಶಾಸನ ಇದಾಗಿದೆ. ಉತ್ತಮಗಾವುಣ್ಡ ಎಂಬುವವನು ಕೆರೆ ಕಟ್ಟಿಸಿದ್ದನ್ನು ತಿಳಿದು, ಅಲ್ಲಿಗೆ ಬಂದ ಗಂಗದೊರೆ ಎರೆಯಪ್ಪರಸರ ಮಗ ಗೋವಿಂದರಸನು, ಕೆರೆಯ ಉಸ್ತುವಾರಿಗೆಂದು ಆರು ಖಂಡುಗ ಭೂಮಿಯನ್ನು ಜಮ್ಬೂರಿನ ಪೆಮ್ಮಾಡಿಗಾವುಣ್ಡ ಬಾಗೆಯೂರಿನ ಕಮ್ಮಾರಗಾವಣ್ಡ, ಸವುಳಜ್ಞದ ಮೆಣ್ಡೆಗಾವುಣ್ಡ ಮತ್ತು ಬೆಳ್ವೊರಲ ಬಿನಮ್ಮ ಇವರನ್ನು ಸಾಕ್ಷಿಗಳಾಗಿ ಇಟ್ಟುಕೊಂಡು ದತ್ತಿ ಬಿಡುತ್ತಾನೆ. ಅದರಲ್ಲಿ ಪತ್ತೊನ್ದಿ ಅಂದರೆ ಹತ್ತನೇ ಒಂದು ಭಾಗ ಉತ್ತಮಗಾವುಣ್ಡನಿಗೆ ಸೇರಬೇಕೆಂದು ವ್ಯವಸ್ಥೆ ಮಾಡುತ್ತಾನೆ.
ಸಾಮಾನ್ಯವಾಗಿ ಕೆರೆಯ ನಿರ್ಮಾತೃವೇ ದೇವಾಲಯಗಳಿಗೆ, ಬ್ರಾಹ್ಮಣರಿಗೆ ದಾನ ದತ್ತಿ ಬಿಡುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಕೆರೆ ಕಟ್ಟಿಸಿದವನೇ ಬಿಟ್ಟ ದತ್ತಿಯಲ್ಲಿ ಹತ್ತನೇ ಒಂದು ಭಾಗವನ್ನು ಪಡೆಯುವ ಸ್ಥಿತಿಯಲ್ಲಿದ್ದಾನೆ. ಅಂದರೆ ಆತ ಬಡವನಾಗಿರುವ ಅಥವಾ ಕೆರೆ ಕಟ್ಟಿಸಿ ಬರಿಗೈ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದೊಂದು ಶಾಸನವನ್ನು ಬಿಟ್ಟು ಮತ್ತಾವ ಶಾಸನದಲ್ಲಿಯೂ ಉತ್ತಮಗಾವುಣ್ಡನ ಉಲ್ಲೇಖವಿಲ್ಲ. ಆದ್ದರಿಂದ ಆತನ ಇತಿವೃತ್ತವನ್ನು ತಿಳಿಯಲಾಗುವುದಿಲ್ಲ. ಆದರೆ ಸುಮಾರು ೧೧೦೦ ವರ್ಷಗಳ ಹಿಂದೆ ಶ್ರೀಸಾಮಾನ್ಯನೊಬ್ಬ ತನ್ನ ಹೊಟ್ಟೆಬಟ್ಟೆ ಕಟ್ಟಿ ಮಾಡಿಸಿದ ಕೆರೆ ಇಂದಿಗೂ ಸುಸ್ಥತಿಯಲ್ಲಿದೆ. ಈಗ ಅದನ್ನು ಸಿದ್ದಿಕಟ್ಟೆ ಎಂದು ಕರೆಯಲಾಗುತ್ತಿದ್ದು, ಒಂದು ಕೋಡಿ ಮತ್ತು ಒಂದು ತೂಬು ಇದೆ. ಬಸವನಪುರ ಮತ್ತು ಸುತ್ತ ಮುತ್ತಲ ಹಳ್ಳಿಯ ಜನತೆಗೆ, ಜಾನುವಾರುಗಳಿಗೆ ಮತ್ತು ನೂರಾರು ಎಕರೆ ಭೂಮಿಗೆ ನೀರೊದೊಗಿಸುತ್ತಿದೆ. ಈ ದೃಷ್ಟಿಯಿಂದ ಉತ್ತಮಗಾವುಣ್ಡನನ್ನು ನಾವಿಲ್ಲಿ ನೆನೆಯಬೇಕಾಗಿದೆ.
೫೯ ನೇ ಸಾಲು:

'''ಶಾಂತಲೆ (ಕ್ರಿ.ಶ. ೧೧೨೩)'''

ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿನ ಶಾಸನವೊಂದು೧೩ ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲೆಯು ಎಳಸನಕಟ್ಟೆ ಎಂಬುದನ್ನು ಕೆರೆಯಾಗಿ ಕಟ್ಟಿಸಿ ಸವತಿಗಂಧವಾರಣ ಬಸದಿಗೆ, ಸುರಗಿಗೆ ಬಿಟ್ಟ ವಿಚಾರವನ್ನು ತಿಳಿಸುತ್ತದೆ. ಶಾಂತಲೆಯು, ಗಂಗರಾಜನು ಕಟ್ಟಿಸಿದ್ದ ಗಂಗಸಮುದ್ರದ ಕೆಳಗೆ ಗದ್ದೆಗಳನ್ನು ದತ್ತಿ ಬಿಟ್ಟ ವಿಚಾರವನ್ನು ಈ ಶಾಸನ ಉಲ್ಲೇಖಿಸುತ್ತದೆ. ಶಾಂತಲೆಯ ಬಗ್ಗೆ ಹೆಚ್ಚಿಗೇನನ್ನು ಹೇಳುವ ಅವಶ್ಯಕತೆಯಿಲ್ಲ. ವಿಷ್ಣುವರ್ಧನನ ಮನಃಪ್ರಿಯೆಯಾಗಿ, ರಾಣಿಯಾಗಿ, ಹೊಯ್ಸಳ ಸಾಮ್ರಾಜ್ಞಿಯಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಆಕೆಯ ಹೆಸರು ಅಜರಾಮರವಾಗಿದೆ. ಕರ್ನಾಟಕದಲ್ಲಿ ಆಗಿ ಹೋದ ಯಾವ ರಾಣಿಗೂ ಸಿಗದಷ್ಟು ಮಹತ್ವ ಶಾಂತಲೆಗೆ ದಕ್ಕಿದೆ. ಆದರೂ, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳ ಹಿನ್ನಲೆಯಲ್ಲಿ ಅವಳನ್ನು ಗಮನಿಸಬಹುದಾಗಿದೆ. ಸಂಪುಟ ಎರಡರಲ್ಲಿ ಸುಮಾರು ಆರು ಶಾಸನಗಳಲ್ಲಿ ಮತ್ತು ಸಂಪುಟ ಹತ್ತರಲ್ಲಿ ಎರಡು ಶಾಸನಗಳಲ್ಲಿ ಆಕೆಯ ಬಗ್ಗೆ ವಿವರಗಳು ದೊರೆಯುತ್ತವೆ. ಸವತಿಗಂಧಾವರಣ ಬಸದಿಯನ್ನು ಕಟ್ಟಿಸಿ, ಅದಕ್ಕೆ ಕಲ್ಕಣಿನಾಡಿನ ಮಟ್ಟನವಿಲೆ ಎಂಬ ಗ್ರಾಮವನ್ನು ದತ್ತಿಯನ್ನಾಗಿ ಬಿಟ್ಟು, ಅದನ್ನು ಮೇಘಚಂದ್ರ ತ್ರೈವಿದ್ಯಾದೇವರ ಶಿಷ್ಯರಾದ ಪ್ರಭಾಚಂದ್ರ ಸಿದ್ಧಾಂತ ದೇವರಿಗೆ ಧಾರೆಯೆರೆದು ಕೊಡುತ್ತಾಳೆ. ಗಂಗರಾಜನ ಪತ್ನಿ ಲಕ್ಷ್ಮಿಮತಿಯೂ ಸಹ ಮೇಘಚಂದ್ರತ್ರೈವಿದ್ಯಾದೇವರ ಶಿಷ್ಯೆ ಎಂಬುದು ಗಮನಾರ್ಹ ವಿಷಯ. ಶಾಂತಲೆಯ ವಂಶಾವಳಿಯನ್ನು ಹೀಗೆ ಗುರುತಿಸಬಹುದಾಗಿದೆ.
ನಾಗವರ್ಮ (ಪತ್ನಿ ಚಂದಿಕಬ್ಬೆ)
:ಬಲದೇವ ಪತ್ನಿ ಬಾಚಿಯಕ್ಕ
೯೭ ನೇ ಸಾಲು:

'''ಸಾತವ್ವೆ (ಶಾಂತಲಾದೇವಿ) (ಕ್ರಿ.ಶ. ೧೧೮೧)'''

ಚನ್ನರಾಯಪಟ್ಟಣದಚೆನ್ನರಾಯಪಟ್ಟಣದ ಶಾಸನದಲ್ಲಿ೨೧ ಸಾತವ್ವೆ ಎಂಬುವಳು ಶಾಂತಿಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದ ವಿಚಾರವಿದೆ. ಅಲ್ಲಿನ ಇತರ ಶಾಸನಗಳಿಂದ ಮುಖ್ಯವಾಗಿ ೯,೧೮ಮತ್ತು ೧೯ನೇ ಸಂಖ್ಯೆಯ ಶಾಸನಗಳಿಂದ ಸಾತವ್ವೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಬಹುದಾಗಿದೆ. ಈಕೆಯನ್ನು ಶಾಂತಲಾದೇವಿ ಎಂದೂ ಕರೆಯಲಾಗಿದೆ.

ಶ್ರೀನಿಧಿ ದೇವಿಮಯ್ಯ ಮತ್ತು ಅರಸವ್ವೆಯವರ ಮಗ ಚಂದಿಮಯ್ಯ ಎಂಬುವವನು ಮಹಾಪ್ರಧಾನಿ ಹೆಗ್ಗಡೆಯಾಗಿದ್ದವನು. ಅವನ ಹೆಂಡತಿ ಚಾಮಲೆ. ಅವರಿಗೆ ಶಂಕರದೇವ, ಬಮ್ಮದೇವ, ಶಾಂತಲೆ ಮತ್ತು ರಾಮದೇವ ಎಂಬ ನಾಲ್ವರು ಮಕ್ಕಳು. ಶಾಂತಲೆಯನ್ನು ಹೊಯ್ಸಳ ದಂಡನಾಯಕರಲ್ಲಿ ಒಬ್ಬನಾದ ಮಾಚಿರಾಜನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮಾಚಿರಾಜನ ತಂದೆ ಮಾರ ಎಂಬುವವನು. ಮಹಾಪ್ರಧಾನಿ ಹೆಗ್ಗಡೆಯ ಮಗಳೂ, ದಂಡನಾಯಕನ ಹೆಂಡತಿಯೂ ಆದ ಸಾತವ್ವೆಯನ್ನು ಶಾಸನದಲ್ಲಿ ಪರಮದಯಾಳು ಮಾನ್ಯೆ ನಿಜಗೋತ್ರಪವಿತ್ರೆ ಸನ್ಧಾನ ದಾನ ನಿರ್ಭ್ಬರತ ಭಕ್ತಿಯುಕ್ತಿ ಮಿತ್ರೇಶ ಪಾದಾಬ್ಜ ವರಪ್ರಸಾದದೆ ಬಾಸುರಕೀರ್ತಿ ನಿರ್ಮ್ಮಳಿತ ಮೂರ್ತಿ ಪತಿಬ್ರತೆ ಪೆಂಪನಾವಗಂ ಕರಣದ ಮಾಚಿರಾಜನ ಮನಪ್ರಿಯೆ ಶಾಂತಲದೇವಿ ಎಂದು ಹೊಗಳಲಾಗಿದೆ.

ದೇವಿಮಯ್ಯ ಪತ್ನಿ ಅರಸವ್ವೆ
೧೩೯ ನೇ ಸಾಲು:
ನುಗ್ಗೆಹಳ್ಳಿಯ ಮತ್ತೊಂದು೨೫ ಶಾಸನವು ಲಕ್ಕವ್ವೆ ಎಂಬುವವಳು ಒಂದು ಕೆರೆಯನ್ನು ಕಟ್ಟಿಸಿ ದತ್ತಿ ಬಿಟ್ಟಿದ್ದನ್ನು ಉಲ್ಲೇಖಿಸುತ್ತದೆ. ಕೆರೆಯನ್ನು ಶಾಸನದಲ್ಲಿ ಹಿರಿಯಕೆರೆ ಎಂದಷ್ಟೇ ಕರೆಯಲಾಗಿದೆ. ಈಗ ನುಗ್ಗೆಹಳ್ಳಿ ಕೆರೆ ಎಂದೂ, ಹಿರೆಕೆರೆ ಎಂದೂ ಕರೆಯಲ್ಪಡುತ್ತಿರುವ ಇದು ಸಾಕಷ್ಟು ದೊಡ್ಡ ಕೆರೆಯಾಗಿದ್ದು, ಹಿರಿಯಕೆರೆ ಎಂಬ ಹೆಸರಿಗೆ ತಕ್ಕಂತೆಯೆ ಇದೆ. ಲಕ್ಷ್ಮಿ ಅಥವಾ ಲಕ್ಕವ್ವೆಯಕ್ಕ ಹೊಯ್ಸಳ ಸೋಮೇಶ್ವರನ ಮಹಾಪ್ರಧಾನಿ ಬೊಮ್ಮಣ್ಣದಂಡನಾಯಕನ ಅಕ್ಕ. ನುಗ್ಗೆಹಳ್ಳಿಯಲ್ಲಿ ವಿಜಯಸೋಮನಾಥಪುರ ಎಂಬ ಅಗ್ರಹಾರವನ್ನು ಮಾಡಿಸಿ, ಪ್ರಸನ್ನ ಕೇಶವ, ನರಸಿಂಹ, ಗೋಪಾಲಸ್ವಾಮಿ ದೇವರುಗಳ ತ್ರಿಕೂಟ ದೇವಾಲಯವನ್ನೂ ಮತ್ತು ಸದಾಶಿವ ದೇವಾಲಯವನ್ನೂ ಕಟ್ಟಿಸಿದ ಕೀರ್ತಿ ಬೊಮ್ಮಣ್ಣದಂಡನಾಯಕನದು.

ಲಕ್ಕವ್ವೆಯಕ್ಕನವರು ತಾವೇ ಕಟ್ಟಿಸಿದ ಹಿರಿಯಕೆರೆಯ ಕೆಳಗೆ ಮೂವತ್ತೆರಡು ಮೆಟ್ಟಿನಗಳೆದು, ಕಂಬ ಮುಂನೂರು ಬೀಜವರಿಯ ನಾಲ್ಕು ಸಲಗೆ ಗದ್ದೆಯನ್ನು, ಆ ಕಾಲಕ್ಕೆ ಉಚಿತವಾದ ಕ್ರಯಕ್ಕೆ ಕ್ರಯದಾನವಾಗಿ ಪಡೆದು ನುಗ್ಗೆಹಳ್ಳಿಯ ನಾನಾ ಗೋತ್ರದ ಬ್ರಾಹ್ಮಣರುಗಳಿಗೆ ಪ್ರತಿದಿನ ಎಂಟು ಜನ ಬ್ರಾಹ್ಮಣ ಭೋಜನಕ್ಕೆ ಛತ್ರವಾಗಿ ಬಿಡುತ್ತಾಳೆ. ಅಲ್ಲದೆ ಅಡುಗೆ ಮಾಡುವವರಿಗೂ ಕೆಲವು ದತ್ತಿಗಳನ್ನು ಬಿಡುತ್ತಾಳೆ. ನುಗ್ಗೆಹಳ್ಳಿಯ ಪಕ್ಕದಲ್ಲಿರುವ ಅಕ್ಕನಹಳ್ಳಿ ಎಂಬ ಊರಿದ್ದು, ಈ ಲಕ್ಕವ್ವೆಯಕ್ಕನ ಹೆಸರಿನಿಂದ ಕರೆದಿದ್ದಿರಬಹುದು ಅಥವಾ ಆಕೆ ಆ ಊರಿನವಳೇ ಆಗಿರುವ ಸಾಧ್ಯತೆಯಿದೆ.

ಮೊದಲೇ ಹೇಳಿದಂತೆ ಹೆಸರಿಗೆ ತಕ್ಕಂತೆಯೆ ಇರುವ ಈ ಹಿರಿಯಕೆರೆಯು, ತಿಪಟೂರು ಚನ್ನರಾಯಪಟ್ಟಣಚೆನ್ನರಾಯಪಟ್ಟಣ ರಸ್ತೆಯ ಪಕ್ಕದಲ್ಲಿಯೇ ಇದ್ದು, ಎರಡು ಕೋಡಿ ಮತ್ತು ಎರಡು ತೂಬುಗಳನ್ನು ಹೊಂದಿದೆ. ಹೊಯ್ಸಳ ಕಾಲದ ಕೆತ್ತನೆಯುಳ್ಳ ಎರಡು ತೂಬುಗಂಬಗಳು ಈಗಲೂ ಅಚ್ಚಳಿಯದಂತೆ ನಿಂತು ತಮ್ಮ ಗತಕಾಲದ ವೈಭವವನ್ನು ಸಾರುತ್ತಿವೆ.

'''ಪೆರುಮಾಳೆ ದಂಡನಾಯಕ (ಕ್ರಿ.ಶ. ೧೨೭೬)'''

೨೪೩ ನೇ ಸಾಲು:
೫೪. ಸುಡೆಯಕೆಱೆ

೫೫. ಸರಡಿಯಕೆ

ಇದಿಷ್ಟು ಚನ್ನರಾಯಪಟ್ಟಣಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಬರುವ ಕೆರೆ ಕಟ್ಟಿಸಿದವರ ವಿಚಾರಗಳು. ಇಲ್ಲಿ ಬರುವ ಕೆರೆ ನಿರ್ಮಾಪಕರುಗಳ ಉಲ್ಲೇಖ ಬೇರೆ ತಾಲ್ಲೂಕಿನ ಅಥವಾ ಬೇರೆ ಜಿಲ್ಲೆಗಳ ಶಾಸನಗಳಲ್ಲಿ ಬರುತ್ತವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿಲ್ಲ. ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿರುವ, ಕೆರೆ ಕಟ್ಟಿಸುವಂತಹ ಮಹತ್ತರವಾದ ಕೆಲಸವನ್ನು ಮಾಡಿದ ಮಹನೀಯರ ವಿಚಾರಗಳನ್ನು ತಿಳಿಯುವಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ.

'''ಅಡಿಟಿಪ್ಪಣಿಗಳು'''

:೧ ಸಂಪುಟ ಎರಡರಲ್ಲಿ ೫೭೩ ಮತ್ತು ಸಂಪುಟ ಹತ್ತರಲ್ಲಿ ೧೪೩ ಶಾಸನಗಳಿವೆ.
:೨ ಸಂಪುಟ ಎರಡರಲ್ಲಿ ೪೧ ಮತ್ತು ಹತ್ತರಲ್ಲಿ ೫೪ ಕೆರೆಗಳು
:೩ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೭೭
:೪ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೬೪
:೫ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೬೩
೨೫೯ ನೇ ಸಾಲು:
:೧೨ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೫೭
:೧೩ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೧೬೨
:೧೪ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೬೮
:೧೫ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೭೬
:೧೬ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೭೧
:೧೭ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೧೨೨
:೧೮ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೧೨೩
:೧೯ ಕಬ್ಬಳ್ಳಿಯ ಈ ಎರಡು ಶಾಸನಗಳಲ್ಲಿ ಉಲ್ಲೇಖವಾಗಿರುವ ಮಾಚಜೀಯ, ಹೊಂನಜೀಯ, ಸಕಳೇಶ್ವರಪಣ್ಡಿತ ಮತ್ತು ಕೆಂಬಾಳಿನ ಶಾಸನದ ಅಮೃತರಾಸಿ ಪಣ್ಡಿಗ ಮತ್ತು ಆತನ ಶಿಷ್ಯ ಮಲ್ಲಿಕಾರ್ಜುನಜೀಯ, ಅಲ್ಲದೆ ಬಿದರೆಯ ಶಾಸನದಲ್ಲಿ ಉಲ್ಲೇಖವಾಗಿರುವ ಮಹಾದೇವರಾಸಿ ಪಣ್ಡಿತ ಅವರುಗಳು ಹೆಸರಿನ ರೀತಿಯಿಂದಾಗಿ ಕಾಳಾಮುಖ ಯತಿಗಳೆಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಕಾಳಾಮುಖ ಯತಿ ಪರಂಪರೆಯಲ್ಲಿ, ೧೨-೧೩ ನೇ ಶತಮಾನಗಳ ಕಾಲವನ್ನು ಶಿಷ್ಯ ಪರಂಪರೆಯಿಂದ ಪುತ್ರ ಪರಂಪರೆಯಾಗಿ ಬದಲಾಗುತ್ತಿದ್ದ ಸಂಕ್ರಮಣ ಕಾಲವೆಂಬುದನ್ನು ಗಮನಿಸಬಹುದಾಗಿದೆ
:೨೦ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೮೫
:೨೧ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ
:೨೨ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೧೯
:೨೩ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೬೪
:೨೪ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೧೧೨
:೨೫ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೧೧೧
:೨೬ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೫೩
:೨೭ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೪೮
:೨೮ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೩೪
:೨೯ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೧೧೩
:೩೦ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೭೦
:೩೧ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚನ್ನರಾಯಪಟ್ಟಣಚೆನ್ನರಾಯಪಟ್ಟಣ ೪೦