ಕಾಜಿರಂಗ ರಾಷ್ಟ್ರೀಯ ಉದ್ಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಕಾಜಿರಂಗ /
 
/ additional info /
೧೨ ನೇ ಸಾಲು:
 
'''ಕಾಜಿರಂಗ ರಾಷ್ಟ್ರೀಯ ಉದ್ಯಾನ'''ವು [[ಭಾರತ]]ದ [[ಅಸ್ಸಾಂ]] ರಾಜ್ಯದಲ್ಲಿದೆ. [[ವಿಶ್ವ ಪರಂಪರೆಯ ತಾಣ]]ವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ [[ಘೇಂಡಾಮೃಗ]] (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ. ಗೋಲಾಘಾಟ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹರಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ ೪೩೦ ಚದರ ಕಿ.ಮೀ.ಗಳಷ್ಟು. ಈ ಉದ್ಯಾನದಲ್ಲಿ [[ಹುಲಿ]]ಗಳ ಸಂಖ್ಯೆ ಬಲು ಸಾಂದ್ರವಾಗಿದ್ದು ಇದು ವಿಶ್ವದ ಕಾಪಿಟ್ಟ ಅರಣ್ಯಗಳ ಪೈಕಿ ಅತಿ ಹೆಚ್ಚೆನಿಸಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ೨೦೦೬ರಲ್ಲಿ ಹುಲಿ ಮೀಸಲು ಎಂದು ಘೋಷಿಸಲಾಗಿದೆ. ಜೊತೆಗೆ ಇಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ [[ಆನೆ]]ಗಳು, ಕಾಡಿನೆ [[ನೀರೆಮ್ಮೆ]]ಗಳು ಮತ್ತು [[ಜಿಂಕೆ]]ಗಳು ಸಹ ವಾಸವಾಗಿವೆ. ವಿಶ್ವದ ಒಂದು ಪ್ರಮುಖ [[ಪಕ್ಷಿ]]ನೆಲೆಯಾಗಿ ಸಹ ಇದನ್ನು ಗುರುತಿಸಲಾಗಿದೆ. ಪೂರ್ವ [[ಹಿಮಾಲಯ]]ದ ಜೈವಿಕ ಕ್ರಿಯಾಕೇಂದ್ರದ ಅಂಚಿನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ದೊಡ್ಡ ಪ್ರಮಾಣದಲ್ಲಿ [[ಜೀವವೈವಿಧ್ಯ]]ವನ್ನು ತೋರುತ್ತದೆ.
[[Image:Kaziranga-National-Park-map-en-mod.svg|thumb|300px|ಕಾಜಿರಂಗ ರಾಷ್ಟ್ರೀಯ ಉದ್ಯಾನದ ನಕಾಶೆ ]]
[[Image:Assam 028 bcs edit.jpg|thumb|ಕಾಜಿರಂಗದ ಹುಲ್ಲುಗಾವಲು ಮತ್ತು ಅರಣ್ಯ]]
 
ಕಾಜಿರಂಗ ರಾಷ್ಟ್ರೀಯ ಉದ್ಯಾನವು ಎತ್ತರದ ಆನೆ ಹುಲ್ಲು ಹೊಂದಿರುವ ವ್ಯಾಪಕ ಬಯಲು, [[ಜೌಗುಪ್ರದೇಶ]] ಮತ್ತು ಉಷ್ಣವಲಯದ ಅಗಲ ಎಲೆಗಳ ತೇವಭರಿತ ಕಾಡನ್ನು ಹೊಂದಿದೆ. ಇಲ್ಲಿ ಮಹಾನದಿ [[ಬ್ರಹ್ಮಪುತ್ರ]] ಸೇರಿದಂತೆ ೪ ಪ್ರಮುಖ ನದಿಗಳು ಹರಿಯುತ್ತವೆ. ಉಳಿದಂತೆ ದೊಡ್ಡ ಸಂಖ್ಯೆಯ ಸಣ್ಣಪುಟ್ಟ ಜಲಸಮೂಹಗಳನ್ನು ಸಹ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಳಗೊಂಡಿದೆ. ಅಸ್ಸಾಂನ ಜನತೆಯ ನಿತ್ಯಜೀವನದ ಅವಿಭಾಜ್ಯ ಅಂಗವಾಗಿರುವ ಕಾಜಿರಂಗ ಹಲವು ಗ್ರಂಥಗಳು, ಹಾಡುಗಳು ಮತ್ತು ಸಾಕ್ಷ್ಯಚಿತ್ರಗಳಿಗ ಮೂಲವಾಗಿದೆ. ೧೯೦೫ರಲ್ಲಿ ಮೀಸಲು ಅರಣ್ಯವಾಗಿ ಘೋಷಿಸಲ್ಪಟ್ಟ ಕಾಜಿರಂಗ ರಾಷ್ಟ್ರೀಯ ಉದ್ಯಾನವು ೨೦೦೫ರಲ್ಲಿ ಶತಾಬ್ದಿಯನ್ನು ಆಚರಿಸಿಕೊಂಡಿತು.
 
==ಇವನ್ನೂ ನೋಡಿ==
[[ಅಸ್ಸಾಂ]]
 
[[ವಿಶ್ವ ಪರಂಪರೆಯ ತಾಣ]]
 
[[ಭಾರತದ ವಿಶ್ವ ಪರಂಪರೆಯ ತಾಣಗಳು]]
 
==ಬಾಹ್ಯ ಸಂಪರ್ಕಕೊಂಡಿಗಳು==
* [http://whc.unesco.org/en/list/337/ ಯುನೆಸ್ಕೋ ಅಧಿಕೃತ ಅಂತರ್ಜಾಲ ಮಾಹಿತಿ ತಾಣ]
* [http://www.kaziranga100.com ಕಾಜಿರಂಗ ಶತಾಬ್ದಿ]
* [http://www.wcmc.org.uk/protected_areas/data/wh/kazirang.html ಕಾಜಿರಂಗ]
* [http://www.assamforest.co.in/NP_Sanctuaries/np_Kaziranga.php ಅಸ್ಸಾಂ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಮಾಹಿತಿ ತಾಣ]
 
[[ವರ್ಗ: ವಿಶ್ವ ಪರಂಪರೆಯ ತಾಣಗಳು]]