ತಂಬುಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{under construction}}
ಸಾಮಾನ್ಯವಾಗಿ ಬೇಸಿಗೆಯಲ್ಲಿ ಅನ್ನದ ಜತೆಗೆ ಸೇವಿಸಲು [[ಹವ್ಯಕ]]ರ ಮನೆಗಳಲ್ಲಿ ಮಾಡುವ ವಿಶಿಷ್ಟ ಬಗೆಯ ಅಡುಗೆ. ಇದು ಸಾಮಾನ್ಯವಾಗಿ ದ್ರವ ರೂಪದಲ್ಲಿ ಇರುತ್ತದೆ. ಮಜ್ಜಿಗೆಯನ್ನು ಇದರಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮೂಲ ವಸ್ತುವನ್ನು ಉಪಯೋಗಿಸುತ್ತೇವೆಯೊ, ಅದರ ತಂಬುಳಿಯಾಗುತ್ತದೆ. ಆ ಪದಾರ್ಥದ ಜತೆಗೆ, ತೆಂಗಿನತುರಿಯನ್ನು ಸೇರಿಸಿ, ರುಬ್ಬಿ, ಮಜ್ಜಿಗೆಯನ್ನು ಮತ್ತ ಉಪ್ಪನ್ನು ಸೇರಿಸಿ ಒಗ್ಗರಣೆ ಕೊಡುವುದು. ಉದಾಹರಣೆಗೆ, ಮಾವಿನಕಾಯಿಯನ್ನು ಉಪಯೋಗಿಸಿದರೆ, ಅದನ್ನು ಮಾವಿನಕಾಯಿ ತಂಬುಳಿಯೆಂದು ಕರೆಯುತ್ತಾರೆ. <ref>[http://www.prajavani.net/news/article/2015/05/09/319535.html ತಂಪು ತಂಬುಳಿ,www.prajavani.net]</ref>
[[ನಿಸರ್ಗ]]ದತ್ತವಾಗಿ ಸಿಗುವ ಸೊಪ್ಪು, ಚಿಗುರು, ಗಿಡಮೂಲಿಕೆಗಳು, ಬೇರುನಾರುಗಳು ಅಥವಾ ಸಾಂಬಾರುದ್ರವ್ಯಗಳಿಂದ ತಯಾರಾಗುವ ಪದಾರ್ಥವೇ ತಂಬುಳಿ. ಈ ಪದಾರ್ಥವು ಬೇಸಿಗೆ, ಮಳೆ, ಚಳಿ ಈ ಮೂರೂ ಕಾಲಕ್ಕೂ ಸಲ್ಲುತ್ತದೆ. ಮನೆಯ ಸುತ್ತಮುತ್ತಲಿನ ಔಷಧೀಯ ಗುಣಗಳುಳ್ಳ ಸಸ್ಯಗಳ ಪರಿಚಯವಿದ್ದರೆ ಸಾಕು ವಿವಿಧ ಬಗೆಯ ತಂಬುಳಿ ಮಾಡಬಹುದು.<ref>https://www.vijayavani.net/%E0%B2%86%E0%B2%B0%E0%B3%8A%E0%B3%95%E0%B2%97%E0%B3%8D%E0%B2%AF-%E0%B2%AC%E0%B3%87%E0%B2%95%E0%B3%87-%E0%B2%A4%E0%B2%82%E0%B2%AC%E0%B3%81%E0%B2%B3%E0%B2%BF-%E0%B2%AE%E0%B2%BE%E0%B2%A1%E0%B2%BF/</ref>
ಉದರ ಸಂಬಂಧಿ ಖಾಯಿಲೆಗಳಿಗೆ, ಬಾಯಿಹುಣ್ಣು, ಶೀತ, ಕೆಮ್ಮು ಇತ್ಯಾದಿ ಖಾಯಿಲೆಗಳಿಗೂ ಕೂಡಾ ದಿವ್ಯೌಷಧ ಆಗಬಲ್ಲಂತಹ ಅದೆಷ್ಟೊ ಗಿಡಮೂಲಿಕೆಗಳು, ಚಿಗುರುಗಳು ನಮ್ಮ ಮನೆಯಂಗಳದಲ್ಲೆ ಕಾಣಸಿಗುತ್ತವೆ.
===ತಂಬುಳಿಗೆ ಬಳಸುವ ಮೂಲವಸ್ತುಗಳು===
ತಂಬುಳಿ ಮಾಡಲು [[ಎಲೆ]]ಗಳಾದ ಒಂದೆಲಗ, ಎಲೆಮುರಿ, ಬಿಲ್ವಪತ್ರೆ ಹಾಗೂ ವೀಳ್ಯದೆಲೆ, [[ಚಿಗುರು]]ಗಳಾದ ಮಾದಿರ, ನೆಲನೆಲ್ಲಿ, ಅತ್ತಿ ಮತ್ತು ನೆಕ್ಕರೆ, [[ಗೆಡ್ಡೆ]]ಗಳಾದ ಶುಂಠಿ, ನೀರುಳ್ಳಿ, ಬೆಳ್ಳುಳ್ಳಿ, ನೆಲ್ಲಿಕಾಯಿ, ಸಮೂಲವಾಗಿ ಗರ್ಗ, ಸಾಂಬಾರ ಬಳ್ಳಿ ಮತ್ತು ಇಲಿಕಿವಿ, ಕಾಳುಗಳಾದ ಮೆಂತೆ, ಜೀರಿಗೆ ಹಾಗೂ ಓಮ, [[ಹೂವು]]ಗಳಾದ ತುಂಬೆ, ಬಿಸಿ [[ದಾಸವಾಳ]] ಮತ್ತು ಅಶೋಕ, ದಾಳಿಂಬ ಹಾಗೂ [[ಕಿತ್ತಳೆ]] ಸಿಪ್ಪೆಗಳನ್ನು ಬಳಸುತ್ತಾರೆ.
===ತಂಬುಳಿ ತಯಾರಿಸುವ ವಿಧಾನ===
ಹೆಚ್ಚಿನೆಲ್ಲಾ ತಂಬುಳಿಗಳನ್ನು ತಯಾರಿಸುವ ವಿಧಾನ ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಅವುಗಳು [[ಆರೋಗ್ಯ]]ದ ಮೇಲೆ ಬೀರುವ ಪರಿಣಾಮ ಹಾಗೂ [[ಔಷಧಿ|ಔಷಧೀಯ]] ಗುಣಗಳಲ್ಲಿ ವ್ಯತ್ಯಾಸವಿದೆ.
ಮೂಲ ವಸ್ತುಗಳ ಆಧಾರದ ಮೇಲೆ ತಂಬುಳಿ ಮಾಡುವ ವಿಧಾನವನ್ನು ಎರಡು ರೀತಿಯಾಗಿ ವಿಂಗಡಿಸಬಹುದು.<ref>http://archana-hebbar.blogspot.com/2009/10/blog-post.html</ref>
"https://kn.wikipedia.org/wiki/ತಂಬುಳಿ" ಇಂದ ಪಡೆಯಲ್ಪಟ್ಟಿದೆ