ನಿಡ್ಪಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
 
==ಭೌಗೋಳಿಕ ವಿಶೇಷತೆಗಳು==
ಶಾಂತಾದುರ್ಗಾ ದೇವಸ್ಥಾನವು ನಿಡ್ಪಳ್ಳಿಯ ಗ್ರಾಮದೇವಸ್ಥಾನ. ಕಿನ್ನಿಮಾಣಿ-ಪೂಮಾಣಿ (ಉಳ್ಳಾಕುಲು) ಇಲ್ಲಿನ ಗ್ರಾಮ ದೈವಗಳು. ಪುರಾತನ ಕಾಲದಿಂದಲೂ ಆರಿಗ ಮನೆತನದ [[ಜೈನ]] ಅರಸರ ಮುಂದಾಳುತ್ವದಲ್ಲಿ ಕ್ರಮಬದ್ಧವಾಗಿ ನಡೆಯುತ್ತಿದ್ದ ದೈವಾರಾಧನೆ, ಜಾತ್ರೊತ್ಸವಗಳು ಕ್ರಿ. ಶ ೧೯೭೨ ರ ಆಸುಪಾಸಿನ ಅನಿರೀಕ್ಷಿತ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ ಸಂಪೂರ್ಣವಾಗಿ ನಿಂತೇ ಹೊದವು. ದೇವ-ದೈವಸ್ಥಾನಗಳೂ<ref>https://www.nikharanews.com/%E0%B2%A8%E0%B2%BF%E0%B2%A1%E0%B3%8D%E0%B2%AA%E0%B2%B3%E0%B3%8D%E0%B2%B3%E0%B2%BF-%E0%B2%97%E0%B3%8D%E0%B2%B0%E0%B2%BE%E0%B2%AE%E0%B2%A6-%E0%B2%9C%E0%B2%A8%E0%B2%A4%E0%B3%86-%E0%B2%AC%E0%B2%82/ </ref> ಕಾಲನ ಹೊಡೆತಕ್ಕೆ ಸಿಕ್ಕು ಜೀರ್ಣವಾದವು. ಈಗ ಇರುವ ದೈವಸ್ಥಾನಗಳ ಅನತಿ ದೂರದಲ್ಲೇ ಒಂದು ಶಿವ ದೇವಸ್ಥಾನದ ಕುರುಹುಗಳನ್ನು ಕಾಣಬಹುದು. ಇದೇ ಪರಿಸರದಲ್ಲಿ ಹಲವಾರು ತಲೆಮಾರುಗಳ ಹಿಂದೆ ದುರ್ಗಾ ಮಂದಿರವೂ ಇತ್ತೆನ್ನುವುದು ಕೆಲವರ ಅಭಿಮತ;. ಇದಕ್ಕೆ ಸಾಕ್ಷಿಯಾಗಿ, ಪ್ರಸ್ತುತ ದೇವಸ್ಥಾನ ನಿರ್ಮಾಣದ ಸಂದರ್ಭದಲ್ಲಿ ವಿಗ್ರಹವೋಂದರ ಪಾಣಿಪೀಠ ಮತ್ತು ದೇವ ಗುಡಿಯೊಂದರ ಪಳೆಯುಳಿಕೆಗಳು ದೊರಕಿತ್ತು. ೧೯೯೦ ರ ದಶಕದ ಆದಿಯಿಂದಲೂ ಗ್ರಾಮದ ಪ್ರಮುಖರು ದೈವಸ್ಥಾನಗಳ ಪುನರುಜ್ಜೀವನಕ್ಕಾಗಿ ಪ್ರಯತ್ನ ಪಟ್ಟರೂ, ೨೦೧೮ ರಲ್ಲಷ್ಟೇ ದೇವಸ್ಥಾನ ಮತ್ತು ದೈವಸ್ಥಾನಗಳು ಸಂಪೂರ್ಣವಾಗಿ ರೂಪುಗೊಂಡವು. ಈ ದೇವಸ್ಥಾನ ಸಂಕೀರ್ಣಗಳು ಸುಂದರವಾದ ಶಾಂತಾದುರ್ಗಾ ದೇವಸ್ಥಾನ, ಕಿನ್ನಿಮಾಣಿ-ಪೂಮಾಣಿ-ಹುಲಿಭೂತ-ಮಲರಾಯ ಮತ್ತು [[ಧೂಮಾವತೀ ದೈವ]]ಗಳ ದೈವಸ್ಥಾನಗಳನ್ನು ಒಳಗೊಂಡಿದೆ. ೨೦೧೯ನೇ ಇಸವಿಯ ಮಾರ್ಚ್ ತಿಂಗಳಿನಲ್ಲಿ ಬ್ರಹ್ಮಕಲಶೊತ್ಸವ ಮತ್ತು ನೇಮೊತ್ಸವಗಳೊಂದಿಗೆ ನಿಡ್ಪಳ್ಳಿಯ ಗ್ರಾಮ ದೇವಸ್ಥಾನ ಮತ್ತು ದೈವಸ್ಥಾನಗಳು ಪುನರೂರ್ಜಿತಕ್ಕೆ ಬಂದವು. <ref>https://m.dailyhunt.in/news/india/kannada/udayavani-epaper-udayavani/nidpalli+matte+tale+ettitu+kaalagarbhadalli+mareyaagiddha+degula-newsid-110420154<ref>
ಹೆಸರೇ ಸೂಚಿಸುವಂತೆ ಇಲ್ಲಿನ ಮುಖ್ಯ ದೇವತೆ ಶಾಂತ ರೂಪಿಣಿಯಾದ ದುರ್ಗೆ. ದೇವಸ್ಥಾನದಲ್ಲಿ ಸುಮಾರು ೨ ಅಡಿ ಎತ್ತರದ ಕರಿ ಕಲ್ಲಿನ ಸುಂದರವಾದ ದುರ್ಗೆಯ ವಿಗ್ರಹ ಪೂಜಿಸಲ್ಪಡುತ್ತದೆ. ಗಣಪತಿಯ ಗುಡಿಯೂ ಈ ದೇವಸ್ಥಾನದ ಒಂದು ಭಾಗ.
 
 
==ಪ್ರಯಾಣ==
ನಿಡ್ಪಳ್ಳಿ ಗ್ರಾಮವು ಸಮೀಪದ ಪಟ್ಟಣಗಳಾದ ಪುತ್ತೂರು, ಸುಳ್ಯ, ಮಂಗಳೂರು ಮತ್ತು ಕಾಸರಗೊಡುಗಳಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಹತ್ತಿರದ ರೈಲು ನಿಲ್ದಾಣ ಕಬಕ-ಪುತ್ತೂರು. ವಿಮಾನ ನಿಲ್ದಾಣ ಮಂಗಳೂರು.
 
 
"https://kn.wikipedia.org/wiki/ನಿಡ್ಪಳ್ಳಿ" ಇಂದ ಪಡೆಯಲ್ಪಟ್ಟಿದೆ