ವೇಶ್ಯಾವೃತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
Added links
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೧ ನೇ ಸಾಲು:
ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗಗ ಳೆಂಬ ಮಾತುಗಳಿವೆ. ವಿಗ್ರಹಕ್ಕೆ ಸಲ್ಲುವ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಮುಂತಾದುವು ಅಂಗಭೋಗಗಳು. ಗರ್ಭಗೃಹದ ಮುಂದಿನ ರಂಗಸ್ಥಳದಲ್ಲಿ ನಡೆಯುತ್ತಿದ್ದ ಗೀತ-ನೃತ್ಯಗಳು ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಅಗತ್ಯಗಳಾಗಿದ್ದರು.
 
ವೇಶ್ಯೆಯರನ್ನು ಕಾಮಿನಿಯರು ,ಸೂಳೆ, ಮಂಗಳಮುಖಿ, ನಿತ್ಯ ಸುಮಂಗಲಿ, ಬಸವಿ, ನಾಯಕಸಾನಿ, ವಾರಾಂಗನೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಕೋರ್ಟೆಸಾನ್ ಎನ್ನುತ್ತಾರೆ. ಇದು ಫ್ರೆಂಚ್ ಪದ. ತಂಜಾವೂರಿನ ಬೃಹದೀಶ್ವರ ದೇವಸ್ಥಾನದ ಚೋಳರಾಜನ 1004ರ ಶಾಸನವೊಂದರಲ್ಲಿ ದೇವಸ್ಥಾನದ 400 ದೇವದಾಸಿಯರಿಗೆ ದೇವಾಲಯದ ಸುತ್ತ ನಾಲ್ಕು ಬೀದಿಗಳಲ್ಲಿ ಉಚಿತ ವಸತಿ, ತೆರಿಗೆ ವಿನಾಯ್ತಿಯುಳ್ಳ ಜಮೀನನ್ನು ಉಂಬಳಿಯಾಗಿ ನೀಡಿದ ದಾಖಲೆ ಇದೆ. ಇಂದಿಗೂ ದಕ್ಷಿಣ ಆಫ್ರಿಕದ ಕೆಲವು ಬುಡಕಟ್ಟುಗಳಲ್ಲಿ, ದಕ್ಷಿಣ ಭಾರತದ ಹಲವು ಪ್ರಾಂತಗಳಲ್ಲಿ ಈ ಪದ್ಧತಿ ವಿರಳವಾಗಿ ಕಂಡುಬರುತ್ತದೆ. ಒರಿಸ್ಸದ ಪುರಿ ಜಗನ್ನಾಥ ಮಂದಿರದಲ್ಲಿ ಇದು ವಿಶೇಷವಾಗಿದೆ ಎಂದು ಫ್ರೆಂಚ್ ಯಾತ್ರಿಕ ಬರ್ವಿಯರ್ ದಾಖಲಿಸುತ್ತಾನೆ. ಆಂಧ್ರಪ್ರದೇಶದ ತೆಲಂಗಾಣ ಪ್ರದೇಶದಲ್ಲಿ ದೇವದಾಸಿಯಾಗಲಿರುವ ಹುಡುಗಿಯನ್ನು ಬಸವಿ ಎನ್ನುತ್ತಿದ್ದರು. ಕರ್ನಾಟಕದ ಮಲೆಯ ಮಹದೇಶ್ವರ (ನೋಡಿ) ದೇವಸ್ಥಾನದಲ್ಲಿ ಗುಡ್ಡಿ ಹೆಸರಿನ ದೇವದಾಸಿಯರಿದ್ದಾರೆ. ಇವರನ್ನು ದೇವರ ಗುಡ್ಡಿ ಎಂದೂ ಕರೆಯುತ್ತಾರೆ. ತಮಿಳುನಾಡಿನ ರಾಮೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಪೂಜಾರಿಯ ಜೊತೆಗೆ ಒಬ್ಬ ದೇವದಾಸಿ ಬ್ರಾಹ್ಮಣಕನ್ಯೆಯಂತೆ ವೇಷಧರಿಸಿ, ರುದ್ರಾಕ್ಷಿ ಹಾಕಿಕೊಂಡು ಬರುವ ಪದ್ಧತಿ ಇದೆ. ಈಕೆಯನ್ನು ತಮಿಳಿನಲ್ಲಿ ಮುರೈಕಾರೀ ಎನ್ನುತ್ತಾರೆ. ಗೋವದ ಮಂಗೇಶ ದೇವಾಲಯದಲ್ಲಿ ದೇವದಾಸಿಯರಿದ್ದು ಸೋಮವಾ ರದ ಪೂಜೆಯ ಸಂದರ್ಭದಲ್ಲಿ, ಹಬ್ಬಗಳಲ್ಲಿ ಅವರು ಗಾಯನ-ನರ್ತನ ಮಾಡುತ್ತಾರೆ. ಇಲ್ಲಿನ ಮಲ್ಯ ಊರಿನ ವಿಷ್ಣು ದೇವಾಲಯದ ದೇವದಾಸಿಯರನ್ನು ಭಾವಿನ್ ಎನ್ನುತ್ತಾರೆ
*
ಧಾರ್ಮಿಕ ಪರಿವೇಶವುಳ್ಳ ದೇವದಾಸಿ ಪರಿಕಲ್ಪನೆ ಧಾರ್ಮಿಕ ಗುರು ಹಾಗೂ ಧನಿಕರ ಕಾಮಲಾಲಸೆಯ ಪ್ರತೀಕವಾಗಿ ಕಂಡುಬರುತ್ತದೆ. ಭಾರತೀಯ ಸಂಗೀತ-ನೃತ್ಯ ಪರಂಪರೆಯನ್ನು ಉಳಿಸಿ-ಬೆಳೆಸಿದವರು ದೇವದಾಸಿಯರು. ಆದರೆ ಕ್ರಮೇಣ ಈ ಪದ್ಧತಿಯ ನಿಜವಾದ ಉದ್ದೇಶ ನಾಶವಾಗಿ ಹೀನಾರ್ಥ ಪ್ರಾಪ್ತವಾಯಿತು. ವೃತ್ತಿಗೌರವವಿಲ್ಲದ ಈ ಪದ್ಧತಿಯನ್ನು ವೇಶ್ಯಾವಾಟಿಕೆ ಎಂದು ತಿಳಿಯಲಾಗಿದೆ. ಬ್ರಿಟಿಷರ ಅವಧಿಯಲ್ಲಿ ಇದನ್ನು ನಿಷೇಧಿಸುವ ಕಾಯಿದೆಗಳು ಜಾರಿಯಾದುವು. ಮುಂಬಯಿ (1923), ಉತ್ತರ ಪ್ರದೇಶ ಮತ್ತು ಬಂಗಾಲ (1933), ಪಂಜಾಬ್ (1935), ಬಿಹಾರ (1948) ಹಾಗೂ ಮೈಸೂರು ರಾಜ್ಯ (1956) ಗಳಲ್ಲಿ ಇದು ವಿವಿಧ ಹಂತಗಳಲ್ಲಿ ಜಾರಿಗೆ ಬಂದಿತು. ಭಾರತ ಸರ್ಕಾರ ಸ್ತ್ರೀ ಮತ್ತು ಯುವತಿಯರ ಅನೈತಿಕ ವ್ಯವಹಾರ ನಿಷೇಧ ಕಾಯಿದೆಯನ್ನು 1956ರಲ್ಲಿ ದೇಶಾದ್ಯಂತ ಏಕರೂಪವಾಗಿ ಜಾರಿಗೆ ತಂದಿದೆ.
"https://kn.wikipedia.org/wiki/ವೇಶ್ಯಾವೃತ್ತಿ" ಇಂದ ಪಡೆಯಲ್ಪಟ್ಟಿದೆ