ಕಲ್ಯಾಣ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ. ೬.೪೫ ಎಕರೆಗಳಷ್ಟು ವಿಸ್ತಾರವಾಗಿದ್ದು, ೨೨೪ ಜಗಳಷ್ಟು ಉದ್ದ ಮತ್ತು ೧೬೦ ಅಗಲವಿದೆ.<ref>https://www.holidify.com/places/agartala/tripura-sundari-temple-sightseeing-1010.html</ref> ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಿಗೆ ಸೇರಿಸುತ್ತದೆ. ಕಲ್ಯಾಣ ಸಾಗರದಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಈ ನೈಸರ್ಗಿಕ ಕೊಳವು ಜಲಚಾರ ಜಾತಿಯ ಪ್ರಭೇದಗಳನ್ನು ಹೊಂದಿದೆ. ಕಲ್ಯಾಣ ಸಾಗರ ಕೆರೆ ಪ್ರದೇಶವು ೨.೭೫೨ ಎಕರೆಯನ್ನು ಹೊಲುತ್ತದೆ. ಈ ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿನ ಭಕ್ತರು ಮೀನು ಮತ್ತು [[ಆಮೆ|ಆಮೆಗಳನ್ನು]] ಪೂಜಿಸುತ್ತಾರೆ. [[ಸರೋವರ|ಸರೋವರದ]] ಸುತ್ತಲಿನ ಪರಿಸರ ವ್ಯವಸ್ಥೆಯ ನಾಶದಿಂದಾಗಿ ಸರೋವರದ ನೀರು ಆಮ್ಲೀಯವಾಯಿತು. ಇದು ಆಮೆಯ ಮರಣಕ್ಕೆ ಕಾರಣವಾಗುತ್ತದೆ. ಅದುದರಿಂದಾಗಿ ಆಮೆಗಳಿಗೆ ಮೊಟ್ಟೆಗಳನ್ನು ಇಡಲು ಸಾದ್ಯವಾಗುತ್ತಿರಲ್ಲಿಲ. ಸರೋವರದ ನೀರಿನ ಗುಣಮಟ್ಟವು ಉತ್ತಮ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.