ಕನ್ನಡ ವೃತ್ತಿ ರಂಗಭೂಮಿಯ ನಟರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Orphan page, add template
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
'''ಕನ್ನಡ ವೃತ್ತಿ ರಂಗಭೂಮಿಯ ನಟರು''' : [[ಕನ್ನಡ]] ನಾಡಿನ ನಟವರ್ಗದಲ್ಲಿ ಹಿರಿಯರು ಕೆಲವರು ಪ್ರಸಕ್ತಶಕದ ಆದಿಯಲ್ಲೆ ನೀಲಗಿರಿಯಲ್ಲಿ ತಮಿಳು ದೊರೆ ಶೆಂಗುಟ್ಟವನ್ ಎಂಬಾತನ ಸಮಕ್ಷದಲ್ಲಿ ನಾಟಕವಾಡಿ ತೋರಿಸಿದ್ದರೆಂದು ಶಿಲಪ್ಪದಿಗಾರಂ ಎಂಬ ತಮಿಳು ಗ್ರಂಥದಲ್ಲಿ ಉಲ್ಲೇಖವಾಗಿರುವುದನ್ನು ಆಧಾರವಾಗಿಟ್ಟುಕೊಳ್ಳುವುದಾದರೆ ಕನ್ನಡ ನಟವರ್ಗಕ್ಕೂ ಒಂದು ಪ್ರಾಚೀನ ಪರಂಪರೆ ಇದೆಯೆಂದು ಊಹಿಸಬಹುದು.
ವಿಜಯನಗರದ ಉಚ್ಛ್ರಾಯಕಾಲದಲ್ಲಿ ಮೆರೆದ ಭಾರತದ ಆರ್ಯ ಸಂಸ್ಕೃತಿಯ ಪ್ರಾದೇಶಿಕ ಸ್ವರೂಪದಲ್ಲಿ ಕನ್ನಡ ನಾಟಕಗಳಿಗೂ ಯೋಗ್ಯಪಾತ್ರ ಬಂದಿತ್ತೆಂಬುದರಲ್ಲಿ ಸಂದೇಹವಿಲ್ಲ. ಮೈಸೂರಿನ ಒಡೆಯರ ಕಾಲದಲ್ಲಿ ಮತ್ತು ಹೈದರನ ಆಡಳಿತದಲ್ಲಿ ಕನ್ನಡ ನಾಟಕಗಳನ್ನು ಅಭಿನಯಿಸಿ ದೊರೆಗಳ ಮತ್ತು ಜನಗಳ ಮನವನ್ನೊಲಿಸುತ್ತಿದ್ದ ನಟ ನಟಿಯರಿದ್ದರೆಂದು ಕಾಣುತ್ತದೆ. ಚಿಕ್ಕದೇವರಾಜ ಒಡೆಯರ ಕಾಲದ ಮಿತ್ರವಿಂದಗೋವಿಂದ ನಾಟಕ ಯೋಗ್ಯ ನಟರಿಂದ ಅಭಿನಯಿಸಲ್ಪಟ್ಟಿದ್ದರಿಂದಲೇ ಬೆಳೆಕಿಗೆ ಬರುವುದು ಸಾಧ್ಯವಾಯಿತು. ಬರಬರುತ್ತ ರಾಜಾಶ್ರಯ ಕ್ಷಯಿಸಲು ಈ ನಟರು ಹಳ್ಳಿಯನ್ನು ಸೇರಿ ಅಥವಾ ತಮ್ಮ ಹುಟ್ಟೂರನ್ನು ಸೇರಿ, ಹರಿಕಥೆ ಮಾಡಿಯೋ, ಬಯಲಾಟ ನಡೆಸಿಯೋ, ಯಕ್ಷಗಾನ ಪ್ರಸಂಗ ತೋರಿಸಿಯೋ, ತಮ್ಮ ಹೊಟ್ಟೆ ಹೊರೆಯಬೇಕಾದ ಸ್ಥಿತಿ ಬಂತು.