ಕನ್ನಡ ಚಳುವಳಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Bot: Orphan page, add template
೧ ನೇ ಸಾಲು:
{{Orphan|date=ಮಾರ್ಚ್ ೨೦೧೯}}
==ಇತಿಹಾಸ==
ಏಕೀಕರಣೋತ್ತರ ಕರ್ನಾಟಕವನ್ನು ಪ್ರಗತಿ ಪರವಾಗಿ ರೂಪಿಸಲು ಬೌದ್ಧಿಕ ಹಾಗೂ ಭೌತಿಕ ಈ ಎರಡು ನೆಲೆಗಳಲ್ಲೂ ನಡೆಸಿದ ಚಳವಳಿಗಳನ್ನು ಕನ್ನಡ ಚಳವಳಿ ಎಂದು ಗುರುತಿಸಲಾಗುತ್ತದೆ. ಬೌದ್ಧಿಕವಾಗಿ ಅಥವಾ ಸೈದ್ಧಾಂತಿಕವಾಗಿ ಕರ್ನಾಟಕವನ್ನು ರೂಪಿಸುವ ಕಾರ್ಯದಲ್ಲಿ ಪ್ರಧಾನವಾದ ಪಾತ್ರವೆಂದರೆ, ಛಿದ್ರಗೊಂಡಿದ್ದ ಕನ್ನಡ ಪ್ರದೇಶಗಳಲ್ಲಿನ ಸೃಜನಶೀಲದ ಸಾಹಿತ್ಯಕ ಸೃಷ್ಟಿ. ಇದು ಕನ್ನಡದ ಸಂವೇದನೆಯನ್ನು ಕಾಯ್ದುಕೊಂಡು ಬಂದ ಸಾಂಸ್ಕೃತಿಕ ಪ್ರಕ್ರಿಯೆ. ಈ ಪ್ರಕ್ರಿಯೆ ಕವಿರಾಜಮಾರ್ಗಕಾರನಿಂದ ಮೊದಲ್ಗೊಂಡು ಬೇಂದ್ರೆ, ಕುವೆಂಪು ಅವರನ್ನು ಒಳಗೊಂಡಂತೆ ಇತ್ತೀಚಿನ ಸಾಹಿತ್ಯ ಸೃಷ್ಟಿಯವರೆಗೂ ಮುಂದುವರಿದಿದೆ. ಅಂದರೆ ನಾಡು, ನುಡಿ ಮತ್ತು ಕನ್ನಡಿಗರನ್ನು ಕುರಿತಂತೆ ಸಂಸ್ಕೃತ, ಇಂಗ್ಲಿಷ್ ಇನ್ನಿತರ ಭಾಷೆಗಳನ್ನು ಎದುರುಗೊಳ್ಳುವುದರೊಂದಿಗೆ ಕನ್ನಡದ ಅನನ್ಯತೆಯನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ. 12ನೆಯ ಶತಮಾನದ ಎಲ್ಲ ವರ್ಗಗಳ ವಚನಕಾರರು ಕನ್ನಡ ಸಂವೇದನೆಯನ್ನು ಮೆರೆದದ್ದು ಮಹತ್ವಪೂರ್ಣ ವಾದುದು. ಎಲ್ಲ ರೀತಿಯ ಸಂವಹನ, ಅನುಸಂಧಾನಗಳಿಗೆ ಕನ್ನಡ ಭಾಷೆಯೊಂದನ್ನೇ ಮಾಧ್ಯಮವನ್ನಾಗಿಸಿದ್ದು ವಚನಗಳ, ವಚನಕಾರರ ಹೆಗ್ಗಳಿಕೆ. ಈ ದಿಸೆಯಲ್ಲಿ ವಚನಕಾರರನ್ನು ಮೊದಲ ಭಾಷಿಕ (ಕನ್ನಡ) ಹರಿಕಾರರು ಎನ್ನಬಹುದು. ಅನಂತರದ ನವೋದಯ, ಪ್ರಗತಿಶೀಲರ ಸಾಹಿತ್ಯ ಸೃಷ್ಟಿ, ಭಾರತದ ಸ್ವಾತಂತ್ರ್ಯ ಏಕೀಕರಣದ ಪ್ರಕ್ರಿಯೆ ಇವುಗಳು ಈ ಕನ್ನಡ ಚಳವಳಿಗಳಿಗೆ ಪ್ರೇರಣೆ ನೀಡಿದವು. ಇಂಥ ಪ್ರೇರಣೆ, ಪ್ರಯತ್ನಗಳಿಂದಾಗಿ ವಸಾಹತು ಕಾಲದಲ್ಲಿ ತುಂಡಾಗಿದ್ದ ಕನ್ನಡ ಭೂ ಪ್ರದೇಶಗಳು ಒಂದುಗೂಡಿದವು. ಹೀಗೆ ಒಂದಾದದ್ದೂ ಕನ್ನಡ ಚಳವಳಿಯೇ ಆಗಿದೆ. ಆದರೂ ಭಿನ್ನ ಸ್ವರೂಪದ ಚಳವಳಿಯ ಪ್ರಕ್ರಿಯೆಗಳು ಕಾಣಿಸಿಕೊಂಡದ್ದು ಏಕೀಕರಣದ ಅನಂತರವೇ.<ref>http://timepassri.blogspot.in/2014/11/blog-post_4.html</ref>
"https://kn.wikipedia.org/wiki/ಕನ್ನಡ_ಚಳುವಳಿಗಳು" ಇಂದ ಪಡೆಯಲ್ಪಟ್ಟಿದೆ