ದಾಂಡೇಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೬ ನೇ ಸಾಲು:
 
=='ದಾಂಡೇಲಿ ವನ್ಯಜೀವಿ ನಿಸರ್ಗಧಾಮ, ದಾಂಡೇಲಿ==
ದಾಂಡೇಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯೆಂದರೆ ದಾಂಡೇಲಿ ವನ್ಯಜೀವಿ ನಿಸರ್ಗಧಾಮ. ಇಲ್ಲಿನ ನಿರ್ದಿಷ್ಟ ಪ್ರದೇಶವನ್ನು ದಾಂಡೇಲಿ ವನ್ಯಜೀವಿ ಧಾಮವೆಂದು 1956 ಮೇ 10 ರಂದು ಘೋಷಿಸಲಾಯಿತು. ನಂತರ 2006 ರಲ್ಲಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.ಇಲ್ಲಿನ ವನ್ಯಜೀವಿ ನಿಸರ್ಗಧಾಮದಲ್ಲಿ ಪ್ರವಾಸಿಗರು ರುದ್ರ ರಮಣೀಯ ಪ್ರಪಾತಗಳು, ಆಳವಾದ ನದಿ ನೀರಿನ ಹರಿವು ಮತ್ತು ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಸವಿಯಬಹುದು. ಸುಮಾರು 834.16 ಸ್ಕೇ.ಕಿ.ಮೀ. ವ್ಯಾಪ್ತಿ ಪ್ರದೇಶಗಳಲ್ಲಿ ಹರಡಿಕೊಂಡಿರುವ ಈ ಅರಣ್ಯವು 100 ರಿಂದ 970 ಮೀಟರಗಳಷ್ಟು ಎತ್ತರ ಹೊಂದಿದೆ. ಬಹಳಷ್ಟು ಅಳಿವನಂಚಿನಲ್ಲಿರುವ ಮತ್ತು ಅಪರೂಪದ ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಈ ಅರಣ್ಯ ಪ್ರದೇಶವು ನೆಲೆ ನೀಡಿದೆ. ಕಪ್ಪು ಚಿರತೆ, ಜಿಂಕೆ, ಸಂಬಾರ, ಚಿಗರಿ, ಹಳದಿ ಕಾಲುಗಳ ನವಿಲು, ಹಾರ್ನಬಿಲ್, ಗೂಗೆ, ಕಾಡುಕೋಳಿ ಮುಂತಾದವುಗಳನ್ನು ಇಲ್ಲಿ ಕಾಣಬಹುದು.ಸುಮಾರು 200 ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಸಂಕುಲವನ್ನು ಈ ಅರಣ್ಯಧಾಮದಲ್ಲಿ ವೀಕ್ಷಿಸಬಹುದಾಗಿದೆ. ಈ ನಿಸರ್ಗಧಾಮದ ದಟ್ಟಾರಣ್ಯದಲ್ಲಿ ಚಾರಣ, ಸಾಹಸದ ಬೋಟಿಂಗ್ ಕ್ರೀಡೆಗಳಲ್ಲಿ ಪ್ರವಾಸಿಗರು ಭಾಗವಹಿಸಬಹುದು. ಈ ನಿಸರ್ಗಧಾಮಕ್ಕೆ ಅಕ್ಟೋಬರ್ ನಿಂದ ಜೂನ್ ತಿಂಗಳುಗಳಲ್ಲಿ ಭೇಟಿ ನೀಡಲು ಪ್ರವಾಸಿಗರಿಗೆ ಒಳ್ಳೆಯ ಸಮಯ. ಇಡೀ ಅರಣ್ಯವನ್ನು ತೆರದತೆರೆದ ಜೀಪಿನಲ್ಲಿ ಪ್ರವಾಸಿಗರು ನೋಡಬಹುದು. ಅರಣ್ಯದ ಮಾಹಿತಿಗಾಗಿ ಮತ್ತು ಸೂಕ್ತ ಮಾರ್ಗದರ್ಶನಕ್ಕಾಗಿ ಗೈಡ್ಸ್ ಗಳು ಇಲ್ಲಿದ್ದಾರೆ. ದಾಂಡೇಲಿ ವನ್ಯಜೀವಿ ನಿಸರ್ಗಧಾಮದ ಹತ್ತಿರವೇ ಇರುವ ಅಣಶಿ ರಾಷ್ಟ್ರೀಯ ಉದ್ಯಾನವನ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆ.
 
{{Commons category|Dandeli}}
"https://kn.wikipedia.org/wiki/ದಾಂಡೇಲಿ" ಇಂದ ಪಡೆಯಲ್ಪಟ್ಟಿದೆ