ವಿ.ಹರಿಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
೧೯೯೦ ರ ದಶಕದಲ್ಲಿ ಹಂಸಲೇಖಾ, ವಿ. ರವಿಚಂದ್ರನ್, ಸಾಧು ಕೋಕಿಲಾ, ಗುರುಕಿರಣನ್ ಮೊದಲಾದ ಹಲವಾರು ಪ್ರಮುಖ ಸಂಗೀತ ನಿರ್ದೇಶಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಹರಿಕೃಷ್ಣ ಅವರು ಅನೇಕ ಸಂಗೀತ ನಿರ್ದೇಶಕರ ಕೀಬೋರ್ಡ್ರ್ ಆಗಿ ಕೆಲಸ ಮಾಡಿದ್ದಾರೆ. ಅವರು ಚಲನಚಿತ್ರಗಳು, ಕಿರುಚಿತ್ರಗಳು, ಜಾಹೀರಾತು ಮತ್ತು ಖಾಸಗಿ ಸಂಗೀತದ ಅಲ್ಬಮ್‌ಗಳಿಗಾಗಿ ಸಂಗೀತ ಕೆಲಸ ಮಾಡುತ್ತಾ ಬಂದರು.
 
'''===ಸಂಗೀತ ನಿರ್ದೇಶನ'''===
 
೨೦೦೬ ರಲ್ಲಿ, ದಿನಕರ್ ತೂಗುದೀಪ್ ಮತ್ತು ನಟ ದರ್ಶನ್ ಮೊದಲ ನಿರ್ಮಾಣವಾದ ಬಂದ ಜೊತೆ ಜೊತೆಯಲಿ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಹರಿಕೃಷ್ಣ ಮೊದಲು ಸಹಿ ಹಾಕಿದರು. ಈ ಸಮಯದವರೆಗೂ, ನಟ- ನಿರ್ದೇಶಕ ವಿ. ರವಿಚಂದ್ರನ್ ಅವರ ಆಶ್ರಯದಲ್ಲಿ ಹರಿಕೃಷ್ಣ ಅವರು ಸಂಗೀತಗಾರರಾಗಿದ್ದರು. ಜೊತೆ ಜೊತೆಯಲಿ ಚಿತ್ರದಲ್ಲಿ ಪ್ರೇಮ್ ಮತ್ತು ರಮ್ಯಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು ಮತ್ತು ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದರು. ದಿನಕರ ತೂಗುದೀಪ ಅವರು ನಿರ್ದೇಶಿಸಿದರು. ಈ ಚಿತ್ರ ಸುಮಾರು ೨೫ ವಾರಗಳವರೆಗೆ ಯಶಸ್ವಿಯಾಗಿ ಪ್ರದರ್ಶನಕಂಡಿತು. ಹಾಗೆಯೆ ಈ ಚಿತ್ರದ ಹಾಡುಗಳು ಜನರ ಮನಸನ್ನು ಗೆದ್ದಿತು. ಇದರ ನಂತರ ದರ್ಶನ್ ಅವರ ನವಗ್ರಹ ಹಾಗೆಯೆ ಭೂಪತಿ (೨೦೦೭), ಗಜ (೨೦೦೮), ಪೊರ್ಕಿ (೨೦೧೦), ಪ್ರಿನ್ಸ್ (೨೦೧೧), ಸಾರಥಿ (೨೦೧೧) ಮತ್ತು ಚಿಂಗಾರಿ (೨೦೧೨) ಹೀಗೆ ಸಾಲು ಸಾಲಾಗಿ ಇವರಿಬ್ಬರ ಕಾಂಬಿನೇಷನ್‌ನ ಸಂಗೀತವು ಜನರ ಮನಸನ್ನು ಸೆಳೆಯಲು ಪ್ರಾರಂಬಿಸಿತು.. ಮತ್ತು ಉತ್ತಮ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಹರಿಕೃಷ್ಣ ಪಾತ್ರರಾದರು.
ಯೋಗರಾಜ್ ಭಟ್ಟ ಅವರ ಗಾಳಿಪಟ ಚಿತ್ರದ ಮೂಲಕ ಇವರಿಬ್ಬರ ಸ್ನೆÃಹ ಬೆಳೆಯಿತು. ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಹರಿಕೃಷ್ಣ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತು. ಅಂಬಾರಿ, ರಾಮ್, ಮಳೆಯಲಿ ಜೊತೆಯಲಿ ಮತ್ತು ರಾಜ್, ದಿ ಶೋಮ್ಯಾನ್ ಮೊದಲಾದ ಚಲನಚಿತ್ರಗಳಿಗೆ ಯಶಸ್ವಿ ಧ್ವನಿಮುದ್ರಿಕೆಗಳನ್ನು ಹಿಂದಿರುಗಿಸುವ ಮೂಲಕ ೨೦೦೯ರ ವರ್ಷದಲ್ಲಿ ಅವರು ಯಶಸ್ವಿ ಸಂಗೀತ ನಿರ್ದೇಶಕ ಎಂಬ ಮಾತಿಗೆ ಭಾಜನರಾದರು.
೨೦೧೦ ರಲ್ಲಿ, ೮ ಚಿತ್ರಗಳಿಗೆ ಹರಿಕೃಷ್ಣ ಸಂಯೋಜನೆ ಮಾಡಿದರು ಮತ್ತು ಅವುಗಳಲ್ಲಿ ಹೆಚ್ಚಿನವುಗಳು ಬಿಡುಗಡೆಯಾದ ನಂತರ ಉತ್ತಮ ಪ್ರತಿಕ್ರಿಯೆ ದೊರೆಯಿತು. ೨೦೧೧ ರ ವರ್ಷದಲ್ಲಿ ಅವರು ೧೪ ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿದರು. ರಾಜಕುಮಾರ, ಹುದುಗುರು, ವಿಷ್ಣುವರ್ಧನ, ಸಾರಥಿ, ಪರಮಾತ್ಮ ಮತ್ತು ಜೋಗಯ್ಯ ಈ ಚಿತ್ರಗಳು ಹರಿಕೃಷ್ಣ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
 
 
==ಪ್ರಶಸ್ತಿಗಳು==
"https://kn.wikipedia.org/wiki/ವಿ.ಹರಿಕೃಷ್ಣ" ಇಂದ ಪಡೆಯಲ್ಪಟ್ಟಿದೆ