ಅಂತರರಾಷ್ಟ್ರೀಯ ಸಂಘಟನೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭ ನೇ ಸಾಲು:
ಆಧುನಿಕ ಅಂತಾರಾಷ್ಟ್ರೀಯ ಸಂಸ್ಥೆಯ ಮಾದರಿ 1948ರ ವೆಸ್್ಟಫೇಲಿಯ ಶಾಂತಿಕೌಲಿನಿಂದ ಉದ್ಭವಿಸಿತು. ಈ ಕೌಲು ಅಂತಾರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯಲ್ಲಿ ಒಂದು ಬಹುಮುಖ್ಯವಾದ ಮೈಲಿಗಲ್ಲಾಗಿದೆ. ವಿಯೆನ್ನ ಕಾಂಗ್ರೆಸ್ (1814-15) [[ನೆಪೋಲಿಯನ್ ಬೋನಪಾರ್ತ್|ನೆಪೋಲಿಯನ್ನನ]] ಪತನದ ಅನಂತರ ಸೇರಿ, ಪ್ರಪಂಚದ ವ್ಯವಹಾರಗಳನ್ನು ಪರಿಶೀಲಿಸಿ, ಇಂಥ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಇವುಗಳ ಜೊತೆ 19 ಮತ್ತು 20ನೆಯ ಶತಮಾನದ ಸಂಧಿಕಾಲದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಯಿತು; ಅನೇಕ ಸಮ್ಮೇಳನಗಳನ್ನು ನಡೆಸಲಾಯಿತು. ಆದಾಗ್ಯೂ [[ಮೊದಲನೆಯ ಮಹಾಯುದ್ಧ]] ಮುಗಿಯುವವರೆಗೂ ಒಂದು ಸರಿಯಾದ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಏರ್ಪಡಿಸಲು ಸಾಧ್ಯವಾಗಲಿಲ್ಲ. ಮೊದಲನೆಯ ಮಹಾಯುದ್ಧವಾದ ಮೇಲೆ, ಶಾಂತಿ ಒಪ್ಪಂದದ ತೀರ್ಮಾನದಂತೆ ಅಂತಾರಾಷ್ಟ್ರೀಯ ಸಂಸ್ಥೆಯ ಇತಿಹಾಸದಲ್ಲಿ ಮೊದಲಯದಾಗಿ ರಾಷ್ಟ್ರಗಳ ಒಕ್ಕೂಟ (ಲೀಗ್ ಆಫ್ ನೇಷನ್ಸ್) ಪ್ರಾರಂಭಿಸಿದ ನಂತರ ಈಗಿನ [[ವಿಶ್ವಸಂಸ್ಥೆ]] (ಯುನೈಟೆಡ್ ನೇಷನ್ಸ ಆರ್ಗನೈಸೇಷನ್) ಸ್ಥಾಪನೆಯಾಯಿತು. ವಿಶ್ವದ ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯ ಕಲ್ಪನೆ ನಿಧಾನವಾಗಿ ವಿಕಾಸಗೊಂಡಿತೇ ವಿನಾ, ಆಕಸ್ಮಿಕವಾಗಿ ಅಲ್ಲ.
 
ಇಪ್ಪತ್ತನೆಯ ಶತಮಾನದಲ್ಲಿ ಎರಡು ಸಂಸ್ಥೆಗಳು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಬಹು ಮುಖ್ಯವಾದುವು. ಮೊದಲನೆಯದು ರಾಷ್ಟ್ರಗಳ ಒಕ್ಕೂಟ. ಎರಡನೆಯದು ವಿಶ್ವಸಂಸ್ಥೆ. ಮೊದಲನೆಯ ಸಂಸ್ಥೆ ಮೊದಲನೆಯ ಮಹಾಯುದ್ಧವಾದ ಅನಂತರ 1919ರಲ್ಲಿ ಶಾಂತಿಕೌಲಿನ ಪ್ರಕಾರ ಸ್ಥಾಪಿತವಾಯಿತು. ಆಗ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಲನ್ನರೇ ಇದರ ಸ್ಥಾಪನೆಗೆ ಮುಖ್ಯ ಕಾರಣರು. ಇದರಲ್ಲಿ ಒಟ್ಟು 63 ಸದಸ್ಯ ರಾಷ್ಟ್ರಗಳಿದ್ದುವು. ಆದರೆ ನಾನಾ ಕಾರಣಗಳಿಂದ ಇದು ತನ್ನ ಧ್ಯೇಯಗಳನ್ನು ಪಾಲಿಸಲಾಗಲಿಲ್ಲ. ಜೊತೆಗೆ [[ಎರಡನೆಯ ಮಹಾಯುದ್ಧ]] 1939ರಲ್ಲಿ ಪ್ರಾರಂಭವಾಯಿತು. ಆಗ ಈ ಒಕ್ಕೂಟ ಕೊನೆಗೊಂಡಿತು. ಅದಾದ ಅನಂತರ ಎರಡನೆಯ ಮಹಾಯುದ್ಧ ನಡೆಯುತ್ತಿರುವಾಗ ಈಗಿನ ವಿಶ್ವಸಂಸ್ಥೆ 1945ರಲ್ಲಿ ಸ್ಥಾಪಿಸಲ್ಪಟ್ಟು ಈಗ ಒಟ್ಟು 123193 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ.
 
==ಉದ್ದೇಶಗಳು==