ಗಾರ್ಡಿಯಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚಿತ್ರ ಸೇರ್ಪಡೆ
 
೧ ನೇ ಸಾಲು:
{{Incomplete}}
 
==ಗಾರ್ಡಿಯಂ==
[[ಟರ್ಕಿ|ತುರ್ಕಿಯ]] [[ಅಂಕಾರಾ|ಅಂಕಾರ]] ಸಮೀಪದಲ್ಲಿರುವ ಒಂದು ಪುರಾತನ [[ನಗರ]]. ಸಾಂಗಾರಿಯಸ್ ಮತ್ತು ಟೆಂಬ್ರಿಸ್ ನದಿಗಳ ಸಂಗಮದ ಬಳಿ, ಆಂಕಾರಾ ಮತ್ತು ಡೊರಿಲಿಯಂ (ಈಗಿನ ಎಸ್ಕಿಷೆಹೀರ್) ನಗರಗಳ ನಡುವಣ ರಾಜಮಾರ್ಗದಲ್ಲಿದೆ.
Line ೬ ⟶ ೪:
== ಇತಿಹಾಸ ==
ಆನಟೋಲಿಯದ ಬಯಲುಸೀಮೆಗೂ ಸಮುದ್ರಕ್ಕೂ ಮಧ್ಯೆ ಒಂದು ಕೊಂಡಿಯಂತಿದ್ದ ಈ ನಗರ ಪ್ರ.ಶ.ಪು. 9ನೆಯ ಶತಮಾನದ ಕೊನೆಯಲ್ಲಿ [[ಏಷ್ಯ ಮೈನರ್]] ಪ್ರದೇಶದಲ್ಲಿ ಪ್ರಬಲರಾಗಿದ್ದ ಫ್ರಿಜಿಯನ್ನರ ರಾಜಧಾನಿಯಾಗಿತ್ತು.
[[ಚಿತ್ರ:Gordion82.JPG|thumb|ಮೈದಾಸನ ಸಮಾಧಿ (ಕ್ರಿ. ಪೂ. ೭೪೦)]]
 
ಪ್ರಚಲಿತ ಸಾಂಪ್ರದಾಯಿಕ ಕತೆಗಳಂತೆ ಇವರ ಮೊದಲ ಅರಸ ಗಾರ್ಡಿಯಸ್. ಆತ ಮೊದಲು ಫ್ರಿಜಿಯದಲ್ಲಿ ಒಬ್ಬ ರೈತನಾಗಿದ್ದ. ಅವನಿಂದಲೇ ಈ ನಗರಕ್ಕೆ ಗಾರ್ಡಿಯಂ ಎಂಬ ಹೆಸರು ಬಂತೆಂದು ಹೇಳಲಾಗಿದೆ. ದೇವಸ್ಥಾನಕ್ಕೆ ಬಂಡಿಯಲ್ಲಿ ಬರುವ ಪ್ರಥಮ ಮನುಷ್ಯನನ್ನು ತಮ್ಮ ಅರಸನನ್ನಾಗಿ ಆರಿಸಿಕೊಳ್ಳಬೇಕೆಂಬ ಜೂಯಸಂ ದೇವತೆಯ ದಿವ್ಯವಾಣಿಯಂತೆ ಫ್ರಿಜಿಯನ್ನರು ಅವನನ್ನು ತಮ್ಮ ದೊರೆಯೆಂದು ಸ್ವಾಗತಿಸಿದರೆನ್ನಲಾಗಿದೆ. ಆತ ತನ್ನ ಬಂಡಿಯನ್ನು ದೇವರಿಗೆ ಒಪ್ಪಿಸಿದ. ಅದಕ್ಕೆ ಕಟ್ಟಿದ ಹಗ್ಗದ ಗಂಟನ್ನು ಯಾರು ಬಿಚ್ಚುವರೋ ಅವರು ಇಡೀ ಏಷ್ಯವನ್ನು ಜಯಿಸುವರೆಂದು ದಿವ್ಯವಾಣಿ ಸಾರಿತೆಂದು ಹೇಳಲಾಗಿದೆ. ಅವನ ಅನಂತರ ಆಳ್ವಿಕೆಗೆ ಬಂದವನು ಮೈದಾಸ್. ಗಾರ್ಡಿಯಂನ ಪ್ರಜೆಗಳು ತಮ್ಮ ಅರಸರನ್ನು ಅನುಕ್ರಮವಾಗಿ ಈ ಎರಡು ಹೆಸರುಗಳಿಂದಲೇ ಕರೆದರು.
 
"https://kn.wikipedia.org/wiki/ಗಾರ್ಡಿಯಂ" ಇಂದ ಪಡೆಯಲ್ಪಟ್ಟಿದೆ