ಅಂಶಗಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೊಂಡಿ ಸೇರ್ಪಡೆ
೨೪ ನೇ ಸಾಲು:
ತೆಲುಗು ಅಂಶಗಣದಲ್ಲಿ, ಕನ್ನಡದ ಬ್ರಹ್ಮಗಣದ -.-. ಮತ್ತು . ಎಂಬ ವಿನ್ಯಾಸಗಳನ್ನು ಸೂರ್ಯಗಣದಲ್ಲಿಯೂ ಕನ್ನಡದ ವಿಷ್ಣುಗಣದ -.-.- ಮತ್ತು .. ಎಂಬ ವಿನ್ಯಾಸಗಳನ್ನು ಇಂದ್ರಗಣದಲ್ಲಿಯೂ ಕನ್ನಡದ ರುದ್ರಗಣದ -.-.-.- ಮತ್ತು ... ಎಂಬ ವಿನ್ಯಾಸಗಳನ್ನು ಚಂದ್ರಗಣದಲ್ಲಿಯೂ ತೆಲುಗು ಲಾಕ್ಷಣಿಕರು ಅಂಗೀಕರಿಸಿಲ್ಲವೆಂಬುದು ಕಾಣುತ್ತದೆ. ಆದರೆ ಪ್ರಾಚೀನವಾದ ತೆಲುಗು ಶಾಸನಗಳಲ್ಲಿ ಇಂಥ ಗಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.
 
ತಮಿಳು ಅಂಶಗಣಗಳ ಸ್ವರೂಪ ಕನ್ನಡ ಮತ್ತು ತೆಲುಗು ಅಂಶಗಣಗಳ ಸ್ವರೂಪದಿಂದ ಸ್ವಲ್ಪಮಟ್ಟಿಗೆ ಬೇರೆಯಾಗಿದೆ. ಇಲ್ಲಿ ಗಣವಿನ್ಯಾಸದಲ್ಲಿ ಹೆಚ್ಚಿನ ಸ್ವಾತಂತ್ರ್ಯವೂ ವ್ಯಾಪ್ತಿಯೂ ವೈವಿಧ್ಯವೂ ಕಂಡುಬರುತ್ತವೆ. ನೇರ್ ಮತ್ತು ನಿರೈಗಳು ತಮಿಳು ಛಂದಸ್ಸಿನ ಆಶೈ (ಅಂಶ)ಗಳು. ಒಂದು ಹ್ರಸ್ವ ಅಥವಾ ದೀರ್ಘ ತಾನೇ ಆಗಲಿ, ಅಥವಾ ವ್ಯಂಜನ ಸೇರಿಯಾಗಲಿ ಬರುವುದು ನೇರ್; ಎರಡು ಹ್ರಸ್ವ ಅಥವಾ ಹ್ರಸ್ವ ದೀರ್ಘ ತಾನೇ ಆಗಲಿ, ಅಥವಾ ವ್ಯಂಜನ ಸೇರಿಯಾಗಿಲಿ ಬರುವುದು ನಿರೈ. ಈ ನೇರ್ ಆಶೈ ಮತ್ತು ನಿರೈ ಆಶೈಗಳು ಎರಡು ಸೇರಿದರೆ ಈರಶೈಶೀರ್, ಮೂರು ಸೇರಿದರೆ ಮೂವಶೈಶೀರ್, ನಾಲ್ಕು ಸೇರಿದರೆ ನಾಲಶೈಶೀರ್ ಆಗುವುವು. ಈ ಗಣಗಳು ಹ್ರಸ್ವದೀರ್ಘಗಳಿಂದಾಗಿವೆಯೇ ಹೊರತು ಲಘುಗುರುಗಳಿಂದಾಗಿಲ್ಲ. ಲಘು ಗುರುವಾಗುವ ಕೆಲವು ನಿಯಮಗಳು ಇಲ್ಲಿಗೆ ಅನ್ವಯಿಸುವುದಿಲ್ಲ. ಗಣದ ಮೊದಲಲ್ಲಿಯೇ ಅಲ್ಲದೆ ಆಮೇಲಿನ ಅಂಶಗಳ ಸ್ಥಾನದಲ್ಲಿಯೂ ಒಂದು ದೀರ್ಘ ಅಥವಾ ಹ್ರಸ್ವಕ್ಕೆ ಬದಲಾಗಿ ಎರಡು ಹ್ರಸ್ವ ಅಥವಾ ಹ್ರಸ್ವದೀರ್ಘ ತಾನೇ ಆಗಲಿ. ವ್ಯಂಜನ ಸೇರಿಯಾಗಲಿ ಬರಬಹುದಾಗಿದೆ. ಇದು ನಾಗವರ್ಮಾದಿಗಳು ವಿವರಿಸಿರುವ ಅಂಶಗಣಗಳ ರಚನೆಗಿಂತ ಒಂದು ವಿಧದಲ್ಲಿ ಬೇರೆಯಾಗಿದೆ. ತಮಿಳಿನಲ್ಲಿ ಶುದ್ದವಾದ ದೇಶ್ಯರೀತಿಯಿಂದಲೂ ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಮಾತ್ರಾಪರಿಭಾಷೆಯ ಪ್ರಸ್ತಾರವಿಧಾನದಿಂದಲೂ ಅಂಶಗಣದ ಸ್ವರೂಪವನ್ನು ವಿವರಿಸಿರುವುದೇ ಇದಕ್ಕೆ ಕಾರಣ. ಅದುದರಿಂದ ತಮಿಳು ದೇಶ್ಯಛಂದಸ್ಸಿನ ಆಶೈ ಮತ್ತು ತಳೈಗಳ (ಗಣಸಂಧಿ) ನಿಯಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕನ್ನಡ (ತೆಲುಗುಗಳ) ಅಂಶಗಣದ ನಿಯಮಗಳನ್ನು ಕೆಲಮಟ್ಟಿಗೆ ಪರಿಷ್ಕರಿಸುವುದು ಸೂಕ್ತವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದರಿಂದ ಅಂಶಗಣಗಳ ವ್ಯಾಪ್ತಿ ವಿಸ್ತರಿಸಿ ಪ್ರಸ್ತಾರದ ತೊಡಕುಗಳು ಬಗೆಹರಿಯುವುದು ಸಾಧ್ಯವೆಂದು ಅವರು ಭಾವಿಸುತ್ತಾರೆ.
 
== ಅಂಶಗಣ ಪ್ರತ್ಯೇಕಕ್ಕೆ ಕಾರಣ ==
ವರ್ಣಗಣ ಮಾತ್ರಾಗಣಗಳಿಂದ ಅಂಶಗಣದ ಪ್ರತ್ಯೇಕತೆಗೆ ಕಾರಣಗಳು ಹೀಗಿವೆ. ವರ್ಣವೃತ್ತಗಳು ವರ್ಣಮಾತ್ರೆಗಳಿಂದ ಕಟ್ಟಿದ ಪಾದಗಳನ್ನುಳ್ಳವು. ಇಂಥ ಪ್ರತಿಪಾದದಲ್ಲಿಯೂ ವರ್ಣಸಂಖ್ಯೆ ಇಷ್ಟೇ ಇರತಕ್ಕದ್ದು, ಲಘುಗುರುಗಳ ವಿನ್ಯಾಸ ಹೀಗೆಯೇ ಇರತಕ್ಕದ್ದು ಎಂಬುದಾಗಿ ಮೊದಲೇ ಗೊತ್ತಾಗಿರುತ್ತದೆ. ಲೌಕಿಕಛಂದಸ್ಸಿನ ಉಕ್ತೆ ಮೊದಲಾದ ಇಪ್ಪತ್ತಾರು ಛಂದೋವರ್ಗಗಳಲ್ಲಿ ಪ್ರತಿಯೊಂದರಲ್ಲಿಯೂ ಬಗೆಬಗೆಯ ಗುರುಲಘು ವಿನ್ಯಾಸವಿರುವ ವೃತ್ತಗಳು ಹೊರಡುತ್ತವೆಯಷ್ಟೆ. ಅವುಗಳನ್ನು ಗುರುತಿಸುವುದಕ್ಕೆ ಅಳೆಯುವುದಕ್ಕೆ ಮೂರು ಅಕ್ಷರಗಳ (ತ್ರಿಕ) ಗಣನಾಂಗವನ್ನು ಈಚೆಗೆ ಕಲ್ಪಿಸಿಕೊಳ್ಳಲಾಯಿತು. ಈ ತ್ರಿಕ ವರ್ಣಸಂಗೀತದ ಎಂಟು ವಿಭಿನ್ನ ರೀತಿಯ ಲಯಗಳನ್ನು ತೋರಿಸುವುದಾಗಿದ್ದು, ಆ ಲಯಗಳನ್ನು ಮಯರಸತಜಭನ ಎಂಬ ಸಂಜ್ಞೆಗಳು ಗುರುತಿಸುತ್ತವೆ. ಅಕ್ಷರಗಳು ಗುರುವಾಗಲಿ ಲಘುವಾಗಲಿ ವೃತ್ತಪಾದವನ್ನು ಮೂರು ಅಕ್ಷರಗಳಿಗೆ ಒಂದು ಗಣವಾಗಿ ಒಡೆಯುತ್ತ ಹೋಗಿ ಈ ಸಂಜ್ಞೆಗಳ ಮೂಲಕವಾಗಿ ವೃತ್ತರಚನೆಯನ್ನು ಕಂಡುಹಿಡಿಯುವುದು ರೂಢಿಯಾಗಿದೆ. ಇಂಥ ಗಣವಿಭಜನೆಗೆ ವರ್ಣಗಣವೆನ್ನಲಾಗುವುದು. ಮಾತ್ರಾವೃತ್ತಗಳು ಕೂಡ ವರ್ಣಮಾತ್ರೆಗಳಿಂದ ಕಟ್ಟಿದವೇ ಆಗಿವೆ. ಇಲ್ಲಿ ಪ್ರತಿ ಪಾದದಲ್ಲಿಯೂ ಇಷ್ಟಿಷ್ಟು ಗಣಗಳೆಂಬ ಸಾಮಾನ್ಯ ನಿಯಮವಿರುತ್ತದೆ. ಖಚಿತವಾದ ಗಣವಿಭಾಗವಿರುತ್ತದೆ. ಕೆಲವು ಕಡೆಗಳಲ್ಲಿ ಲಘು ಗುರುಗಳ ಜೋಡಣೆಯಲ್ಲಿ ಒಂದು ಕ್ರಮವನ್ನೂ, ವಿಧಿನಿಷೇಧಗಳನ್ನೂ ಹೇಳಿರುತ್ತದೆ. ಎರಡರಿಂದ ಎಂಟು ಮಾತ್ರೆಗಳವರೆಗೆ ಮಾತ್ರಾಗಣಗಳ ವ್ಯಾಪ್ತಿಯಿದ್ದರೂ ಕನ್ನಡದಲ್ಲಿ ಮೂರು ನಾಲ್ಕು ಮತ್ತು ಐದು ಮಾತ್ರೆಗಳ ಗಣಗಳೇ ಹೆಚ್ಚು ಬಳಕೆಯಾಗತಕ್ಕವಾಗಿವೆ.
"https://kn.wikipedia.org/wiki/ಅಂಶಗಣ" ಇಂದ ಪಡೆಯಲ್ಪಟ್ಟಿದೆ