"ಗೀತರೂಪಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ವಿಕೀಕರಣ
(ವಿಕೀಕರಣ)
ಚು (ವಿಕೀಕರಣ)
 
==ಕನ್ನಡ ಗೀತರೂಪಕಗಳು==
 
ಕನ್ನಡದಲ್ಲಿ ಆಧುನಿಕ ಗೀತರೂಪಕಗಳ ಮೂಲ ಪುರುಷರು ಇಬ್ಬರು -[[ಶಿವರಾಮ ಕಾರಂತರುಕಾರಂತ]]ರು ಮತ್ತು [[ಪು.ತಿ.ನರಸಿಂಹಾಚಾರ್|ಪು. ತಿ.ನರಸಿಂಹಾಚಾರ್ಯರುನರಸಿಂಹಾಚಾರ್ಯ]]ರು. ಕಾರಂತರ ಗೀತರೂಪಕಗಳು ಸಂಗೀತ ಮಾಧ್ಯಮದ ಮೂಲಕವೇ ಸಾಗವಂಥವು. ಅವುಗಳಿಂದ ಸಂಗೀತವನ್ನು ಹೊರತಾಗಿಸಿದರೆ ರೂಪಕವೇ ಇಲ್ಲವಾಗುತ್ತದೆ. ಗೀತಗಳ ಹಾಡುವಿಕೆಯನ್ನು ಅವರು [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನೀ ಸಂಗೀತ]] ಪದ್ಧತಿಯಲ್ಲಿರಿಸಿದ್ದಾರೆ. ಅವರ ರೂಪಕಗಳನ್ನು ಸಂಗೀತ ರಹಿತವಾಗಿ ಓದಿದಲ್ಲಿ ನೀರಸವಾಗಿ ಕಾಣಿಸಬಹುದು. ಆದರೆ, ರಂಗಭೂಮಿಯ ಮೇಲೆ, ಪ್ರದರ್ಶನದಲ್ಲಿ ಇವು ಸಂಗೀತದೊಡನೆ ಸೇರಿದಾಗ ಸತ್ತ್ವಪೂರ್ಣವಾದ ಹಾಡುಗಳಾಗಿ ಪರಿಣಮಿಸುತ್ತವೆ; ಇವು ಸಂಗೀತದೊಂದಿಗೆ ಸಮರಸವಾಗಿ ಬೆರೆಯುತ್ತವೆ; ಸಾಹಿತ್ಯ ಸಂಗೀತಗಳೆರಡರ ಸಂಗಮವಾದ ಅದ್ಭುತ ರಸಲೋಕವೊಂದನ್ನು ಕಾಣಿಸುತ್ತವೆ. ಗೀತರೂಪಕಗಳ ಎಲ್ಲ ಪ್ರಕಾರಗಳಿಗೂ ಕಾರಂತರ ರೂಪಕಗಳಲ್ಲಿ ಉದಾಹರಣೆಗಳಿವೆ. ಲವಕುಶ, ಸಾವಿತ್ರಿ ಸತ್ಯವಾನ ರೂಪಕಗಳು ಗಂಭೀರವಾದ ಪೌರಾಣಿಕ ಕಥಾವಸ್ತುವನ್ನೊಳಗೊಂಡವು. ಬುದ್ಧೋದಯ, ಕಿಸಾಗೌತಮಿ ಗಳು ಚಾರಿತ್ರಿಕ ರೂಪಕಗಳು. ಮುಕ್ತದ್ವಾರವೆಂಬುದು ನರ್ತನ ಸಹಿತವಾದ ನೇಪಥ್ಯಮೇಳ ಗಾನವನ್ನೊಳಗೊಂಡ, ವಿಚಾರಪುರ್ಣವಾದ ಸುಂದರ ಕಲ್ಪನೆ. ಸೋಮಿಯ ಸೌಭಾಗ್ಯ, ಯಾರೋ ಅಂದರು- ರೂಪಕಗಳ ವಸ್ತು, ಶೈಲಿಗಳು ಜಾನಪದ. ಸುಲಿಗೆಗೆ ಇಲ್ಲವು ಸಾವು ಎಂಬುದು ವಿಡಂಬನಾತ್ಮಕ ಪ್ರಹಸನ. ನರಸಿಂಹಾಚಾರ್ಯರ ಗೀತರೂಪಕಗಳಲ್ಲಿನ ಹಾಡುಗಳು ಕಾವ್ಯಸೌರಭವನ್ನು ಸೂಸುತ್ತಿರುವ ಸುಂದರಕವನಗಳು. ಕರ್ಣಾಟಕ ಸಂಗೀತಜ್ಞಾನ ಅವರಿಗೆ ಸಾಕಷ್ಟು ಚೆನ್ನಾಗಿಯೇ ಇರುವುದರಿಂದ ಹಾಡುಗಳೆಲ್ಲವನ್ನೂ ಛಂದೋಬದ್ಧ ಸಂಗೀತ ಕೃತಿಗಳನ್ನನುಸರಿಸಿ ರಚಿಸಿದ್ದಾರೆ. ಅವರ ರೂಪಕಗಳಲ್ಲಿ ಕೆಲವು ಬಿಡಿಗೀತಗಳನ್ನು ರಾಗತಾಳ ನಿಬದ್ಧವಾದ ಸಂಗೀತಕೃತಿಗಳಂತೆಯೇ ಹಾಡಲು ಸಾಧ್ಯವಾಗುತ್ತದೆ; ಮಾತ್ರವಲ್ಲ, ಹಾಗೆ ಹಾಡಿದಾಗ ಅವುಗಳ ಶೋಭೆಗೂ ಕೊರತೆ ಯಾಗುವುದಿಲ್ಲ. ಆಚಾರ್ಯರ ಗೀತರೂಪಕಗಳನ್ನು ಓದುಗಬ್ಬವಾಗಿ, ಸಂಗೀತ ವಿರಹಿತವಾಗಿ ಹಾಡಿದಾಗಲೂ ಅವುಗಳ ಅನುಪಮ ಸೌಂದರ್ಯದ ಅರಿವಾಗುತ್ತದೆ. ಕವಿಯ ಚಿಂತನಫಲವಾದ ವಿಶ್ಲೇಷಣೆ, ವಿಶೇಷಾರ್ಥಗಳು ಮನಮುಟ್ಟುತ್ತವೆ. ರಂಗಭೂಮಿಯ ಮೇಲೆ ಈ ರೂಪಕಗಳನ್ನು ಅಭಿನಯಿಸುವಾಗಲಂತೂ ಅವಕ್ಕೆ ಇನ್ನೂ ಹೆಚ್ಚಿನ ಶೋಭೆಯುಂಟಾಗುತ್ತದೆ. ಆದರೆ ಕವಿಯ ಪ್ರತಿಭಾ ಮೂಲವಾದ ಚಿಂತನವೈಶಿಷ್ಟ್ಯಗಳನ್ನು ಮಾತ್ರ, ಮೊದಲೊಮ್ಮೆ ಗೀತರೂಪಕಗಳನ್ನು ಓದಿರದ ಪ್ರೇಕ್ಷಕರು ಸಂಪೂರ್ಣವಾಗಿ ಅರಿತು, ಅನುಭವಿಸುವುದು ಕಷ್ಟಸಾಧ್ಯ. ಆದುದರಿಂದ ಆಚಾರ್ಯರ ಗೀತರೂಪಕಗಳು ರಂಗಪ್ರದರ್ಶನದಲ್ಲಿ ಸಂಗೀತಕ್ಕೆ ಅತ್ಯುತ್ತಮವಾಗಿ ಅಳವಡಿಸುವ ಕೃತಿಮಾಲಿಕೆಗಳಾಗಿ ಪರಿಣಮಿಸಲೂ ಸಾಧ್ಯವಿದೆ. ಅವರ ಹಂಸದಮಯಂತಿ, ಗೋಕುಲ ನಿರ್ಗಮನಗಳು ಶ್ರಾವ್ಯ ಗೀತರೂಪಕಗಳ ದೃಷ್ಟಿಯಿಂದ ಅತ್ಯುತ್ತಮವಾದ ಗೀತರೂಪಕಗಳು. ಡಿ.ವಿ. ಗುಂಡಪ್ಪನವರ ಭಸ್ಮಾಸುರ ಮೋಹಿನಿ ಗೀತ ಶಾಕುಂತಲ ಎಂಬೆರಡು ಗೀತರೂಪಕ ಗಳು ಇದೇ ವರ್ಗಕ್ಕೆ ಸೇರುವಂಥವು.
 
ಶಿವರಾಮ ಕಾರಂತ ಮತ್ತು ಪು.ತಿ.ನರಸಿಂಹಾಚಾರ್ಯರು ಕನ್ನಡದಲ್ಲಿ ಆಧುನಿಕ ಗೀತರೂಪಕಗಳ ಮೂಲ ಪುರುಷರು. ಗೀತಗಳ ಹಾಡುವಿಕೆಯನ್ನು ಕಾರಂತರು ಹಿಂದುಸ್ತಾನೀ ಸಂಗೀತ ಪದ್ಧತಿಯಲ್ಲಿರಿಸಿದ್ದಾರೆ. ಇವರ ರೂಪಕಗಳನ್ನು ಸಂಗೀತ ರಹಿತವಾಗಿ ಓದಿದಲ್ಲಿ ನೀರಸವಾಗಿ ಕಾಣಿಸಬಹುದು. ಆದರೆ ರಂಗಭೂಮಿಯ ಮೇಲೆ, ಪ್ರದರ್ಶನದಲ್ಲಿ ಇವು ಸಂಗೀತದೊಡನೆ ಸೇರಿದಾಗ ಸತ್ತ್ವಪೂರ್ಣವಾದ ಹಾಡುಗಳಾಗಿ ಪರಿಣಮಿಸುತ್ತವೆ; ಸಂಗೀತದೊಂದಿಗೆ ಸಮರಸವಾಗಿ ಬೆರೆಯುತ್ತವೆ; ಸಾಹಿತ್ಯ ಸಂಗೀತಗಳೆರಡರ ಸಂಗಮವಾದ ಅದ್ಭುತ ರಸಲೋಕವೊಂದನ್ನು ಕಾಣಿಸುತ್ತವೆ. ಗೀತರೂಪಕಗಳ ಎಲ್ಲ ಪ್ರಕಾರಗಳಿಗೂ ಕಾರಂತರ ರೂಪಕಗಳಲ್ಲಿ ಉದಾಹರಣೆಗಳಿವೆ. ಲವಕುಶ, ಸಾವಿತ್ರಿ ಸತ್ಯವಾನ ರೂಪಕಗಳು ಗಂಭೀರವಾದ ಪೌರಾಣಿಕ ಕಥಾವಸ್ತುವನ್ನೊಳಗೊಂಡವು. ಬುದ್ಧೋದಯ, ಕಿಸಾಗೌತಮಿಗಳು ಚಾರಿತ್ರಿಕ ರೂಪಕಗಳು. ಮುಕ್ತದ್ವಾರವೆಂಬುದು ನರ್ತನಸಹಿತವಾದ ನೇಪಥ್ಯಮೇಳ ಗಾನವನ್ನೊಳಗೊಂಡ, ವಿಚಾರಪೂರ್ಣವಾದ ಸುಂದರ ಕಲ್ಪನೆ. ಸೋಮಿಯ ಸೌಭಾಗ್ಯ, ಯಾರೋ ಅಂದರು ರೂಪಕಗಳ ವಸ್ತು ಶೈಲಿಗಳು ಜನಪದದವು. ಸುಲಿಗೆಗೆ ಇಲ್ಲವು ಸಾವು ಎಂಬುದು ವಿಡಂಬನಾತ್ಮಕ ಪ್ರಹಸನ. ಪು.ತಿ.ನರಸಿಂಹಾಚಾರ್ಯರ ಗೀತರೂಪಕಗಳಲ್ಲಿನ ಹಾಡುಗಳು ಕಾವ್ಯಸೌರಭವನ್ನು ಸೂಸುತ್ತಿರುವ ಸುಂದರ ಕವನಗಳು. ಕರ್ಣಾಟಕ ಸಂಗೀತಜ್ಞಾನದ ಹಿನ್ನೆಲೆಯಲ್ಲಿ ಹಾಡುಗಳೆಲ್ಲವನ್ನೂ ಛಂದೋಬದ್ಧ ಸಂಗೀತ ಕೃತಿಗಳನ್ನನುಸರಿಸಿ ಇವರು ರಚಿಸಿದ್ದಾರೆ. ಇವರ ರೂಪಕಗಳಲ್ಲಿನ ಕೆಲವು ಬಿಡಿಗೀತಗಳನ್ನು ರಾಗತಾಳನಿಬದ್ಧವಾದ ಸಂಗೀತಕೃತಿಗಳಂತೆಯೇ ಹಾಡಲು ಸಾಧ್ಯ; ಮಾತ್ರವಲ್ಲ, ಹಾಗೆ ಹಾಡಿದಾಗ ಅವುಗಳ ಶೋಭೆಗೂ ಕೊರತೆಯಾಗುವುದಿಲ್ಲ. ಈ ಗೀತರೂಪಕಗಳನ್ನು ಓದುಗಬ್ಬವಾಗಿ, ಸಂಗೀತರಹಿತವಾಗಿ ಹಾಡಿದಾಗಲೂ ಅವುಗಳ ಅನುಪಮ ಸೌಂದರ್ಯದ ಅರಿವಾಗುತ್ತದೆ. ಕವಿಯ ಚಿಂತನಫಲವಾದ ವಿಶ್ಲೇಷಣೆ ವಿಶೇಷಾರ್ಥಗಳು ಮನಮುಟ್ಟುತ್ತವೆ. ರಂಗಭೂಮಿಯ ಮೇಲೆ ಈ ರೂಪಕಗಳನ್ನು ಅಭಿನಯಿಸುವಾಗಲಂತೂ ಅವಕ್ಕೆ ಇನ್ನೂ ಹೆಚ್ಚಿನ ಶೋಭೆಯುಂಟಾಗುತ್ತದೆ. ಆದರೆ ಕವಿಯ ಪ್ರತಿಭಾಮೂಲವಾದ ಚಿಂತನವೈಶಿಷ್ಟ್ಯಗಳನ್ನು ಮಾತ್ರ ಮೊದಲೊಮ್ಮೆ ಗೀತರೂಪಕಗಳನ್ನು ಓದಿರದ ಪ್ರೇಕ್ಷಕರು ಸಂಪೂರ್ಣವಾಗಿ ಅರಿತು ಅನುಭವಿಸುವುದು ಕಷ್ಟಸಾಧ್ಯ. ಆದುದರಿಂದ ಪು.ತಿ.ನ. ಅವರ ಗೀತರೂಪಕಗಳು ರಂಗಪ್ರದರ್ಶನದಲ್ಲಿ ಸಂಗೀತಕ್ಕೆ ಅತ್ಯುತ್ತಮವಾಗಿ ಅಳವಡುವ ಕೃತಿಮಾಲಿಕೆಗಳಾಗಿ ಪರಿಣಮಿಸಲೂ ಸಾಧ್ಯವಿದೆ. ಇವರ ಹಂಸದಮಯಂತಿ, ಗೋಕುಲನಿರ್ಗಮನ ಇವು ಶ್ರವ್ಯ ಗೀತರೂಪಕಗಳ ದೃಷ್ಟಿಯಿಂದ ಅತ್ಯುತ್ತಮವಾದವು. [[ಡಿ.ವಿ.ಗುಂಡಪ್ಪನವರಗುಂಡಪ್ಪ]]ನವರ ಭಸ್ಮಾಸುರ ಮೋಹಿನಿ, ಗೀತ ಶಾಕುಂತಲ ಎಂಬೆರಡು ಗೀತರೂಪಕಗಳೂ ಇದೇ ವರ್ಗಕ್ಕೆ ಸೇರುವಂಥವು.
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೀತರೂಪಕ}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ರಂಗಭೂಮಿ]]
೧೦,೮೯೭

edits

"https://kn.wikipedia.org/wiki/ವಿಶೇಷ:MobileDiff/894446" ಇಂದ ಪಡೆಯಲ್ಪಟ್ಟಿದೆ