ಸಾಮ್ಯನ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಚುNo edit summary
೧ ನೇ ಸಾಲು:
ಸಾಮ್ಯನ್ಯಾಯವೆಂದರೆ ಸರಿಸಮಾನತೆ (ಈಕ್ವಾಲಿಟಿ), ನ್ಯಾಯ (ಜಸ್ಟಿಸ್) ಮತ್ತು ನೀತಿಯುಕ್ತತೆ (ಫೇರ್ನೆಸ್), ಅದು ಸಹಜ ನ್ಯಾಯ ಅಥವಾ ಸ್ವಾಭಾವಿಕ ನ್ಯಾಯ (ನ್ಯಾಚುರಲ್ ಜಸ್ಟಿಸ್.)
 
== ಇತಿಹಾಸ ==
ಕಿಂಗ್ಸ್ ಬೆಂಚ್, ಕಾಮನ್ ಪ್ಲೀಸಿನ ಕೋರ್ಟು, ಎಕ್ಸ್ಚೆಕರ್ - ಇವು 13ನೆಯ [[ಶತಮಾನ]]ದ ಅಂತ್ಯದಲ್ಲಿ ಇದ್ದ ಪ್ರಮುಖ ನ್ಯಾಯಾಲಯಗಳು. ಇವುಗಳೆಲ್ಲ ಪರಂಪರಾಗತವಾಗಿ ಬಂದ ಸಂಪ್ರದಾಯಮೂಲವಾದ ನ್ಯಾಯವನ್ನು ಜಾರಿ ಮಾಡುತ್ತಿದ್ದುವು. ಇವುಗಳೆಲ್ಲ ಒಂದಲ್ಲ ಒಂದು ನಿರೂಪದ (ರಿಟ್) ಮುಖಾಂತರವೇ ಆಗಬೇಕಿತ್ತು. ದೊರೆಯ ನ್ಯಾಯಾಲಯಗಳಲ್ಲಿ ನ್ಯಾಯ ಸಿಕ್ಕಬೇಕಾದರೆ ಪರಿಹಾರ ಪಡೆಯಬೇಕಾಗಿದ್ದಾತ ಕೇಳುವ ನಿವೃತ್ತ್ತಿಯನ್ನು ಯಾವುದಾದರೊಂದು ರಿಟ್ ಅಥವಾ ನಿರೂಪದ ಒಳಗೆ ಬರುವಂತೆ ಮಾಡಬೇಕಿತ್ತು. ನಿರೂಪ ಇಲ್ಲದಲ್ಲಿ ನ್ಯಾಯ ಅವನಿಗೆ ದೊರೆಯಲು ಅಸಾಧ್ಯವಾಗಿತ್ತು. ಸಂಪ್ರದಾಯನ್ಯಾಯದಲ್ಲಿ ಅನೇಕ ಕುಂದುಗಳಿದ್ದುವು. ಅವುಗಳ ಪ್ರಕಾರ ಎಲ್ಲ ವಿಚಾರಗಳಲ್ಲೂ ನ್ಯಾಯ ದೊರಕುತ್ತಿರಲಿಲ್ಲ. ಅವು ಕೊಡುತ್ತಿದ್ದ ನಿವೃತ್ತಿಗಳು ಅನೇಕ ಸಂದಂರ್ಭಗಳಲ್ಲಿ ಸರಿಯಾದ್ದಕ್ಕಿಂತ ಕಮ್ಮಿಯಾಗುತ್ತ್ತಿದ್ದುವು. ಅಲ್ಲಿ ನ್ಯಾಯವಿಧಾನ (ಪ್ರೊಸೀಜರ್) ಸೂಕ್ತವಾಗಿರಲಿಲ್ಲ. ಇವುಗಳನ್ನು ಪರಿಹರಿಸಲು ಸಾಮ್ಯನ್ಯಾಯ ಬಂತು.
 
ಶಕ್ತಿಯುತರಾದ ವ್ಯವಹಾರದಾರರು ಲಂಚರುಶುವತ್ತುಗಳಿಂದ ಅಥವಾ ಹೆದರಿಕೆ ಹಾಕಿ ಸಂಪ್ರದಾಯನ್ಯಾಯದ ನ್ಯಾಯದರ್ಶಿಗಳಿಂದ (ಜ್ಯೂರಿ) ತಮಗೆ ಬೇಕಾದ ತೀರ್ಪುಗಳನ್ನು ಪಡೆಯುತ್ತಿದ್ದರು. ಇದರಿಂದಾಗಿ ಸಂಪ್ರದಾಯನ್ಯಾಯಾಲಯಗಳಿಂದ ವಂಚಿತರಾದವರು ರಾಜನಿಗೆ ಅಥವಾ ಅವನ ಮಂತ್ರಿಸಭೆಗೆ ತಮ್ಮ ವ್ಯವಹಾರದ ವಿಚಾರಗಳನ್ನು ಹೇಳಿಕೊಂಡು ದೂರು ಕೊಡುವ ಕ್ರಮ ಬಂತು. ಅವುಗಳನ್ನು ತನಿಖೆ ಮಾಡಲು ಚಾನ್ಸಲರ್ (ಎಕ್ಸ್ಚೆಕರಿನ ಪ್ರಮುಖ ಅಧಿಕಾರಿ), ಚಾನ್ಸರಿಯ ಬೇರೆ ಅಧಿಕಾರಿಗಳು, ಪ್ರಮುಖವಾಗಿ ಮಾಸ್ಟರ್ ಆಫ್ ರೋಲ್ಸ್ ಇವರಿದ್ದರು. ಚಾನ್ಸಲರ್ ಈ ಮೊದಲೇ ಎಕ್ಸ್ಚೆಕರಿನ ಮುಖ್ಯನಾಗಿ ಸಂಪ್ರದಾಯವನ್ನು ಚಲಾಯಿಸುವ ಹಕ್ಕು ಪಡೆದಿದ್ದ. ಒಂದನೆಯ ಎಡ್ವರ್ಡನ ಕಾಲದಲ್ಲಿ ಅರ್ಜಿಗಳನ್ನು ರಾಜನ ಮಂತ್ರಿಸಭೆ ಚಾನ್ಸಲರನಿಗೆ ಕಳುಹುತ್ತಿತ್ತು. ಈ ಕ್ರಮದಿಂದ ಚಾನ್ಸರಿಯ ಹಕ್ಕು ನಿರ್ಮಿತವಾದಂತೆ ಕಾಣುತ್ತದೆ. ಬರಬರುತ್ತ ಅರ್ಜಿಗಳನ್ನು ಚಾನ್ಸಲರನಿಗೆ ಕೊಡುವ ರೂಢಿ ಬಂತು. ಚಾನ್ಸಲರ್ ರಾಜನ ಆತ್ಮಸಾಕ್ಷಿಯ ನಿರ್ವಾಹಕ (ಕೀಪರ್ ಆಫ್ ಕಿಂಗ್ಸ್ ಕಾನ್ಷನ್ಸ್). ಯಾರ ಮೇಲಾದರೂ ಅರ್ಜಿ ಬಂದಲ್ಲಿ ಆತ ಹಾಜರಾಗುವಂತೆ ಚಾನ್ಸಲರ್ ಆತನಿಗೆ ನಿರೂಪ ಕೊಡುತ್ತಿದ್ದ. ಅವನು ಬಂದು ಅದಕ್ಕೆ ಸರಿಯಾಗಿ ಉತ್ತರವೀಯದಿದ್ದಲ್ಲಿ ಚಾನ್ಸಲರ್ ತನಗೆ ನ್ಯಾಯವೆಂದು ತೋರಿದಂತೆ ಮಾಡುತ್ತ್ತಿದ್ದ. ಸಂಪ್ರದಾಯನ್ಯಾಯದ ಕೋರ್ಟುಗಳಲ್ಲಿರುವ ಮೊಕದ್ದಮೆಯನ್ನು ಮುಂದುವರಿಸಕೂಡ ದೆಂದೂ ತೀರ್ಪು ಪಡೆಯಕೂಡದೆಂದೂ ಆಜ್ಞೆ ಕೊಡುತ್ತಿದ್ದ. ಅದಕ್ಕೆ ತಪ್ಪಿದಲ್ಲಿ ದಂಡ, ಕಾರಾಗೃಹವಾಸ ವಿಧಿಸುವ ಹಕ್ಕು ಆತನಿಗಿತ್ತು.
 
 
ಸಾಮ್ಯನ್ಯಾಯವೆಂದರೆ ಸರಿಸಮಾನತೆ (ಈಕ್ವಾಲಿಟಿ), ನ್ಯಾಯ (ಜಸ್ಟಿಸ್) ಮತ್ತು ನೀತಿಯುಕ್ತತೆ (ಫೇರ್ನೆಸ್), ಅದು ಸಹಜ ನ್ಯಾಯ ಅಥವಾ ಸ್ವಾಭಾವಿಕ ನ್ಯಾಯ (ನ್ಯಾಚುರಲ್ ಜಸ್ಟಿಸ್.) ಇದು ನ್ಯಾಯಸ್ಥಾನಗಳು ಜಾರಿ ಮಾಡಲು ತಕ್ಕುದಾದ ಸಹಜನ್ಯಾಯವಾಗಿದ್ದರೂ ಚಾರಿತ್ರಿಕ ಕಾರಣಗಳಿಂದ ಸಂಪ್ರದಾಯ ನ್ಯಾಯಾಲಯಗಳು ಜಾರಿ ಮಾಡಲು ಸಾಧ್ಯವಿಲ್ಲದ್ದು. ಇಂಥದನ್ನು ಚಾನ್ಸರಿ ನ್ಯಾಯಾಲಯ ಜಾರಿ ಮಾಡಿದೆ ಎಂದು ಸ್ರೆಲ್ ಹೇಳುತ್ತಾನೆ. ನ್ಯಾಯ ಮತ್ತು ಸಾಮ್ಯವನ್ನು 1873 ಮತ್ತು 1875ರ ನ್ಯಾಯವ್ಯವಸ್ಥೆಯ ಕಾಯಿದೆಗಳು (ಜುಡಿಕೇಚರ್ ಆ್ಯಕ್್ಟ) ಸರಿಹೊಂದಿಸುವ ಮೊದಲೇ ಚಾನ್ಸರಿ ನ್ಯಾಯಾಲಯಗಳು ಜಾರಿಮಾಡುತ್ತಿದ್ದ ನ್ಯಾಯಕ್ಕೆ ಎಕ್ವಿಟಿ ಅಥವಾ ಸಾಮ್ಯನ್ಯಾಯವೆಂದು ಹೇಲ್ಸ್ ಹೇಳುತ್ತಾನೆ.
Line ೧೪ ⟶ ೧೮:
 
ಮೊದಲ ಮತ್ತು ಎರಡನೆಯ ಎಡ್ವರ್ಡರ ಕಾಲದಲ್ಲಿ ಚಾನ್ಸರಿ ಕೋರ್ಟುಗಳು ಖಾಯಂ ಆದವು. ಅನೇಕ ವಿಚಾರಗಳಲ್ಲಿ ಚಾನ್ಸರಿ ಕೋರ್ಟುಗಳ ನ್ಯಾಯತೀರ್ಮಾನಕ್ಕೂ ವಿರೋಧಗಳುಂಟಾಗತೊಡಗಿದುವು. ಅವುಗಳ ತೀರ್ಮಾನದಲ್ಲಿ ಅಭ್ಯಂತರವಿದ್ದಲ್ಲಿ ಚಾನ್ಸರಿ ಕೋರ್ಟಿನ ತೀರ್ಮಾನವೇ ಸ್ವೀಕಾರಾರ್ಹವೆಂದು ಅರ್ಲ್ ಆಫ್ ಆಕ್ಸ್ಫರ್ಡ್ ಮೊಕದ್ದಮೆಯಲ್ಲಿ ಒಂದನೆಯ ಜೇಮ್ಸ್ ತೀರ್ಮಾನಿಸಿದ. 1875ರ ಜ್ಯುಡಿಕೇಚರ್ ಕಾಯಿದೆಯ 25ನೆಯ ವಿಧಿಯ ಪ್ರಕಾರ ಒಂದೇ ವಿಚಾರದಲ್ಲಿ ಸಂಪ್ರದಾಯನ್ಯಾಯದ ನಿಯಮಕ್ಕೂ ಸಾಮ್ಯನ್ಯಾಯದ ನಿಯಮಕ್ಕೂ ವಿರೋಧವಿದ್ದಲ್ಲಿ ಸಾಮ್ಯನ್ಯಾಯದ ನಿಯಮವನ್ನು ಅನುಸರಿಸಬೇಕೆಂದು ನಿರ್ಣಯಿಸಲಾಯಿತು.
<br />{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಮ್ಯನ್ಯಾಯ}}
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ನ್ಯಾಯ ವಿಜ್ಞಾನ]]
[[ವರ್ಗ:ನ್ಯಾಯಾಂಗ ವ್ಯವಸ್ಥೆ]]
[[ವರ್ಗ:ನ್ಯಾಯಿಕ ನೀತಿಶಾಸ್ತ್ರ]]
"https://kn.wikipedia.org/wiki/ಸಾಮ್ಯನ್ಯಾಯ" ಇಂದ ಪಡೆಯಲ್ಪಟ್ಟಿದೆ