ಭಾರತೀಯ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಅಧಿಕೃತ ಭಾಷೆ==
*ಸಂವಿಧಾನದ 343ನೇ ವಿಧಿಯು ದೇಶದ ಅಧಿಕೃತ ಭಾಷೆಯ ಕುರಿತು ವಿವರಿಸುತ್ತದೆ. (ಅಧಿಕೃತ ಭಾಷೆ ಎಂದರೆ ಸರ್ಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಮತ್ತು ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆ). ಈ ವಿಧಿಯ ಪ್ರಕಾರ, ದೇವನಾಗರಿ ಲಿಪಿಯಲ್ಲಿರುವ ಹಿಂದಿಭಾಷೆಯು ಅಧಿಕೃತ ಭಾಷೆ. ಆದರೆ, ಈ ಭಾಷೆಯ ಜೊತೆಗೆ ಸರ್ಕಾರಿ ಉದ್ದೇಶಗಳಿಗಾಗಿ ಹಿಂದಿಯ ಜೊತೆ ಇಂಗ್ಲಿಷ್‌ ಭಾಷೆಯನ್ನು ಕೇಂದ್ರಾಡಳಿತ ಹಾಗೂ ಸಂಸತ್ತಿನಲ್ಲಿ ಅಧಿಕೃತ ಭಾಷೆಯನ್ನಾಗಿ ಸಂವಿಧಾನ ಆರಂಭದ (26ನೇ ಜನವರಿ 1965) 15 ವರ್ಷಗಳವರೆಗೆ ಮಾತ್ರ ಮುಂದುವರಿಸಿಕೊಂಡು ಹೋಗಬಹುದು (ಸಂವಿಧಾನ ನೀಡಿರುವ ಈ ಅವಧಿ 1980ಕ್ಕೆ ಮುಕ್ತಾಯಗೊಂಡಿದೆ). 15 ವರ್ಷ ಪೂರ್ಣಗೊಂಡ ಮೇಲೆ ಭಾಷೆಗೆ ಸಂಬಂಧಿಸಿದಂತೆ ಒಂದು ಆಯೋಗವನ್ನು ರಾಷ್ಟ್ರಪತಿಯವರು ರಚಿಸಬೇಕು.
 
*ಅದರಲ್ಲಿ ಹಿಂದಿ ಸೇರಿದಂತೆ ಆಯಾ ರಾಜ್ಯಗಳಲ್ಲಿ ಬಳಸಬಹುದಾದ ಭಾಷೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇಂಗ್ಲಿಷ್‌ ಬಿಟ್ಟು ಇತರ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವುದು ಹಾಗೂ ಅಧಿಕೃತ ಬಳಕೆಗಾಗಿ ಇಂಗ್ಲಿಷ್‌ ಭಾಷೆಗೆ ಆದಷ್ಟು ಕಡಿವಾಣ ಹಾಕುವುದು ಈ ಆಯೋಗದ ಮುಖ್ಯ ಉದ್ದೇಶ ಆಗಿರಬೇಕು ಎಂದು 344ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಹಿಂದಿಯ ಜೊತೆಗೆ ಬೇರೆಬೇರೆ ರಾಜ್ಯಗಳ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ವಿವರಿಸಲಾಗಿದೆ. ರಾಜ್ಯಗಳು ಪರಸ್ಪರ ವ್ಯವಹರಿಸುವಾಗ ಅಥವಾ ಕೇಂದ್ರದ ಜೊತೆ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ಈ 22 ಭಾಷೆಗಳನ್ನು ಬಳಸಬಹುದು ಎಂದು 344(1)ರಲ್ಲಿ ಸ್ಪಷ್ಟಪಡಿಸಲಾಗಿದೆ.
"https://kn.wikipedia.org/wiki/ಭಾರತೀಯ_ಭಾಷೆಗಳು" ಇಂದ ಪಡೆಯಲ್ಪಟ್ಟಿದೆ