ಗಂಟಲುವಾಳ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗಳಗಂಡ ಲೇಖನದಿಂದ ವಿಷಯ ಸೇರಿಸಲಾಗಿದೆ
೧೫ ನೇ ಸಾಲು:
}}
ಒಂದು '''goitre''' (ಗಂಟಲುವಾಳ ರೋಗ) ಅಥವಾ '''goiter''' ([[ಲ್ಯಾಟಿನ್|ಲ್ಯಾಟಿನ್‌]]ನಲ್ಲಿ ''ಗುಟೇರಿಯಾ'' , ''ಸ್ಟ್ರುಮಾ'' ), ಇದು ಥೈರಾಯ್ಡ್ ಗ್ರಂಥಿ<ref>{{DorlandsDict|four/000045602|goiter}}</ref>ಯಲ್ಲಿನ ಒಂದು ಊತವಾಗಿದೆ, ಇದು ಕುತ್ತಿಗೆಯ ಊತ ಅಥವಾ ಗಂಟಲಗೂಡಿನ (ಧ್ವನಿ ಪೆಟ್ಟಿಗೆ) ಊತಕ್ಕೆ ಕಾರಣವಾಗುತ್ತದೆ. ಗಂಟಲುವಾಳ ರೋಗವು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಸಂದರ್ಭದಲ್ಲಿ ಸಂಭವಿಸುತ್ತದೆ.
 
ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಅಂದರೆ ಆಲ್ಪ್ಸ್, ಪಿರನೀಸ್, ಕಾರ್ಪೇತಿಯನ್ಸ್, ಆಂಡೀಸ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಇದು ಸಾಮಾನ್ಯ. ಮೈಸೂರು ರಾಜ್ಯದ ಚಿತ್ರದುರ್ಗದಜಿಲ್ಲೆಯಲ್ಲಿ ಇದು ತಲೆದೋರಿದುದುಂಟು. ವಿಟಮಿನುಗಳ ಕೊರತೆಯ ಜೊತೆಗೆ ಆಹಾರದಲ್ಲಿ ಸಾಕಷ್ಟು ಅಯೋಡೀನ್ ಇಲ್ಲದಲ್ಲಿ ಈ ರೋಗ ಉಂಟಾಗುತ್ತದೆಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಇದು ವಯಸ್ಕರಲ್ಲಿ ಹೆಚ್ಚು. ಅದರಲ್ಲೂ ಗಂಡಸರಿಗಿಂತ ಹೆಂಗಸರಲ್ಲಿ ಎಂಟು ಪಟ್ಟು ಹೆಚ್ಚು. ಕೆಲವೇಳೆ ಅನುವಂಶಿಕ ಕಾರಣಗಳಿಂದಾಗಿ ಎಳೆಯವರಿಗೂ ಬರಬಹುದು.
 
== ವರ್ಗೀಕರಣ ==
Line ೩೨ ⟶ ೩೪:
 
ಅದೇ ಸಮಯದಲ್ಲಿ, ವಿಷಯುಕ್ತ ಗಂಟಲುವಾಳಗಳು ಥೈರೋಟೊಕ್ಸಿಕೋಸಿಸ್‌ನ (ಥೈರಾಯ್ಡ್ ಗ್ರಂಥಿಯ ವಿಷಯುಕ್ತತೆ) ಅಂದರೆ ಪರಸ್ಪರ್ಶನ, ಹೆಚ್ಚಿನ ಕಾರ್ಯಗಳು, ಹೆಚ್ಚಲ್ಪಟ್ಟ ಜೀರ್ಣಕ್ರಿಯೆಯ ಹೊರತಾಗಿಯೂ ತೂಕದ ಇಳಿತ, ಮತ್ತು ತಾಪದ ಅಸಹನೀಯತೆ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಕಂಡುಬರುತ್ತವೆ.
 
ಈ ರೋಗ ತಗಲಿದಾಗ ಗುರಾಣಿಕಗ್ರಂಥಿಯ ಕಾರ್ಯಪಟುತ್ವ ತುಂಬ ಹೆಚ್ಚಬಹುದು, ಇಲ್ಲವೆ ತೀರ ಕುಗ್ಗಲೂಬಹುದು. ಗಡ್ಡೆದಪ್ಪನಾದಂತೆಲ್ಲ ಸುತ್ತಲಿನ ಭಾಗಗಳ ಮೇಲಿನ ಒತ್ತಡ ಹೆಚ್ಚುವುದು ಉಸಿರಾಡುವುದಕ್ಕೆ ತೊಂದರೆಯಾಗಿ ಕೆಮ್ಮು, ಒಡಕು ಧ್ವನಿ ಕಾಣಿಸಬಹುದು. ಒತ್ತಡದಿಂದ ರಕ್ತನಾಳಗಳ ಬಣ್ಣ ನೀಲಿಯಾಗಬಹುದು, ಅಪರೂಪವಾಗಿ ನುಂಗುವುದಕ್ಕೆ ಕಷ್ಟವಾಗಬಹುದು. ಕಣ್ಣು ಪಾಪೆ ಅಗಲವಾಗಿ ಮುಖ ಬೆವರಬಹುದು. ಶೇಕಡ ಎರಡರಷ್ಟು ರೋಗಿಗಳಲ್ಲಿ ಪರಿಸ್ಥಿತಿ ವಿಷಮಿಸಿ ಏಡಿಗಂತಿ (ಕ್ಯಾನ್ಸರ್) ಕಾಣಿಸಬಹುದು. ಗಡ್ಡೆ ಬೇಗ ದಪ್ಪವಾಗುವುದು, ಗಟ್ಟಿಯಾಗುವುದು ಮತ್ತು ಒತ್ತಡದ ಚಿಹ್ನೆಗಳು ಹೆಚ್ಚುವುದು-ಇವು ಏಡಿಗಂತಿಯ ಚಿಹ್ನೆಗಳು. ಕ್ರಮೇಣ ರೋಗ ಪಿತ್ತಜನಕಾಂಗ, ಶ್ವಾಸಕೋಶಗಳು ಮತ್ತು ಮೂಳೆಗಳಿಗೆ ಹರಡಬಹುದು.
 
== ಕಾರಣಗಳು ==
Line ೮೧ ⟶ ೮೫:
 
ಗಂಟಲುವಾಳವು ಮುಂಚಿನ ದಿನಗಳಲ್ಲಿ ಮಣ್ಣಿನಲ್ಲಿ ಅಯೋಡಿನ್ ಕೊರತೆಯಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿತ್ತು. ಉದಾಹರಣೆಗೆ, ಇಂಗ್ಲೀಷ್ ಮಿಡ್‌ಲ್ಯಾಂಡ್‌ಗಳಲ್ಲಿ, ಈ ಸ್ಥಿತಿಯು '''ಡರ್ಬಿಶೈರ್ ನೆಕ್''' ಎಂದು ಕರೆಯಲ್ಪಡುತ್ತಿತ್ತು. [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್‌]]ನಲ್ಲಿ, ಗಂಟಲುವಾಳವು [[ಮಹಾ ಸರೋವರಗಳು|ಗ್ರೇಟ್ ಲೇಕ್ಸ್]], ಮಿಡ್‌ವೆಸ್ಟ್, ಮತ್ತು ಇಂಟರ್‌ಮೌಂಟೇನ್ ಪ್ರದೆಶಗಳಲ್ಲಿ ಕಂಡುಬಂದಿತು. ಈ ಸ್ಥಿತಿಯು ಪ್ರಸ್ತುತದಲ್ಲಿ ಟೇಬಲ್ ಸಾಲ್ಟ್ ಅಯೋಡಿನ್ ಸ್ಥಾನವನ್ನು ಪಡೆದುಕೊಂಡ ಪ್ರದೇಶಗಳಲ್ಲಿ, ಅಂದರೆ ಸಮೃದ್ಧ ದೇಶಗಳಲ್ಲಿ ಪ್ರಾಯೋಗಿಕವಾಗಿ ಅನುಪಸ್ಥಿತವಾಗಿದೆ. ಆದಾಗ್ಯೂ, ಇದು ಈಗಲೂ ಕೂಡ [[ಭಾರತ]], [[ಚೀನಾ]]<ref>[http://www.nytimes.com/2006/12/16/health/16iodine.html "ಜಗತ್ತಿನ ಐಕ್ಯೂವನ್ನು ಹೆಚ್ಚಿಸುವಲ್ಲಿ, ಉಪ್ಪಿನಲ್ಲಿನ ರಹಸ್ಯಗಳು"], ಡೋನಾಲ್ಡ್ ಜಿ. ಮ್ಯಾಕ್‌ನೀಲ್‌, ಜೂನಿಯರ್‌ನ ಒಂದು ಲೇಖನ, ಡಿಸೆಂಬರ್ ೧೬, ೨೦೦೬, ''ನ್ಯೂಯಾರ್ಕ್ ಟೈಮ್ಸ್'' </ref> [[ಮಧ್ಯ ಏಶಿಯಾ|ಮಧ್ಯ ಏಷಿಯಾ]] ಮತ್ತು [[ಮಧ್ಯ ಆಫ್ರಿಕಾ|ಮಧ್ಯ ಆಫ್ರಿಕಾಗಳಲ್ಲಿ]] ಅಸ್ತಿತ್ವದಲ್ಲಿದೆ.
 
== ಪ್ರಾಣಿಗಳಲ್ಲಿ ==
ದೇಹದಲ್ಲಿನ ಅಯೊಡಿನ್ ಅಂಶದಲ್ಲಿ ತುಸು ಏರುಪೇರು ಆದರೂ ಸಾಕು, ಪ್ರಾಣಿಗಳಲ್ಲಿ ಗಂಡಮಾಲೆ ಬೇನೆಯ ಅನೇಕ ರೂಪಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿನ ಅಯೊಡಿನ್ ಪ್ರಮಾಣ 30 ಲಕ್ಷಗಳಲ್ಲಿ ಕೇವಲ 1 ಪಾಲಾದರೂ ಅದಿಲ್ಲದೆ ಗುರಾಣಿಕ ಗ್ರಂಥಿ ದೇಹಪೋಷಕವಾದ ತೈರಾಕ್ಸಿ ಚೋದನಿಕವನ್ನು ಉತ್ಪತ್ತಿ ಮಾಡದು. ತೈರಾಕ್ಸಿನ್ ಬೆಳೆಯುವ ಪ್ರಾಣಿಗಳ ಹಾಗು ಪಿಂಡ ಹೊತ್ತಿರುವ ತಾಯಿ ಪ್ರಾಣಿಗಳ ಆಹಾರಕ್ರಿಯೆಯಲ್ಲಿ ತನ್ನದೇ ಆದ ಪ್ರಮುಖಪಾತ್ರವನ್ನು ವಹಿಸಿದೆ ಧರ್ಮ ಹಾಗು ಕೂದಲು ನುಣುಪಾಗಲು ಖನಿಜ ಹಾಗೂ ಸಾರಜನಕಗಳು ಈ ದೇಹದಲ್ಲಿ ಸೇರಿಹೊಗಲು ಈ ಚೋದನಿಕದ ಅವಶ್ಯಕತೆ ಇದೆ.
 
ಆಹಾರ ಹಾಗೂ ನೀರಿನ ಮೂಲಕ ಅಯೊಡಿನ್ ಪೂರೈಕೆ ಸರಿಯಾಗಿ ಸಾಗದೆ ಹೋದರೆ ದೇಹದಲ್ಲಿ ಇದರ ಅಂಶ ಕಡಿಮೆಯಾಗುವುದು. ಆಗ ದೇಹದಲ್ಲಿ ಅವಶ್ಯವಾಗಿರುವ ಅಯೊಡಿನನ್ನು ಹೆಚ್ಚಾಗಿ ಉತ್ಪಾದನೆ ಮಾಡಲು ಗುರಾಣಿಕ ಗ್ರಂಥಿ ತನ್ನಷ್ಟಕ್ಕೆ ತಾನೇ ದೊಡ್ಡದಾಗಿ ಊದಿಕೊಳ್ಳುತ್ತದೆ.
 
ಗಳಗಂಟಲ ಬೇನೆ ಸಾಮಾನ್ಯವಾಗಿ ಎಲ್ಲ ಪ್ರಾಣಿಗಳಲ್ಲಿಯೂ ಕಾಣಬರುತ್ತದೆ. ನಾಯಿಮರಿ, ಕುದುರೆಮರಿ, ಕುರಿಮರಿ ಹಾಗೂ ಕರುಗಳಲ್ಲಿ ಈ ಬೇನೆ ವಿಶಿಷ್ಟವಾಗಿ ಕಾಣಬರುತ್ತದೆ. ಸಾಮಾನ್ಯವಾಗಿ ನೆಲ, ನೀರು ಹಾಗೂ ಆಹಾರದಲ್ಲಿ ಅಯೊಡಿನ್ ಅಂಶದ ಕೊರತೆ ಕಾಣಬಂದಾಗ ಈ ಬೇನೆ ಬರುವುದು.
 
ಅಯೊಡಿನ್ ಅಂಶ ಪ್ರಧಾನವಾಗಿ ನೆಲದಲ್ಲಿದೆ. ಸಸ್ಯಗಳ ಹಾಗೂ ಹುಲ್ಲಿನ ಮೂಲಕ ಅದು ಪ್ರಾಣಿ ದೇಹವನ್ನು ಸೇರುತ್ತದೆ. ನೆಲದಲ್ಲಿ ಅಯೊಡಿನ್ ಅಂಶ ಕಡಿಮೆಯಾದರೆ ಸಸ್ಯ ಹಾಗು ನೀರಿನಲ್ಲೂ ಅದರ ಅಂಶ ಇಲ್ಲವಾಗುವುದು. ನೆಲದಲ್ಲಿ ಸಸ್ಯಸಂಬಂಧವಾದ ಗೊಬ್ಬರವಿದ್ದು, ಲವಣಾಂಶವೂ ಹೆಚ್ಚಾಗಿದ್ದರೆ ಅಯೊಡಿನ್ ಅಂಶ ಕಡಿಮೆಯಾಗುವುದು. ಗೊಬ್ಬರರೂಪದಲ್ಲಿ ಲವಣವನ್ನು ಹೆಚ್ಚಿಗೆ ಉಪಯೋಗಿಸಿದರೂ ಅಷ್ಟೆ. ಸಸ್ಯಗಳಲ್ಲಿನ ಅಯೊಡಿನ್ ಅಂಶ ಪ್ರಮುಖವಾಗಿ ನೆಲದ ಗುಣ, ಮಣ್ಣಿನ ಗುಣ ಹಾಗೂ ಕಾಲವನ್ನು ನಿರ್ಧರಿಸುವುದು.
 
ಪ್ರಾಣಿಗಳು ಬಳಸುವ ವಿವಿಧ ರೀತಿಯ ಆಹಾರಗಳಲ್ಲಿ ಸಸ್ಯಸಂಬಂಧವಾದ ಆಹಾರ ಪ್ರಧಾನವಾದದು. ಅಯೊಡಿನ್ ಕೊರತೆ ಇರುವ ಹುಲ್ಲುಗಾವಲಿನಲ್ಲಿ ಮೇಯುವಾಗ, ಮೇಲಾಗಿ ಆಹಾರದಲ್ಲಿ ಹೆಚ್ಚಿಗೆ ಲವಣಾಂಶವನ್ನು ಸೇರಿಸಿದಾಗ ಅಯೊಡಿನ್ ಕೊರತೆ ಉಂಟಾಗುತ್ತದೆ. ಅನೇಕ ರೀತಿಯ ಹುಲ್ಲುಗಳಲ್ಲಿ ಈ ಬೇನೆ ತರುವ ವಸ್ತುವಿದೆ. ಕಾಳೆ, ಕೋಸು, ಟರ್ನಿಪ್, ಬ್ರಸಲ್ಸ್ ಚಿಗುರು, ಸೋಯ ಅವರೆಗಳಲ್ಲಿ ರೋಗಕಾರಕವಾದ ತಯೋಸಿನೇಟ್ ಎಂಬ ವಸ್ತುವಿದೆ. ನಾರಗಸೆಯಲ್ಲಿ ಸಿಗುವ ಲಿನ್‍ಮಾರಿನ್ ಎಂಬ ಗ್ಲೂಕೋಸೈಡು ಸಹ ಇದೇ ರೀತಿಯದೆಂದು ತಿಳಿದುಬಂದಿದೆ. ಆದುದರಿಂದ ಈ ಸಸ್ಯಗಳನ್ನು ಬಹಳ ದಿನಗಳ ಕಾಲ ಆಹಾರವಾಗಿ ಕೊಡಬಾರದು. ಕುರಿಗಳ ಮೇವಿಗಾಗಿ ಬೆಳೆಸುವ ರೇಪ್‍ಗಿಡದ ಬೀಜವನ್ನು ಹಾಗೂ ನೆಲಗಡಲೆಯನ್ನು ಪ್ರಾಯೋಗಿಕವಾಗಿ ಇಲಿಗಳಿಗೆ ತಿನ್ನಿಸಿದಾಗ ಈ ಬೇನೆ ಬಂದಿದೆ. ಈ ವಸ್ತುಗಳಲ್ಲೂ ರೋಗಕಾರಕ ವಸ್ತುವಿದೆ. ನಾರಗಸೆ ಹಾಗೂ ಕಾಳೆ ಸಸ್ಯಗಳನ್ನ ಬಸಿರಾದ ಕುರಿಗಳಿಗೆ ಕೊಡುವುದರಿಂದ ಹುಟ್ಟುವ ಕುರಿಮರಿಗಳು ಈ ರೋಗದಿಂದ ನರಳುತ್ತವೆ. ಬ್ಯಾಕ್ಟೀರಿಯಗಳಿಂದ ಕೆಟ್ಟಹೋದ ನೀರು ಹಾಗೂ ಆಹಾರವಸ್ತುಗಳನ್ನು ಪ್ರಾಣಿಗಳಿಗೆ ಕೊಟ್ಟಾಗಲೂ ಈ ಬೇನೆ ಕಾಣಿಸುತ್ತದೆ. ಒಟ್ಟಾರೆ ಆಹಾರದಲ್ಲಿ ಸಯನೋಜೆನಿಟಿಕ್ ಗ್ಲೂಕೋಸೈಡ್ ಅಂಶದ ಕೊರತೆ ಕಾಣಬಂದರೆ ಗಂಡಮಾಲೆ ಬರುತ್ತದೆ.
 
ಅಯೊಡಿನ್ ಅಂಶ ದೇಹದಲ್ಲಿ ಕಡಿಮೆ ಆದಾಗ ತೈರಾಕ್ಸಿನ್ ಉತ್ಪಾದನೆ ಸ್ಥಗಿತಗೊಳ್ಳುತ್ತದಷ್ಟೆ. ಆಗ ಗುರಾಣಿಕ ಗ್ರಂಥಿ ಹೆಚ್ಚಿಗೆ ಕೆಲಸ ಮಾಡಲು ಸಹಾಯವಾಗುವಂತೆ ಪಿಟ್ಯುಟರಿ ಗ್ರಂಥಿ ತೈರೊಟ್ರೊಫಿಕ್ ಚೋದನಿಕವನ್ನು ಉತ್ಪಾದನೆ ಮಾಡಿ ಗುರಾಣಿಕವನ್ನು ಎಚ್ಚರಿಸುತ್ತದೆ. ಇದರಿಂದ ಗುರಾಣಿಕ ತನ್ನ ಸ್ವಾಭಾವಿಕ ಗಾತ್ರಕ್ಕಿಂತ ದೊಡ್ಡದಾಗುವುದು. ಧ್ವನಿಪೆಟ್ಟಿಗೆ ಬಳಿ ಈ ಬಾವು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಎಳೆ ಪ್ರಾಣಿಗಳಲ್ಲಿ ಬೇನೆ ಈ ರೀತಿಯದು ಅಷ್ಟೆ. ಅವುಗಳಲ್ಲಿ ಸ್ಪಷ್ಟವಾಗಿ ರೋಗಲಕ್ಷಣಗಳೇನೂ ಕಾಣಬರವು. ಬಂದ ಬೇನೆ ಕೆಲವೊಮ್ಮೆ ಹಠಾತ್ತನೆ ಮರೆಯಾಗುವುದೂ ಉಂಟು.
 
===ಕುರಿ===
ಅಯೊಡಿನ್ ಕೊರೆಯಿರುವ ಮೇವನ್ನು ಸೇವಿಸುವ ಕುರಿಗಳ ಮತ್ತು ಮೇಕೆಗಳ ಮರಿಗಳಿಗೂ ಗಂಡಮಾಲೆ ಬರುತ್ತದೆ. ಡಾರ್ಸೆಟ್ ಹಾರ್ನ್ ಕುರಿಗಳಲ್ಲಿದು ಸಾಮಾನ್ಯ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯೂರೋಪುಗಳಲ್ಲಿ ಈ ರೋಗ ಅಷ್ಟು ಸ್ಪಷ್ಟವಾಗಿ ಕಾಣಬರುವುದಿಲ್ಲ. ಕುರಿಗಳಲ್ಲಿರುವ ಹುಳುಗಳನ್ನು ಹೊರಹಾಕಲು ಉಪಯೋಗಿಸುವ ಹುಳುನಿವಾರಕಗಳನ್ನು ಎಡೆಬಿಡದೆ ಕೊಟ್ಟಾಗಲೂ ಹೆಚ್ಚಿನ ಅಂಶದಲ್ಲಿ ಫ್ಲೋರಿನ್ನನ್ನು ಸೇವಿಸಿದಾಗಲು ಈ ಬೇನೆ ಬರುತ್ತದೆನ್ನಲಾಗಿದೆ. ಕುರಿಗಳಲ್ಲಿ ಗಂಟಲ ಬಾವು ಬಹಳ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಆಗತಾನೆ ಹುಟ್ಟಿದ ಕುರಿಮರಿಗಳಿಗೆ ರೋಗದ ಸೊಂಕಿದ್ದಲ್ಲಿ ಅವು ಶಕ್ತಿಹೀನವಾಗುವುವು. ದೇಹಭಾಗದ ಕೆಲವಡೆ ಕೂದಲೇ ಇರುವುದಿಲ್ಲ. ಕೆಲವೊಮ್ಮೆ ಮೇಕೆಗಳಲ್ಲಿ ಈ ರೋಗ ವಿಪರೀತ ಮಟ್ಟಕ್ಕೇರುವುದುಂಟು. ==
===ನಾಯಿ===
ನಾಯಿಗಳಲ್ಲಿ ಗಂಡಮಾಲೆ ವಿವಿಧ ರೀತಿಯಲ್ಲಿ ಕಾಣಬರುವುದು. ಗ್ರೇವ್ಸನ ರೋಗವೆಂದು ಕರೆಯುವ ಊದುಗಣ್ಣು (ಎಕ್ಸಾಪ್ತಾಲ್ಮಿಕ್ ಗಾಯ್ಟರ್) ಒಮ್ಮೊಮ್ಮೆ ಕಾಣಬರುವುದುಂಟು. ಈ ಪರಿಸ್ಥಿತಿಯಲ್ಲಿ ಗುರಾಣಿಕ ಗ್ರಂಥಿ ಊದಿ ಕೊಳ್ಳುವುದಲ್ಲದೆ ಕಣ್ಣಗುಡ್ಡೆಗಳು ದೊಡ್ಡವಾಗಿ ಹೊರಗೆ ಚಾಚಿಕೊಂಡು ಕಣ್ಣು ಊದಿದಂತೆ ಕಾಣುವುದು. ಮನಸ್ಸಿನ ನೆಮ್ಮದಿ ಕೆಟ್ಟು ಪ್ರಾಣಿ ವಿಪರೀತ ಬೇಗನೆ ಕೆರಳುವುದು. ನಾಯಿಯಲ್ಲಿ ಒಮ್ಮೊಮ್ಮೆ ಪೂತಿಕೋಶದ ಗಂಡಮಾಲೆ (ಸಿಸ್ಟಿಕ್ ಗಾಯ್ಟರ್) ಕಾಣಬರುವುದೂ ಉಂಟು.
 
=== ಹಸು===
ತಾಯಿಯಲ್ಲಿ ಅಯೊಡಿನ್ ಕೊರತೆ ಇದ್ದರೆ ಹುಟ್ಟಿದ ಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸತ್ತುಹೋಗುತ್ತವೆ ಬದುಕಿದ ಕರುಗಳು ಹಾಲನ್ನು ಕುಡಿಯಲಾಗದಷ್ಟು ದುರ್ಬಲವಾಗಿರುತ್ತವೆ. ಅಲ್ಲಲ್ಲಿ ಕೂದಲು ಬಿದ್ದು ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಆಗತಾನೆ ಹುಟ್ಟಿದ ಕರುಗಳಲ್ಲಿ ದಪ್ಪ ಕತ್ತಿನ (ಬಿಗ್ ನೆಕ್) ರೋಗದ ರೂಪದಲ್ಲಿ ಈ ಬೇನೆ ಕಾಣಿಸಿಕೊಳ್ಳುತ್ತದೆ. ವಯಸ್ಕ ಪ್ರಾಣಿಗಳಲ್ಲಿ ಗುರಾಣಿಕಗ್ರಂಥಿ ಸ್ಪಷ್ಟವಾಗಿ ಎದ್ದುಕಾಣುತ್ತದೆ. ಇದರಿಂದ ಉಸಿರಾಟಕ್ಕೂ ತೊಂದರೆಯಾಗುವುದುಂಟು.
 
===ಕುದುರೆ===
ಕುದುರೆಗಳು ಈ ಬೇನಿಯಿಂದ ಬಳಲುತ್ತವಾದರೂ ಕೂದಲ ಬೆಳವಣಿಗೆಯಲ್ಲಿ ವ್ಯತ್ಯಾಸ ಕಾಣದು. ಗ್ರಂಥಿ ಸ್ಪಷ್ಟವಾಗಿ ಊದಿಕೊಳ್ಳುತ್ತದೆ. ರೋಗ ತಗಲಿದ ಕುದುರೆಮರಿ ತುಂಬ ನಿಶ್ಯಕ್ತವಾಗಿರುತ್ತದೆ.
 
=== ಹಂದಿ===
ತಾಯಿಯ ರೋಗವಿದ್ದಲ್ಲಿ ಹುಟ್ಟಿದ ಮರಿಗಳಲ್ಲಿ ಕೂದಲಿನ ಅಭಾವವು ಶಕ್ತಿಹೀನತೆಯೂ ಕಂಡುಬರುತ್ತದೆ. ಚರ್ಮದ ಊತ ಕಾಣಬರುತ್ತದೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಿಗಳೂ ನರಳಿ ಸುತ್ತುಹೋಗುವುವು. ಹಂದಿಗಳಲ್ಲಿ ಗ್ರಂಥಿಯ ಊತವಿದ್ದರೂ ಅಷ್ಟು ಸ್ಪಷ್ಟವಾಗಿ ಕಾಣಬರುವುದಿಲ್ಲ.
 
ಮರಣೋತ್ತರ ಪರೀಕ್ಷೆಯ ವೇಳೆಯಲ್ಲಿ ರೋಗಗ್ರಸ್ತ ಪ್ರಾಣಿಯ ಗ್ರಂಥಿಗಳು ಸ್ಪಷ್ಟವಾಗಿ ದೊಡ್ಡದಾಗಿರುವುದನ್ನು ಗಮನಿಸಬಹುದಲ್ಲದೆ ಅದರ ತೂಕದ ವ್ಯತ್ಯಾಸವನ್ನೂ ಕಾಣಬಹುದು.
 
=== ಚಿಕಿತ್ಸೆ===
ಬೇನೆ ವಾಸಿಯಾಗಲು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಅಯೊಡಿನ್ ಅಂಶ ಸಿಗುವಂತೆ ಮಾಡಬೇಕು. ಸಸ್ಯಗಳಿಗೆ ಗೊಬ್ಬರದ ಮೂಲಕ ಅಯೊಡಿನ್ನನ್ನು ಕೊಡುವುದರಿಂದ ಮುಂದೆ ಅದು ಪ್ರಾಣಿಯ ದೇಹವನ್ನು ಆಹಾರದ ಮೂಲಕ ಸೇರುತ್ತದೆ. ಪ್ರಾಣಿಗಳು ನೆಕ್ಕುವ ಖನಿಜಗಳಲ್ಲಿ ಅಯೊಡಿನ್ನನ್ನು ಸೇರಿಸುವುದು ಇನ್ನೊಂದು ಕ್ರಮ. ಪ್ರತಿ ಒಂದು ಟನ್ ಉಪ್ಪಿಗೆ ಐದು ಔನ್ಸ್ ಪೊಟಾಸಿಯಂ ಅಯೋಡೇಟನ್ನು 8% ಕ್ಯಾಲ್ಸಿಯಂ ಸ್ಟಿಯರೇಟಿನ ಜೊತೆ ಕೊಡಬೇಕು. ಹೀಗೆ ಬೆರಕೆ ಮಾಡದೆ. ಪೊಟ್ಯಾಸಿಯಂ ಅಯೋಡೇಟನ್ನು ಹಾಗೆಯೇ ಉಪಯೋಗಿಸಬಹುದು. ರೋಗ ತಗಲಿದ ಪ್ರತಿ ಕುರಿಗೂ 280 ಮಿ.ಗ್ರಾಮಿನಷ್ಟು ಪೊ. ಅಯೊಡೈಡ್ ಇಲ್ಲವೆ 369 ಮಿ.ಗ್ರಾಂ.ಪೊ. ಅಯೋಡೇಟನ್ನು ಕೊಟ್ಟರೆ ಉತ್ತಮ. ಪ್ರತಿ ಪ್ರಾಣಿಗೂ ಪ್ರತಿವಾರವೂ ಪಕ್ಕೆಯ ಒಳಗಡೆಯ ಭಾಗದಲ್ಲಿ ಹಸುವಾದರೆ 4 ಮಿ.ಲೀ. ಮತ್ತು ಹಂದಿ ಹಾಗೂ ಕುರಿಗಳಾದೆರೆ 2 ಮಿ.ಲೀ. ನಂತೆ ಅಯೊಡಿನ್ನನ್ನು ಬಳಿದರೆ ಒಳ್ಳೆಯದು. ಆಗಾಗ್ಗೆ ಪ್ರಾಣಿಗಳು ಈ ಭಾಗಗಳನ್ನು ನೆಕ್ಕುವದರಿಂದ ನಿಧಾನವಾಗಿ ಅಯೊಡಿನ್ ಹೊಟ್ಟಿಗೆ ಸೇರಿ ಹೋಗುತ್ತದೆ. 0.007 ಅಯೊಡಿನ್ ಅಂಶವಿರುವ ಉಪ್ಪನ್ನು ಬಸಿರಾದ ಹಸುಗಳಿಗೆ ನೆಕ್ಕಲು ಕೊಡುವುದರಿಂದ ಮುಂದೆ ಹುಟ್ಟುವ ಕರುಗಳನ್ನು ಈ ಬೆನೆಯಿಂದ ಪಾರುಮಾಡಬಹುದು. ಗ್ರಂಥಿಯನ್ನು ಮೊದಲಿನ ಸ್ಥಿತಿಗೆ ತರಲು ಕ್ಷ ಕೀರಣಗಳನ್ನು ಉಪಯೋಗಿಸಬೇಕು. ಗ್ರಂಥಿಗೆ ರಕ್ತಪೊರೈಸಲು ಧಮನಿಗಳನ್ನು ಹಿಡಿತದಲ್ಲಿಡುವುದೂ ಅಗತ್ಯ.
 
== ಸಮಾಜ ಮತ್ತು ಸಂಸ್ಕೃತಿ ==
"https://kn.wikipedia.org/wiki/ಗಂಟಲುವಾಳ_ರೋಗ" ಇಂದ ಪಡೆಯಲ್ಪಟ್ಟಿದೆ