ಬಸವೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bold removed
ಚು ಕನ್ನಡ ವಿಕಿಸೋರ್ಸ್‍ಗೆ ಸೆರಿಸಬಹುದಾಗದ ಮಾಹಿತಿ ತೆಗೆಯಲಾಗಿದೆ
೩೦ ನೇ ಸಾಲು:
* ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅನುಲೋಮ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು. ಇವರು ಷಟ್ ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ.
* ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ. "ನಮನ" ( ಪ್ರೊ.ಚಿದಾನಂದ ಮೂರ್ತಿ­ಯವರಂಥ ಹಿರಿ­ಯರೂ ಕೆಲವು ಗೌರವಾನ್ವಿತ ಸಂಪ್ರದಾಯ ಪರಾ­ಯಣ ಮಠಾಧಿಪತಿಗಳೂ ವೀರಶೈವ ಧರ್ಮದ ಪ್ರತ್ಯೇಕ ಅಸ್ತಿತ್ವ­ವನ್ನೊಪ್ಪದೆ ಅದು ಹಿಂದೂ ಧರ್ಮದ ಒಂದು ಭಾಗವೆಂದು ಘಂಟಾ­ಘೋಷವಾಗಿ ಸಾರಿದ್ದಾರೆ.
 
=== ಬಸವಣ್ಣನವರ ದೇವರ (ಶಿವನ) ಕಲ್ಪನೆ ===
 
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
 
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
 
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
 
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
 
ಕೂಡಲಸಂಗಮದೇವಯ್ಯಾ,
 
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. - <ref>ಸವಸ-೧/೭೪೪ :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-೭೪೪ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)</ref>
 
 
ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
 
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
 
ಆ '''ಇಷ್ಟಲಿಂಗವೆ''' ಅಂತರಂಗವನಾವರಿಸಿ
 
ಅಂತರಂಗದ ಕರಣಂಗಳೆ ಕಿರಣಂಗಳಾಗಿ
 
ಬೆಳಗುವ ಚಿದಂಶವೆ ಪ್ರಾಣಲಿಂಗವು,
 
ಆ ಮೂಲಚೈತನ್ಯವೆ ಭಾವಲಿಂಗವು.
 
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
 
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
 
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ. -<ref>ಸವಸ-೧/೯೭೧ :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-೭೪೪ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)</ref> [1]
 
ಸರ್ವವ್ಯಾಪಿಯಾದ ಪರಮಾತ್ಮನು ಸರ್ವರ ಹೃದಯದಲ್ಲಿ ಜ್ಯೋತಿ ಸ್ವರೂಪದಲ್ಲಿ ಸತ್-ಚಿತ್ ಆನಂದ ರೂಪವಾಗಿ ನೆಲೆಸಿರುತ್ತಾನೆ. ಇಲ್ಲಿ ಹೃದಯವೆಂದರೆ ದೇಹದ ಮುಖ್ಯವಾದ ಭಾಗವೆಂದು ಅರ್ಥ. ಅದು ಮಿದುಳಿನ ಮಧ್ಯಭಾಗವಾಗಿದೆ. ಅನೇಕರು ಇದನ್ನು ರಕ್ತಪರಿಚಲನೆಯಲ್ಲಿ ಮುಖ್ಯ ಕೆಲಸಮಾಡುತ್ತಿರುವ ಹೃದಯವೆಂದು ಭಾವಿಸಿದ್ದಾರೆ. ಆದರೆ ಹೃದಯವು ಆತ್ಮನ ವಾಸ ಸ್ಥಾನವಿರುವುದರಿಂದ ಈ ಹೃದಯವನ್ನು ಅಂದರೆ ಮಿದುಳನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುವುದಿಲ್ಲ ಆದರೆ ರಕ್ತಪರಿಚಲನೆಯಲ್ಲಿ ಮುಖ್ಯ ಪಾತ್ರವಹಿಸುವ ಹೃದಯವನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಅಲ್ಲಿ ಆತ್ಮನಿದ್ದರೆ ಈ ಕೆಲಸ ಅಸಾಧ್ಯವಾಗುತ್ತಿತ್ತು. ಕಾರಣ ಹೃದಯವೆಂದರೆ ಮಿದುಳಿನ ಮಧ್ಯಭಾಗವಾಗಿರುತ್ತದೆ. ಶರಣರ ವಚನಗಳಲ್ಲಿ ಇದಕ್ಕೆ ಊಧ್ರ್ವಹೃದಯ, ಮಧ್ಯಹೃದಯ, ಪೂರ್ವಹೃದಯವೆಂದೂ, ಹಾಗೂ ಬಯಲು, ಆಕಾಶ, ಭ್ರೂಮಧ್ಯ, ಸಾಸಿರದಳ ಕಮಲ, ಆಷ್ಟದಳಕಮಲ, ನಾಭಿಸ್ಥಾನವೆಂದೂ ಮತ್ತು ಆಧಾರವೆಂದು ಅನೇಕ ಪರ್ಯಾಯ ಪದಗಳನ್ನು ಶರಣರು ತಮ್ಮ ವಚನಗಳಲ್ಲಿ ಉಪಯೋಗಿಸುದ್ದಾರೆ.
 
 
ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ
 
ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ
 
ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆ ಇಲ್ಲ, ನೂತವರಾರೋ
 
ತನ್ನೊಡಲ ನೂಲ ತೆಗೆದು ಪಸರಿಸಿ, ಅದರೊಳು ಪ್ರೀತಿಯಿಂದೊಲಿದಾಡಿ,
 
ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ,
 
ತನ್ನಿಂದಾದ ಜಗವ ತನ್ನೊಳಗೈದಿಸಿಕೊಳಬಲ್ಲ
 
ನಮ್ಮ ಕೂಡಲಸಂಗಮದೇವರು.-ಸವಸ-೧/೧೧೫೦
 
 
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ,
 
ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ
 
ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ
 
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ. 1/547
 
<br />
 
*ಬಸವಣ್ಣನವರ ವಚನಗಳಲ್ಲಿ ವಿಶೇಷವಾಗಿ ಕಂಡುಬರುವ ಮತ್ತೊಂದು ಪ್ರಧಾನ ಅಂಶ ಭಕ್ತಿಪ್ರತಿಪಾದನೆ. `ಭಕ್ತಿಭಂಡಾರಿ' ಎಂಬ ವಿಶೇಷಣಕ್ಕೆ ಇವರ ವಚನಗಳು ಸಮರ್ಥವಾಗಿ ಪೋಷಣೆ ನೀಡುತ್ತವೆ. ನಾಮಸಂಕೀರ್ತನೆಯ ಹಿರಿಮೆ, ಸರ್ವಸಮರ್ಪಣೆಯ ಭಾವ, ಸತಿಪತಿ ಭಾವ--ಹೀಗೆ ಭಕ್ತಿಯ ಆಚರಣೆಯ ವಿವಿಧ ಮುಖಗಳನ್ನು ಅವುಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಭಾವದ ತೀವ್ರತೆಯಿದೆ, ಆಳವಾದ ಅನುಭವದ ಪ್ರತಿಫಲನವಿದೆ; ಆತ್ಮೀಯವಾದ ಧಾಟಿಯಿದೆ. `ಹೊನ್ನ ಹಾವಿಗೆಯ ಮೆಟ್ಟಿದವನ, ಮಿಡಿಯ ಮುಟ್ಟಿದ ಕೆಂಜೆಡೆಯವನ, ಮೈಯಲ್ಲಿ ವಿಭೂತಿಯ ಧರಿಸಿದವನ, ಕರದಲ್ಲಿ ಕಪಾಲವ ಹಿಡಿದವನ, ಅರ್ಧನಾರೀಶ್ವರನಾದವನ ಬಾಣದ ಮನೆಯ ಬಾಗಿಲ ಕಾಯ್ದವನ, ನಂಬಿಗೆ ಕುಂಟಿಣಿಯಾದವನ, ಚೋಳಂಗೆ ಹೊನ್ನ, ಮಳೆಯ ಕರೆದವನ, ಎನ್ನ ಮನಕ್ಕೆ ಬಂದವನ, ಸದ್ಭಕ್ತರ ಹೃದಯದಲ್ಲಿಪ್ಪವನ ಮಾಡುವ ಪೂಜೆಯಲೊಪ್ಪುವನ, ಕಂಡೆನೆಂದು ಪರಮಾತ್ಮನ ಗುಣ ಸ್ವರೂಪಗಳನ್ನು ವರ್ಣಿಸುತ್ತ ಅವನನ್ನು ಒಂದೆಡೆ ಸಾಕಾರವಾಗಿ ಕಾಣುತ್ತಾರೆ.
*ಮತ್ತೊಂದೆಡೆ '''`ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು?''' ಶಶಿಯೊಳಗಣ ರಸದ ರುಚಿಯಂತೆ ಇದ್ದಿತ್ತು ನೆನೆಯೊಳಗಣ ಪರಿಮಳದಂತೆ ಇದ್ದಿತ್ತು ಕೂಡಲಸಂಗಮ ದೇವರ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು ಎಂದು ತಮ್ಮ ದರ್ಶನಾನುಭವವನ್ನು ವರ್ಣಿಸುತ್ತಾರೆ.<ref>[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಬಸವಣ್ಣ]</ref>
 
==ಸಾಮಾಜಿಕ ಸಮಾನತೆ==
"https://kn.wikipedia.org/wiki/ಬಸವೇಶ್ವರ" ಇಂದ ಪಡೆಯಲ್ಪಟ್ಟಿದೆ